• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನ

    ಸಾಹಿತ್ಯ ಪ್ರೀತಿ ಹೆಚ್ಚಲಿ ಸಮಾಜ ಮುಖಿಯಾಗಲಿ

    September 16th, 2008.


    -ವಿಶ್ವನಾಥ ಹೆಗಡೆ ಸುಂಕಸಾಳ, ಶಿರಸಿ

    ಚೈತ್ರರಶ್ಮಿ’ನಮ್ಮ ಪತ್ರಿಕೆ’.ಓದುಗರಿಂದಲೇ ರಚಿತವಾಗಿ‌ಒಳ್ಳೆಯ ಓದುಗಬರಹಗಾರರಿಗಾಗಿಯೇಮೀಸಲಾದ ಪತ್ರಿಕೆ ಈ ನಮ್ಮರಶ್ಮಿ’. ಸಾಹಿತ್ಯದ ದೃಷ್ಟಿಯಿಂದ‌ಎಲ್ಲಾ ವಿಭಾಗಗಳನ್ನುಪರಿಚಯಿಸಿ (ಕಥೆ, ಕವನ,ಲೇಖನ, ವಿಮರ್ಶೆ, ವ್ಯಂಗ್ಯಚಿತ್ರ, ಹಾಸ್ಯ….) ಎಲ್ಲ ರೀತಿಯಬರಹಗಾರಿರಗೂ ಆದ್ಯತೆನೀಡಬೇಕಾಗಿದೆ. ಬರವಣಿಗೆಹಾಗೂ ಗುಣಮಟ್ಟದ ಕುರಿತುಚಿಂತಿಸಬೇಕಾದ ಸಮಯದಲ್ಲೇ‌ಆರ್ಥಿಕವಾಗಿಯೂ ನಮ್ಮಬೆಂಬಲ ಅಗತ್ಯವಿದೆ.

    ಒಂದು ಪತ್ರಿಕೆ ಎಂದರೆ ಅದರದ್ದೇ ಆದ ಚೌಕಟ್ಟುಗಳಿರುತ್ತವೆ. ಅದರಲ್ಲೂ‌ಅದರ ಧ್ಯೇಯ, ಉದ್ದೇಶಗಳು, ಹೊರಡುವ ಅವಧಿಯನ್ನನುಸರಿಸಿ ಅದುಹೇಗಿರಬೇಕು ಎಂಬುದಾಗಿ ಚಿಂತಿಸಬಹುದು/ಅಪೇಕ್ಷಿಸಬಹುದು. ಪ್ರಸ್ತುತ‌ಅಂಕಣದ ಹೆಸರು ’ನಮ್ಮ ರಶ್ಮಿ ನಮ್ಮ ದೃಷಿ’. ಹೆಸರಿನಲ್ಲಿಯೇಮೂಲ ಉದ್ದೇಶಗಳನ್ನು ಅರಿತುಕೊಳ್ಳಬಹುದು. ಬೇರೆಲ್ಲಪತ್ರಿಕೆಗಳು ಸಂಪಾದಕರ/ಪ್ರಕಾಶಕರ ಪತ್ರಿಕೆಯಾಗಿ, ಉಳಿದವರುಕೇವಲ ಓದುಗರಾಗಿ ಭಾಗವಹಿಸಬಹುದು. ಆದರೆ ಚೈತ್ರರಶ್ಮಿಯ ವಿಷಯದಲ್ಲಿ ಹಾಗಲ್ಲ. ಅದು ’ನಮ್ಮ ಪತ್ರಿಕೆ’. ಓದುಗರಿಂದಲೇರಚಿತವಾಗಿ ಒಳ್ಳೆಯ ಓದುಗ ಬರಹಗಾರರಿಗಾಗಿಯೇಮೀಸಲಾದ ಪತ್ರಿಕೆ ಈ ನಮ್ಮ ’ರಶ್ಮಿ’. ಹಾಗಾಗಿ ಇಲ್ಲಿ ’ನಮ್ಮರಶ್ಮಿ’ ಎಂಬ ಸಮಷ್ಟಿ ಪ್ರಜ್ಞೆ ಅತ್ಯಂತ ಸೂಕ್ತವಾದದ್ದು ಎಂಬುದರಲ್ಲಿಸಂಶಯವಿಲ್ಲ.

