ವಿಚಾರಗಳ ಲಹರಿ, ಆಗಲಿ ಭಾವನೆಗಳ ಬುಗುರಿ
September 16th, 2008.
- ವಿನಾಯಕ ಕೆ.ಎಸ್, ಉಡುಪಿ
ಚೈತ್ರರಶ್ಮಿಯ ರಾಷ್ಟ್ರಹಬ್ಬಸಂಚಿಕೆ ಪತ್ರಿಕೆಯನ್ನು ಲಘುವಾಗಿಪರಿಗಣಿಸಿದವರಿಗೆ ದಿಟ್ಟ ಉತ್ತರನೀಡಿದೆ. ಅಂತಹ ಸಂಚಿಕೆಗಳುಹೆಚ್ಚಲಿ. ಆದರೆ ಯಾವುದೇಸಿದ್ಧಾಂತ ವಾದಿಯಾಗುವುದುಬೇಡ. ರಶ್ಮಿಯ ಪ್ರಭೆ ನಿಲ್ಲದಿರಲಿ.ಅದರ ಜೈತ್ರಯಾತೆ ನಿರಂತರವಾಗಿರಲಿ.
ಚಕ್ರವರ್ತಿ ಸೂಲಿಬೆಲೆ ಅವರು ’ಗರ್ವ’ ವಾರಪತ್ರಿಕೆಯಲ್ಲಿ ’ಚೈತ್ರರಶ್ಮಿ’sಬಗ್ಗೆ ಬರೆದಾಗಲೇ ಆ ಪತ್ರಿಕೆಯಲ್ಲಿ ಏನೋ ವೈಶಿಷ್ಟ ವಿದೆ, ಅದಕ್ಕೆಒಂದಿಷ್ಟು ಸಿದ್ಧಾಂತಗಳಿದೆ ಎಂದು ಭಾವಿಸಿದ್ದೆ. ರಶ್ಮಿ ಕೈ ಸೇರಿದಾಗನನ್ನ ಕಲ್ಪನೆ ಅಕ್ಷರಶಃ ನಿಜವಾಗಿತ್ತು. ಈ ಬಾರಿಯ ರಾಷ್ಟ್ರ ಹಬ್ಬ ಸಂಚಿಕೆರಶ್ಮಿಯ ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿದೆ. ’ಅಯ್ಯೋ ಹಳ್ಳಿ ಹುಡುಗರಪುಟಗೋಸಿ ಪತ್ರಿಕೆ, ಅದರಲ್ಲಿ ಏನು ಇರತ್ತೆ ಓದೋವಂತಹ ವಿಚಾರ’ ಅನ್ನುವವರಿಗೆಲ್ಲಾ ರಾಷ್ಟ್ರಹಬ್ಬ ಸಂಚಿಕೆ ಸರಿಯಾದ ಪೆಟ್ಟು ನೀಡಿದೆ. ಅಂತಹದೊಂದು ಸಂಚಿಕೆ ನೀಡಿದ ರಶ್ಮಿ ಬಳಗಕ್ಕೆನಿಜಕ್ಕೂ ಧನ್ಯವಾದ. ’ಅಯ್ಯೋ ಧನ್ಯವಾದ ಯಾರಿಗೆಹೇಳಬೇಕ್ರಿ, ಈ ಪತ್ರಿಕೆ ನಮ್ಮದೇ ಅಲ್ವಾ?’ ಹಾಗಂತಸಂಪಾದಕರು ಯಾವತ್ತೋ ಹಾಸ್ಯ ಮಾಡಿದ್ದು ನೆನಪಿಗೆಬಂತು. ಖಂಡಿತವಾಗಿಯೂ ಹೌದು.
