• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಮನದಮಾತು

  ಮನಸ್ಸಿಗೆ ಧನ್ಯತೆ, ಹೃದಯಕೆ ಆನಂದ

  September 16th, 2008.


  ಸ್ವಾಮಿ ಜಗದಾತ್ಮಾನಂದರ ಆಶೀರ್ವಾದ

  ಚೈತ್ರರಶ್ಮಿಯ ಈ ೩ ವರ್ಷಗಳ ಭಾವಯಾನದಲ್ಲಿ ನಾನು ಹಲವು ಬಾರಿ ಕೆಲವು ಅನಿರೀಕ್ಷಿತ, ಅಚ್ಚರಿಯ ಸಂಭ್ರಮದ ಕಣಗಳಿಗೆ ಸಾಕ್ಷಿಯಾದದ್ದಿದೆ. ಅಂತಹ ಸಂಭ್ರಮಗಳೇ ನನ್ನನ್ನು ಒತ್ತಡದ, ಸವಾಲಿನ ಸನ್ನಿವೇಶಗಳಲ್ಲಿ ಶಕ್ತಿಯುತವಾಗಿ ನಡೆಯುವಂತೆ ಸ್ಫೂರ್ತಿ ನೀಡಿ ಮುನ್ನಡೆಸಿದ್ದು. ಮತ್ತೊಮ್ಮೆ ಅಂತಹದೊಂದು ಸಂಭ್ರಮಕ್ಕೆ ಕಾರಣವಾದದ್ದು ಪೂಜ್ಯ ಸ್ವಾಮಿ ಜಗದಾತ್ಮಾನಂದರ ದೂರವಾಣಿ ಕರೆ. ಪೂಜ್ಯ ಸ್ವಾಮಿ ಜಗದಾತ್ಮಾನಂದರು ತಮ್ಮ ’ಬದುಕಲು ಕಲಿಯಿರಿ’ ಪುಸ್ತಕದ ಮೂಲಕ ನಾಡಿನ ಲಕ್ಷಾಂತರ ಮಂದಿಗೆ ಪ್ರೇರಣೆ ನೀಡಿದವರು. ಪ್ರಸ್ತುತ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿರುವ ನಾಡಿನ ಹಿರಿಯ ಸಂತರು. ನಾನು ನನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ’ಬದುಕಲು ಕಲಿಯಿರಿ’ ಪುಸ್ತಕವನ್ನು ಓದಿ ಪ್ರಭಾವಿತನಾಗಿದ್ದೆ. ಇಂದಿಗೂ ನನ್ನ ಅದೆಷ್ಟೋ ಸವಾಲಿನ ಕ್ಷಣಗಳಲ್ಲಿ ಸ್ಪೂರ್ತಿ ನೀಡಿ ಮುನ್ನಡೆಸುವುದು ಅದೇ. ಪುಸ್ತಕದ ಕರ್ತೃ ಪೂಜ್ಯ ಸ್ವಾಮಿ ಜಗದಾತ್ಮಾನಂದರು ಚೈತ್ರರಶ್ಮಿಯ ಪ್ರಯತ್ನವನ್ನು ಮೆಚ್ಚಿಕೊಂಡು, ನಮ್ಮ ಭಾವಯಾನಕ್ಕೆ ಯಶಸ್ಸು ದೊರೆಯಲೆಂದು ಆಶೀರ್ವದಿಸಿದ್ದು ನಮ್ಮ ಸುಕೃತ. ಪೂಜ್ಯರು, ಹಿರಿಯರು ಪ್ರೇರಣಾದಾಯಕರೂ ಆದ ಪೂಜ್ಯ ಸ್ವಾಮಿ ಜಗದಾತ್ಮಾನಂದಜೀ ಅವರ ಆಶೀರ್ವಾದ ಖಂಡಿತಾ ನಮ್ಮ ಭಾವಯಾನಕ್ಕೆ ಶಕ್ತಿ ತುಂಬುತ್ತದೆ.

  ಪ್ರತಿಕ್ರಿಯಿಸಿ :