• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ವಿಶೇಷ ಲೇಖನಗಳು

    ವಿಶ್ವಕ್ಕೇ ಬೆಳಕು ನೀಡಬಲ್ಲ ಭಾರತದ ಆಧ್ಯಾತ್ಮಿಕತೆ

    September 17th, 2008.


    ಮೂಲ : ಫ್ರಾಂಕ್ವಾ ಗೋತಿಯೆ

    ಅನುವಾದ : ಮಹೇಶ ಹೆಗಡೆ ಬಾಳೇಸರ

    (ಜರ್ಮನಿಯಿಂದ)

    ಫ್ರಾಂಕ್ವಾ ಗೋತಿಯೇ - ಫ್ರಾನ್ಸ್ ದೇಶದ ಭಾರತ ಪ್ರೇಮಿ ಪತ್ರಕರ್ತ. ೩೩ ವರ್ಷಗಳ ಕಾಲ ಭಾರತದಲ್ಲಿ ನೆಲೆಸಿ ಇಲ್ಲಿನ ಧರ್ಮ, ಸಂಸ್ಕೃತಿ, ಚಿಂತನೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ ಫ್ರಾಂಕ್ವಾ ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ವಿಶೇಷ ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ’ಅರೈಸ್ ಓ ಇಚಿಡಿಯಾ’, ಎ ವೆಸ್ಟರ್ನ್ ಜರ್ನಲಿಸ್ಟ್ ಆನ್ ಇಂಡಿಯಾ., ’ಇಂಡಿಯಾಸ್ ಸೆಲ್ಫ್ ಡೇನಿಯಲ್’, ’ಶ್ರೀ ಶ್ರೀ ರವಿಶಂಕರ್ ಎ ಗುರು ಆಫ್ ಜಾಯ್’ ಸೇರಿದಂತೆ ಭಾರತದ ಕುರಿತು ಹಲವಾರು ಪ್ರಖ್ಯಾತ ಹಾಗೂ ಮಹತ್ವಪೂರ್ಣ ಕೃತಿಗಳನ್ನು ಬರೆದಿರುವ ಫ್ರಾಂಕ್ವಾ ಪ್ರಸ್ತುತ ಫ್ರಾನ್ಸ್‌ನ ಅತಿ ಹೆಚ್ಚು ಪ್ರಸಾರವುಳ್ಳ ದೈನಿಕ “La Revue de I’ Inde” ಮುಖ್ಯಕಾರ್ಯನಿರ್ವಾಹಕ ಸಂಪಾದಕ. ಭಾರತ ಹಾಗೂ ಭಾರತೀಯ ಸಂಸ್ಕೃತಿಯ ಕುರಿತು ಅತೀವ ಪ್ರೀತಿ, ಗೌರವಗಳನ್ನು ಹೊಂದಿರುವ ಫ್ರಾಂಕ್ವಾ ಗೋತಿಯೇ (www.francoisgautier.com) .ಭಾರತೀಯ ಆಧ್ಯಾತ್ಮ ಜಗತ್ತಿಗೇ ಬೆಳಕು ನೀಡುವ ಸಾಮರ್ಥ್ಯ ಹೊಂದಿದೆ. ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಫ್ರಾಂಕ್ವಾರ ಪ್ರಖ್ಯಾತ ’ದ ಇಂಡಿಯನ್ ಸ್ಪಿರಿಚುಯಾಲಿಟಿ’ ಲೇಖನವನ್ನು ಪ್ರಸ್ತುತ ಉದ್ಯೋಗ ನಿಮಿತ್ತ ಜರ್ಮನಿಯಲ್ಲಿದ್ದು ದೇಶ ಸಂಸ್ಕೃತಿಯ ಕುರಿತು ಅಪಾರ ಕಾಳಜಿಯುಳ್ಳ ಮಿತ್ರ ಮಹೇಶ್ ಹೆಗಡೆ ಬಾಳೇಸರ ಚೈತ್ರರಶ್ಮಿಗಾಗಿ ಅನುವಾದಿಸಿ ಕಳಿಸಿದ್ದಾರೆ.

