• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನ

    ಸಾಧನೆಯ ಪಥದಲ್ಲಿ ಯಶಸ್ವಿ ಹೆಜ್ಜೆಯನಿಟ್ಟು ಬೆಳಗಲಿ ಬೆಳೆಯಲೀ ಚೈತ್ರರಶ್ಮಿಯು

    September 16th, 2008.


    - ಕಮಲಾ ಜಿ. ಹೆಗಡೆ,ಕೊಂಡದ ಕುಳಿ, ಕುಮಟಾ

    ಎಲ್ಲದಾಹಕ್ಕಿಂತಲೂ ಮನ್ನಣೆಯ ದಾಹವೇ ದೊಡ್ಡದೆಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ತಿಳಿಸಿರುವಂತೆ ಪ್ರತಿಯೋರ್ವ ವ್ಯಕ್ತಿಯೂ ತನ್ನನ್ನುಗುರುತಿಸಲಿ, ಗಮನಿಸಲಿ ಎಂದು ತನ್ನ ಮನ್ನಣೆಗಾಗಿ ಪ್ರತಿಕ್ಷಣವೂ ಅಪೇಕ್ಷೆಪಡುತ್ತಾನೆ. ಆ ದಿಶೆಯಲ್ಲಿ ಹೋರಾಡುತ್ತಲೇ ಇರುತ್ತಾನೆ. ನಾಗರೀಕತೆಯನೆಪದಲ್ಲಿ ಇಂದು ಎಲ್ಲವನ್ನೂ ದಾಪುಗಾಲಿಟ್ಟು ದಾಟಿಹೋಗುವ ಧಾವಂತ‌ಎಲ್ಲರಲ್ಲೂ. ಇನ್ನೊಬ್ಬರನ್ನು ಗಮನಿಸುವ ವ್ಯವಧಾನ ಎಷ್ಟು ಜನರಲ್ಲಿದೆ?ಇದ್ದರೂ ಅದು ಯಾರಿಗಾಗಿ ಎನ್ನುವುದೂ ಒಂದು ಪ್ರಶ್ನೆ. ಅವಗಾಹನೆ,ಕೊರತೆಯಿಂದಾಗಿ, ಒಂದು ಒಳ್ಳೆಯ ಮನಸ್ಸು, ಒಂದು ವ್ಯಕ್ತಿತ್ವಯಾವುದೇ ರಂಗದಲ್ಲಾಗಿರಲಿ ಅರಳುವ ಪ್ರತಿಭೆಗಳು ಕಮರಿಹೋಗುತ್ತದೆ. ಇದಕ್ಕೊಂದು ಅಪವಾದವೋ ಎನ್ನುವಂತೆ ಚೈತ್ರರಶ್ಮಿತನ್ನ ಪ್ರಕಾಶದಿಂದ ಪ್ರತಿಭೆಗಳನ್ನು ಬೆಳಗಿ ಹೊಳೆಯುವಂತೆಮಾಡುವಲ್ಲಿ, ಅದರಲ್ಲೂ ಹಳ್ಳಿಗರ ಜನಜೀವನದ ಮೇಲೆ ವಿಶೇಷಗಮನ ಹರಿಸಿ ಅವರ ಕಷ್ಟಸುಖಗಳ ಅರಿತು, ’ತಂಗದಿರು’ ಬೀರುತ್ತದೆ.ಆ ಬೆಳಕಲ್ಲಿ ನಿಂತು ಒಮ್ಮೆ ನಡೆದು ಬಂದ ಹಾದಿಯನ್ನು ಒರೆಹಚ್ಚಿನಿಟ್ಟಿಸುವಂತೆ ಮಾಡುತ್ತಿದೆ. ವಿದೇಶಿ ವ್ಯಾಮೋಹಕ್ಕೆ ಬಲಿಬಿದ್ದುಕೆಡುತ್ತಿರುವ ಯುವಜನಾಂಗಕ್ಕೆ ಎಚ್ಚರಿಕೆಯ ಘಂಟೆ ಬಾರಿಸಿ‌ಎಚ್ಚೆತ್ತುಕೊಳ್ಳುವಂತೆ ನೇರಮಾತು, ಸಾಮಾಜಿಕ ಕಾಳಜಿ ಸರಳಸುಂದರ ಶೈಲಿಯಲ್ಲಿ ಅಮ್ಮನ ಕಾಳಜಿಹೊತ್ತು ತರುವ ರಶ್ಮಿ ಆತ್ಮೀಯಬಂಧುವಿನ ಆಗಮನದಂತಿರುತ್ತದೆ. ಪತ್ರಿಕೆ ನಿಮ್ಮದೇ ಎನ್ನುವಬೆಚ್ಚನೆಯ ಭರವಸೆಯೊಂದಿಗೆ ಸಾಧನೆಯ ಪಥದಲ್ಲಿ ಯಶಸ್ವೀಹೆಜ್ಜೆಯಿಡಲು ಪ್ರೇರೇಪಿಸುತ್ತಿರುವುದು ರಶ್ಮಿಯ ವೈಶಿಷ್ಟ .