ಪತ್ರಿಕೆ ಮಸ್ತು, ಸಂಗ್ರಹಯೋಗ್ಯ ವಸ್ತು,ಆದರೆ ಸಂಪಾದಕರು ಸುಸ್ತು !
September 16th, 2008.
-ಹಾಗಲ್ವಾಡಿಮಹೇಶ್ ಶೆಟ್ಟಿ, ಪತ್ರಕರ್ತ, ಬೆಂಗಳೂರು
ಚೈತ್ರರಶ್ಮಿ ಗ್ರಾಮೀಣಬರಹಗಾರರಿಗೆ ವೇದಿಕೆಎಂಬುದು ಸಂತಸದ ವಿಷಯ.ಅದನ್ನು ದುರುಪಯೋಗಪಡಿಸಿಕೊಂಡರೆ ’ಸೃಜನಶೀಲತೆ’,’ಚೈತ್ರರಶ್ಮಿ ಬಳಗ’ ಎಂಬೆಲ್ಲಾಕನಸುಗಳಿಗೆ ಅರ್ಥವೇಇರುವುದಿಲ್ಲ. ಹಾಗೆಯೇ ಇಷ್ಟೆಲ್ಲಾಬರಹಗಾರರಿದ್ದೂ, ಇಷ್ಟೆಲ್ಲಾಸಮಾನಾಸಕ್ತರಿದ್ದೂ, ಇಷ್ಟೆಲ್ಲಾಒಳ್ಳೆಯ ಚಿಂತನೆ, ಕನಸು,ಧ್ಯೇಯಗಳಿದ್ದೂ ’ಚೈತ್ರರಶ್ಮಿ’ಯಂತಹ ಪ್ರಯತ್ನನಿಂತುಹೋದರೆ ಅದುಖಂಡಿತವಾಗಿ ಗೊತ್ತಿದ್ದೂ ನಮಗೆನಾವೇ ’ಆತ್ಮವಂಚನೆ’ಮಾಡಿಕೊಂಡಂತಾಗುತ್ತದೆ.
ಸೃಜನಶೀಲತೆಯ ಹುಡುಕಾಟದಗೆಳೆಯರೆಲ್ಲರಿಗೆ ನಮಸ್ಕಾರ. ಇದನ್ನುದೃಷ್ಟಿಕೋನ ಎನ್ನುವುದಕ್ಕಿಂತ ’ಚೈತ್ರರಶ್ಮಿಬಳಗಕ್ಕೊಂದು ಪತ್ರ’ ಎನ್ನುವುದುಸೂಕ್ತವೇನೋ. ’ನಿಮ್ಮ ಪತ್ರಿಕಾ ಅನುಭವದಹಿನ್ನೆಲೆಯಲ್ಲಿ ಚೈತ್ರರಶ್ಮಿಯ ಎರಡೂವರೆವರ್ಷ ಸಂಚಿಕೆಗೊಂದು ವಿಶೇಷ ದೃಷ್ಟಿಕೋನಬರೆದುಕೊಡಿ’ ಎಂದು ರಾಚಂ ಕೇಳಿದಾಗನಾನು ’ನನ್ನ ಅಭಿಪ್ರಾಯಕ್ಕೆ ಮುಕ್ತಸ್ವಾತಂತ್ರ ವಿರುವುದಾದರೆ ಮಾತ್ರ’ ಎಂದಿದ್ದೆ.ಅದಕ್ಕವರು ’ಖಂಡಿತಾ ಬೈದರೂ ಪರವಾಗಿಲ್ಲ.ಆದರೆ ದಯವಿಟ್ಟು ನನ್ನ ಹೊಗಳೋ ಕೆಲಸಮಾತ್ರ ಮಾಡ್ಬೇಡಿ’ ಎಂದಿದ್ದರು. ಖಂಡಿತವಾಗಿಯೂ ಇದು ಯಾರನ್ನೂಹೊಗಳೋ ಪ್ರಯತ್ನವಲ್ಲ. ಆದರೂ ಈ ಪುಟ್ಟವಿಮರ್ಶೆಯ ಮಧ್ಯೆ ಅಲ್ಲಲ್ಲಿ ಒಂದೆರಡುಮೆಚ್ಚುಗೆಯ ನುಡಿಗಳು ನುಸುಳಿದ್ರೆ ಅದಕ್ಕೆ ಚೈತ್ರರಶ್ಮಿಯೇ ಹೊಣೆ. ನಾನು ಪತ್ರಿಕೆಯ ನಿಲುವುಗಳಿಗೆ ಭಿನ್ನವಾದಸಿದ್ಧಾಂತದಿಂದ ಬಂದವನು. ಆದರೂಪತ್ರಿಕೆಯ ಒಳಗಿನ ವಿಷಯಗಳೇನೇ ಇರಲಿ, ಇಂಥಹದೊಂದು ಪ್ರಯತ್ನವನ್ನು ಮೆಚ್ಚದಿರಲುಕಾರಣಗಳೇ ಇಲ್ಲ. ನನ್ನ ಅನುಭವದಲ್ಲಿಇಂತಹ ಹಲವು ಕಾಲೇಜು ಪತ್ರಿಕೆಗಳನ್ನುಕಂಡಿರುವೆನಾದ್ರೂ, ಆರು ತಿಂಗಳ ಹಿಂದೆ ನನ್ನಗೆಳೆಯನ ಮೂಲಕ ’ಚೈತ್ರರಶ್ಮಿ’ ಸಿಕ್ಕಾಗ, ಅದುನನ್ನ ಗಮನಸೆಳೆದದ್ದು ಅದರ ವಿಶಿಷ್ಟ ಹೆಸರಿನಿಂದಲೇ. ನಮ್ಮ ಮೊದಲ ಭೇಟಿಯಲ್ಲಿ ರಾಚಂಅವರನ್ನು ನೋಡಿದಾಗ ’ಈತನಾ ಸಂಪಾದಕ’ ಅಂತ ಒಳಗೊಳಗೇ ನಕ್ಕಿದ್ದೆ. ಆದರೆ ವ್ಯಕ್ತಿಯದೇಹಕ್ಕೂ, ಆತನ ಧ್ಯೇಯಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಅರ್ಥವಾಗಿದ್ದು ನಂತರವೇ.ಪತ್ರಿಕೆಯ ಹಿಂದಿನ ಕನಸುಗಳು, ಧ್ಯೇಯಗಳನ್ನು ಕೇಳಿದಾಗ ನಾನು ನನಗರಿವಿಲ್ಲದಂತೆಯೇಚೈತ್ರರಶ್ಮಿಯನ್ನು ಮೆಚ್ಚಿದ್ದೆ. ಪತ್ರಿಕೆಯನ್ನು ಸಿದ್ಧಪಡಿಸಲು ತುಂಬಾ ಜನರಿದ್ದಾರೆ ಎಂದುಕೊಂಡುವಿಚಾರಿಸಿದಾಗ ರಾಚಂ ’ಹೌದು ನಮ್ಮದು ತುಂಬಾ ದೊಡ್ಡ ಬಳಗ’ ಎಂದಿದ್ದರು. ಪತ್ರಿಕೆಯ ಆಫೀಸ್‌ಮತ್ತು ಹಾಕಿದ ಹಣವಾದ್ರೂ ವಾಪಸ್ ಬರ್‍ತಿದೆಯಾ ಅಂತ ಕೇಳಿದಾಗ ಅವರು ’ನಮ್ಮ ಎಲ್ಲಾಆಫೀಸ್‌ಗಳಲ್ಲಿ ದೊಡ್ಡ ಆಫೀಸ್ ಪೋಸ್ಟ್‌ಆಫೀಸ್ (!) ಮತ್ತು ಕೆಲವೇ ದಿನಗಳಲ್ಲಿ ಚೈತ್ರರಶ್ಮಿ ಟ್ಯಾಕ್ಸ್‌ಕೂಡ ಕಟ್ಟಬಹುದು!’ ಅಂತ ನಕ್ಕಿದ್ದರು. ಅವರ ಮಾತಿನ ಮತ್ತು ನಗುವಿನ ಅರ್ಥ ಅಂದು ನನಗಾಗಿರಲಿಲ್ಲ.ಕೆಲವೇ ದಿನಗಳ ನಂತರ ಅವರು ಪತ್ರಿಕೆ ಸಿದ್ದಪಡಿಸುತ್ತಿದ್ದ ದಿನಗಳಲ್ಲಿ ಅವರನ್ನು ಭೇಟಿಯಾದಾಗಲೇನನಗೆ ಅರ್ಥವಾಗಿದ್ದು ಅದೊಂದು ’ಏಕಾಂಗಿ ಹೋರಾಟ’ ವೆಂದೂ ಮತ್ತು ಚೈತ್ರರಶ್ಮಿ ಒಂದುಬೆಲೆಯನ್ನು ಹೊಂದಿರದ ’ಮೌಲ್ಯಯುತ ಪತ್ರಿಕೆ’ಯೆಂದೂ.
