• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಉದಯಕಿರಣ

  ಅಭಿವೃದ್ಧಿಯ ಬೆದರುಬೊಂಬೆಯ ಮೇಲೆ ಭಾರತ ಪ್ರಕಾಶಿಸುತ್ತಿದೆ !

  September 17th, 2008.


  – ಉದಯ್ ಪಿ. ವಿಟ್ಲ

  In this might , while the whole world is sleeping, India is awake in the light of freedom ಇದು ಭಾರತದ ಪ್ರಥಮ ಪ್ರಧಾನಿ ನೆಹರೂ ಕೆಂಪು ಕೋಟೆಯಿಂದ ಆಗಸ್ಟ್ ೧೪ ರ ಮಧ್ಯ ರಾತ್ರಿ ದೇಶವಾಸಿಗಳಿಗೆ ಸ್ವತಂತ್ರ ಭಾರತದ ಉದಯದ ಘೋಷಣೆ ಮಾಡಿದ ಬಗೆ. ಅದುವರೆಗೆ ನಾವು ಎಚ್ಚರವಾಗೇ ಇದ್ದೆವು. ಅದುವರೆಗೆ ದೇಶದ ಮೇಲೆ ಆಕ್ರಮಣಗೈದ ಚೀಣ, ಹೂಣ, ಖಿಲ್ಜ, ಪೋರ್ಚುಗೀಸ್, ಡಚ್ಚ, ತುರ್ಕ, ಮೊಗಲರ, ಬ್ರಿಟೀಷರ ಪ್ರತ್ಯಕ್ಷ, ಪರೋಕ್ಷ ಸಮರದ ವಿರುದ್ಧ ಹೋರಾಟ ಕೈ ಗೊಂಡ ನಾವು ಆಗಸ್ಟ್ ೧೫ ರಿಂದ ನಿದ್ರಿಸಲಾರಂಭಿಸಿದೆವು!. ಇಲ್ಲಾ ರಾಷ್ಟ್ರನಾಯಕರು (?) ನಿದ್ರಿಸುವಂತೆ ಮಾಡಿದರು. ಸರಿ, ಅದು ಕಳೆದು ೫೭ ವರ್ಷಗಳನ್ನೂ ಕಳೆದೆವು. ಹೇಳುತ್ತೀವಲ್ಲಾ ನಾವು ನಮ್ಮ ಇತಿಹಾಸ ೫,೦೦೦ ವರ್ಷಗಳಿಗಿಂತಲೂ ಹಳೆಯದು ಅಂತ. ಹಾಗಿದ್ದಾಗ ನಾವು ನಮ್ಮ ಸಮೃದ್ಧ, ವಿಶಾಲ ಇತಿಹಾಸದ ವಾರಸುದಾರರಾಗಬೇಕಿತ್ತು. ಆಗಿರಲಿಲ್ಲವೇ? ಖಂಡಿತವಾಗಿಯೂ ಆಗಿದ್ದೆವು. ಆಗಿದ್ದರಿಂದಲೇ ಅಲ್ಲವೇ ರಾಮಕೃಷ್ಣ, ವಿವೇಕ, ವಿದ್ಯಾರಣ್ಯ, ರಾಮದಾಸರೇ ಮೊದಲಾದವರು ಜನ್ಮವೆತ್ತಿ ಈ ನಾಡಿನ ಹಿರಿಮೆ – ಗರಿಮೆಗಳನ್ನು ಪ್ರಚುರ ಪಡಿಸಿ ನಮ್ಮನ್ನು ಜಾಗ್ರತರನ್ನಾಗಿಸಿದ್ದು. ಹಾಗಿದ್ದರೂ ಸ್ವಾತಂತ್ರ ನಂತರ ದೇಶ ಮೈಮರೆತಿರುವುದೇಕೆ?

