• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ವಿಶೇಷ ಲೇಖನಗಳು

  ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ

  December 31st, 2010.


   – ಎಸ್. ಸೂರ್ಯಪ್ರಕಾಶ ಪಂಡಿತ್ 

  ಭಾರತೀಯ ಕಲಾಕೃತಿಗಳನ್ನು ಕಂಡು ವಿದೇಶಿಯರು ಅನಾಗರಿಕವೆಂದು ಮೂದಲಿಸುತ್ತಿದ್ದ ಕಾಲದಲ್ಲಿ , ಜಗತಿನ ಉಳಿದೆಲ್ಲ ಕಳಪ್ರಕಾರಗಳಿಗಿಂತ ಭಾರತೀಯ ಕಲೆ ಮಿಗಿಲಾದುದೆಂದು ನಿರೂಪಿಸಿದವರು ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ.

  ಬದುಕಿನ ಬಹುಭಾಗ ಭಾರತದಿಂದ ಹೊರಗೇ ಕಳೆದರೂ ಭಾರತೀಯ ಕಲೆ ಸಂಸ್ಕೃತಿಗಳ ಕುರಿತು ಪಶ್ಚಿಮ ದೇಶಗಳಲ್ಲಿ ಗೌರವವನ್ನೂ, ಅಭಿಮಾನವನ್ನೂ ಮೂಡಿಸಿದ ಕಲಾತಪಸ್ವಿ. ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳದೆ ಅದರ ಕುರಿತು ಅಪಾರ್ಥ ಕಲ್ಪಿಸುತ್ತಿದ್ದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹಾಗೂ ಪಾಶ್ಚಿಮಾತ್ಯ ವಿಮರ್ಶಕರಿಗೆ ಸೆಡ್ಡು ಹೊಡೆದು ಧರ್ಮ ಹಾಗೂ ಂ ತಿU ಹೊಸ ಬಾs ? ಬgದೆ ಬಾs gತಿ ಂi ಂ ತಿಂi ಸತ್ವ ಹಾಗೂ ಮಹತ್ವಗಳನ್ನು ಜಗತ್ತಿಗೇ ಸಾರಿ ಹೇಳಿದ ಈ ಕಾಲದ ಋಷಿ. ಈ ದೀ ವು ಂv ವು ಷಿ ಂi ಜೀನ zಶ ವ ನ vರೆ ದಿ ಟ್ಟಿದ್ದಾg ಅಬಿe P ನ ದ 

  ರಾ?ವೊಂದರ ನಿರ್ಮಾಣವು ಕವಿ ಮತ್ತು ಕಲಾವಿದರಿಂದಲೇ ಹೊರತು ಉದ್ಯಮಿಗಳು ಅಥವಾ ರಾಜಕಾರಣಿಗಳಿಂದಲ್ಲ; ಬದುಕಿನ ಗಹನವಾದ ಮೌಲ್ಯಗಳು ಕಲೆಯಲ್ಲಿ ಮಾv ನಿಕ್ಷಿಪ್ತವಾಗಿರಬಲ್ಲವು.

  ದಿಟವಾದ ಸ್ವದೇಶೀ ಎಂಬುದು ಜೀವನವನ್ನು ನೋಡುವ ಒಂದು ದೃಷ್ಟಿ. ಇದೊಂದು ಪ್ರಾಮಾಣಿಕತೆಯೂ ಹೌದು. ಮೊದಲು ಇದನ್ನು ತಿಳಿದು, ಜೀವನಕಲೆಯನ್ನು ಮತ್ತೊಮ್ಮೆ ಸಿದ್ದಿಸಿಕೊಳ್ಳಬೇಕಾಗಿದೆ.

  “ಸ್ವದೇಶೀ ಎಂಬುದು ಒಂದು ರಾಜಕೀಯ ಅಸ್ತ್ರವಲ್ಲ; ಅದೊಂದು ಧಾರ್ಮಿಕ ಕಲಾದರ್ಶ”.

  “ಪ್ರತಿಯೊಬ್ಬ ಮಾನವನ ಕೊನೆಯ ಹಂತವೆಂದರೆ ದೈವಾನುಭವವೇ. ಆದುದರಿಂದ, ನಮ್ಮ ಎಲ್ಲ

  ಚಟುವಟಿಕೆಗಳೂ ಈ ಅಂತಿಮ ಗುರಿಯತ್ತಲೇ ಮುಖಮಾಡಿರತಕ್ಕದ್ದು”.