ಖಂಡಿತವಾಗಿಯೂ ೨ ವರ್ಷಗಳ ಹಿಂದೆ ನಾನು ಈ ಬಗ್ಗೆತಿಳಿದಿದ್ದರೆ ನಿಜಕ್ಕೂ .ಇದು ಹೆಚ್ಚು ದಿನ ನಡೆಯುವ ಪ್ರಯತ್ನವಲ್ಲ.ಅಂದ್ಕೊಂಡಿರ್‍ತಿದ್ದೆನೇನೋ. ಆದರೆ ಒಬ್ಬನೇ ವ್ಯಕ್ತಿಯ ಶ್ರದ್ಧೆ ಮತ್ತುಹಠ ಪತ್ರಿಕೆಯನ್ನು ಎರಡೂವರೆ ವರ್ಷಗಳ ನಂತರವೂ ನಡೆಸುತ್ತಿದೆಎಂದರೆ ಹಾಗಾದ್ರೆ ನಾವೆಲ್ಲ ಏನು ಮಾಡ್ತಿದ್ದೇವೆ ಅಂತ ಆತ್ಮವಿಮರ್ಶೆಮಾಡಿಕೊಳ್ಳಬೇಕು ಅಂತ ನನಗನ್ನಿಸುತ್ತದೆ.. ನಾನುಪತ್ರಿಕೋದ್ಯಮದವನಾದ ಕಾರಣ ಒಂದು ಪತ್ರಿಕೆಯ ಹಿಂದಿನ ಡಿಟಿಪಿ,ಪ್ರೂಫ್ ತಿದ್ದುವುದು, ಪುಟವಿನ್ಯಾಸ, ಮುದ್ರಣ ಅವುಗಳ ಹಿಂದಿನಕಷ್ಟಗಳೇನೆಂಬುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ನಾನು.ಸಂಪಾದಕರು ಸುಸ್ತು. ಎಂದದ್ದು. ಅಂಚೆಯಲ್ಲಿ ಬರುವ ಲೇಖನಗಳನ್ನುsಓದುವುದು, ತಿದ್ದುವುದು, ಡಿಟಿಪಿ ಮಾಡಿಸುವುದು, ಮತ್ತದರ ಪ್ರೂಫ್‌ತಿದ್ದಿ ತಪ್ಪುಗಳನ್ನು ಸರಿಪಡಿಸುವುದು, ಪುಟವಿನ್ಯಾಸ ಮಾಡುವುದು,ಮುದ್ರಣ ಮಾಡುವುದು, ಅಂಚೆಗೆ ಹಾಕಲು ಸಿದ್ಧಪಡಿಸುವುದು.ಕೊನೆಗೆ ತಾವೇ ಅಂಚೆಗೆ ಹಾಕುವುದು ಇಷ್ಟೆಲ್ಲವನ್ನೂಬೆಂಗಳೂರಿನಂತಹ ನಗರದಲ್ಲಿ ಅದೂ ತಮ್ಮೆಲ್ಲ ಕೆಲಸಗಳ ಮಧ್ಯೆಒಬ್ಬನೇ ವ್ಯಕ್ತಿ ಮಾಡುತ್ತಾನೆಂದರೆ ಆಶ್ಚರ್ಯವಾಗುತ್ತೆ. ಹುಚ್ಚುತನಅಂತಾನೂ ಅನ್ನಿಸುತ್ತೆ. ಆದರೆ ಆ ’ಹುಚ್ಚುತನ’ದ ಹಿಂದಿನ ಪ್ರಯತ್ನ,ಹಠ ಮತ್ತದರ ಪರಿಣಾಮಗಳನ್ನು ನೋಡಿದಾಗ ಇಂತಹ ಹುಚ್ಚರಸಂಖ್ಯೆ ಹೆಚ್ಚಲಿ ಎಂದೆನಿಸೋದು ಅಸಹಜವೇನಲ್ಲ.’