ಅಂತಹದೊಂದುಭಾವನಾತ್ಮಕ ಬಂಧ ರಶ್ಮಿಯಲ್ಲಿದೆ. ಏನಂತೀರಾ?ಹಳ್ಳಿಗರ ಮುಕ್ತ ಮನಸ್ಸಿನ ಮುದ್ದಾದ ಮಾತುಗಳನ್ನುಅಕ್ಷರ ರೂಪಕ್ಕೆ ಇಳಿಸುತ್ತಿರುವ ರಶ್ಮಿಯಲ್ಲಿ ದಿನೇದಿನೇಹೊಸಹೊಸ ಮಾತುಗಾರರು ಬರುತ್ತಿರುವುದು ಶ್ಲಾಘನೀಯ.ಅಂದಹಾಗೆ ನನ್ನ ಮಟ್ಟಿಗೆ ಹೇಳುವುದಾದರೆ ನನಗೆಪತ್ರಿಕೋದ್ಯಮ ಜಗತ್ತು ಹೊಸತೇನೊ ಅಲ್ಲ. ಪಿ.ಯು.ಸಿ.ಯಿಂದಲೇ ಕೆಲವಷ್ಟು ಪತ್ರಿಕೆಗಳ ಸುತ್ತ ಮುತ್ತ ಹಾಯ್ದು ಬಂದಿದ್ದೇನೆ. ಸಾಕಷ್ಟು ಪತ್ರಕರ್ತ ಮಿತ್ರರಪರಿಚಯವಿದೆ. ಅಲ್ಲಿ ನಾನು ಕಂಡಂತೆ ಪತ್ರಿಕೆ ಎನ್ನುವುದು ಅಕ್ಷರಶಃ ಉದ್ಯಮವಾಗಿದೆ. ಬಂಗಾರದಮೊಟ್ಟೆಯಿಡುವ ಬಾತುಕೋಳಿ ನನ್ನ ಪತ್ರಿಕೆಯಾಗಬೇಕು. ಎಂಬುದು ಪ್ರತಿಯೊಬ್ಬ ಪತ್ರಿಕೆಯ ಮಾಲೀಕನಕನಸಾಗಿದೆ. ಹಾಗಾಗಿ ಪತ್ರಿಕೆಗಳಲ್ಲಿ ಭಾವನೆಗಳಿಗೆ ಸ್ಥಳವಿಲ್ಲ. ಹಳ್ಳಿಗರೆಲ್ಲಾ ಅವರ ದೃಷ್ಟಿಯಲ್ಲಿವಿಚಾರವಂತರೇ ಅಲ್ಲ ; ಪತ್ರಿಕೋದ್ಯಮ ಪದವೀಧರರು ಮಾತ್ರ ಅವರ ದೃಷ್ಟಿಯಲ್ಲಿ ಬರಹಗಾರರು;ಹಣಬರತ್ತೆ, ಜಾಹೀರಾತು ಸಿಗುತ್ತೆ. ಅಂತಾದಾಗ ಎಲ್ಲವನ್ನೂ ಬರೆಯಲಿಕ್ಕೂ ಸಿದ್ದನಿರುವವನುಪತ್ರಿಕೆಗಳಿಗೆ ಬೇಕಾದ ಬರಹಗಾರ.ಅಂತಹದೊಂದು ಪತ್ರಿಕೋದ್ಯಮ ಜಗತ್ತಿಗೆ ವಿಭಿನ್ನವಾಗಿ ಹಳ್ಳಿಹುಡುಗರ ತಂಡದಿಂದ ಒಂದುಪತ್ರಿಕೆ ಬರ್‍ತಾ ಇದೆ ಅಂದ್ರೆ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಅನ್ಸತ್ತೆ ಅಲ್ವಾ? ರಶ್ಮಿಯನ್ಯೂನತೆಗಳ ಬಗ್ಗೆಯೂ ಹೇಳಬೇಕು. ಮುಖ್ಯವಾಗಿ ಪುಟ ವಿನ್ಯಾಸದಲ್ಲಿ. ಒಂದು ಪುಟದಲ್ಲಿಹಲವಾರು ಲೇಖನ ತುರುಕುವುದಕ್ಕಿಂತ ಇದ್ದಷ್ಟೇ ಪುಟಗಳಲ್ಲಿ ಲೇಖನಗಳನ್ನು ವ್ಯವಸ್ಥಿತವಾಗಿಜೋಡಿಸುವುದು ಒಳಿತು ಅನ್ಸತ್ತೆ. ಹಾಗೇನೆ ಅಕ್ಷರದ ಗಾತ್ರಗಳಲ್ಲಿ ಕೂಡಾ ನಿಗಾ ಇಡುವುದು ಅಗತ್ಯ.ಕವನಗಳನ್ನು ಪ್ರಕಟಿಸುವಾಗ ಅಗತ್ಯಕ್ಕಿಂತ ಹೆಚ್ಚಿನ ಸ್ಥಳ ಹಾಳುಮಾಡುವುದು ಬೇಡ ಅನ್ನಿಸುತ್ತೆ.ಹಾಗೇನೇ ರಶ್ಮಿ ತೀರಾ ಸಿದ್ಧಾಂತವಾದಿ ಪತ್ರಿಕೆಯಾಗುವುದು ಬೇಡ. ರಾಷ್ಟ್ರೀಯ ವಿಚಾರಗಳಿಗೆಪ್ರೋತ್ಸಾಹವಿರಲಿ. ಆದರೆ ಅದರಲ್ಲಿ ಯಾವುದೊ ಒಂದು ಸಿದ್ಧಾಂತವನ್ನು ಎತ್ತಿ ಹಿಡಿದಂತೆಭಾಸವಾಗದಿರಲಿ ಎನ್ನುವುದು ನನ್ನ ಅಭಿಪ್ರಾಯ.ಹಾಗೇನೆ ರಶ್ಮಿಯಲ್ಲಿ ನಿಧಾನವಾಗಿ ಹೊಸತನ ಹರಿದು ಬರಲಿ. ವಿಶೇಷಾಂಕ ಸಂಚಿಕೆಗಳುಹೆಚ್ಚಾಗಲಿ. ಸಾಧ್ಯವಾದರೆ ಪುಟ ಸಂಖ್ಯೆಯೂ ಹೆಚ್ಚಾಗಲಿ ಎಂಬ ಆಶಯವಿದೆ. ಏನೇ ಇರಲಿ ನನ್ನದೃಷ್ಟಿಯಲ್ಲಿ ರಶ್ಮಿ ವಿಚಾರಗಳ ಲಹರಿ, ಭಾವನೆಗಳ ಬುಗುರಿ. ಅದರ ಜೈತ್ರಯಾತ್ರೆ ನಿರಂತರವಾಗಲಿ.ರಶ್ಮಿಗೆ ಕನ್ನಡಿ ಹಿಡಿದು ನಿಂತಿರುವ ರಾಚಂ ಬಗ್ಗೆ ಬಳಗದವರ್‍ಯಾರಿಗೂ ಹೇಳುವ ಅವಶ್ಯಕತೆ, ಅನಿವಾರ್ಯತೆ ಎರಡು ಇಲ್ಲ. ಅದನ್ನು ಅವರು ಬಯಸುವುದೂ ಇಲ್ಲ. ಆದರೆ ಇಲ್ಲಿ ಮಾತುಗಳಿಗೆಮುಕ್ತ ಅವಕಾಶ ನೀಡಿದ್ದಾರೆಂದು ಭಾವಿಸಿ ಅವರನ್ನು ಅಭಿನಂದಿಸಲೇಬೇಕು ಅಲ್ವಾ? ಎಂತಹಪರಿಸ್ಥಿತಿಯಲ್ಲೂ ರಶ್ಮಿಯ ಪ್ರಭೆ ನಿಲ್ಲದಿರಲಿ, ನಿಲ್ಲಲು ನಾವು ಬಿಡುವುದು ಬೇಡ ಎಂಬ ಸಂಕಲ್ಪದೊಂದಿಗೆಮುನ್ನಡೆಯೋಣ.