  “ಸಂಸ್ಕೃತಿ ಎಂಬುದು ಒಂದು ಮನೋಭಾವ; ಇದು ತನ್ನ ಪರಂಪರೆಯನ್ನು ಕುರಿತು ವ್ಯಕ್ತಿಯೊಬ್ಬನ

  ಪೂರ್ವಗ್ರಹಗಳಿಲ್ಲದ ಅರಿವು. ಪರಂಪರೆಯ ಎಳೆಗಳನ್ನು ತುಂಡರಿಸಿಕೊಂಡ ಅಡ್ಡಜಾತಿಯ ತ್ರಿಶಂಕು ಮಾನಸಿಕತೆ ಮತ್ತು ತಾಯಿ ಬೇರಿನಿಂದ ಪೂರ್ಣವಾಗಿ ವಂಚಿತವಾದ ಟೊಳ್ಳು ಜನಾಂಗವನ್ನು – ಎಂದರೆ ಪೂರ್ವಾಕ್ಕಾಗಲೀ, ಪಶ್ಚಮಕ್ಕಾಗಲೀ, ಭೂತಕ್ಕಾಗಲೀ, ಭವಿ?ಕ್ಕಾಗಲೀ ಸೇರದ ಸಮಾಜಬಾಹಿರ ಬೌದ್ಧಿಕವರ್ಗವನ್ನು – ಸೃಷ್ಟಿಸಲು ಆಂಗ್ಲಶಿಕ್ಷಣವನ್ನು ಪಡೆದ ಒಂದೇ ಒಂದು ಪೀಳಿಗೆಯ? ಸಾಕು”.

  ಮಂತ್ರಸದೃಶವಾದ ಮೇಲಿನ ಮಾತುಗಳು ಆನಂದ ಕೆಂಟಿ? ಕುಮಾರಸ್ವಾಮಿ ಅವರದ್ದು; ಇವರು ನಮ್ಮ ಕಾಲದ ಒಬ್ಬ ಋಷಿಯೆಂದೇ ಪರಿಗಣಿತರಾಗಿದ್ದಾರೆ.

  ಖನಿಜಶಾಸ್ತ್ರ, ತತ್ವಶಾಸ್ತ್ರ, ಶಿಲ್ಪ, ಚಿತ್ರ, ಸಂಗೀತ, ಕರಕುಶಲತೆ – ಹೀಗೆ ಹಲವು ಹತ್ತು ವಿ?ಯಗಳಲ್ಲಿ ಆರುನೂರಕ್ಕೂ ಹೆಚ್ಚು ಪ್ರೌಢಪ್ರಬಂಧಗಳನ್ನೂ, ಹತ್ತಾರು ಉದ್ಗ್ರಂಥಗಳನ್ನೂ ರಚಿಸಿ ಇಡಿಯ ಜಗತ್ತಿನ ಪ್ರತಿಭಾವಂತರ, ಚಿಂತಕರ, ಕಲಾ ಯೋಗಿಗಳ ಸಾಲಿನಲ್ಲಿ ಅಲಂಕೃತರಾಗಿ ರುವವರು ಆನಂದ ಕುಮಾರಸ್ವಾಮಿ.ಜಗತ್ತಿನ ಬೇರೆ ಬೇರೆ ಪ್ರಾಂತಗಳ ಇಪ್ಪತ್ತಕ್ಕೂ ಹೆಚ್ಚು ಭಾ?ಗಳು ಇವರಿಗೆ ವಶವಾಗಿದ್ದುವು. ಇವರ ಬರಹದ ಒಂದೊಂದು ವಾಕ್ಯವೂ ಮಹಾಗ್ರಂಥ ವೊಂದರ ಸತ್ತ್ವವನ್ನೇ ಅಡಗಿಸಿಕೊಂಡಿದೆ, ಅರಗಿಸಿಕೊಂಡಿದೆ ಎಂದು ವಿದ್ವಾಂಸರು ಪ್ರಶಂಸಿಸಿದ್ದಾರೆ. ಬದುಕಿನ ಎಡರು-ತೊಡರುಗಳಿಗೆ ಬಗ್ಗದೆ, ಕುಗ್ಗದೆ ತಾವು ನಂಬಿದ್ದ ಮಹಾತ್ತ್ವವೊಂದರ ಅನುಸಂಧಾನದಲ್ಲಿಯೇ ತಮ್ಮ ಬಾಳನ್ನು ಬೆಳಗಿಸಿದ ತಪಸ್ವಿ ಇವರು. ಭಾರತೀಯ ಕಲಾಮೌಲ್ಯಗಳನ್ನು ಎತ್ತಿಹಿಡಿದು ಜಗತ್ತಿಗೆ ಅವುಗಳನ್ನು ಪರಿಚಯಿಸಿದ ಸಾಂಸ್ಕೃತಿಕ ರಾಯಭಾರಿ; ವಿಶ್ವದ ಎಲ್ಲ ಮಹಾಮೌಲ್ಯಗಳೂ ಒಂದೇ ಸತ್ತ್ವದ ಅಭಿವ್ಯಕ್ತಿಯೆಂದು ಸಾರಿದ ದಾರ್ಶನಿಕ ಆನಂದ ಕುಮಾರಸ್ವಾಮಿ.

  ಆನಂದ ಕುಮಾರಸ್ವಾಮಿ ಹುಟ್ಟಿದ್ದು ೧೮೭೭ರ ಆಗಸ್ಟ್ ೨೨ರಂದು, ಕೊಲೊಂಬೋ ನಗರದಲ್ಲಿ (ಈಗಿನ ಶ್ರೀಲಂಕಾ). ತಂದೆ ಸರ್ ಮುತ್ತು ಕುಮಾರಸ್ವಾಮಿ;ತಾಯಿ ಎಲಿಜಬೆತ್ ಕ್ಲೇ ಬೀಬಿ. ಮುತ್ತು ಕುಮಾರಸ್ವಾಮಿಯವರ ಪೂರ್ವಜರು ತಮಿಳುನಾಡಿನ ಮೂಲದವರು; ಎಲಿಜಬೆತ್ ಕ್ಲೇ ಇಂಗ್ಲೆಂಡ್ ದೇಶದವರು.

  ಮುತ್ತು ಕುಮಾರಸ್ವಾಮಿ ವಿದ್ವಾಂಸರು; ಬ್ರಿಟಿ?ಆಡಳಿತದಲ್ಲಿ ಗಣ್ಯಸ್ಥಾನವನ್ನು ಪಡೆದಿದ್ದವರು. ಬ್ರಿಟಿ? ರಾಣಿ ಇವರಿಗೆ ನೈಟ್ ಹುಡ್ ಪದವಿಯನ್ನು ನೀಡಿ ಗೌರವಿಸಿದ್ದಳು. ಆನಂದ ಕುಮಾರಸ್ವಾಮಿ ಎರಡು ವ?ದ ಹಸುಳೆಯಾಗಿದ್ದಾಗಲೇ ಇವರು ತೀರಿಕೊಂಡರು. ಹೀಗಾಗಿ ಆನಂದ ಕುಮಾರಸ್ವಾಮಿ ತಾಯಿ ಯೊಂದಿಗೆ ಇಂಗ್ಲೆಂಡ್ ಸೇರಿದರು.

  ಆನಂದ ಕುಮಾರಸ್ವಾಮಿಯವರ ವಿದ್ಯಾಭ್ಯಾಸವೆಲ್ಲ ಇಂಗ್ಲೆಂಡಿನಲ್ಲೇ ನಡೆಯಿತು. ಭೂ ವಿಜ್ಞಾನ,ಸಸ್ಯಶಾಸ್ತ್ರಗಳೊಂದಿಗೆ ಬಿ.ಎಸ್‌ಸಿ ಪದವಿಯನ್ನು ಲಂಡನ್ನಿನ ಯೂನಿವರ್ಸಿಟಿ ಕಾಲೇಜ್‌ನಿಂದ ೧೯೦೦ ರಲ್ಲಿ ಪಡೆದರು. ಸಿಂಹಳದ್ವೀಪದ ಭೂಸಂಪತ್ತನ್ನು ಕುರಿತು ಹಲವಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದ ಕುಮಾರಸ್ವಾಮಿಯವರ ಪ್ರತಿಭೆಯನ್ನು ಮೆಚ್ಚಿಕೊಂಡು ೧೯೦೩ ರಲ್ಲಿ ಬ್ರಿಟಿ? ಸರ್ಕಾರ ಮಿನರಲಾಜಿಕಲ್ ಸರ್ವೆ ಆಫ್ ಸಿಲೋನ್ನ ನಿರ್ದೇಶಕರನ್ನಾಗಿ ನೇಮಿಸಿತು. ತೋರಿಯನೈಟ್ ಎಂಬ ಹೊಸ ಖನಿಜವೊಂದನ್ನು ಇವರು ೧೯೦೪ ರಲ್ಲಿ ಕಂಡು ಹಿಡಿದರು. ಇವರು ಖನಿಜಶಾಸ್ತ್ರದ ಬಗ್ಗೆ P ಟಿ ಸಿz ಬ್ರ ಂzಗs ಳಿ U ಲಂqನ ವಿವಿದ್ಯಾಲಂi ೧೯೦೬ ರಲ್ಲಿ ಡಾಕ್ಟೊರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