ನಮ್ಮ ಚೈತ್ರರಶ್ಮಿ’ ಎಂಬ ಅಭಿಮಾನ ಪ್ರಶಂಸನಾರ್ಹವೇ. ಆದರೆ ಅಷ್ಟಕ್ಕೇ ಪತ್ರಿಕೆ ಉಳಿಯುವುದು,ಬೆಳೆಯುವುದು ಅಸಾಧ್ಯ. ಪತ್ರಿಕೆ ಓದುತ್ತೇವೆ, ಮೆಚ್ಚಿಕೊಳ್ಳುತ್ತೇವೆ, ಒಂದು ಒಳ್ಳೆಯ ಪ್ರಯತ್ನ ಎಂಬಿತ್ಯಾದಿಗಳು ಕೇವಲ ಬಾಯುಪಚಾರದ ಮಾತುಗಳಾಗಬಹುದು.ಪ್ರಸ್ತುತ ಪರಿಸ್ಥಿತಿಯಲ್ಲಿ ಬಾಯುಪಚಾರದಮಾತುಗಳಿಗಿಂತ ಪತ್ರಿಕೆಗೆ ಪ್ರಾಮಾಣಿಕವಾಗಿ ಕೆಲಸ ಮಾಡೋರು ಬೇಕು. ಬರಹವನ್ನು ಬರೆದುಕಳುಹಿಸಿದಾಕ್ಷಣ ನಮ್ಮ ಜವಾಬ್ದಾರಿ ಮುಗಿಯಿತು ಅಂತ ಯಾರಾದರೂ ಭಾವಿಸಿದರೆ ’ಸೃಜನಶೀಲತೆ’ಎಂಬುದು ಅರ್ಥಹೀನವಾದೀತು. ಹಾಗೆಯೇ ಪ್ರತಿಸಂಚಿಕೆ ಓದಿದವರು ಪ್ರತಿಕ್ರಿಯಿಸದೇ ಇದ್ದರೆ, ನಾವುಬರೆವ ಮೂಲಕ ಯಾರಿಗೋ ಉಪಕಾರ ಮಾಡ್ತಿದ್ದೇವೆ ಅಂದುಕೊಂಡರೆ ಅದು ಒಂದು ಒಳ್ಳೆಯಪ್ರಯತ್ನಕ್ಕೆ ನಾವು ಬಗೆವ ದ್ರೋಹ ವಷ್ಟೆ. ಬೆಂಗಳೂರಿನಲ್ಲಿರುವ ಬಳಗದ ಮಿತ್ರರು .ಪತ್ರಿಕೆಗಾಗಿನಾವೇನು ಮಾಡಿದ್ದೇವೆ. ಅಂತ ಪ್ರಾಮಾಣಿಕವಾಗಿ ಪ್ರಶ್ನಿಸಿಕೊಳ್ಳಲಿ.ನಿಜಕ್ಕೂ ಒಂದು ಒಳ್ಳೆಯ ಪ್ರಯತ್ನದಜತೆ ನಾವಿದ್ದೇವೆ ಅಂತ ಪ್ರಾಮಾಣಿಕವಾಗಿ ಅನ್ನಿಸಿದ್ರೆ, ಪತ್ರಿಕೆ-ಸಂಪಾದಕರ ಕರ್ತವ್ಯ ಎಂದುಕೊಳ್ಳದೆಚೈತ್ರರಶ್ಮಿಯ ಸಿದ್ಧತೆಯ ಕೆಲಸಗಳಲ್ಲಿ, ಅದನ್ನು ಇನ್ನಷ್ಟು ಸೃಜನಶೀಲವಾಗಿ ಹೊರ ತರುವ ಪ್ರಯತ್ನದಲ್ಲಿಪ್ರಾಮಾಣಿಕವಾಗಿ ಪಾಲ್ಗೊಳ್ಳಬೇಕು. ಖಂಡಿತಾ ಅದನ್ನು ರಾಚಂ ಅವರಿಗೆ ಮಾಡುವ ಉಪಕಾರ,ಸಹಾಯಅಂದುಕೊಳ್ಳಬಾರದು. ಕೇವಲ ದುಡ್ಡು ಕೊಟ್ಟಾಕ್ಷಣ ಪತ್ರಿಕೆ ಚೆನ್ನಾಗಿ ನಡೆಯುತ್ತೆ ಅಂತಲ್ಲ. ’ಚೈತ್ರರಶ್ಮಿ ಬಳಗ’ದವರಾಗಿ ಪತ್ರಿಕೆಯ ಕುರಿತು ನಮಗೂ ಒಂದಷ್ಟು ಜವಾಬ್ದಾರಿಗಳಿವೆ ಅಂತ ನಿಮಗನ್ನಿಸಿದ್ರೆಮಾತ್ರ ’ಚೈತ್ರರಶ್ಮಿ ಬಳಗ’ ಎಂಬ ಮಾತಿಗೆ ಅರ್ಥವಿದೆ ಅಷ್ಟೆ. ಹೊಸ ಹೊಸ ವಿಷಯಗಳನ್ನುಸಂಗ್ರಹಿಸುವುದರಲ್ಲಿ, ಹೊಸ ರೀತಿಯ ಬರಹಗಳನ್ನು ಬರೆಯುವುದರಲ್ಲಿ, ಹೊಸ ಹೊಸ ಐಡಿಯಾಗಳನ್ನುಕೊಟ್ಟು, ಹೊಸ ರೀತಿಯ ಅಂಕಣಗಳನ್ನು ಪ್ರಾರಂಭಿಸುವುದರಲ್ಲಿ ನಾವು ಹೆಜ್ಜೆ ಹಾಕಬೇಕು. ಎಲ್ಲಾಒಳ್ಳೆಯದನ್ನು, ಕೆಲಸಗಳನ್ನು ಸಂಪಾದಕರಿಗೆ ಗುತ್ತಿಗೆಗೆ ಕೊಟ್ಟಿದ್ದೇವೆ ಎಂದುಕೊಳ್ಳದೆ ಬಳಗದ ಪ್ರತಿಯೊಬ್ಬರೂಪತ್ರಿಕೆಗಾಗಿ ನಾನೇನು ಮಾಡಬಹುದು ಎಂದು ಚಿಂತಿಸಬೇಕು. ಪತ್ರಿಕೆಯಲ್ಲಿ ಒಳ್ಳೆಯ ಲೇಖನಗಳುಬಂದಾಗ ಮನತುಂಬಿ ಅಭಿನಂದಿಸಬೇಕು. ಪತ್ರಿಕೆಯ ಗುಣಮಟ್ಟ ಕಡಿಮೆಯಾದರೆ ಸಂಪಾದಕರನ್ನುಟೀಕಿಸುವ ಬದಲು ’ಹೀಗಿದ್ದರೆ ಚೆನ್ನಾಗಿತ್ತು’ ಅಂತ ಚರ್ಚೆ ಮಾಡಬೇಕು. ಯಾವುದೋ ತಪ್ಪುಘಟಿಸಿದರೆ ಮುಕ್ತವಾಗಿ ಹೇಳಿ ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಪತ್ರಿಕೆ ಸಂಪಾದಕರಹೊಸ ಐಡಿಯಾಗಳಿಗಷ್ಟೇ ವೇದಿಕೆಯಾಗದೆ ನಿಮ್ಮೆಲ್ಲರ ಹೊಸ ಯೋಜನೆಗೂ ವೇದಿಕೆಯಾಗಬೇಕು. ಗ್ರಾಮೀಣಬರಹಗಾರರೂ ತಮ್ಮ ಸುತ್ತಮುತ್ತಲಿನ ವಿಷಯಗಳ ಕುರಿತು ಅಧ್ಯಯನ ಮಾಡಿ ಹೊಸ ಅಂಕಣಗಳನ್ನುಪ್ರಾರಂಭಿಸಬಹುದು. ಎಲ್ಲಕ್ಕೂ ಪತ್ರಿಕೆ ನಮ್ಮದು, ’ಚೈತ್ರರಶ್ಮಿ ನಮ್ಮದು’ ಎಂಬ ’ಪ್ರಾಮಾಣಿಕ ಬದ್ಧತೆ’ಬೇಕಷ್ಟೆ.
