ನಾಡು-ನುಡಿ ಅಭಿಮಾನದ ’ಓಂಕಾರ ಪ್ರಿಯ’
September 16th, 2008.

- ರಾಘವೇಂದ್ರ ಅಗರ್ಖೇಡ್, ಬೆಂಗಳೂರು
ಶ್ರೀ ಓಂಕಾರಪ್ರಿಯರ ಮಾತೃ ಭಾಷೆ ತೆಲುಗು. ಕನ್ನಡ ಸಂಸ್ಕೃತಿ ಸೇವಾಭಾರತಿ, ಬಾಗೇಪಲಿ ಇದರ ಸಂಸ್ಥಾಪಕ ಅಧ್ಯಕ್ಷರಾಗಿ ರಾಜ್ಯಾದ್ಯಂತ ಅಲ್ಲದೇ ಹೊರ ರಾಜ್ಯಗಳ ಶಾಲಾ-ಕಾಲೇಜು, ವಸತಿ ನಿಲಯ, ಶ್ರೀ-ಗುರು ಮಠಗಳಲ್ಲಿ, ಸಂಘ-ಸಂಸ್ಥೆ ಹಾಗೂ ವಿಶೇಷ ಶಿಬಿರಗಳಲ್ಲಿ ಕನ್ನಡ ಪದ ಸಂಪತ್ತು ಕಮ್ಮಟ ಗಳನ್ನು ನಡೆಸುತ್ತಾ ಕನ್ನಡ ಪದ ಸಂಪತ್ತಿನ ಹಿರಿಮೆಯನ್ನು ಮತ್ತು ನಿಜ ಸಂಸ್ಕೃತಿಯನ್ನೂ ಪರಿಚಯಿಸುತ್ತಿದ್ದಾರೆ ಓಂಕಾರಪ್ರಿಯ.
ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳೂ ಸವಾಲುಗಳು ನಮ್ಮೆದುರಿಗಿದೆ. ಶ್ರೀ ಗಂಧದ ನಾಡು ಇಂದು ಹಲವು ಸಮಸ್ಯೆಗಳ ಗೂಡು. ವಿಶ್ವದ ಅಳಿವಿನಂಚಿನ ಭಾಷೆಗಳ ಸಾಲಿನಲ್ಲಿ ಕನ್ನಡದ್ದೂ ಒಂದು ಹೆಸರಿದೆ ಎಂಬ ಸತ್ಯ ಕನ್ನಡ ಮನಸ್ಸುಗಳಲ್ಲಿ ಸದಾ ಆತಂಕ ಹುಟ್ಟಿಸುತ್ತದೆ. ಆದರೆ ಎಲ್ಲೋ ಒಂದಷ್ಟು ಮಂದಿ ಈ ಎಲ್ಲ ಸಮಸ್ಯೆ, ಸವಾಲುಗಳ ನಡುವೆಯೂ ನಾಡು-ನುಡಿಗಾಗಿ ಸದ್ದಿಲ್ಲದ ಸೇವೆಗೈಯುತ್ತಿದ್ದಾರೆ. ತಮ್ಮೆಲ್ಲ ವೈಯಕ್ತಿಕ ಕೆಲಸಗಳ ಮಧ್ಯೆಯೂ ಕನ್ನಡ ಜಾಗೃತಿ, ಕನ್ನಡದ ಹಿರಿಮೆ ಸಾರುವ ಸದುದ್ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರೊಲ್ಲೊಬ್ಬರು ಬಾಗೇಪಲ್ಲಿಯ ಶ್ರೀ ಓಂಕಾರ ಪ್ರಿಯ. ಅವರು ಮತ್ತು ನಾನು ಆಟೋ ಹತ್ತಿ ಅವರ ಸಹೋದರಿಯ ಮನೆ ಕಡೆಗೆ ಹೊರಟೆವು. ಚೈತ್ರರಶ್ಮಿಯ ಬಗ್ಗೆ ಹೇಳುತ್ತಿದ್ದೆ. ತುಂಬಾ ಸಂತೋಷಪಟ್ಟರು ಪತ್ರಿಕೆಯ ಉದ್ದೇಶ ಮತ್ತು ಕಾರ್ಯವೈಖರಿಯನ್ನು ಕೇಳಿ. ಆಟೋ ಚಾಲಕರನ್ನು ಮಾತನಾಡಲು ಆರಂಭಿಸಿದರು, ಇಳಿಯುವ
ಹೊತ್ತಿಗೆ ನಾನು ೧೦ ರೂ. ನೋಟನ್ನು ತೆಗೆದುಕೊಟ್ಟೆ ಚಾಲಕರಿಗೆ, ತಕ್ಷಣವೇ ಅವರು ನನ್ನ ೧೦ ರೂ. ತೆಗೆದುಕೊಳ್ಳಿ, ಪ್ರಿಂಟ್ ಆದದ್ದು, ಸ್ವಲ್ಪ ನನ್ನ ಜೇಬಿನ ಭಾರ ಇಳಿಸಲು ಸಹಾಯ ಮಾಡಿ ಎಂದು ಹೇಳಿ ನನ್ನ ಹಣವನ್ನು ವಾಪಸ್ಸು ಕೊಟ್ಟು ತಾವೇ ಹಣವನ್ನು ಕೊಟ್ಟರು. ಬೇರೆ ವಿಧಿಯಿಲ್ಲದೆ ದುಡ್ಡನ್ನು ವಾಪಸ್ ಜೇಬಿನಲ್ಲಿರಿಸಿ ಅವರನ್ನು ಹಿಂಬಾಲಿಸಿದೆ ಮನೆಯವರೆಗು. ಅವರೇ “ಓಂಕಾರಪ್ರಿಯ ಬಾಗೇಪಲ್ಲಿ” ಕಾವ್ಯನಾಮಾಂಕಿತ ಶ್ರೀ ಕೆ.ನಾಗರಾಜ ಅವರು. ಇವರ ತಂದೆ ಶ್ರೀ ಎನ್.ವಿ.ಕೃಷ್ಣಮಾಚಾರಿ, ಸ್ವಾತಂತ್ರ್ಯ