  ಪರಕೀಯ – ಸಂಸ್ಕೃತಿಗಳು ಸ್ಥಳೀಯ – ಸಂಸ್ಕೃತಿಗಳ ಮೇಲೆ ಎರಗಿ, ಆ ಮೂಲಸಂಸ್ಕೃತಿಗಳ ವಿವರಗಳನ್ನೆಲ್ಲ ಬುಡಮೇಲು ಮಾಡಿರುವುದನ್ನು ಕುಮಾರಸ್ವಾಮಿಯವರು ತಾವು ಸಿಂಹಳದಲ್ಲಿದ್ದಾಗ ನೇರವಾಗಿ ಕಂಡು ಕೊಂಡರು. ಜನಮಾನಸದಲ್ಲಿ ಮತ್ತೆ ತಮ್ಮ ಪರಂಪರೆ – ಸಂಪ್ರದಾಯ – ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ, ಅಭಿಮಾನ ತಳೆಯುವಂತೆ ಮಾಡಬೇಕಾದುದರ ಅವಶ್ಯಕತೆಯನ್ನು ಮನಗಂಡರು. ಭಾರತೀಯ ದರ್ಶನ, ಕಲೆ, ಧರ್ಮ, ಸಂಸ್ಕೃತಿಗಳಿಗೆ ಸೇರಿದ ಗ್ರಂಥಗಳ ಅಧ್ಯಯನದಲ್ಲಿ ತಲ್ಲೀನರಾದರು. ಭಾರತದೇಶವನ್ನೆಲ್ಲ ಸುತ್ತಾಡಿ ಭಾರತೀಯ ಸಂಸ್ಕೃತಿಯ ನೇರವಾದ ಪರಿಚಯವನ್ನು ಮಾಡಿಕೊಂಡರು. ಈ ಓಡಾಟದಲ್ಲಿ ಬಾಲಗಂಗಾಧರ ತಿಲಕ್, ಗೋಪಾಲಕೃ?ಗೋಖಲೆ, ಅರವಿಂದ್ ಘೋ?, ವಿಪಿನ ಚಂದ್ರಪಾಲ್, ಸುರೇಂದ್ರನಾಥ ವಂದೋಪಾಧ್ಯಾಯ,ಅವನೀಂದ್ರನಾಥ ಠಾಕೂರ್, ನಂದಲಾಲ ಬಸು, ಅರ್ಧೇಂದುಕುಮಾರ ಗಂಗೂಲಿ ಮೊದಲಾದ ಖ್ಯಾತನಾಮರ ಸ್ನೇಹ ಒದಗಿತು. ಸಿಂಹಳ ದ್ವೀಪದ ಕರಕುಶಲಕಲೆಗಳ ಬಗ್ಗೆ ತಾವು ಸಂಗ್ರಹಿಸಿದ್ದ ಮಾಹತಿಯನ್ನೆಲ್ಲ ಕೊಡಿಸಿ ಒeಜiಚಿevಚಿಟ Siಟಿhಚಿಟese ಂಡಿಣ ಎಂಬ ಉದ್ಗ್ರಂಥವನ್ನು ಪ್ರಕಟಿಸಿದರು(೧೯೦೮ ರಲ್ಲಿ). ಇದೇ ವ? ಕುಮಾರಸ್ವಾಮಿಯವರು ಪ್ರಕಟಿಸಿದ ಖಿhe ಂim oಜಿ Iಟಿಜiಚಿ ಂಡಿಣ (ಭಾರತೀಯ ಕಲೆಯ ಗೊತ್ತುಗುರಿ) ಎಂಬ ಪ್ರಬಂಧವು ಭಾರತೀಯ ಕಲಾಪರಂಪರೆ ಯನ್ನು ಕುರಿತು ಜಗತ್ತಿನ ಕಲಾವಿದರ ಕಣ್ಣನ್ನು ವಿಶಾಲಗೊಳಿಸಿತು.

  ಆನಂದ ಕುಮಾರಸ್ವಾಮಿಯವರ ಆಸಕ್ತಿ ಈಗ ಪೂರ್ಣವಾಗಿ ಭೂ ವಿಜ್ಞಾನದಿಂದ ಕಲೆ, ಸಂಸ್ಕೃತಿಗಳ ಕಡೆಗೆ ತಿರುಗಿತು. ಇಂಗ್ಲೆಂಡಿನಲ್ಲೇ ಇದ್ದುಕೊಂಡು ಹಲವಾರು ಬಾರಿ ಭಾರತಕ್ಕೆ ಬಂದು ಸುತ್ತಾಡಿದರು. ಆಗ ಇಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಕುಮಾರಸ್ವಾಮಿಯವರು ಯೋಗದಾನ ನೀಡಿದರು. ಭಾರತವು ರಾಜಕೀಯವಾಗಿ ಮಾತ್ರವ? ಸ್ವಾತಂತ್ರ್ಯ ಪಡೆಯುವುದು ಮುಖ್ಯವಲ್ಲ; ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿಯೂ ಸ್ವತಂತ್ರವಾಗಬೇಕೆನ್ನುವುದು ಅವರ ಚಿಂತನೆ. ಜನರಲ್ಲಿ ಸ್ವದೇಶೀ ತತ್ತ್ವವು ರಕ್ತಗತವಾಗಬೇಕಾದರೆ ಈ ನೆಲದ ಧರ್ಮ, ಕಲೆ, ಆಚಾರ – ವಿಚಾರಗಳನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವೆಂದರು. ಸ್ವದೇಶೀ ಕಲ್ಪನೆಗೂ ಆಧ್ಯಾತ್ಮಿಕತೆಗೂ ಅವಿನಾಭಾವ ಸಂಬಂಧ ಇದೆಯೆಂಬುದು ಅವರ ತತ್ತ್ವ.