    ಒಂದು ಪತ್ರಿಕೆಯು ಹೀಗಿರಬೇಕೆಂದು ಅಪೇಕ್ಷಿಸುವುದಾಗಲೀ‌ಅಥವಾ ಸೂಚಿಸುವದಾಗಲೀ ಮೊದಲು ಗಮನ ಹರಿಸಬೇಕಾದದ್ದು ಅದರ ಧ್ಯೇಯ ಮತ್ತು ಉದ್ದೇಶದ ಬಗ್ಗೆ.’ಸೃಜನಶೀಲತೆಯ ಹುಡುಕಾಟ’ ಅದರ ಉದ್ದೇಶವಾದರೆ ಅವಕಾಶವಂಚಿತರಿಗೆ ಅವಕಾಶ ಮತ್ತು ಬೆಂಬಲ ನೀಡುವ ಮೂಲಕ‌ಅವರಿಗೆ ಆತ್ಮವಿಶ್ವಾಸದ ಒಂದು ಕಿರಣವಾಗುವುದು (ಅಂದರೆಖಚಿಥಿ oಜಿ hoಠಿe ಆಗುವುದು) ಅದರ ಧ್ಯೇಯ. ಈ ವಿಷಯಗಳನ್ನಿಟ್ಟುಕೊಂಡು ನಾವು ಆಲೋಚಿಸಿದರೆ ನಮ್ಮ ರಶ್ಮಿ ಸರಿಯಾದದಿಕ್ಕಿನಲ್ಲಿ ಸಾಗುತ್ತಿದೆ ಎನ್ನಬಹುದು. ರಾಚಂ ಅವರು ತಮ್ಮಮೊದಲ ಪತ್ರದಲ್ಲಿಯೇ ನಿಮ್ಮಂತಹ ಅನೇಕ ಎಲೆಮರೆಯ(ಹಳ್ಳಿಯ) ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವುದು ಅವರಬೆಳವಣಿಗೆಗೆ ಸಕಲ ಅವಕಾಶವನ್ನೀಯುವುದು ನನ್ನ ಆಶಯ ಎಂದಿದ್ದರು. ತನ್ಮೂಲಕ ಸರ್ವವೂಹಣಕ್ಕಾಗಿಯೇ ದುಡಿಯಬೇಕು ಎಂಬ ತೀರ ಸಂಕುಚಿತ ಬುದ್ದಿಯ ನರವಪುಷಧಾರಿ ಮೃಗಗಳನಡುವೆಯೂ, ಇಂತಹ ಸದುದ್ದೇಶವನ್ನಿಟ್ಟುಕೊಂಡು ಬೇರೆಯವರಿಗಾಗಿ ಕಷ್ಟಪಡುವುದಿದೆಯಲ್ಲಾತೀರ ವಿರಳ.