  The only lesson people learn from history is nobody learn anything from history, ಅಂದರೆ ಇತಿಹಾಸದಿಂದ ಪಾಠ ಕಲಿತವರು ಯಾರೂ ಇಲ್ಲ ಅಂತ ಇತಿಹಾಸ ಹೇಳುತ್ತದೆ. ಹಾಗಿರುವಾಗ ನಾವು ಪುನರಾವರ್ತಿಸಿದರೆ ತಪ್ಪೇನು? ಸ್ವಾತಂತ್ರ ನಂತರ ಅಭಿವೃದ್ಧಿಯ ಹಣತೆ ಕಂಡುದುದಕ್ಕಿಂತ ಹೆಚ್ಚು ಹಗರಣಗಳನ್ನು ಕಂಡೆವು. ಮೆನನ್-ರೊಮೇಶ್ -ಗಾವ್ಲಿ-ಸತೀಶ್‌ಶರ್ಮಾ-ಮೆಹ್ತಾ-ಪಾರೀಖ್- ಸುಖರಾಮ್-ಬೋಪೋರ್ಸ್-ಸೈಂಟ್‌ಕಿಟ್ಸ್- ಲಖೂಭಾಯಿ-ತೀನ್‌ಬೀಘಾ-ಟೆಲಿಕಾಂ… ಪ್ರಾಯಶಃ ಬ್ರಿಟೀಷರ ದಬ್ಬಾಳಿಕೆ ವಿರುದ್ಧ ಹೋರಾಡಿದವರಿಗಿಂತ ಅಧಿಕ ಪ್ರಮಾಣದಲ್ಲಿ ಹಗರಣಗಳ ರೂವಾರಿಗಳಿದ್ದಾರೆ. ಸ್ವಾತಂತ್ರ ಹೋರಾಟದ ಕಿಡಿಗಳು ಸಂಪೂರ್ಣ ಆರುವ ಮೊದಲೇ ಭ್ರಷ್ಟಾಚಾರದ ಕುಡಿಗಳು ಮೇಲೇರಲಾ ರಂಭಿಸಿದವು. ಸುಂದರ ದೇಶದ ನಿರ್ಮಾಣಕ್ಕಾಗಿ ಸಮರ್ಥ ಇತಿಹಾಸ ಪ್ರಜ್ಞೆಯ ಅವಶ್ಯಕತೆಯಿದೆ. ಆದರೆ ನಮಗೊಂದು ಇತಿಹಾಸ ಇದೆ ಅಂತನೇ ನಮಗೆ ತಿಳಿದಿಲ್ಲ. ಹರಪ್ಪದಿಂದ ಹಂಪೆ ನಮಗೇನೂ ತಿಳಿದಿಲ್ಲ. ಭಗತ್-ಬೋಸ್-ಸಾವರ್ಕರ್- ಧೀಂಗ್ರಾ-ಜಲಿಯನ್ ವಾಲಾಬಾಗ್ ಗೊತ್ತಿಲ್ಲ. ಇತಿಹಾಸವೆಂದರೇನೆಂದೇ ನಮಗೆ ತಿಳಿದಿಲ್ಲ. ಸ್ವಾತಂತ್ರ ನಂತರ ಒಬ್ಬನೇ ಒಬ್ಬ ಸರಿಯಾದ ನಾಯಕ ಈ ದೇಶಕ್ಕೆ ಒದಗಲಿಲ್ಲ ಎನ್ನುವುದೇ ದೌರ್ಭಾಗ್ಯ. ಅಡಾಲ್ಫ್ ಹಿಟ್ಲರ್-ಒಬ್ಬನೇ ಹಿಟ್ಲರ್, ಜಮರ್ನಿಯನ್ನು ತಾಯಿ ತನ್ನ ಬಿದ್ದಿದ್ದ ಮಗುವನ್ನು ಮೇಲಕ್ಕೆ ಎತ್ತಿದಂತೆ ಎತ್ತಿದ. ಜನರಲ್ಲಿ ಆತ್ಮ ವಿಶ್ವಾಸ ತುಂಬಿಸಿದ. ನಾವು ೧೦೩ ಕೋಟಿ ಜನ ಈ ೬೦ ವರ್ಷಗಳಲ್ಲಿ ಸಾಧಿಸಲಾರದ್ದನ್ನು ಕೆಲವೇ ವರ್ಷಗಳಲ್ಲಿ ಪೂರೈಸಿದ. ಕಾರಣ ಸ್ಪಷ್ಟ. ಅದುವೇ ಛಲ-ಸ್ವಾಭಿಮಾನ-ಸೇಡು. ಹಿಟ್ಲರ್ ಇತಿಹಾಸ ಗುರುತಿಸಿದ ಕೆಟ್ಟ ನಾಯಕ ಇರಬಹುದು. ಆದರೆ ದೇಶದ ಸ್ವಾಭಿಮಾನ ಪಾತಾಳಕ್ಕಿಳಿದಾಗ ಜಾಗೃತಿಯ ಶಂಖನಾದ ಊದಲು ಇಂತಹವರು ತೀರಾ ಅನಿವಾರ್‍ಯ.. ಲಾರ್ಡ್ ಕರ್ಜನ್‌ವ್ಯಾಲಿ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಎನ್ನುವ ಒಂದೇ ಉದ್ದೇಶಕ್ಕೆ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲೇ ಆತನನ್ನು ಗುಂಡಿಗೆ ಹತನಾಗುವಂತೆ ಮಾಡಲಾಯಿತು. ಮದನ್ ಲಾಲ್ ಧೀಂಗ್ರಾ ಆ ಕೆಲಸ ಪೂರೈಸಿದ.

  ಆದರೆ ಭಾರತ ತುಂಡುಮಾಡುವ ಹುನ್ನಾರದ ಜಿನ್ನಾನ ಮನ ಒಲಿಸಲು ಅಂತರಾಷ್ಟ್ರೀಯ ಖ್ಯಾತಿಯ ನೆಹರೂರಿಂದ, ಉಕ್ಕಿನ ಮನುಷ್ಯ ಪಟೇಲರಿಂದ, ಜನರ ಹೃದಯ ಪರಿವರ್ತನೆ ಮಾಡಬಲ ಗಾಂದೀಜಿಯಿಂದ ಅಷ್ಟೇ ಏಕೆ ದೇಶದ ಒಬ್ಬನೇ ಒಬ್ಬ ವ್ಯಕ್ತಿಯಿಂದ ಧೀಂಗ್ರಾ ನಂತಹ ಕೆಲಸ ಮಾಡಿ ಜಿನ್ನಾನನ್ನು ಮುಗಿಸಲು ಯಾವಾಗ ಸಾದ್ಯವಾಗಲಿಲ್ಲವೋ ಆಗಲೇ ಸೋತೆವು. ಇದ್ದದ್ದನ್ನೇ ಉಳಿಸಲು ಹೆಣಗಾಡುತ್ತಿರುವಾಗ ಅಖಂಡ ಭಾರತದ ಚಿಂತೆ ಏಕೆ? ಅಲ್ಲವೇ? ಸ್ವಾತಂತ್ರ ನಂತರ ಈ ದೇಶದ ನಾಯಕರು ಅಣೆಕಟ್ಟುಗಳನ್ನು ಕಟ್ಟಲು ,ಕಟ್ಟಡ ಕಟ್ಟಲು ವಿನಿಯೋಗಿಸಿದ ಸಮಯವನ್ನು ಈ ದೇಶದ ಜನರ ಹೃದಯವನ್ನು ಕಟ್ಟಲು ಉಪಯೋಗಿಸಿದ್ದರೆ ಈ ದೇಶದ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಸ್ವರಾಜ್ಯ ಪ್ರಾಪ್ತಿ ಸುರಾಜ್ಯ ಮಾರ್ಗದತ್ತ ಪಯಣಿಸಬೇಕಾಗಿತ್ತು. ಆದರೆ ನಾವೇನು ಮಾಡಿದೆವು? ಕಾಳಿದಾಸನ ಸ್ಥಾನದಲ್ಲಿ ವಿಲಿಯಂ ಶೇಕ್ಸ್‌ಪಿಯರ್‌ನನ್ನು ಕಂಡೆವು. ತಪ್ಪಲ. ವೇದೋಪನಿಷತ್‌ಗಳು ಮೂಢನಂಬಿಕೆಗಳ ಪ್ರವರ್ತಕ ಗ್ರಂಥಗಳಂತೆ ಕಂಡವು. ನಮಗೆ ನಾವೇ ವರ್ಜ್ಯವಾಗತೊಡಗಿದೆವು. ಈ ದೇಶದ ಉದ್ದಗಲಕ್ಕೂ ಸಂಚರಿಸಿದ ಬ್ರಿಟೀಷ್ ಮೆಕಾಲೆ ರಾಣಿ ವಿಕ್ಟೋರಿಯಾಗೆ ಬರೆದ ಪತ್ರದಲಿ ಈ ದೇಶದ ಅಸ್ತಿತ್ವದ ಬೆನ್ನೆಲುಬಾದ ಆಧ್ಯಾತ್ಮ,, ಸಂಸ್ಕೃತಿಯ ಸರ್ವನಾಶಕ್ಕೆ ಷಡ್ಯಂತ್ರ ರೂಪಿಸಲು ಸಲಹೆ ಕೊಡುತ್ತಾನೆ, ಆದರೆ ಅದರ ನಂತರ ಮೆಕಾಲೆ ವಾರಸುದಾರರು ಈ ದೇಶ ಕಟ್ಟಿದ ಬಗೆಯೇ ವಿಶಿಷ್ಟವಾದದ್ದು.

  ’ಯುವಜನರೇ. ಇವತ್ತು ದೇಶ ನಿಮ್ಮ ಕೈಲಿದೆ’, ಆ ಮಹಾತ್ಮ ಸ್ವಾತಂತ್ರ ದ ಸುವರ್ಣ ಘಳಿಗೆಯಲ್ಲಿ ಹೇಳಿದ್ದು. ಯಾರ ಕೈಯಲ್ಲಿ?. ಇಂದು ದೇಶ ನಿರ್ಮಾಣ ಮಾಡೋಣ ಎಂದು ಯಾರಾದರೂ ಕರೆ ಕೊಟ್ಟರೆ ’ಇಟ್ಟಿಗೆ, ಕಲ್ಲು, ಮಣ್ಣು ಎಲ್ಲಿಡಬೇಕು?’ ಎಂದು ಯುವಜನ ಕೇಳುವ ದಾರುಣ ಸ್ಥಿತಿಗೆ ತಲುಪಿದೆ. ಕ್ಲಬ್-ಪಬ್- ಬಾರ್‌ಗಳೇ‌ಈದೇಶದ ಅಭಿವೃದ್ಧಿಯ ಆಧುನಿಕ ದೇಗುಲಗಳು. ಹಾಗಾಗಿಯೇ ಯುವಜನ ಈ ಹಾದಿ ಹಿಡಿದದ್ದು! ಇಂದು ಈ ದೇಶದ ಮಕುಟಮಣಿ ಅಂತ ಸ್ವ ಘೋಷಿಸಿಗೊಂಡ, ಮಾತೆತ್ತಿದರೆ ಬಿಲಿಯನ್ ಡಾಲರ್‌ಗಳಲ್ಲಿ ವಹಿವಾಟುಮಾಡುವ ನಮ್ಮ ಐಟಿ ಕಂಪೆನಿಗಳಲ್ಲೂ ನಡೆಯುವ ಚರ್ಚೆ ಶಾರೂಕ್ ಖಾನ್ ಯಾರ ಸೊಂಟ ಹಿಡಿದ, ಸಲ್ಮಾನ್‌ಖಾನ್‌ನ ರಸಿಕತೆ, ಮಲ್ಲಿಕಾ ಶೆರಾವತ್‌ಳ ಮಾದಕ,ಮಾರಕ ಡ್ಯಾನ್ಸ್‌ಗಳ ಕುರಿತದ್ದೇ. ಈ ಉಪಯೋಗಕ್ಕೆ ಬಾರದ ’ಜಂಕ್’ ಗಳ ಕುರಿತೇ ಮಾತನಾಡುವುದು. ಏಕೆಂದರೆ ಯುವಜನರೇ ಹಾಗೆ. ಮಂಗನಿಗೆ ಮದ್ಯ ಕುಡಿಸಿದಂತೆ ಮಾಡುವ ನಮ್ಮ ಮಾಧ್ಯಮಗಳು. ದಿನ ಬೆಳಗಾದರೆ ಸಿನಿಮಾ ಲೋಕದ ವಾರ್ತೆಕೊಡುವುದೇ ಭೂಲೋಕದಲಿ ಹುಟ್ಟಿದ್ದಕ್ಕೆ ಕೊಡುತ್ತಿರುವ ಋಣ ಸಂದಾಯ ಅಂತ ತಿಳಿದ ಮಾಧ್ಯಮಗಳು ಯುವಜನರನ್ನು ಇನ್ನು ಯಾವ ಚಿಂತನೆಗೆ ಒರೆ ಹಚ್ಚೀತು? ಏಕೆಂದರೆ ಪತ್ರಿಕೋದ್ಯಮವೂ ಶುದ್ಧ ವಾಣಿಜ್ಯೋದ್ಯಮ. ಇನ್ನು ಯುವಜನರತ್ತ ಗಮನ ಹರಿಸುವವರಾರು?