  ಕುಮಾರಸ್ವಾಮಿಯವರು ಭಾರತದ ಉದ್ದಗಲಕ್ಕೂ ಸಂಚರಿಸಿ ನೂರಾರು ಚಿತ್ರಗಳು, ಪ್ರತಿಮೆಗಳು, ಶಿಲ್ಪಗಳು, ಲೋಪಕರಣಗಳನ್ನು ಸಂಗ್ರಹಿಸಿದ್ದರು ಇವೆಲ್ಲವನ್ನೂ ಒಟ್ಟುಗೂಡಿಸಿ, ಭಾರತದ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾದ ವಾರಣಾಸಿಯಲ್ಲಿ ರಾಷ್ಟ್ರೀಯ ಮ್ಯೂಸಿಯಂ ಒಂದನ್ನು ಸ್ಥಾಪಿಸಬೇಕೆನ್ನುವುದು ಅವರ ಬಯಕೆ ಯಾಗಿದ್ದಿತು; ಆದರೆ ಇದಕ್ಕೆ ಅವಕಾಶವಾಗಲಿಲ್ಲ.

  ಯಾವುದಾದರೊಂದು ಭಾರತೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಭಾರತದಲ್ಲೇ ಉಳಿಯಬೇಕೆಂದು ಹಂಬಲಿಸಿದರು. ಇದೂ ನೆರವೇರಲಿಲ್ಲ. ಕೊನೆಗೆ, ನಿರಾಶೆಯಿಂದ ಅವರು ಅಮೆರಿಕೆಯನ್ನು ಸೇರಿದರು. ಅಲ್ಲಿಯ ಬೋಸ್ಟನ್ ಮ್ಯೂಸಿಯಂನಲ್ಲಿ ಭಾರತೀಯ ಕಲೆಗಳ ರಕ್ಷಕರಾಗಿ ನೇಮಕವಾದರು. ಅಪೂರ್ವ ಕಲಾನಿಧಿಯೊಂದು ಹೀಗೆ ತವರೂರನ್ನು ಬಿಟ್ಟು ದೂರದ ಬೋಸ್ಟನ್ಮ್ಯೂಸಿಯಂನ್ನು ಸೇರಿತು. ಇಂಥದೊಂದು ಅಮೂಲ್ಯ ಕಲಾಸಂಗ್ರಹವನ್ನು ಉಳಿಸಿಕೊಳ್ಳದೇ ಹೋದುದು ನಮ್ಮ ಪಾಲಿಗೆ ದಿಟವಾಗಿಯೂ ದೊಡ್ಡ ನ?.

  ಕುಮಾರಸ್ವಾಮಿಯವರಿಗೆ ಇಂಗ್ಲಿ?, ಸಂಸ್ಕೃತ,ಪಾಳಿ, ಪ್ರಾಕೃತ, ಸಿಂಹಳೀ ಬಂಗಾಲೀಭಾ?ಗಳಲ್ಲದೆಯೇ ಅರ್‍ಯಾಬಿಕ್, ಅವೆಸ್ತನ್, ಪರ್ಶಿಯನ್, ಗ್ರೀಕ್,ಲ್ಯಾಟಿನ್, ಫ್ರೆಂಚ್, ಇಟ್ಯಾಲಿಯನ್, ಸ್ಪ್ಯಾನಿ?ವು ಂತಾz ತ g ಬಾs ?ಗೆ ಳ ಲಿ s vವಿ ದ್ದಿತು . ಆಂii ಭಾ?ಗಳ ಮೂಲ ಗ್ರಂಥಗಳನ್ನೆಲ್ಲ ಮೂಲದಲ್ಲೇ ಅಧ್ಯಯನ ಮಾಡಿದ್ದರು. ವೇದ, ಉಪನಿ?ತ್ತು, ಬೌದ್ಧಜೈ ದರ್ಶನಗಳಲ್ಲದೆ ಕ್ರೈಸ್ತಮತ, ಇಸ್ಲಾಂಮತ,ಸೂಫಿತತ್ತ್ವ, ಚೀನಿ – ಜಪಾನ್ ದರ್ಶನ ಮುಂತಾದ ಹಲವು ಮತಸಿದ್ಧಾಂತಗಳನ್ನೂ ಕರಗತಮಾಡಿ ಕೊಂಡಿದ್ದರು. ಅವರ ಬರವಣಿಗೆಯನ್ನು ಗಮನಿಸಿರುವವರಿಗೆ ಅವರ ಅಧ್ಯಯನದ ವಿಸ್ತಾರ, ತಿಳಿವಿನ ಔದಾರ್ಯ, ಸತ್ಯಾನ್ವೇ?ಣೆಯಲ್ಲಿ ನಿ?, ಪ್ರವೃತ್ತಿಯಲ್ಲಿ ಆಧ್ಯಾತ್ಮಿಕತೆ – ಇವು ಎದ್ದುಕಾಣುವ ವಿವರಗಳು. ಅವರು ತಮ್ಮ ಈ ವಿಶಾಲ ನೆಲೆಯಿಂದ ಹೇಳುತ್ತಿದ್ದುದು; ಜಗತ್ತಿಗೇ ಭಾರತ ಗುರು.

