• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನ

    ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಉಣಿಸು ನನಗೆ

    September 16th, 2008.


    - ಭವಾನಿ ಎಚ್.ಎಸ್. ಬಿಕ್ಕೋಡು, ಬೇಲೂರು

    ’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆನೀಡುವೆನು ರಸಿಕ ನಿನಗೆ!’ಹೀಗೆ ’ಸಖಿಗೀತ’ ದಲ್ಲಿ ಬೇಂದ್ರೆಯವರು ಹೇಳುತ್ತಾರೆ. ಓದುವ ರಸಿಕನಿಗೆ, ಸಾಹಿತ್ಯದಸವಿಯುಣ್ಣಿಸುತ್ತಿರುವುದು ನಮ್ಮ ’ಚೈತ್ರರಶ್ಮಿ’.ಈ ನಮ್ಮ ಗೆಳತಿ, ನನಗೆ ಭೇಟಿಯಾದದ್ದು, ಆಕಸ್ಮಿಕವಾಗಿ ಬೆಂಗಳೂರಿನಲ್ಲಿ ನನ್ನ ಸ್ನೇಹಿತರ ಮೂಲಕ,ಈ ದಿನ ನನಗೆ ಚಿರಪರಿಚಿತ ಗೆಳತಿಯಾಗಿದ್ದಾಳೆ. ಒಂದೇ ನಿಮಿಷದ ಪರಿಚಯಕ್ಕೆ, ಈ ಒಲವಿನಗೆಳತಿಯನ್ನು ನನ್ನ ಬಳಿ ಕಳುಹಿಸುತ್ತಿರುವ ನಮ್ಮ ಪ್ರೀತಿಯ ರಾಚಂಗೆ ತುಂಬು ಹೃದಯದ ನಮನ.ಯುವ ಜನತೆಯ ಮಡಿಲಿಗೆ, ನವ ಸಾಹಿತ್ಯದ ಕಂಪನ್ನು ಸೂಸುತ್ತಾ, ಗ್ರಾಮ್ಯದ ನವ ಪ್ರತಿಭಾನ್ವಿತಬರಹಗಾರರನ್ನು ತನ್ಮೂಲಕ ಹುರಿದುಂಬಿಸುತ್ತಿರುವ ಒಲವಿನ ಗೆಳತಿ ’ಚೈತ್ರರಶ್ಮಿ’ಗೆ ಅಕ್ಕರೆಯ ವಂದನೆ.ಅಂತರಂಗದಿಂದ ಭಾವರಶ್ಮಿಯನ್ನು ಹೊರ ಸೂಸುತ್ತ, ಕವಿ ಪರಿಚಯದ, ಕಾವ್ಯಾ ಮೃತವನುಣಿಸುತ್ತಾ, ಚಿಂತನದ ಬೆಳಕಿನ ಹೊಸ ಚೈತನ್ಯವನ್ನು, ಯುವ ಜನತೆಯ ಮನಸ್ಸಿಗೆ, ತುಂಬುತ್ತಿರುವ ’ಚೈತ್ರರಶ್ಮಿ’ಗೆಭಾವಪೂರ್ಣ ಅಭಿನಂದನೆಗಳು. ಯುವಜನತೆಯ ಭಾವನೆಗಳನ್ನು, ಹಂಚಿಕೊಳ್ಳಲು, ’ಚೈತ್ರರಶ್ಮಿ’ ಉತ್ತಮವೇದಿಕೆ. ಸಮಾಜದ ಪರ ಹಿತ ಚಿಂತನೆ ನಡೆಸುತ್ತಿರುವ ಪತ್ರಿಕೆಯು, ಅದಮ್ಯ ಆತ್ಮ ವಿಶ್ವಾಸ, ಧೈರ್ಯ,ಉತ್ಸಾಹಗಳ ಮೂಲಕ, ನವ ತರುಣಿಯಂತೆ ಬೆಳೆಯಲಿ.

    ಚೈತ್ರರಶ್ಮಿಯ ಜುಲೈ ಸಂಚಿಕೆಯ ’ಅಂತರಂಗದಿಂದ’ ಹೊಸ ಸ್ಫೂರ್ತಿ ನೀಡಿತು. ’ಸಮಾಜಕ್ಕಾಗಿದುಡಿಯುತ್ತಿರುವ ಸಾಫ್ಟ್ ಮನಸ್ಸುಗಳಿಗೆ’ ನನ್ನ ಹೃತ್ಫೂರ್ವಕ ನುಡಿನಮನ. ಬೆಳಗಿನಿಂದ ಸಂಜೆಯವರೆಗೆಕಂಪ್ಯೂಟರ್ ಮುಂದೆ ಕುಳಿತು ಅಂತರ್‌ಜಾಲ ಈಜುತ್ತಿರುವ ಹಾರ್ಡ್ ಮನಸ್ಸುಗಳ ನಡುವೆ ಸಮಾಜದಹಿತ ಬಯಸುವ, ಸಮಾಜಕ್ಕಾಗಿ ಮಿಡಿಯುವ ಇಂತಹ ಸಾಫ್ಟ್ ಮನಸ್ಸುಗಳಿವೆಯಲ್ಲ, ಅವರಿಗೆ, ಅವರನ್ನುಪರಿಚಯಿಸಿದ ರಶ್ಮಿಗೆ ಧನ್ಯವಾದ.ನಾನು, ಚೈತ್ರರಶ್ಮಿಯನ್ನು ಬೇಂದ್ರೆಯವರ ಕವನದಲ್ಲಿ ಹೇಳುವಂತೆ ಕೇಳುವುದಿಷ್ಟೇ.’ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ, ಆ ಸವಿಯ ಉಣಿಸು ನನಗೆ!”ಚೈತ್ರರಶ್ಮಿ ಬಳಗ’ ಕ್ಕೆ ನನ್ನ ಅssssಕ್ಕರೆಯ ಶುಭಾಶಯಗಳು.

    ಪ್ರತಿಕ್ರಿಯಿಸಿ :