• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ವಿಚಾರ ರಶ್ಮಿ

  ‘ನೂಪುರ ಭ್ರಮರಿ’ಗೆ ಮೊದಲ ವರ್ಷದ ಸಂಭ್ರಮ

  September 17th, 2008.


   

  – ರಾಚಂ

   

   

  ನೂಪುರ ಭ್ರಮರಿ’ ನರ್ತನ ಜಗತ್ತಿನ ಪರಿಭ್ರಮಣಕ್ಕೆ ಒಂದು ವರ್ಷನೂಪುರ ಭ್ರಮರಿ …ನರ್ತನ ಜಗತ್ತಿಗೊಂದು ಪರಿಭ್ರಮಣ

  ’ನೂಪುರ ಭ್ರಮರಿ- ನರ್ತನ ಜಗತ್ತಿಗೊಂದು ಪರಿಭ್ರಮಣ’ ಎಂಬ ಒಂದು ವಿಭಿನ್ನ ಕನಸು ಮೈತಳೆದದ್ದು ಒಂದು ವರ್ಷದ ಹಿಂದೆ. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಎಂ.ಎ ಪದವೀಧರೆ ಮನೋರಮಾ ಬಿ.ಎನ್ ಅವರ ಈ ವಿಶಿಷ್ಟ ಕನಸು ’ನೂಪುರ ಭ್ರಮರಿ’ ಎಂಬ ನೃತ್ಯ ಕ್ಷೇತ್ರದ ದ್ವೈಮಾಸಿಕವಾಗಿ ರೂಪತಳೆದು ಕಳೆದ ಒಂದು ವರ್ಷದಿಂದ ನೃತ್ಯಾಸಕ್ತರ, ನೃತ್ಯಕ್ಷೇತ್ರದ ಹಿರಿಯರ ಮೆಚ್ಚುಗೆಗೆ ಪಾತ್ರವಾಗಿ ಮುನ್ನಡೆದಿದೆ. ಸುಮಾರು ಹದಿನಾಲ್ಕು ವರ್ಷಗಳಿಂದ ಭರತನಾಟ್ಯದ ವಿದ್ಯಾರ್ಥಿಯಾಗಿರುವ ಮನೋರಮಾ ನೃತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಭಾವನೆಗಳನ್ನು, ಅಭಿಪ್ರಾಯಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆಯನ್ನು ಗ್ರಹಿಸಿದರು. ಹಾಗಾಗಿಯೇ ನೃತ್ಯಕ್ಷೇತ್ರದ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿಯ ಚರ್ಚೆಯ ಜೊತೆಗೆ ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಸಾಧ್ಯತೆ ಮತ್ತು ಪತ್ರಿಕೋದ್ಯಮದ ಆಶಯಗಳನ್ನು ಜತೆಗಿಟ್ಟುಕೊಂಡು, ಸಾಂಸ್ಕೃತಿಕ ಅಡಿಪಾಯದಲ್ಲಿ ನೃತ್ಯದ ವಿವಿಧ ಆಯಾಮಗಳತ್ತ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನವಾಗಿ ಹೊರಹೊಮ್ಮಿದ್ದು ’ನೂಪುರ ಭ್ರಮರಿ’:

  ಹಾಗೆ ಸದ್ದಿಲ್ಲದೆ ಹುಟ್ಟಿಕೊಂಡ ಪತ್ರಿಕೆಗೆ ಸಿಕ್ಕ ಪ್ರಶಂಸೆ, ಪ್ರತ್ಸಾಹ ಅಪಾರ. ಖ್ಯಾತ ನೃತ್ಯ ದಂಪತಿಗಳಾದ ಶ್ರೀಧರ್, ಅನುರಾಧಾಶ್ರೀಧರ್, ಹಿರಿಯ ವಿದ್ವಾಂಸ ಶ್ರೀ ಶತಾವಧಾನಿ ಆರ್.ಗಣೇಶ್, ಯಕ್ಷಗಾನ ಚಿಂತಕ ಕಲಾವಿದ ಡಾ|| ಪ್ರಭಾಕರ ಜೋಷಿ, ಖ್ಯಾತ ವಿದುಷಿ ಬಿ.ಕೆ.ವಸಂತಲಕ್ಷ್ಮಿ, ಮಂಗಳೂರು ವಿ.ವಿ.ಪ್ರಾಧ್ಯಾಪಕಿ, ವಿಮರ್ಶಕಿ ಡಾ|| ಸಬೀಹಾ ಭೂಮಿಗೌಡ, ಬೆಂಗಳೂರು ಪ್ರಸಾರಾಂಗದ ಡಾ|| ಸರ್ವೋತ್ತಮ ಕಾಮತ್, ಖ್ಯಾತ ಕಥೆಗಾರ ವಸುಧೇಂದ್ರ, ಖ್ಯಾತಕಲಾವಿಮರ್ಶಕ ಬಿ.ಎಸ್.ಎಸ್.ರಾವ್, ಖ್ಯಾತ ಬರಹಗಾರರಾದ ಶ್ರೀ ಬಾಲಸುಬ್ರಮಣ್ಯಂ ಕಂಜರ್ಪಣೆ, ಶ್ರೀ ನಿಡುವಜೆ ರಾಮಭಟ್, ವಿದ್ವಾನ್ ಕೊಡವೂರು ಸುಧೀರ್ ರಾವ್, ಖ್ಯಾತ ರಂಗನಟ ಶ್ರೀ ಮಂಡ್ಯ ರಮೇಶ್, ಮುಂಬೈ ವಿಶ್ವವಿದ್ಯಾನಿಲಯದ ಪ್ರ|| ವೆಂಕಟೇಶ್ ಪೈ, ಉಜಿರೆಯ ಶ್ರೀ ಕೇಶವ ಹೆಗ್ಡೆ…….. ಇನ್ನೂ ಮುಂತಾದ ನೃತ್ಯ ಕ್ಷೇತ್ರದ ದಿಗ್ಗಜರು, ಹಿರಿಯರು ನೂಪುರ ಭ್ರಮರಿಯ ಈ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ, ಹರಸಿದ್ದಾರೆ, ಹಾರೈಸಿದ್ದಾರೆ. ’ನೂಪುರ ಭ್ರಮರಿ’ಯ ಮೊದಲ ವರ್ಷ ಸಂಭ್ರಮದ ಕಾರ್ಯಕ್ರಮ ಫೆಬ್ರವರಿ ೧೦ ರಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಲಿದೆ. ನೃತ್ಯ ಕ್ಷೇತ್ರದ ಹಿರಿಯರು, ವಿದ್ವಾಂಸರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭ್ರಮರಿ ಬಳಗದ ಉತ್ಸಾಹಿ ಮಿತ್ರರಾದ ವಿಷ್ಣುಪ್ರಸಾದ್ ನಿಡ್ಡಾಜೆ, ಮಹೇಶ್ ಮಡವು, ಶ್ರೀಲಕ್ಷ್ಮಿ ಎಂ.ಭಟ್, ರಾಧಿಕಾ ವಿಟ್ಲ, ಪ್ರಿಯಾ ಎಂ.ಆರ್ ಮತ್ತು ಇನ್ನೂ ಅನೇಕ ಯುವಮಿತ್ರರು ಭ್ರಮರಿಯ ಸಂಭ್ರಮಕ್ಕೆ ತೋರಣ ಕಟ್ಟುತ್ತಿದ್ದಾರೆ. ಭ್ರಮರಿಯ ಸಂಭ್ರಮಕ್ಕೆ ಚೈತ್ರರಶ್ಮಿಯ ಶುಭಹಾರೈಕೆ. ಈ ವಿಶಿಷ್ಟ ಪ್ರಯತ್ನಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ. ಮನೋರಮಾ (೯೮೮೦೫೯೨೯೮೬)ರಿಗೆ ನಿಮ್ಮ ಅಭಿನಂದನೆಗಳನ್ನು ತಲುಪಿಸಿ.


  ಪ್ರತಿಕ್ರಿಯಿಸಿ :