• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಪತ್ರರಶ್ಮಿ

    ಇರುವುದೆಲ್ಲವ ಬಿಟ್ಟು…

    September 17th, 2008.


    -ಶ್ರೀನಿಧಿ ಅಡಿಗ, ಬೆಂಗಳೂರು

    ಗೆಳತಿ ಪವಿಗೆ,

    ಪವಿ.. ನನಗೆ ಈ ಒಂಟಿಮನೆಯಲ್ಲಿ… ಈ ಅರ್ಥವಾಗದ ಭಾಷೆ, ಮನುಷ್ಯರು Developing Nature ಇಲ್ಲದ ಊರು ಬೇಸರ ತರಿಸುತ್ತಿದೆ. ಈ ಗಂಡಸರಿಗೋ ದಿನವಿಡೀ ಆಫೀಸು, ಮನೆಯಲ್ಲಿ ಟಿ.ವಿ. ನಾನೋ ಅಡುಗೆ ಕೋಣೆಯೊಳಗೆ ಗೌರಮ್ಮ. ಅಡುಗೆ,

    ತಿನ್ನುವುದು, ತೊಳೆಯುವುದು, ಮಲಗುವುದು ಮತ್ತೆ ದಿನಾ ಅದೇ… ಸಿಕ್ಕಿದ ಬಿಡುವಿನಲ್ಲಿ ದುಃಖ ನೋವು, ಹತಾಶೆ.. ಇವೇ ಸಂಗಾತಿಗಳು….

    ಒಂದಂತೂ ನಿಜ. ಆಸ್ತಿ, ದುಡ್ಡು ಎಲ್ಲಕ್ಕಿಂತಲೂ ಒಂದು ಜೀವಕ್ಕೆ ಅಸ್ತಿತ್ವ ಬೇಕು. ಅದಕ್ಕಾಗಿ ಅದು ಹೋರಾಡುತ್ತಲೇ ಇರುತ್ತದೆ. ಗೆಳತೀ.. ಯಾವತ್ತಿಗೂ ನೀನು ನಿನ್ನ ಗುರಿ ತಲುಪದೆ ಮದುವೆ ಎನ್ನುವ ಬಂಧನಕ್ಕೊಳಗಾಗಬೇಡ. ಇದು ನನ್ನುಭವದ ಮಾತು.

    ನಿನ್ನ ಗೆಳತಿ ಪವಿ

    ಪ್ರೀತಿಯ ಅಶು,

    ಗೆಳತೀ ನೀನು ನಿನ್ನನುಭವದ ಮಾತು ಬರೆದಿದ್ದಿ ನಾನು.. ನಾನೇ ಆರಿಸಿದ ಈ ದಾರಿ…

    ಗುರಿ… ಕನಸು. ಕೆಲವೊಮ್ಮೆ ಅನ್ನಿಸುತ್ತೆ ಯಾವುದೋ ಆದರ್ಶಗಳ ಬೆನ್ನತ್ತಿ ಈ ವಿಷಯ ಆರಿಸಿಕೊಂಡು ತಪ್ಪುಮಾಡಿದೆನೇನೋ ಅಂತ. ಈ sensitive ಮನಸ್ಸು ಹೊತ್ತು ಈ field ನಲ್ಲಿ ಬದುಕಲಿಕ್ಕೆ, ’ಆದರ್ಶ’ಗಳು ಅಂತ ಹೋರಾಡಲಿಕ್ಕೆ ಸಾಧ್ಯ ಇಲ್ಲವೇನೋ ಅನ್ನಿಸಿ ಮನಸ್ಸು ಮೌನವಾಗುತ್ತೆ. ಎಲ್ಲಾ ಭ್ರಮೆಗಳೇನೋ ಅನ್ನಿಸಿಬಿಡುತ್ತೆ.

    ಈ ಕನಸಿನ ಹಿಂದೆ ಬಿದ್ದಾಗಿದೆ. ಹಿಂದೆ ಬರೋ ಮಾತೇ ಇಲ್ಲ. ಆದರೆ ಮುಂದೆ ಹೆಜ್ಜೆ ಇಡಲಿಕ್ಕೆ ಕತ್ತಲು. ಹೆಜ್ಜೆ ನೆಲದಲ್ಲಿಡ್ತಾ ಇದ್ದೇನಾ? ಕಾಲಕೆಳಗೆ ಗುಂಡಿಯಾ? ಗೊತ್ತೇ ಆಗದ ಗೋಜಲು. ಕೆಲವೊಮ್ಮೆ ಏಕಾಂತದಲ್ಲಿ ಅನ್ನಿಸುತ್ತೆ, ಗಗನ ಕುಸುಮಕ್ಕೆ ಕೈಯೊಡ್ಡಿ ಬದುಕಿನ ಸಣ್ಣಪುಟ್ಟ ಸಂತಸಗಳನ್ನೂ ಕಳೆದುಕೊಂಡೆನೇನೋ ಅಂತ. ನೀನು, ನೀನು ನಿಂತ ದಾರಿಯಿಂದ ನನ್ನನ್ನ ನೋಡ್ತಾ ಇದ್ದಿ. ನಾನು ದಾರಿಕಾಣದೆ ನಿಂತಿದ್ದೇನೆ. ಆಗೆಲ್ಲ ಕಾರ್ನಾಡರ ಯಯಾತಿಯಲ್ಲಿಯ ಮಾತುಗಳು ನೆನಪಾಗುತ್ತೆ. ಆ ಇನ್ನೊಂದು ದಾರಿಯಲ್ಲಿ ಹೋಗಿದ್ದರೆ ಏನಾಗುತ್ತಿತ್ತು…? ಏನೇನೋ ಆಗುತ್ತಿತ್ತು. ಆದರೆ ಆ ದಾರಿಯ ಸತ್ಯ ಅದು ಆ ದಾರಿಯೊಂದಿಗೆ ಅಲ್ಲಿಯೇ ಮುಟ್ಟಿ ಹೋಗಬೇಕು. ನಾವು ನಮ್ಮ ಆಯ್ಕೆಯ ದಾರಿಯಲ್ಲೇ ನಡೆಯಬೇಕು. ಅದೇ ಸತ್ಯ ಅದೇ ಬದುಕು. .

