ದೇಶಾಭಿಮಾನದ ಪತ್ರಿಕೆ : ಆಗಲಿ ಸಂಸ್ಕೃತಿ ಜಾಗೃತಿದೀವಿಗೆ
September 16th, 2008.
- ಎನ್.ಆರ್. ಹಳವಳ್ಳಿ, ಅಂಕೋಲಾ
ಚೈತ್ರರಶ್ಮಿ ನನ್ನನ್ನು ತಟ್ಟಿ ಎಬ್ಬಿಸಿಕೈಗೆ ಪೆನ್ನು ಹಿಡಿಸದಿದ್ದರೆ ಅಕ್ಷರಗಳೇಮರೆತು ಹೋಗುತ್ತಿತ್ತೇನೋ! ಹೀಗೆಗ್ರಾಮೀಣ ಪ್ರದೇಶದಲ್ಲಿ ಕಾಣದೇ ಕರಗಿಹೋಗುವ ಬರಹಗಾರರನ್ನು ಹೆಕ್ಕಿತೆಗೆಯುವ ಚೈತ್ರರಶ್ಮಿಯ ಪ್ರಯತ್ನಪ್ರಶಂಸನಾರ್ಹ. ಈಗಿರುವಂತೆರಾಷ್ಟ್ರಾಭಿಮಾನ, ಸಂಸ್ಕೃತಿ-ಸಂಸ್ಕಾರಗಳಬಗ್ಗೆ ತಿಳಿಸುವ, ಆ ಮೂಲಕದೇಶಾಭಿಮಾನವನ್ನು ಜಾಗ್ರತೆಗೊಳಿಸುವಪತ್ರಿಕೆಯಾದರೆ ಅದು ಈ ಮೂಲಕನಾವು ರಾಷ್ಟ್ರಕ್ಕೆ ಕೊಡುವ ಅಲ್ಪಕೊಡುಗೆಯಾಗಬಹುದು.
ಒಂದು ಪತ್ರಿಕೆ ಹೇಗಿರಬೆಕು? ಎಂದು ನಿರ್ಧರಿಸುವುದು ತುಂಬಾಕಷ್ಟದ ವಿಚಾರ!. ಯಾಕಂದ್ರೆ ಹಲವು ವಿವಿಧ ಮನಃಸ್ಥಿತಿಯ ಓದುಗರನ್ನುಒಳಗೊಂಡಿರುವ ಪತ್ರಿಕೆ ’ಉತ್ತಮ ಪತ್ರಿಕೆ’ ಎನ್ನಿಸಿಕೊಳ್ಳುವುದು ಸುಲಭದವಿಚಾರವಲ್ಲ. ಇಂದಿನ ದಿನಗಳಲ್ಲಿ ವಾರಕ್ಕೊಂದು ಪತ್ರಿಕೆ ಹುಟ್ಟಿಕೊಳ್ಳುತ್ತಿದೆ.ಹಾಗೇ ಕೆಲವೇ ವರ್ಷಗಳಲ್ಲಿ ಆ ಪತ್ರಿಕೆ ಹೆಸರಿಲ್ಲದಂತಾಗುವುದು ಅಷ್ಟೆ ಸಹಜ!ಆದರೆ ಇದೆಲ್ಲದರ ಮಧ್ಯೆ ಮೂರ್ಖರ ಪೆಟ್ಟಿಗೆ ದಿನದ ಬಹುಭಾಗ ವೇಳೆಯನ್ನು ಹಾಳು ಮಾಡುವುದರಿಂದಓದುವವರೇ ವಿರಳವಾಗುತ್ತಿರುವುದು ತುಂಬಾ ವಿಷಾದನೀಯ!
ಈ ನಡುವೆ ಚೈತ್ರರಶ್ಮಿ ಎಲ್ಲ ಪತ್ರಿಕೆಗಳ ಮಧ್ಯೆ ತನ್ನದೇ ಆದ ರೀತಿನೀತಿಗಳನ್ನು ಮೈಗೂಡಿಸಿಕೊಂಡುಬೆಳೆಯುತ್ತಿದೆ! ’ಚೈತ್ರರಶ್ಮಿ’ಯಲ್ಲಿ ಪ್ರಕಟವಾಗುವ ಬರಹಗಳು ಬಹುತೇಕ ಹೊಸ ಬರಹಗಾರರದ್ದೇ ಆಗಿದ್ದುಹಲವು ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಕಾರಣವಾಗುತ್ತದೆ. ನಾನಂತೂ ನನ್ನ ಅಲ್ಪ ಸ್ವಲ್ಪ ಬರವಣಿಗೆಯನ್ನೂಕೈ ಬಿಟ್ಟು ಹಲವು ವರ್ಷಗಳೇ ಕಳೆದಿದ್ದವು. ಈ ಚೈತ್ರರಶ್ಮಿ ನನ್ನನ್ನುತಟ್ಟಿ ಎಬ್ಬಿಸಿ ಕೈಗೆ ಪೆನ್ನು ಹಿಡಿಸದಿದ್ದರೆ ಬರವಣಿಗೆ ಇರಲಿ, ಅಕ್ಷರಗಳೇಮರೆತು ಹೋಗುತ್ತಿತ್ತೇನೋ! ಹೀಗೆ ಗ್ರಾಮೀಣ ಪ್ರದೇಶದಲ್ಲಿ ಕಾಣದೇಕರಗಿ ಹೋಗುವ ಬರಹಗಾರರನ್ನು ಹೆಕ್ಕಿ ತೆಗೆಯುವ ಚೈತ್ರರಶ್ಮಿಯಪ್ರಯತ್ನ ಪ್ರಶಂಸನಾರ್ಹ. ಆದರೆ ಬಹಳ ಪತ್ರಿಕೆಗಳು, ಬೆಳೆದಂತೆಲ್ಲಹೊಸ ಬರಹಗಾರರ ಬರಹಗಳನ್ನು ಪ್ರಕಟಿಸುವುದನ್ನು ಕಡಿಮೆಮಾಡುತ್ತವೆ. ನಮ್ಮ ಚೈತ್ರರಶ್ಮಿ ಎಂದೂ ಹೀಗಾಗದೇ ಬರಹಗಾರರಉತ್ತಮ ಬರವಣಿಗೆಗೆ ಹೆಚ್ಚಿನ ಆದ್ಯತೆ ಕೊಟ್ಟು ಪ್ರಕಟಿಸುತ್ತಿರುವುದು ಉತ್ತಮ.