    ಪಾಶ್ಚಿಮಾತ್ಯ ದೇಶಗಳು ಜೀವನದ ಸತ್ಯಾಂಶವನ್ನು ಕಳೆದುಕೊಂಡಿವೆ. ನಾವು ಮಾನವನ ವಿಕಾಸ, ಹುಟ್ಟು-ಸಾವು, ಹುಟ್ಟು-ಸಾವುಗಳ ನಡುವೆ ಇರುವ ಯಾತನೆ ಏಕೆ, ಭೂಮಿ ಏಕೆ ಇದೆ, ನಾವು ಯಾರು, ನಮ್ಮ ಆತ್ಮ ಏನು, ಪುನರ್ಜನ್ಮ ಎಂದರೇನು ಮತ್ತು ಎಲ್ಲಿದೆ ಜೀವನದ ನಿಜವಾದ ಅರ್ಥ? ಇವೆಲ್ಲವುಗಳ ಅರ್ಥವನ್ನು ಕಳೆದುಕೊಂಡಿದ್ದೇವೆ. ಆದರೆ ಭಾರತವು ಸಾವಿರಾರು ವರ್ಷಗಳಿಂದ ಏಳು ಬೀಳುಗಳ ನಡುವೆಯೂ ಎಲ್ಲದರ ಅರ್ಥವನ್ನು ಉಳಿಸಿಕೊಂಡಿದೆ. ಭಾರತದ ಸನಾತನ ಧರ್ಮವನ್ನು ನಿರ್‍ಮೂಲನೆಗೊಳಿಸಲು ಎಷ್ಟೋ ಜನರು ಪ್ರಯತ್ನಿಸಿದ್ದಾರೆ. ಅದರ ಸಲುವಾಗಿ ದೊಡ್ಡ ಪ್ರಮಾಣದಲ್ಲಿ ನರಹತ್ಯೆಗಳೇ ನಡೆದಿವೆ. ಮುಂದಿನ ಶತಮಾನಗಳಲ್ಲಿ ಜೀವನದ ನಿಜವಾದ ಅರ್ಥವನ್ನು ಭಾರತವು ಜಗತ್ತಿಗೆ ತೋರಿಸಲಿದೆ. ಜಗತ್ತಿಗೆ ಇದೊಂದು ಭಾರತದ ದೊಡ್ಡ ಕೊಡುಗೆಯಾಗಲಿದೆ. ಮಾನವ ಕುಲದ ಅರ್ಥವನ್ನು ತೋರಿಸಿ ಜೀವನದ ನಿಜವಾದ ಸ್ಪೂರ್ತಿಯನ್ನು ಹುರಿದುಂಬಿಸಲಿದೆ. ಮಹಾನ್ ಋಷಿ ಶ್ರೀ ಅರವಿಂದೋ ಒಂದು ಶತಮಾನದ ಹಿಂದೆ ಊಹಿಸಿದ ಹಾಗೆ ಭಾರತವು ಜಗತ್ತಿಗೆ ಆಧ್ಯಾತ್ಮಿಕತೆಯ ಮುಂದಾಳತ್ವವಹಿಸಲಿದೆ: ’ಸನಾತನ ಧರ್ಮವನ್ನು ನಾನು ಜಗತ್ತಿಗೆ ಎತ್ತಿ ತೋರಿಸುತ್ತೇನೆ. ಋಷಿಗಳಿಂದ ಹಾಗು ಹಲವಾರು ಅವತಾರಗಳಿಂದ ಬೆಳೆದು ಪರಿಪೂರ್ಣವಾದ ಈ ಧರ್ಮ, ದೇಶ ದೇಶಗಳಲ್ಲಿ ಹಬ್ಬಲಿದೆ. ನಾನು ನನ್ನ ದಿವ್ಯವಾಣೀಯನ್ನು ಈ ದೇಶದ ಮೂಲಕ ಕಳಿಸಲಿದ್ದೇನೆ. ಆದ್ದರಿಂದ ಯಾವಾಗ ಭಾರತವು ಏರುವುದೋ, ಬೆಳೆಯುವುದೋ ಆಗ ಸನಾತನ ಧರ್ಮವೂ ಏರಲಿದೆ ಹಾಗು ಪ್ರಧಾನವಾಗಲಿದೆ. ಭಾರತವು ವೃದ್ಧಿಯಾದಾಗ, ವಿಸ್ತರಿದಾಗ ಅದರ ಜೊತೆ ಸನಾತನ ಧರ್ಮವೂ ವಿಸ್ತರಿಲಿದೆ. ಭಾರತವು ಧರ್ಮದಿಂದಾಗಿ ಹಾಗು ಧರ್ಮಕ್ಕಾಗಿ ಇದೆ’. (India’s Rebirth. p.46 - Uttarapara Speech)

    ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವವರ ಕಿವಿಯಲ್ಲಿ ಹೀಗೆ ಹೇಳಬೇಕೆನಿಸುತ್ತದೆ. ಓ ವೇದಯುಗದ ಭಾರತವೆ ಎದ್ದೇಳು, ಎಲ್ಲ ಜನರ ಹೃದಯ ಹಾಗು ಮನಗಳಲ್ಲಿ ನೆಲೆಸು. ಪಾಶ್ಚಿಮಾತ್ಯಗೊಳ್ಳುತ್ತಿರುವ ಜಾತ್ಯಾತೀತ ಭಾರತವೆ ಎದ್ದೇಳು, ನಿನ್ನ ದೇಶದ ಹಿರಿಮೆಯನ್ನು ಅರಿತುಕೋ, ನಶಿಸುತ್ತಿರುವ ನಾಗರೀಕತೆಯ ಜೊತೆ ನಿನ್ನ ದೇಶವನ್ನು ಹೋಲಿಸುವುದನ್ನು ನಿಲ್ಲಿಸು. ವೇದ ಮಂತ್ರ ಹಾಗು ದೇಗುಲಗಳಲ್ಲಿರುವ ಹಿರಿಮೆಯೊಂದನ್ನಲ್ಲ, ಈಗಲೂ ಭಾರತದಲ್ಲಿರುವ ಹಿರಿಮೆ ಹಾಗು ಶ್ರೇಷ್ಠತೆಯನ್ನು ಅರಿತುಕೋ. ಅದು ಎಲ್ಲರಿಗಾಗಿ ಕಾಯುತ್ತಿದೆ. ಎದ್ದೇಳು ಭಾರತವೇ ಎದ್ದೇಳು, ನಿನ್ನಲ್ಲಿರುವ ಶ್ರೇಷ್ಠತೆಯನ್ನು ತೋರಿಸು. ಎದ್ದೇಳು, ಓ ಮೊದಲಿನ ಭಾರತವೇ, ಎದ್ದೇಳು.

    The Wonder That Was India ಪುಸ್ತಕದ ಲೇಖಕ ಎ.ಎಲ್. ಭಾಷಮ್ .ಭಾರತವು ರಾಜಕೀಯ ವಾಗಿ ತೀವ್ರವಾದಿ ಮತ್ತು ಒಗ್ಗಟ್ಟಿಲ್ಲದ ದೇಶ ಎಂದು ಟೀಕಿಸಿದ್ದಾರೆ. ಆದರೆ ನಿಜವಾಗಿ ಭಾರತದಲ್ಲಿ ವಿವಿಧತೆ ಯಲ್ಲಿ ಏಕತೆ ಇತ್ತು. ಭಾರತವು ಪ್ರಜಾಪ್ರಭುತ್ವದಿಂದ ಕೂಡಿದ, ವ್ಯೆಯಕ್ತಿಕ ಹಾಗು ಸಾಮೂಹಿಕವಾಗಿ ಇಂದಿನಿಂತಲೂ ಹೆಚ್ಚಿನ ಸ್ವತಂತ್ರ ದೇಶವಾಗಿತ್ತು. ನಾವು ಮತ್ತೆ ಭಾರತದ ಇತಿಹಾಸವನ್ನು ಓದೋಣ. ಪಾಶ್ಚಿಮಾತ್ಯ ದೃಷ್ಟಿಯಿಂದಲ್ಲ, ಆದರೆ ನಮಗೆಲ್ಲರಿಗೂ ಕೊಟ್ಟಿರುವ ಪುರಾತನ ಜ್ಞಾನದ ದೃಷ್ಟಿಯಿಂದ ವೀಕ್ಷಿಸೋಣ.