ಹೋರಾಟಗಾರರು, ೯೨ರ ಇಳಿವಯಸ್ಸಿನವರು, ಮಾತೃ ಭಾಷೆ ತೆಲುಗು. ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸಿ ಮಾತನಾಡುವುದು, ಬರೆಯುವುದು ನಮಗೆ ಕಷ್ಟಸಾಧ್ಯವಾದ ಕೆಲಸವೇ ಎಂದೆನಿಸಿಬಿಟ್ಟಿರುವ ಈ ಕಾಲದಲ್ಲಿ, ಅದನ್ನೇ ಇತರರಿಗೆ ಕಲಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಪರಿಸರ ಸಂರಕ್ಷಣಾ ಕಾರ್ಯಗಳನ್ನು, ರಕ್ತದಾನ, ನೇತ್ರದಾನ, ದುಶ್ಚಟಗಳ ವಿರುದ್ಧ ಅರಿವಿನ ಅಭಿಯಾನಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ ಓಂಕಾರಪ್ರಿಯರು.
ಓಂಕಾರಪ್ರಿಯರ ವೃತ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ. “ಕನ್ನಡ ಸಂಸ್ಕೃತಿ ಸೇವಾಭಾರತಿ”, ಬಾಗೇಪಲ್ಲಿ ಇದರ ಸಂಸ್ಥಾಪಕ ಅಧ್ಯಕ್ಷರಾಗಿ ರಾಜ್ಯಾದ್ಯಂತ ಅಲ್ಲದೇ ಹೊರ ರಾಜ್ಯಗಳ ಶಾಲಾ-ಕಾಲೇಜು, ವಸತಿ ನಿಲಯ, ಶ್ರೀ-ಗುರುಮಠಗಳಲ್ಲಿ, ಸಂಘ-ಸಂಸ್ಥೆ ಹಾಗೂ ವಿಶೇಷ ಶಿಬಿರಗಳಲ್ಲಿ-” ಕನ್ನಡ ಪದ ಸಂಪತ್ತು ಕಮ್ಮಟ”ಗಳನ್ನು ನಡೆಸುತ್ತಾ ತನ್ಮೂಲಕ ವಿದ್ಯಾರ್ಥಿಗಳಲ್ಲಿನ ಸಮಯದ ಉಪಯುಕ್ತತೆ, ಭಾಷೆಯ ಹಾಗೂ ಬರವಣಿಗೆಯ ಶ್ರೇಷ್ಠತೆ, ಕನ್ನಡ ಸರಳ ಪದಗಳಲ್ಲಿನ ವಿಶೇಷ ಅರ್ಥ ಶ್ರೀಮಂತಿಕೆ,
ನಡೆ-ನುಡಿ-ಲಿಪಿ ಮಾಲಿನ್ಯಗಳಿಂದುಂಟಾಗುವ ಅನರ್ಥಗಳನ್ನು ರಂಜನೀಯವಾಗಿ ಹಾಗೂ ಕನ್ನಡ ಪದ ಸಂಪತ್ತಿನ ಹಿರಿಮೆಯನ್ನು ಮತ್ತು ನಿಜ ಸಂಸ್ಕೃತಿಯನ್ನೂ ಪರಿಚಯಿಸುತ್ತ, ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಬೌದ್ಧಿಕ ಹಾಗೂ ಸೃಜನಾತ್ಮಕ ನೆಲೆಗಟ್ಟಿನಲ್ಲಿ ನಾಡಿಗೂ ಗುಣಾತ್ಮಕ ಕೀರ್ತಿಯನ್ನು ತರುವಲ್ಲಿ ಇವರ ಸೇವೆ ಕನ್ನಡ ನಾಡಿಗೆ ಸಲ್ಲಿಕೆಯಾಗುತ್ತಿದೆ. ಶ್ರೀಯುತರು ಚುಟುಕು ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರಾಗಿಯೂ ಜೊತೆಯಾಗಿ ಸೃಜನಾತ್ಮಕ ಸೇವೆಯನ್ನು ಸಲ್ಲಿಸುತ್ತಿದ್ದು, ಎಲೆಮರೆಕಾಯಿ ಯುವ ಕಲಾವಿದರಿಗೆ ಪ್ರತಿಭಾ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ,. ಚುಟುಕು, ಹನಿಗವನ, ನಾಟಕ, ಅಣುಕು ಹಾಡುಗಳು, ನವ್ಯರಂಗವಲ್ಲಿ ತರಬೇತಿ, ಶಿಶು ಸಾಹಿತ್ಯ, ಮೆದುಳಿಗೆ ಮೇವು Done by Ranjith