  ಭಾರತದ ಬಗ್ಗೆ ಮಾತನಾಡುವಾಗ ಒಮ್ಮೆ ಜಗತ್ತಿನ ಇತರ ರಾಷ್ಟ್ರಗಳತ್ತಲೂ ಕಣ್ಣು ಹಾಯಿಸಬೇಕು. ಹೇಳುತ್ತೀವಲ್ಲಾ ಮಾತೃ ಭೂಮಿಯಿಂದಲೇ ಹೊರದಬ್ಬಲ್ಪಟ್ಟು ನಂತರ ಅವಿರತ ಹೋರಾಟ ಮುಖೇನ ಇಸ್ರೇಲನ್ನು ನಿರ್ಮಿಸಿದರು ಎಂದು. ಜಪಾನ್! ಇನ್ನೊಂದು ಉದಾಹರಣೆ. ೧೯೪೫ರ ಜಾಗತಿಕ ಮಹಾಸಮರ ಜಪಾನ್‌ನ ತಲೆಮೆಟ್ಟಿ ನಿಂತಿತು, ಈಗ ಅದು ಬಲಾಢ್ಯ ದೇಶ ಎಂದು. ಕ್ಯೂಬಾ, ಇಂದಿಗೂ ಅಮೇರಿಕ ಅದರ ತಂಟೆಗೆ ಹೋಗುವುದಿಲ್ಲ. ಕೊರಿಯಾ, ಇಟಲಿ, ಫ್ರಾನ್ಸ್ ಹೀಗೇ ಮುಂದುವರಿಯುತ್ತದೆ. ಸುತ್ತ ಮುತ್ತಲೂ ಲೆಬನಾನ್, ಪ್ಯಾಲೆಸ್ತೀನ್‌ನಂತಹ ಕಟ್ಟಾ ವೈರಿ ಗಳನ್ನೇ ಹೊಂದಿರುವ, ಸರಿಯಾಗಿ ಒಂದು ರಾಜ್ಯದಷ್ಟೂ ವಿಸ್ತಾರತೆಯನ್ನೇ ಹೊಂದಿರದ ಇಸ್ರೇಲಿಗೆ ಅಮೇರಿಕಾ ಸಲಾಮು ಹೊಡೆಯುತ್ತದೆ. ಇಡೀ ಅಮೇರಿಕಾದ ಅರ್ಥವ್ಯವಸ್ಥೆಯನ್ನು ಇಸ್ರೇಲಿಯನ್ನರು ಹತೋಟಿಯಲ್ಲಿಟ್ಟಿರುವುದೇ ಇದಕ್ಕೆ ಕಾರಣ. ನಂತರ ಭಾರತೀಯರು ಇಂದು ಭಾರತವೊಂದರಿಂದಲೇ ೨ ಕೋಟಿ ಪ್ರತಿಭೆಗಳು ರಪ್ತಾಗಿದ್ದರೂ ಭಾರತ ಅಲ್ಪ ಸ್ವಲ್ಪ ಗೌರವ, ಪ್ರತಿಷ್ಠೆಯನ್ನು ಸಂಪಾದಿಸತೊಡಗಿದೆ. ಆದರೂ ಭಾರತದ ದನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಗಟ್ಟಿಯಾಗಬೇಕಿದೆ. ಆದರೆ ಭಾರತದ ಗೌರವವೆನ್ನುವುದು ಕಡಿಮೆ ಖರ್ಚಿನ ಮಾನವ ಸಂಪನ್ಮೂಲಗಳ ಬಳಕೆಯಿಂದಾಗಿ ಹೆಚ್ಚಾಯಿತೇ? ಅಲ್ಲಾ ನೈಜ ಜ್ಞಾನಾಧಾರಿತ ಉತ್ಪನ್ನಗಳಿಂದಲೇ? ಡಾಲರ್ ಎದುರು ರೂಪಾಯಿಯ ಅಪಮೂಲ್ಯ ಮತ್ತು ಇದರ ಏರಿಳಿತಗಳು ಪಾಶ್ಚಾತ್ಯರನ್ನು ಭಾರತದತ್ತ ಮುಖ ಮಾಡುವಂತೆ ಮಾಡಿರ ಬಹುದಾದರೂ, ಭಾರತ ಜ್ಞಾನಾಧಾರಿತ ಕ್ಷೇತ್ರಗಳಲ್ಲಿ ಬೆಳಗುವ ತನ್ನ ಪರಂಪರೆಯನ್ನು ಉಳಿಸಿಕೊಂಡಿದೆ. ಆದರೂ ತನ್ನಲ್ಲೇ ’ಬೆಳಕಿನ ತುದಿ ಕತ್ತಲು’ ಅಥವಾ ’ಬೆಳಕಿನ ಬುಡ ಕತ್ತಲು’ ಎನ್ನುವಂತೆ ಜಗತ್ತಿಗೆ ಪ್ರಕಾಶಿಸುವ ಭಾರತ ತನ್ನೊಳಗೆ ಅನಾಥ ಪ್ರಜ್ಞೆ ಬೆಳೆಯುತ್ತಿರುವ ಕಾಲಘಟ್ಟದಲ್ಲೂ ಇದೆ. ಒಂದೆಡೆಯಿಂದ ’ಭಾರತ ಪ್ರಕಾಶ’ಕ್ಕೆ ಜಾಗತೀಕರಣವೇ ಮೂಲ ಎನ್ನುವುದನ್ನು ಒಪ್ಪಿಕೊಂಡರೆ, ಇನ್ನೊಂದೆಡೆ ಯಿಂದ ಅಟ್ಲಾಂಟಾ ಮೂಲದ ಕೋಕಾಕೋಲಾ, ಪೆಪ್ಸಿಗಳಂತಹ ಕೇವಲ ಮೆದುಪಾನೀಯ ತಯಾರಕ ಕಂಪೆನಿಗಳು ರಷ್ಯಾ ವಿಭಜನೆಗೆ ಹೇಗೆ ಸಹಕಾರಿಯಾಗಿದ್ದವು ಎನ್ನುವುದು ಮನಃಪಟಲ ದಲ್ಲಿ ಹಾದು ಹೋಗುತ್ತದೆ. ಹಾಗಿದ್ದರೆ ನಾವಿಂದು ನೋಡುತ್ತಿರುವ ಸುಂದರ, ಸಮೃದ್ಧ ಭಾರತ ’ಅಭಿವೃದ್ಧಿ ಬೆದರು ಬೊಂಬೆ’ಯಂದದಿ ಇದೆಯೇ? ತನ್ನಲ್ಲಿ ನಿರೀಕ್ಷೆಗೂ ಮೀರಿ ವಿದೇಶೀ ವಿನಿಮಯ ಉಳಿಕೆ ಗಳಿಸಿರುವ ದೇಶದಲ್ಲಿ ವಾಣಿಜ್ಯೀಕರಣ ಹಾಸು ಹೊಕ್ಕಾಗಿದೆ. ಜನಜೀವನವೂ ದುಸ್ತರವಾಗತೊಡಗಿದೆ. ದೇಶ ಪ್ರಕಾಶಿಸುತ್ತಿದೆ,