    ಪಾಶ್ಚಿಮಾತ್ಯ ದೇಶಗಳು(ಹಾಗು ಕೆಲವು ಭಾರತೀಯರು) ಭಾರತವನ್ನು ಜಗತ್ತಿನ ಒಂದು ಬಡರಾಷ್ಟ್ರ, ಹಿಂದುಳಿದ ದೇಶ, ಅಧಿಕಾರಶಾಹಿ ರಾಷ್ಟ್ರ ಹಾಗು ಇತ್ತೀಚೆಗೆ ಹಿಂದೂ ಮೂಲಭೂತವಾದಿಗಳು ಎಂದು ಕಡೆಗಣಿಸಿದ್ದಾರೆ, ಅಲಕ್ಷಿಸಿದ್ದಾರೆ. ಇದೊಂದು ನಿಜಕ್ಕೂ ವಿಸ್ಮಯಗೊಳಿಸುವಂತಹ ವಿರೋಧಾಭಾಸ ವಾಗಿದೆ. ಇಷ್ಟೆಲ್ಲಾ ಆದರೂ, ಭಾರತದಲ್ಲಿ ಜಗತ್ತಿನ ಭವಿಷ್ಯ ಹುದುಗಿದೆ. ಯಾಕೆಂದರೆ ಭಾರತವು ಹಿಮಾಲಯದ ಕತ್ತಲ ಗುಹೆಗಳಲ್ಲಿ, ದೇದೀಪ್ಯಮಾನ ದಿಂದ ಕೂಡಿದ ಬನಾರಸ್ ಘಾಟ್‌ಗಳಲ್ಲಿ, ಲೆಕ್ಕವಿಲ್ಲ ದಷ್ಟು ಯೋಗಿಗಳ ಹೃದಯದಲ್ಲಿ ಹಾಗು ಸಾಧಾರಣ ಜನರಲ್ಲಿ ಭಾರತದ ಭವಿಷ್ಯ ಮತ್ತು ಭಾರತದ ಭರವಸೆಯನ್ನು ಉಳಿಸಿಕೊಂಡಿದೆ. ಭಾರತದ ಜ್ಞಾನದ ಸಂಪತ್ತು ಒಂದು ಕಾಲದಲ್ಲಿ ಈಜಿಪ್ಟ್ ಹಾಗು ಚೀನಾ ದೇಶಗಳ ನಡುವಿನ ತೀರದುದ್ದಕ್ಕೂ ಹಬ್ಬಿತ್ತು. ಈಗ ಆ ಎಲ್ಲ ದೇಶಗಳು ಸನಾತನ ಧರ್ಮದ ಜ್ಞಾನವನ್ನು ಕಳೆದುಕೊಂಡಿವೆ. ಯುರೋಪ್ ಖಂಡ ಈಗ ಗೊಂದಲದಲ್ಲಿದೆ. ಅಲ್ಲಿ ಒಂದೇ ತರಹದ ಜಾತಿ ಧರ್ಮಗಳಿದ್ದರೂ ಐಕ್ಯತೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಪಾಶ್ಚಿಮಾತ್ಯ ದೇಶಗಳು ಭೌತಿಕತೆಯ(Materialism) ಹಸಿವಿಂದಾಗಿ, ತಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವುದನ್ನು ಅರಿಯದೆ, ಜಗತ್ತಿನಾದ್ಯಂತ ಭಾರತವು ಮಾತ್ರ ಉಳಿಸಿಕೊಂಡ, ಜೀವನಕ್ಕೆ ಅತ್ಯವಶ್ಯವಾದ, ಮಹತ್ವವಾದ ಜ್ಞಾನವನ್ನು ಕಳೆದುಕೊಂಡಿದೆ. ೨೧ನೇ ಶತಮಾನ ಪೂರ್ವ ದೇಶಗಳ ಯುಗವಾಗಲಿದೆ. ಸೂರ್ಯನು ಮತ್ತೆ ಹಲವಾರು ಶತಮಾನಗಳ ನಂತರ, ಪಾಶ್ಚಿಮಾತ್ಯ ದೇಶಗಳ ವಸಾಹತುಶಾಯಿಯ(Colonalism) ನಂತರ ಇಲ್ಲಿ ಉದಯಿಸಲಿದ್ದಾನೆ. ಇಡೀ ಜಗತ್ತಿನ ದೃಷ್ಟಿ ಪೂರ್ವದೇಶಗಳ ಕಡೆ ತಿರುಗಲಿದೆ. ಭಾರತವು ಪ್ರಕಾಶಿಸಿದಾಗೆಲ್ಲ ಭಾರತದ ಧರ್ಮವೂ ಕೂಡ ಜಗತ್ತಿನಾದ್ಯಂತ ಹರಡಿತ್ತು. ಜಪಾನ್, ತಾಯಲ್ಯಾಂಡ, ಚೀನಾ, ಬರ್ಮಾ ಮುಂತಾದ ದೇಶಗಳ ನಾಗರೀಕತೆ ಹಾಗು ಧರ್ಮಗಳು ಪ್ರಭಾವಿತಗೊಂಡಿದ್ದವು. ಮತ್ತೊಮ್ಮೆ ಭಾರತವು ಪ್ರಜ್ವಲಿಸಲಿದೆ, ಮೆರೆಯಲಿದೆ. ಭಾರತವು ಕಳೆದ ಯುಗಗಳಲ್ಲಿ ನಶಿಸಿಲ್ಲ ಅಥವಾ ತನ್ನ ಅಸ್ತಿತ್ವವನ್ನು ಭಾರತವು ಇನ್ನೂ ತನ್ನ ಶಕ್ತಿಯನ್ನು ಉಳಿಸಿಕೊಂಡಿದೆ. ತನಗಾಗಿ ಹಾಗು ಮಾನವ ಕುಲಕ್ಕಾಗಿ ಇನ್ನೂ ತನ್ನ ಶಕ್ತಿಯನ್ನು, ಗುಣಗಳನ್ನು ಹೊರಚೆಲ್ಲಬೇಕಾಗಿದೆ. ಭಾರತವು ಜಾಗ್ರತವಾಗಲು ಪಾಶ್ಚಿಮಾತ್ಯ ದೇಶಗಳನ್ನು ಅನುಸರಿಸುತ್ತಿರುವ, ಪಾಶ್ಚಿಮಾತ್ಯ ದೇಶಗಳು ಹೇಳಿದಂತೆ ಕೇಳುವವರನ್ನು ಕೇಳಬೇಕಾಗಿಲ್ಲ. ಅದರ ಬದಲು ತನ್ನ ಆಳದಲಿ ಹುದುಗಿರುವ ಪುರಾತನ ಶಕ್ತಿಯನ್ನು, ತನ್ನ ತಲೆಯನ್ನು ಸರ್ವೋಚ್ಛ ಬೆಳಕಿನ ಹಾಗು ಶಕ್ತಿಯ ಮೂಲದಕಡೆ ಮೇಲೆತ್ತಿ, ತನ್ನ ಆಗಾಧವಾದ ಧರ್ಮದ ಅರ್ಥವನ್ನು ತಿಳಿದು, ಮರಳಿ ಪಡೆಯಬೇಕು (ಶ್ರೀ ಅರವಿಂದೋ)..