ಹಾಗೇ ಪತ್ರಿಕೆಯಲ್ಲಿ ಏನಿರಬೇಕು? ಎಂದಾಗ ಅವರವರಇಷ್ಟಕ್ಕೆ ಸಂಬಂಧಿಸಿ ಕ್ರೀಡಾ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸಿ, ಚಲನಚಿತ್ರಕ್ಕೆ ಸಂಬಂಧಿಸಿದ ಸುದ್ದಿಗಳಿರಲಿ, ರಾಜಕೀಯ ಸುದ್ದಿ ಇದ್ದರೆಚೆನ್ನ! ಎಂದು ಬೇರೆ ಬೇರೆ ಓದುಗರು ಬೇರೆ ಬೇರೆ ಸಲಹೆಗಳನ್ನುಮುಂದಿರಿಸುವುದು ಸಹಜವಾದರೂ ಎಲ್ಲವನ್ನೂ ಒಟ್ಟಿಗೆ, ಕೊಡುವ ಪತ್ರಿಕೆಗಳೇ ಇಂದು ಹೆಚ್ಚಾಗಿಯಾವುದೇ ವಿಷಯದಲ್ಲೂ ಸಂಪೂರ್ಣ ಮಾಹಿತಿ ನೀಡದಂತಾಗಿದೆ. ನಮ್ಮ ಚೈತ್ರರಶ್ಮಿ ಇದೆಲ್ಲದಕ್ಕಿಂತಭಿನ್ನವಾಗಿ, ಈಗಿರುವಂತೆ ರಾಷ್ಟ್ರಾಭಿಮಾನ, ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ತಿಳಿಸುವ ಆ ಮೂಲಕದೇಶಾಭಿಮಾನವನ್ನು ಜಾಗ್ರತೆಗೊಳಿಸುವ ಪತ್ರಿಕೆಯಾದರೆ ಅದು ಈ ಮೂಲಕ ನಾವು ರಾಷ್ಟ್ರಕ್ಕೆಕೊಡುವ ಅಲ್ಪ ಕೊಡುಗೆಯಾಗಬಹುದೇನೋ.
ಪತ್ರಿಕೆಗೆ ಓದುಗರೆಷ್ಟು ಮುಖ್ಯವೋ ಜಾಹಿರಾತುಗಳು ಅಷ್ಟೆ ಅನಿವಾರ್ಯ ಎಂಬುದುಸತ್ಯವಾದರೂ ಚೈತ್ರರಶ್ಮಿಗೆ ಆದಷ್ಟು ಜಾಹಿರಾತುಗಳ ಕರಿನೆರಳು ಬೀಳದಿರುವುದು ಉತ್ತಮ.ಸಾಧ್ಯವಾದರೆ ಉತ್ತಮ ಸದಭಿರುಚಿಯ ನಗೆಹನಿಗಳು, ನಾ ಮೆಚ್ಚಿದ ಪುಸ್ತಕ, ಕರ್ನಾಟಕದಪ್ರೇಕ್ಷಣೀಯ ಸ್ಥಳಗಳ ಮಾಹಿತಿಗಳನ್ನು ಪ್ರಕಟಿಸುವ ಬಗ್ಗೆ ಚಿಂತನೆ ನಡೆಸಬಹುದು.ನಮ್ಮ ಚೈತ್ರರಶ್ಮಿ ಎಷ್ಟೇ ಬೆಳೆದು ದೊಡ್ಡವಳಾದ್ರೂ, ಈಗಿನ ಅಡಿಪಾಯದ ಮೇಲೇ ಬೆಳೆಯುತ್ತಿರಲಿ,ಯಾವುದೇ ಒತ್ತಡ-ಅನಿವಾರ್ಯತೆಗಳಿಗೆ ತಲೆಬಾಗದೇ ತನ್ನದೇ ಸ್ವಂತಿಕೆಯನ್ನು ಉಳಿಸಿಕೊಂಡುಬೆಳೆಯುತ್ತಾ ಕರ್ನಾಟಕದ ಹೆಮ್ಮೆಯ ಪತ್ರಿಕೆಯಾಗಲಿ ಎನ್ನುವುದೇ ನಮ್ಮ ಆಶಯ.