  ಬೂ ನ್ ಸ ಂ U ಲಂi ನ ರಿz ವು ಲೆ ಕುಮಾರಸ್ವಾಮಿಯವರು ತಮ್ಮ ಬದುಕನ್ನು ಜ್ಞಾನೋಪಾಸನೆಗೇ ಅರ್ಪಿಸಿಕೊಂಡರು. ಲೌಕಿಕಜೀವನದಲ್ಲಿ ಅವರಿಗೆ ಆಸಕ್ತಿ ಅ?ಗಿ ಉಳಿದುಕೊಳ್ಳಲಿಲ್ಲ. ಅವರು ಒಂದೆಡೆ ಹೀಗೆಂದಿದ್ದಾರೆ: ನಾನೊಬ್ಬ ಸಮಾಜ ಸುಧಾಕರನೂ ಅಲ್ಲ, ಪ್ರಚಾರಕನೂ ಅಲ್ಲ. ನನ್ನ ಬಗ್ಗೆ ನಾನೆಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಯಾವುದೇ ನೂತನ ಸಿದ್ಧಾಂತವನ್ನಾಗಲೀ, ನನ್ನದೇ ತತ್ತ್ವವನ್ನಾಗಲೀ ಅಥವಾ ವ್ಯಾಖ್ಯಾನವನ್ನಾಗಲೀ ಮಂಡಿಸುತ್ತಿಲ್ಲ. ನಿರ್ವಿಕಾರಸತ್ಯ ವೆಂದು ನಾನು ತಿಳಿದುಕೊಂಡಿರುವುದನ್ನು ಅರ್ಥಮಾಡಿ ಕೊಳ್ಳಲು ಜೀವನದುದ್ದಕ್ಕೂ ಪ್ರಯತ್ನಿಸುವುದ? ನನ್ನ ಕೆಲಸ. ಇದರಲ್ಲೂ ಕೂಡ, ಮೊದನೆಯ ಆದ್ಯತೆಯೆಂದರೆ ನನ್ನ ಆತ್ಮೋನ್ನತಿಯೇ; ಅನಂತರದಲ್ಲಿ, ಈ ನನ್ನ ಫಲಿತಾಂಶಗಳನ್ನು ಬೇರೆಯವರೂ ಬಳಸಿಕೊಳ್ಳ ಬಹುದು.

  ನನ್ನ ದೃಷ್ಟಿಯಲ್ಲಿ, ಕೆಲವು ಸೂತ್ರಗಳು, ಸಿದ್ಧಾಂತಗಳು, ಮೌಲ್ಯಗಳು ಪ್ರಶ್ನಾತೀತವಾದಂಥವು. ನನ್ನ ಆಸಕ್ತಿಯಿರುವುದು ಹೊಸ ಹೊಸ ಸಿದ್ಧಾಂತಗಳನ್ನು ಕುರಿತು ಚಿಂತಿಸುವುದರಲ್ಲಿ ಅಲ್ಲ; ಈಗಾಗಲೇ ಸ್ಥಾಪಿತವಾಗಿರುವಂಥವುಗಳ ನಿದಿಧ್ಯಾಸನದಲ್ಲಿ.

  ಕಲೆ ಮತ್ತು ನಮ್ಮ ನಿತ್ಯದ ವ್ಯವಹಾರಗಳ ನಡುವೆ ಒಂದು ಪವಿತ್ರ ಸಂಬಂಧವಿದೆ; ಕಲೆಗೂ ಆಧ್ಯಾತ್ಮಿಕತೆಗೂ ಹತ್ತಿರದ ನಂಟು; ನಮ್ಮ ನಿತ್ಯಜೀವನವನ್ನು ಹಸನುಗೊಳಿಸುವುದೇ ಕಲೆಯ ಗುರಿಯಾಗಬೇಕೆಂದು ಅರ ತ್ರಿ ಪಾದಿಸಿzರ . ರಾ?ನಿi ಣ ಕಾಂi zಲಿ

  ಕಲಾಪ್ರಜ್ಞೆಯು ಜಾಗೃತವಾಗಿರಬೇಕೆಂದೂ, ಭಾರತದ ಸಂದರ್ಭದಲ್ಲಿ ಆಧ್ಯಾತ್ಮಿಕತೆ ಮತ್ತು ಕಲಾಪರಿಪೂರ್ಣತೆ – ಇವೆರಡೂ ಒಂದೇ ತತ್ತ್ವ ಎಂದೂ ಅವರು ವಿವರಿಸಿದರು. ಭಾರತೀಯ ಕಲಾಪರಂಪರೆಯ ಉಗಮಸ್ಥಾನ ಗ್ರೀಸ್ – ರೋಮ್‌ಗಳಲ್ಲ; ಭಾರತೀಯ ಕಲೆಯ ಮೂಲ ಭಾರತವೇ – ಎಂಬುದನ್ನು ಅವರು ಸ್ಥಾಪಿಸಿದರು.

