• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನ

    ಸೃಜನಶೀಲತೆಯ ಹುಡುಕಾಟ ನಿರಂತರವಿರಲಿ

    September 16th, 2008.


    - ನವೀನ ಭಟ್, ಗಂಗೋತ್ರಿ ಶೇವ್ಕಾರ್

    ’ಚೈತ್ರರಶ್ಮಿ’ ಒಬ್ಬ ಕನಸುಗಾರನ, ಕಲಾ ಕುಸುಮವಾಗಿಗಂಧಿಸುತ್ತಿರುವ ಸುಂದರ ಪುಪ್ಪ. ಪತ್ರಿಕೆಯೊಂದು ನೂರೆಂಟು ಬಗೆಯ ಮನಸ್ಸುಗಳಿಗೆ ಇಷ್ಟವಾಗುವಂತೆ ಜೀವಿಸಬೇಕಾದಾಗ ಕೆಲವುಸಾಮಾನ್ಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ವಿಪರ್ಯಾಸವೆಂದರೆ, ಇಂದಿನ ಬಹುತೇಕಪತ್ರಿಕಾ ಪ್ರಪಂಚಕ್ಕೆ ಹಣ ಹಾಗೂ ಜನಪ್ರಿಯತೆಯ ಹೊರತಾಗಿ, ಪತ್ರಿಕೆಯೊಂದರ ಸಾಮಾನ್ಯ ನಿಯಮ,ಹಾಗೂ ಕರ್ತವ್ಯಗಳ ಬಗ್ಗೆ ಆಸ್ಥೆಯಿಲ್ಲ. ಆದರೆ ಇಂತಹ ಪ್ರಪಂಚದಲ್ಲಿ ನಮ್ಮ ರಶ್ಮಿ, ಹಣದ ಜನಪ್ರಿಯತೆಯ‌ಉದ್ದೇಶವನ್ನು ಗೌಣವಾಗಿಸಿಕೊಂಡು ಸೃಜನಶೀಲತೆ ಅನ್ನುವ ಜೀವಂತಿಕೆಗಾಗಿ ದುಡಿಯುತ್ತಿರುವುದು ಅತ್ಯಂತ‌ಇಷ್ಟವಾಗುವ ಮೊದಲ ವಿಚಾರ.

    ಕೇವಲ - ಮಾಹಿತಿ, ದೈನಿಕ ಸುದ್ದಿ, ರಾಜಕೀಯ, ಚಿತ್ರರಂಗ, ಕ್ರೀಡೆ, ಇವನ್ನೆಲ್ಲ ವಿವರಿಸುವುದಕ್ಕೆ ಈರಾಜ್ಯದಲ್ಲಿ ಅಸಂಖ್ಯ ಪತ್ರಿಕೆಗಳಿವೆ. ಆದರೆ ಸೃಜನಶೀಲತೆಯನ್ನೇ ದೇದೀಪ್ಯಮಾನಗೊಳಿಸುವ ಧ್ಯೇಯ‌ಇರುವ ಪತ್ರಿಕೆಗಳು ತೀರಾ ವಿರಳ. ಅಂಥ ಕೆಲವೇ ಕೆಲವು ಪತ್ರಿಕೆಗಳ ಮಧ್ಯೆ ತನ್ನ ತನವನ್ನು ರಶ್ಮಿಕಾಯ್ದುಕೊಳ್ಳಬೇಕಾದರೆ, ಈಗಿರುವ ತನ್ನ ಧ್ಯೇಯವನ್ನು, ಹಾದಿಯನ್ನು ಬದಲಿಸದಿರುವುದು ಸೂಕ್ತ.ಪುಟ್ಟ ಪತ್ರಿಕೆ, ಒಡಲು ಕಿರಿದು, ಹೀಗೆ ಹಲವು ಸಮಸ್ಯೆಗಳಿವೆ. ನಮಗೂ ಅರ್ಥವಾಗುತ್ತೆ. ಆದರೆಬದಲಾವಣೆ ಜೀವಂತಿಕೆಯ ಲಕ್ಷಣ. ಆ ಕಾರಣಕ್ಕಾಗಿ ’ರಶ್ಮಿ’ ಪ್ರವಾಸ ಕಥನ, ಗಹನ ಮಂಥನಗಳಂಥ‌ಅಂಕಣಗಳಿಗೆ ನಿಧಾನವಾಗಿಯಾದರೂ ಗಮನ ಹರಿಸುವುದು ಒಳಿತು. ಹಾಂ, ಪ್ರವಾಸ ಕಥನಗಳಾದರೂ,ಕೇವಲ ಮಾಹಿತಿಯಾಗಿರದೆ, ಸೃಜನ ಶೀಲತೆಗೆ ನೇರ ಪ್ರಾಧಾನ್ಯವಿರಬೇಕು.ಈ ದೇಶ ಸಂಸ್ಕೃತಿ ಇಲ್ಲಿನ ವಿಚಾರಗಳ ಮೇಲೆ ತರ್ಕಿಸುವ, ನಿರ್‍ಣಯಿಸುವ ತಾಕತ್ತನ್ನು ತನ್ನ ಓದುಗರಿಗೆ‌ಒದಗಿಸಬೇಕಾದ್ದು ಪತ್ರಿಕೆಯ ಅಘೋಷಿತ ಕರ್ತವ್ಯವಾಗಿರಲಿ. ವಿಷಯ - ವಿಶೇಷ, ವಿಷಯ - ವಿಷಾದ,ವಿಷಯ - ವಿಚಾರಗಳಂಥ ಮಾಹಿತಿಗಳು ವರ್ಜ್ಯವೇನಲ್ಲ.ಕೊನೆಯದಾಗಿ ನನ್ನ ದೃಷ್ಟಿಯಲ್ಲಿ ಸಂಪಾದಕರು, ಪತ್ರಿಕೆಯ ಪೋಷಣೆಗಾಗಿ ಅಪೇಕ್ಷಣೀಯ ಜಾಹೀರಾತುಗಳಮೊರೆ ಹೋಗುವುದರಲ್ಲಿ ತಪ್ಪೇನಿಲ್ಲ!.

    ಪ್ರತಿಕ್ರಿಯಿಸಿ :