ಹಣಕ್ಕಾಗಿ, ಪ್ರತಿಷ್ಟೆಗಾಗಿ, ರಾಜಕೀಯ, ಸಿನಿಮಾಗಳ. ಅಂತೆ-ಕಂತೆಗಳನ್ನು ತುರುಕಿ, ಯುವಜನಾಂಗವನ್ನು ಹಾದಿತಪ್ಪಿಸುವ ಇಂದಿನಹಲವಾರು ಪತ್ರಿಕೆಗಳು ಮೌಲ್ಯವನ್ನೇ ಕಳೆದುಕೊಂಡು ವ್ಯಾಪಾರೀಕರಣ ವಾಗುತ್ತಿರುವುದು ಶೋಚನೀಯ. ಹತ್ತರೊಡನೆ ಹನ್ನೊಂದಾಗದಿರಲಿ ನಮ್ಮ ರಶ್ಮಿ.ಶಿಲ್ಪಿ ಜಾಣ್ಮೆ-ತಾಳ್ಮೆಯಿಂದ ಕೆತ್ತಿದಾಗ ಮಾತ್ರ ಸುಂದರ ಶಿಲ್ಪ ಮಾಡಲು ಸಾಧ್ಯ. ಆ ಶಿಲ್ಪ ಸೂಕ್ತವೇದಿಕೆಯಲ್ಲಿಪ್ರದರ್ಶನಗೊಂಡಾಗ ಕಡೆವ ಶಿಲ್ಪಿಗೂ, ಶಿಲ್ಪಕ್ಕೂ ಬೆಲೆ ಬರುವುದು ಅಲ್ಲವೆ? ಕೆಲವೊಮ್ಮೆ ಗುರುತಿಸುವವ್ಯಕ್ತಿ -ವಿಷಯಗಳ ಮೇಲೆ ವ್ಯಕ್ತಿತ್ವ ನಿರ್ಮಾಣವಾಗಿ ಬಿಡುತ್ತದೆ. ಒಳ್ಳೆಯ ಉದಾಹರಣೆ ನಾನೇ. ನನ್ನ’ಆಪ್ತವಲಯದಲ್ಲೆ’ ನನ್ನ ಬರಹಗಳನ್ನು ಗಮನಿಸದ ಜನ ಪತ್ರಿಕೆಯಲ್ಲಿ ಪ್ರಕಟವಾದಾಗ ಮೆಚ್ಚುಗೆವ್ಯಕ್ತಪಡಿಸಿ ಅಭಿನಂದಿಸಿದರು. ಎಂತಹ ವಿಪರ್ಯಾಸ ಅಲ್ಲವೇ? ನನಗೆ ಚೈತ್ರರಶ್ಮಿ ಸಿಕ್ಕದ್ದು ಆಕಸ್ಮಿಕ.ಬಳಗದಲ್ಲಿ ಒಂದಾಗಿಹೋಗಿದ್ದು ಅನಿರೀಕ್ಷಿತ. ಆಗಮನದ ಆನಂದ ಅಪರಿಮಿತ ಅನುಭೂತಿ‌ಅವರ್ಣನೀಯ. ಖಂಡಿತಾ ಉಪ್ಪ್ರೇಕ್ಷೆ ಇಲ್ಲ. ಅನಿಸಿದ್ದನ್ನು ಇದ್ದಂತೆ ಬರೆದಿದ್ದೇನೆ. ನಮಗೆ ಗೊತ್ತೇ‌ಇರದ ರಾಷ್ಟ್ರನಾಯಕರ ಜೀವನ ಗಾಥೆಯನ್ನು ಹೊತ್ತು ತಂದ ’ರಾಷ್ಟ್ರಹಬ್ಬ ವಿಶೇಷಾಂಕ’ ಅದ್ಬುತ.ಒಂದು ಪತ್ರಿಕೆ ಹೊರತರುವಲ್ಲಿ ಇರಬಹುದಾದ ತೊಂದರೆ ತೊಡರುಗಳು ಅರಿವಿಗೆ ಬಾರದಿರದು.’ಗರಿಕೆಯೇ ಹೊರೆ’ ಎನ್ನುವ ನಮಗೆ ಗುಡ್ಡದ ಭಾರ ಎಷ್ಟಿರಬಹುದೆಂದು ಕಲ್ಪನೆಗೆ ನಿಲುಕದ್ದೇನಲ್ಲ.’ಶ್ರದ್ದಾಂ ಕಾಮಸ್ಯ ಮಾತರಂ’, ಶ್ರದ್ದೆಯೇ ನಮ್ಮ ಇಚ್ಛೆಯನ್ನು ಈಡೇರಿಸುವ ಜನನಿ. ಕಠಿಣ ಪರಿಶ್ರಮ,ಹೋರಾಟ ಪ್ರವೃತ್ತಿ, ಅಪರಿಮಿತ ಶ್ರದ್ಧೆಗೆ ಜನನಿ ಒಲಿದಿದ್ದಾಳೆ. ಸಹೃದಯಕ್ಕೆ ಹರಸಿದ್ದಾಳೆ. ರಶ್ಮಿ ಬೆಳೆದಂತೆಲ್ಲಾಮೈಮರೆವಿನಿಂದ ಪ್ರಖರತೆಗೆ ಕುಂದುಂಟಾಗದೇ ಅವಳ ಕೀರ್ತಿ ಜಗದಗಲ ಯುಗದಗಲ ಹರಡಲಿ.ತುಂಬುಹೃದಯದ ಶುಭಕಾಮನೆಗಳು.

    ಪ್ರತಿಕ್ರಿಯಿಸಿ :