    ಆದರೆ ಇದಕ್ಕೆ ಭಾರತವು ತನ್ನ ಆರ್ಥಿಕ ಸ್ಥಿತಿಯನ್ನು ಪ್ರಗತಿಪರವಾಗಿ ಮಾಡುತ್ತಿರುವ ಪ್ರಯತ್ನದಲಿ ಯಶಸ್ವಿಯಾಗಬೇಕು, ಕೇಂದ್ರ ಸರ್ಕಾರದ ಕೈಯಲ್ಲಿರುವ ಅಧಿಕಾರವನ್ನು ವಿಕೇಂದ್ರೀಕರಿಸಬೇಕು, ಆಂಗ್ಲರನ್ನು ಅನುಕರಿಸುತ್ತಿರುವ ಸಂವಿಧಾನವನ್ನು ತಿದ್ದುಪಡಿಸಬೇಕು ಹಾಗು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುತ್ತಿರು ರಾಜನೀತಿಯನ್ನು ಸುಧಾರಿಸಬೇಕು. ಒಂದು ಶಬ್ದದಲ್ಲಿ ಹೇಳಬೇಕೆಂದರೆ, ಭಾರತವು ಯಾವುದೇ ಪಾಶ್ಚಿಮಾತ್ಯ ದೇಶಕ್ಕೆ ಸರಿಸಾಟಿಯಾಗಿ ನಿಲ್ಲಬೇಕು. ಯಾವಾಗ ಭಾರತವು ಪಾಶ್ಚಿಮಾತ್ಯ ದೇಶಗಳ ಗೌರವ ಹಾಗು ಗಮನ ಸೆಳೆಯುವುದೊ, ಆವಾಗ ತನ್ನ ಆಧ್ಯಾತ್ಮಿಕತೆಯ, ಸನಾತನ ಧರ್ಮದ ಪುರಾತನವಾದ ಜ್ಞಾನದ ಸಂದೇಶವನ್ನು ಕಳಿಸಿ, ನಯವಾಗಿ ಉಪದ್ರವ ಕೊಡುತ್ತಿರುವ ಹಾಗು ವಿನಾಶದ ಅಂಚಿನಲ್ಲಿರುವ ಈ ಗ್ರಹಕ್ಕೆ ಭಾರತವು ಹೊ ಜಗತ್ತನ್ನು ತರಲಿದೆ.

    (ಇನ್ನೂ ಹೆಚ್ಚಿನ ಮಾಹಿತಿಗಾಗಿ http:/www.francoisgautier.com/ ನೋಡಿ)

    ಪ್ರತಿಕ್ರಿಯಿಸಿ :