  ಆಧುನಿಕತೆಯ ಸುಂಟರಗಾಳಿಯಲ್ಲಿ ಸಿಲುಕಿ ಬಿದ್ದಿರುವ ಮನು? ಇಂದು ಸೂಕ್ಷ್ಮಸಂವೇದನ ಶೀಲತೆಯನ್ನೇ ಕಳೆದುಕೊಳ್ಳು ತ್ತಿದ್ದಾನೆಂದು ಅವರು ಪರಿತಪಿಸಿದರು. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಅಪೂರ್ವ ವಸ್ತುಗಳು ತಾಂತ್ರಿಕತೆಯಿಂದ ನಮ್ಮದಾಗಿರಬಹುದು. ಆದರೆ ಇದಕ್ಕೆ ನಾವು ತೆತ್ತಿರುವ ಬೆಲೆಯೂ ಅಪಾರ. ಕೈಗಾರಿಕಾ ಕ್ರಾಂತಿಯು ಬದುಕಿನ ಕಲಾಶ್ರೀಮಂತಿಕೆಯನ್ನೇ ಉಧ್ವಸ್ತಗೊಳಿಸಿ, ಸಂಸ್ಕೃತಿಯ ತಾಯಿಬೇರುಗಳನ್ನೇ ಕಿತ್ತೊಗೆದುಬಿಟ್ಟಿದೆ ಎಂದು ದುಃಖಿತರಾದರು. ಈ ಸಾಂಸ್ಕೃತಿಕ ಶೂನ್ಯತೆಯನ್ನು ಮನಗಂಡು, ಕಲಾಧರ್ಮದ ಪುನರುಜ್ಜೀವನಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು.

   

  ಕುಮಾರಸ್ವಾಮಿಯವರ ಕೆಲವು ಕೃತಿಗಳು ಇವು : ಹಿಸ್ಟರಿ ಆಫ್ ಇಂಡಿಯನ್ ಎಂಡ್ ಇಂಡೋನೇಶಿಯನ್ ಆರ್ಟ್, ಆರ್ಟ್ ಎಂಡ್ ಸ್ವದೇಶಿ ಇssಚಿಥಿs iಟಿ ಓಚಿಣioಟಿಚಿಟ Iಜeಚಿಟism, ಒeಜiಚಿevಚಿಟ Siಟಿhಚಿಟese ಂಡಿಣ, ಹಿಂದೂಯಿಸಂ ಎಂಡ್ ಬುದ್ಧಿಸಂ, ಟ್ರಾನ್ಸ್‌ಫರ್‌ಮೇಶನ್ ಆಫ್ ನೇಚರ್ ಇನ್ ಆರ್ಟ್, ಬುದ್ಧ ಎಂಡ್ ದ ಗಾಸ್ಪೆಲ್ ಆಫ್ ಬುದ್ಧಿಸಂ, ದ ಡ್ಯಾನ್ಸ್ ಆಫ್ ಶಿವ, ಫಿಗರ್‍ಸ್ ಆಫ್ ಸ್ಪೀಚ್ ಆರ್ ಫಿಗರ್‍ಸ್ ಆಫ್ ಥಾಟ್, ಒiಡಿಡಿoಡಿ oಜಿ ಉesಣuಡಿe (ದುಗ್ಗಿರಾಲ ಗೋಪಾಲಕೃ? ಅವರೊಂದಿಗೆ), ಒಥಿಣhs oಜಿ ಣhe ಊiಟಿಜus ಚಿಟಿಜ ಃuಜಜhisಣs (ಸೋದರಿ ನಿವೇದಿತಾ ಅವರೊಂದಿಗೆ) ಖಚಿರಿಠಿuಣ ಠಿಚಿiಟಿಣiಟಿg, ಂ ಓeತಿ ಠಿಠಿಡಿoಚಿಛಿh ಣo ಣhe ಗಿeಜಚಿs.

