• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹಳ್ಳಿಮನೆ ಮಾತು

    ಪ್ರೀತಿ ಎಂಬ ಸುರಿಮಳೆಯೋ ! ಮೋಹವೆಂಬ ಬೆಂಕಿಮಳೆಯೊ !!

    September 17th, 2008.


    - ಕೃತಿಕಾ ಹೆಚ್.ಎಸ್.,ಬೆಂಗಳೂರು

    ’ಪ್ರೀತಿ ಹುಟ್ಟೋದು ಕಣ್ಣಿಂದ’ ಎಂದು ಬಹಳ ಜನರ ಅನಿಸಿಕೆ. ಆದರೆ ನನ್ನ ಪ್ರಕಾರ ಪ್ರೀತಿ ಹುಟ್ಟೋದು ಹೃದಯದಲ್ಲಿ. ಇಂದಿನ ಯುವ ಜನಾಂಗದ ಪ್ರಕಾರ ಪ್ರೀತಿಯ ಉದ್ಭವವಾಗುವುದು ಕಣ್ಣಿನಲ್ಲೇ ಎಂಬುದು ಸತ್ಯದ ಮಾತು. ಪ್ರೀತಿಗೆ ಕೇವಲ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಆಂತರಿಕ ಸೌಂದರ್ಯ ಬಹಳ ಮುಖ್ಯವಾಗುತ್ತದೆ. ನಾವು ಯಾವುದೇ ವ್ಯಕ್ತಿಯನ್ನು ನೋಡಿದಾಗ ಆತನಲ್ಲಿ ಆತನ ಹೊರಗಿನ ಸೌಂದರ್ಯದ ಜೊತೆಗೆ ಆತನ ಆಂತರಿಕತೆ ಹಾಗೂ ವ್ಯಕ್ತಿತ್ವವೂ ಕಾಣುತ್ತದೆ. ಪ್ರೀತಿ ಅಂದ್ರೆ, It’s not just for Timepass. It will lasts of till one’s breath . ಪ್ರೀತಿ ಇಬ್ಬರ ಬದುಕಿನಲ್ಲಿ ಬಾಳ ಜ್ಯೋತಿಯಾಗಿ ಬೆಳಗಬೇಕು. ಈಗಿನ ಯುವ ಜನಾಂಗದವರು ಪ್ರೀತಿ ಅಂದ್ರೆ ಕೇವಲ ಗಂಟೆ ಗಟ್ಟಲೆ ಕಳಸೋ ಎಸ್.ಎಮ್.ಎಸ್., ಪಾರ್ಕ್, ಹೋಟೆಲ್ ಅಂತ ಅಂದುಕೊಂಡಿದ್ದಾರೆ. ನಿಜವಾದ ಪ್ರೀತಿ ಅಂದರೆ ಕಣ್ಣು ಹೃದಯವನ್ನು, ವ್ಯಕ್ತಿತ್ವ, ಸ್ವಭಾವವನ್ನು ಮೆಚ್ಚಬೇಕೇ ವಿನಾಃ ದೇಹವನ್ನಲ್ಲ, ಬಾಹ್ಯ ಸೌಂದರ್‍ಯವನ್ನಲ್ಲ.