    ಗೆಳತೀ ಬದುಕೇ ಹಾಗೆ.. ಅದು ಯಾವಾಗಲೂ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ….. ತುಡಿತಾನೇ ಇರುತ್ತೆ ಅಲ್ವಾ? ನಾವು ಯಾಕೆ ನಮ್ಮ ಬದುಕಲ್ಲಿ ’ಭರವಸೆ’ಗಳನ್ನು ಕಳೆದುಕೊಳ್ಳಬೇಕು. ನಿನಗೆ ನೆನಪಿದೆಯಾ ನಾವಿಬ್ಬರು ನಮ್ಮ ಪುಸ್ತಕದ ಪುಟಗಳಲ್ಲೆಲ್ಲಾ ’ಕನಸಿನವರು’ ’ಕನಸನ್ನು ಬೆಂಬತ್ತಿದವರು.. ಅಂತೆಲ್ಲ ಬರೆದಿಡ್ತಾ ಇದ್ದಿದ್ದು. “Ships are safer in the harbour but they are not made for that purpose” ಅಲ್ವಾ? ಬದುಕಲ್ಲಿ ಹೋರಾಡಲೇ ಬೇಕು ಕನಸಿಗೋಸ್ಕರ. ವಿವಾಹಿತರಾಗಿಯೂ, ಅಪರಿಚಿತ ಭಾಷೆ ಜನರ ನಡುವೆ ಇದ್ದೂ ಹೆಸರು ಮಾಡಿದ ಎಷ್ಟು ಜನ ಬರಹಗಾರ್ತಿಯರು, ಕತೆಗಾರ್ತಿಯರು ಇಲ್ವಾ ನಮ್ಮಲ್ಲಿ? ಮನಸ್ಸು ಮಾಡಿದರೆ ಸಾಧ್ಯವಾಗದ್ದು ಯಾವುದು ಪುಟ್ಟೀ ..!? ಛಲ ಬೇಕಷ್ಟೆ. ಬದುಕಲ್ಲಿ ಹೊಸ ಆಶಯಗಳೊಂದಿಗೆ ನಿನ್ನ ಮುಂದಿನ ಹೆಜ್ಜೆ ಇರುತ್ತೆ. ಆಶಾವಾದದ ನಿನ್ನ ಕಾಗದ ಸದ್ಯದಲ್ಲೇ ನನ್ನ ಕೈ ಸೇರುತ್ತೆ ಎಂಬ ನಿರೀಕ್ಷೆಯಲ್ಲಿ. ದಿನವಿಡೀ ಆಫೀಸು, ಮನೆಯಲ್ಲಿ ಟಿ.ವಿ. ನಾನೋ ಅಡುಗೆ ಕೋಣೆಯೊಳಗೆ ಗೌರಮ್ಮ. ಅಡುಗೆ, ತಿನ್ನುವುದು, ತೊಳೆಯುವುದು, ಮಲಗುವುದು ಮತ್ತೆ ದಿನಾ ಅದೇ… ಸಿಕ್ಕಿದ ಬಿಡುವಿನಲ್ಲಿ ದುಃಖ ನೋವು, ಹತಾಶೆ.. ಇವೇ ಸಂಗಾತಿಗಳು….

    ಒಂದಂತೂ ನಿಜ. ಆಸ್ತಿ, ದುಡ್ಡು ಎಲ್ಲಕ್ಕಿಂತಲೂ ಒಂದು ಜೀವಕ್ಕೆ ಅಸ್ತಿತ್ವ ಬೇಕು. ಅದಕ್ಕಾಗಿ ಅದು

    ಹೋರಾಡುತ್ತಲೇ ಇರುತ್ತದೆ. ಗೆಳತೀ.. ಯಾವತ್ತಿಗೂ ನೀನು ನಿನ್ನ ಗುರಿ ತಲುಪದೆ ಮದುವೆ ಎನ್ನುವ

    ಬಂಧನಕ್ಕೊಳಗಾಗಬೇಡ. ಇದು ನನ್ನುಭವದ ಮಾತು.

    ಇತೀ ನಿನ್ನ ಗೆಳತಿ ಅಶು

    ಪ್ರತಿಕ್ರಿಯಿಸಿ :