  ಕುಮಾರಸ್ವಾಮಿಯವರು ತಮ್ಮ ಬದುಕಿನ ಕೊನೆಯ ದಿನಗಳನ್ನು ತಮಗೆ ಸ್ಫೂರ್ತಿಕ್ಷೇತ್ರವಾಗಿದ್ದ ಭಾರತದಲ್ಲಿಯೇ ಕಳೆಯಬೇಕೆಂದು ಬಯಸಿದ್ದರು. ಆದರೆ ಅವರ ಕೊನೆಯ ಆಸೆ ಕೈಗೂಡಲಿಲ್ಲ. ೧೯೪೭ರ ಸೆಪ್ಟೆಂಬರ್ ೯ರಂದು ಅಮೆರಿಕೆಯಲ್ಲೆಯೇ ಕೊನೆಯುಸಿರೆಳೆದರು. ಅನಂತರ, ಮುಂದೆ ಅವರ ಮಡದಿ ದೋನಾ ೧೯೬೫ರಲ್ಲಿ ಭಾರತಕ್ಕೆ ಬಂದು ಕುಮಾರಸ್ವಾಮಿಯವರ ಚಿತಾಭಸ್ಮವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರು.ಆನಂದ ಕುಮಾರಸ್ವಾಮಿ ಒಬ್ಬ ವಿಶ್ವಮಾನವ. ನನ್ನ ಆಸೆ ಭಾರತದೇಶಕ್ಕ? ಸೇವೆ ಸಲ್ಲಿಸುವುದಲ್ಲ; ಇಡೀ ಮಾನವ ಸಮಾಜಕ್ಕೇ ನನ್ನ ಸೇವೆ ಸಲ್ಲಬೇಕು. ಅವಲೋಕಿತೇಶ್ವರನ ಆದರ್ಶವನ್ನು ಪಾಲಿಸಿ, ಸಾಧ್ಯವಾದ?ವಿಶ್ವಕುಟುಂಬಿಯಾಗಬೇಕೆಂಬುದು ನನ್ನ ಆಸೆ ಎನ್ನುವುದು ಅವರ ನಿತ್ಯ ಪಾರ್ಥನೆಯಾಗಿದ್ದಿತು. ಮಾನವನ ನೆಲೆ-ಬೆಲೆಗಳನ್ನೂ, ಬದುಕಿನ ಆಳ-ಅಗಲಗಳನ್ನೂ ಅರಿಯಬಯಸುವವರಿಗೆಲ್ಲ ಕುಮಾರಸ್ವಾಮಿಯವರ ಬರೆಹಗಳ ಅಧ್ಯಯನ ಒಂದು ಮಹಾಸಂಸ್ಕಾರ; ಹಾಗೆಯೇ, ಭಾರತೀಯ ಕಲೆ-ಸಂಸ್ಕೃತಿ-ದರ್ಶನಗಳ ಹೃದಯ ನಮಗೆ ಹತ್ತಿರವಾಗಲು ಇದು ಅನಿವಾರ್ಯ ಸಂಸ್ಕಾರವೂ ಹೌದು.

  – ಎಸ್. ಸೂರ್ಯಪ್ರಕಾಶ ಪಂಡಿತ್

  ಕಲಾತತ್ವ ಮಹರ್ಷಿ ಆನಂದ ಕುಮಾರಸ್ವಾಮಿ :- ಈವರೆಗೆ 2 ಪ್ರತಿಕ್ರಿಯೆಗಳು

  1. sowmya vasudev gowda

   ನನ್ನ ಹೆಸರು ಸೌಮ್ಯ ನನ್ನ ಹುಟ್ಟಿದ ತಾರೀಕು ೧೨ ಏಪ್ರಿಲ್ ೧೯೯೨. ನನ್ನ ಗಂಡನ ಹೆಸರು ವಾಸುದೇವ್ ಹುಟ್ಟಿದ ತಾರೀಕು ೦೨ ಡಿಸೆಂಬರ್ ೧೯೯೦ ನಾವು ಸ್ವಂತ ವ್ಯಾಪಾರ ಮಾಡಲು ಬಯಸುತ್ತಿದ್ದೇವೆ ಯಾವ ವ್ಯಾಪಾರ ಮಾಡುವುದು ಸೂಕ್ತ ಎಂದು ದಯವಿಟ್ಟು ತಿಳಿಸಿ ಕೊಡಿ

  2. ಸುಧೀಂದ್ರ ಗಾರ್ಗೇಶ್

   ಆನಂದ ಕುಮಾರಸ್ವಾಮಿಯವರ ಬಗ್ಗೆ ಓದಲು ಆರಂಭಿಸಿದ ತಕ್ಷಣ ನಿಮ್ಮ ಲೇಖನ ಸಿಕ್ಕಿತು ಬಹಳ ಧನ್ಯವಾದಗಳು. ಆನಂದ ಕುಮಾರಸ್ವಾಮಿಯವರು ಮತ್ತು ಉಪನಿಷತ್ತುಗಳು ಇದರ ಬಗ್ಗೆ ತಾವು ಭಾರತೀಯ ವಿದ್ಯಾ ಭವನವು ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ತಾವು ಮಾತನಾಡಿದ್ದಿರಿ ಅಲ್ಲವೇ? ನಿಮ್ಮ ಭಾಷಣದಿಂದ ಪ್ರಭಾವಿತನಾಗಿ ಈ ನನ್ನ ಪ್ರಯತ್ನ. ಧನ್ಯವಾದಗಳು

  ಪ್ರತಿಕ್ರಿಯಿಸಿ :