  ಅಮೇರಿಕಾವನ್ನೊಳಗೊಂಡ ಪಾಶ್ಚಿಮಾತ್ಯ ದೇಶಗಳೂ ನಮ್ಮತ್ತ ಒಂದ್ನಿಮಿಷ ನೋಡುವಷ್ಟು ನಾವು ಬೆಳೆದರೂ ಜನಸಾಮಾನ್ಯನ ಮುಖ ನಿಜವಾದ ಅಭಿವೃದ್ಧಿಯ ದರ/ ಸಂಕೇತವನ್ನು ಸೂಚಿಸುತ್ತವೆ. ಇದಕ್ಕೆ ಕಾರಣ ಕಳೆದ ೬೦ ವರ್ಷಗಳ ಆಡಳಿತ ನೀಡಿದ ನಿರಾಶೆಯ ಫಲವೇ? ಅಥವಾ ಸ್ವಾತಂತ್ರ್ಯ ನಂತರ ಬೀಸಿದ ತಂಗಾಳಿ ಭಷ್ಟಾಚಾರದ ಬಿರುಗಾಳಿಯಲ್ಲಿ ಮಾಯವಾದುದರ ಫಲವೇ? ಅಥವಾ ಅಭಿವೃದ್ಧಿಯ ಪ್ರಚಾರ ಕೇವಲ ಬಂಡವಾಳ ಹೂಡಿಕೆ ಮಂತ್ರವಾಗಿ ಜನಸಾಮಾನ್ಯನನ್ನು ನಿರ್ಲಕ್ಷಿಸಿದ್ದೇ? ನಮಗೆ ದೇವರು ಹೊಸತಲ್ಲ. ಏಕೆಂದರೆ ದೇಶವೇ ದೇವರು ಅಂತ ತಿಳಿದವರು ನಾವು. ಹಾಗೆಯೇ ದೇವಸ್ಥಾನಗಳನ್ನೂ ಸರಕಾರೀಕರಣಗೊಳಿಸಿದ್ದೇವೆ. ಹಾಗಿರುವಾಗ ನಮ್ಮ ರಾಜಕಾರಣಿಗಳು ದೇಶವೆಂಬ ದೇವರ ಹಣವನ್ನು ಪಾಶ್ಚಾತ್ಯೀಕರಣ ಅರ್ಥಾತ್ ಸ್ವಿಸ್ ಬ್ಯಾಂಕೀಕರಣಗೊಳಿಸಿದರೆ ಅದು ತಪ್ಪಲ್ಲವೆಂಬುದು ಒಂದು ವಾದ. ಕೇಂದ್ರೀಯ ಜಾಗೃತ ದಳ ಕೇಂದ್ರ ಸರ್ಕಾರಕ್ಕೆ ಕೆಲ ವರ್ಷಗಳ ಹಿಂದೆ ಸಲ್ಲಿಸಿದ ವರದಿಯಲ್ಲಿ ಹೀಗಿತ್ತು: ಇಂದು ಭಾರತೀಯ ರಾಜಕಾರಣಿಗಳು, ಅಧಿಕಾರಿಗಳು ಅಕ್ರಮವಾಗಿ ಕೂಡಿಟ್ಟ ಹಣ ಸುಮಾರು ರೂ.೪.೮ ಲಕ್ಷ ಕೋಟಿ. ದೇಶದಲ್ಲಿ ಕಪ್ಪುಹಣದ ಚಲಾವಣೆ ಶೇ.೨೦, ಇವುಗಳ ಅರ್ಧದಷ್ಟನ್ನು ಪತ್ತೆ ಹಚ್ಚಿ ದೇಶದ ಬೊಕ್ಕಸಕ್ಕೆ ವಶಪಡಿಸಿಕೊಂಡರೂ ಕನಿಷ್ಠ ೨ ಲಕ್ಷ ಕೋಟಿ ಆದಾಯ ಸಿಗುತ್ತದೆ. ದೇಶದಲ್ಲಿನ ಕಳ್ಳನೋಟುಗಳ ಮೌಲ್ಯ ರೂ ೧,೯೩ ಸಾವಿರ ಕೋಟಿ. ಪತ್ತೆಯಾಗಿರುವುದು ಶೇ ೧ ಕ್ಕಿಂತ ಕಡಿಮೆ. ಖೋಟಾ ಛಾಫಾಕಾಗದ (ಸ್ಟಾಂಪ್ ಪೇಪರ್‍ಸ್) ವಂಚನೆಯ ಮೌಲ್ಯ ರೂ. ೧೦,೦೦೦ ಕೋಟಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ಮನ್ನಾ ಮಾಡಿರುವ (ಕೈಗಾರಿಕೋದ್ಯಮಿಗಳು, ಪ್ರತಿಷ್ಠಿತರನ್ನೊಳಗೊಂಡವರದ್ದು) ವಸೂಲಾಗದೆಂದೇನೂ ಅಲ್ಲದ ಸಾಲದ ಮೊತ್ತ ರೂ ೫೦,೦೦೦ ಕೋಟಿ, ಬಾಕಿ ತೆರಿಗೆ ರೂ ೩೫,೦೦೦ ಕೋಟಿ. ಇತರೇ ತೆರಿಗೆಗಳನ್ನು ಹೊರತುಪಡಿಸಿ ಈ ಲೆಕ್ಕಾಚಾರ ಸಿದ್ಧಪಡಿಸಲಾಗಿದೆ. ಈ ದೇಶದ ವಿದ್ಯುತ್ ಕಳ್ಳ ಸಾಗಣೆಯ ಮೌಲ್ಯ ರೂ.೨೪,೦೦೦ ಕೋಟಿಗಳಷ್ಟು. ದೇಶದ ಪ್ರತಿಯೊಂದು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ’ಹರಿಶ್ಚಂದ್ರ’ ಪರಹಿತಕ್ಕಾಗಿ ತನ್ನ ದೇಹ ದಾನ ಮಾಡಿದ ’ದಧೀಚಿ’ ಯಂತಹವರು ಹುಟ್ಟಿದ ನಾಡಿನಲ್ಲಿ ’ರಾಜಕಾರಣ’ ಎಂಬ ನೂತನ ಅರ್ಥದ, ನವನಾಮದ ನವರಾಕ್ಷಸ ಜನ್ಮತಾಳಿತು. ಇದೇ ದೇಶದ ಹಣೆಬರಹದ ಮೇಲೆ ಮಸಿ ರಾಚ ತೊಡಗಿತು. ರಾಜಕಾರಣಕ್ಕೆ ಗುಪ್ತರ ಕಾಲದಲ್ಲಿ ಉನ್ನತ ಮೌಲ್ಯದ ತಂದಿತ್ತ ಚಾಣಕ್ಯ ನಂತಹವರು ಆಧುನಿಕ ರಾಜಕಾರಣಕ್ಕೆ ಕಪಟಿಯಂತೆ ಕಂಡರು. ಸ್ವಾತಂತ್ರ್ಯ ಬಂದು ಸ್ವಚ್ಛಂದವಾಗಿರುವಾಗಲೇ ನಮಗೆ ಪೂರ್ವಜರು, ಸಂಸ್ಕೃತಿ ಪರಂಪರೆಯ ಕುರಿತು ಅವಗಣನೆ ಬೆಳೆದದ್ದು. ಆದುದರಿಂದಲೇ ’ರಾಜಕಾರಣ ಎನ್ನುವುದು ಅಯೋಗ್ಯರ ಕೊನೆಯ ತಾಣ’ದಂತೆ ನಮಗೆ ಕಾಣುವುದು. ಅಷ್ಟರ ಮಟ್ಟಿಗಾದರೂ ಭಾರತೀಯ ರಾಜಕಾರಣಿಗಳಿಗೆ ಋಣಿಯಾಗಿರಲೇ ಬೇಕು!

  ಪ್ರತಿಕ್ರಿಯಿಸಿ :