ಚೈತ್ರರಶ್ಮಿ ಗ್ರಾಮೀಣ ಬರಹಗಾರರಿಗೆ ವೇದಿಕೆ ಎಂಬುದು ಸಂತಸದ ವಿಷಯ. ಆದರೆ ಎಲ್ಲೋಕೆಲವರು ಸಂಪಾದಕರ ಒತ್ತಾಯಕ್ಕೋ, ಬಲವಂತಕ್ಕೋ ಬರೆದು ಕಳಿಸ್ತೀರಿ ಅನ್ನಿಸುತ್ತದೆ. ಕೆಲವರಕವನಗಳು ಹೃದಯದಿಂದ ಹುಟ್ಟದೆ, ಬಲವಂತಕ್ಕೆ ಬರೆದು ಜಾಳು ಜಾಳು ಅನ್ನಿಸುವಂತೆ ಇರುತ್ತದೆ.ಇದು ಸಹ್ಯವಲ್ಲ. ಅಂತವರಿಗೆ ನಾನು ಹೇಳೋದಿಷ್ಟೆ. ನಿಮ್ಮ ಪ್ರತಿಭೆಯನ್ನು ಉಳಿಸಿ, ಬೆಳೆಸಿಕೊಳ್ಳಲುನಿಮಗೊಂದು ಒಳ್ಳೆಯ ವೇದಿಕೆ ಸಿಕ್ಕಿದೆ. ಅದನ್ನು ದುರುಪಯೋಗಪಡಿಸಿಕೊಂಡರೆ ’ಸೃಜನಶೀಲತೆ’,’ಚೈತ್ರರಶ್ಮಿ ಬಳಗ’ ಎಂಬೆಲ್ಲಾ ಕನಸುಗಳಿಗೆ ಅರ್ಥವೇ ಇರುವುದಿಲ್ಲ. ಹಾಗೆಯೇ ಇಷ್ಟೆಲ್ಲಾ ಬರಹಗಾರರಿದ್ದೂ,ಇಷ್ಟೆಲ್ಲಾ ಸಮಾನಾಸಕ್ತರಿದ್ದೂ, ಇಷ್ಟೆಲ್ಲಾ ಒಳ್ಳೆಯ ಚಿಂತನೆ, ಕನಸು, ಧ್ಯೇಯಗಳಿದ್ದೂ ಚೈತ್ರ ರಶ್ಮಿ.ಯಂತಹ ಪ್ರಯತ್ನ ನಿಂತುಹೋದರೆ ಅದು ಖಂಡಿತವಾಗಿ ಗೊತ್ತಿದ್ದೂ ನಮಗೆ ನಾವೇ ’ಆತ್ಮವಂಚನೆ’ಮಾಡಿಕೊಂಡಂತಾಗುತ್ತದೆ. ಹಾಗಾಗಿ ನಿಮ್ಮ ಪ್ರಾಮಾಣಿಕ ಪಾಲ್ಗೊಳ್ಳುವಿಕೆ ಅಭಿಮಾನಗಳಿಂದ ’ಚೈತ್ರರಶ್ಮಿ’ಇನ್ನಷ್ಟು ಬೆಳೆಯಲಿ ಎಂದಷ್ಟೇ ಆಶಿಸುವೆ.