    ಹಳ್ಳಿಯ ಪ್ರತಿಭೆಗಳು ಚೈತ್ರ ರಶ್ಮಿಯ ಮೂಲಕ ತಮ್ಮ ಪ್ರತಿಭಾ ವಿಕಾಸ ಮಾಡಿಕೊಳ್ಳುತ್ತಿರುವದುಸಂತೋಷ. ಉಳಿದ ಅನೇಕ ಪತ್ರಿಕೆಗಳಿಗೆ ತಮ್ಮ ಲೇಖನ-ಕವನಗಳನ್ನು ಕಳಿಸಿ, ಪ್ರಕಟವಾದ ವಿಷಯಕೂಡ ಸುವೇದ್ಯವಾದುದು. ಈ ದಿಸೆಯಲ್ಲಿ ರಶ್ಮಿಯ ಉದ್ದೇಶ ಈಡೇರುತ್ತಿರುವದು ಸಂತಸದಬೆಳವಣಿಗೆ. ಆದರೆ ನಮ್ಮ ರಶ್ಮಿ ಇನ್ನೂ ಬೆಳೆಯಬೇಕು. ಗಾತ್ರದಲ್ಲಿ ಹಾಗೂ ಗುಣಮಟ್ಟದಲ್ಲಿ ಇನ್ನೂವಿಕಾಸವಾಗಬೇಕೆಂಬುದು ನನ್ನ ಆಸೆ. ಇದು ಕೂಡ ನಮ್ಮಿಂದಲೇ ಆಗಬೇಕಾದ ಕೆಲಸ. ಬರವಣಿಗೆಯನ್ನುಕಳಿಸಿದರೆ ನಮ್ಮ ಪಾಲಿನ ಅರ್ಧಜವಾಬ್ದಾರಿ ನಿರ್ವಹಿಸಿದಂತೆ. ಇನ್ನರ್ಧ ಭಾಗ ಆರ್ಥಿಕ ನೆರವಿನಮೂಲಕ ಆಗಬೇಕಿದೆ. ಆರ್ಥಿಕವಾಗಿ ರಶ್ಮಿ ಹಿಂದುಳಿದ ವಿಷಯ ನಮಗೆಲ್ಲ ತಿಳಿದದ್ದೇ. ಬರವಣಿಗೆಹಾಗೂ ಗುಣಮಟ್ಟದ ಕುರಿತು ಚಿಂತಿಸಬೇಕಾದ ಸಮಯದಲ್ಲೇ ಆರ್ಥಿಕವಾಗಿಯೂ ನಮ್ಮ ಬೆಂಬಲ‌ಅಗತ್ಯವಿದೆ. ಹಾಗಾಗಿ ನಾವೆಲ್ಲರೂ ನಮ್ಮ ರಶ್ಮಿಯನ್ನು ನಮ್ಮಿಂದಲೇ ಬೆಳೆಸಬೇಕಾಗಿದೆ.ಸಾಹಿತ್ಯದ ದೃಷ್ಟಿಯಿಂದ ಎಲ್ಲಾ ವಿಭಾಗಗಳನ್ನು ಪರಿಚಯಿಸಿ (ಕಥೆ, ಕವನ, ಲೇಖನ, ವಿಮರ್ಶೆ,ವ್ಯಂಗ್ಯ ಚಿತ್ರ , ಹಾಸ್ಯ….) ಎಲ್ಲ ರೀತಿಯ ಬರಹಗಾರಿರಗೂ ಆದ್ಯತೆ ನೀಡಬೇಕಾಗಿದೆ. ಈ ವಿಷಯದಲ್ಲಿಪತ್ರಿಕೆ ಹಿಂದೆ ಬಿದ್ದಿಲ್ಲ. ಆದರೆ ಮುಂದುವರಿಯಬೇಕಾದದ್ದಿದೆ. ಆಧುನಿಕ ವಿಷಯಗಳ ಜೊತೆ ನಮ್ಮಭಾರತೀಯ ಸಂಸ್ಕೃತಿಯ ಕುರಿತಾಗಿಯೂ ಪತ್ರಿಕೆ ಸ್ವಲ್ಪ ಹೆಚ್ಚು ಗಮನಹರಿಸಬೇಕು. ದೇಶದ ಬೆನ್ನೆಲುಬಾದಯುವ ಚೇತನಗಳ ಶಕ್ತಿಯನ್ನು ಜಾಗೃತಗೊಳಿಸಬೇಕಾದ ಗುರುತರ ಜವಾಬ್ದಾರಿ ಪತ್ರಿಕೆ ಮೇಲಿದೆ.ಸಾಹಿತ್ಯದ ಮೂಲಕ ನಮ್ಮೊಳಗೆ ಸಾಮಾಜಿಕ ಜವಾಬ್ದಾರಿ ಕರ್ತವ್ಯ ಪ್ರಜ್ಞೆ, ದೇಶ ಭಕ್ತಿ ಹೆಚ್ಚಿಸಬೇಕಾದ‌ಅವಶ್ಯಕತೆಯೂ ಇದೆ. ಈ ಎಲ್ಲ ದೃಷ್ಟಿಯಿಂದ ಪತ್ರಿಕೆ ಇನ್ನೂ ಹೆಚ್ಚು ವಿಸ್ತಾರವಾದ ಕರ್ತವ್ಯನಿರ್ವಹಣೆಯಲ್ಲಿ ಯಶಸ್ಸು ಹೊಂದಲಿ, ಸದಾಶಯವು ಈಡೇರುವಂತಾಗಲಿ. ಅದಕ್ಕೆ ನಮ್ಮೆಲ್ಲರಬೆಂಬಲ ಪ್ರೋತ್ಸಾಹ ಸಿಗಲಿ.

    ಪ್ರತಿಕ್ರಿಯಿಸಿ :