    ಪ್ರೀತಿ ಎಂಬುದು ಒಂದು ಮನಸ್ಸು ತನ್ನ ’ಫೀಲಿಂಗ್ಸ್’ ಅನ್ನು ಮುಕ್ತವಾಗಿ, ನಿರ್ಭಯ ಹಾಗೂ ಸಂಕೋಚರಹಿತವಾಗಿ ಇನ್ನೊಂದು ಮನಸ್ಸಿನ ಮುಂದೆ ತೆರೆದಿಡೋ ’ಹೃದಯದ ಮಾತುಗಳು’, ಬಾಹ್ಯ ಸೌಂದರ್‍ಯಕ್ಕೆ ಮಾರು ಹೋಗೋ ಪ್ರೀತಿ ನಿಜವಾದ ಪ್ರೀತಿ ಖಂಡಿತ ಅಲ್ಲ. ಅದು ಕೇವಲ ’ಮೋಹ’. ಒಬ್ಬರ ನಡೆನುಡಿ, ಮನಸ್ಸಿನ ಅಂತರಾಳದ ಭಾವನೆಗಳು ಹಾಗೂ ವ್ಯಕ್ತಿತ್ವ ಅನಂತರ ಅವರ ಹೊರಗಿನ ಸೌಂದರ್ಯವನ್ನು ಮನಸಾರೆ ಮೆಚ್ಚುವುದೇ ಪ್ರೀತಿ. ಒಂದು ಹುಡುಗಿ ಸೊಂಟ ಕಾಣೋ ಹಾಗೆ ಖಿShiಡಿಣ, ಮೈಗೆ ಬಟ್ಟೆ ಹಾಕಿಕೊಂಡು Stitch ಮಾಡಿಸ್ಕೊಂಡ್ಲೇನೋ ಎನ್ನುವ ರೀತಿ Pant ಹಾಕಿ ಬಿಟ್ರೆ ಅಂತವರು ಅವರ ಬಾಹ್ಯ ಸೌಂದರ್ಯ ದಿಂದ ಜನರನ್ನು attract ಮಾಡಬಹುದೇ ವಿನಾಃ ಅವರ ಹೃದಯದಿಂದಲ್ಲ. ಅಂತಹ ಹುಡುಗಿಯರ ಉಡುಪನ್ನು ನೋಡಿದಾ ಕ್ಷಣ ಅವರ ಬಗ್ಗೆ ಪ್ರೀತಿ ಹುಟ್ಟಲ್ಲ. ಬದಲಾಗಿ ಆ ಜಾಗವನ್ನು ಆವರಿಸುವುದು ಕೇವಲ ಕಾಮದ ಭಾವನೆಗಳು ಮಾತ್ರ. ತಮಗೆ ಅರಿವಿಲ್ಲದೆ ನಮ್ಮ ಹೃದಯದಲ್ಲಿ ಪ್ರೀತಿ ಒಂದು ಉನ್ನತ ಸ್ಥಾನ ಪಡೆಯುತ್ತದೆ. ಪ್ರೀತಿಗೆ ಉದ್ದೇಶವು ಬಹಳ ಮುಖ್ಯವಾಗುತ್ತದೆ. ಆದರೆ ಇಂದಿನ ಬಹಳಷ್ಟು ಜನರಲ್ಲಿ ಪ್ರೀತಿ ಎಂಬುದು ತಮ್ಮ ಆಸೆ, ಕಾಮನೆಗಳನ್ನು ತೋರಿಸಿಕೊಳ್ಳು ಕ್ರಿಯೆಯಾಗಿದೆ. ಇಂತಹ ತಪ್ಪು ತಿಳುವಳಿಕೆಯಿಂದ ದೇಹ ಮತ್ತು ಮನಸ್ಸು ಎರಡೂ ಹಾಳಾಗುತ್ತ ಪ್ರೀತಿ ಮಾಡಿದವರಿಗೆ ತಮ್ಮ ಪ್ರೀತಿಯು ಒಂದು ನಿರ್ಧಿಷ್ಟ ಹಂತವನ್ನು ಮುಟ್ಟಬೇಕು, ಮದುವೆ ಎಂಬ ಮೂರು ಅಕ್ಷರದ ಬಂಧದಿಂದ ಕೊನೆಗೊಳ್ಳದೆ ಅದಕ್ಕಿಂತಲೂ ಮೀರಿ ಮುಂದುವರೆಯಬೇಕು ಎಂಬ ಅಭಿಲಾಷೆಯಿರಬೇಕು. ಪ್ರೀತಿ ಜೀವನವನ್ನು ನಡೆಸಲು ಚೈತನ್ಯವನ್ನು ತಂದುಕೊಡುತ್ತದೆ. ತನ್ನಲ್ಲೂ ಜೀವನ ನಡೆಸು ಕಲೆ ಹಾಗೂ, ಮತ್ತೊಬ್ಬರಿಗೆ ಜೀವನಾಧಾರ ಆಗು ಸಾಮರ್ಥ್ಯವಿದ್ದಲ್ಲಿ ಮಾತ್ರ ಪ್ರೀತಿಸಬೇಕು. ಪ್ರೀತಿಗೆ ವಯಸ್ಸಿನ ಎಲ್ಲೆ ಇಲ್ಲ. ಹುಚ್ಚುಕೋಡಿ ಮನಸ್ಸು ಹದಿನಾರರ ವಯಸ್ಸು ಅಂತ ಹೇಳುತ್ತಾರೆ. ಆದರೆ ಈ ವಯಸ್ಸಿನಲ್ಲಿ ಹುಟ್ಟುವುದು ನವಿರಾದ ಭಾವನೆಗಳ ಪ್ರೀತಿಯ ಸುರಿಮಳೆಯೊ ಅಥವಾ ಕೇವಲ ಬಾಹ್ಯ ಸೌಂದರ್ಯಕ್ಕೆ ಮಾರು ಹೋಗೋ ’ಮೋಹವೆಂಬ ಬೆಂಕಿಮಳೆಯೋ?

    ಪ್ರೀತಿ ಎಂಬ ಸುರಿಮಳೆಯೋ ! ಮೋಹವೆಂಬ ಬೆಂಕಿಮಳೆಯೊ !! :- ಈವರೆಗೆ 7 ಪ್ರತಿಕ್ರಿಯೆಗಳು

    1. premaranjini

      That’s correct story of in real life so good.

    2. SHASHI

      it,s realy true becuse iam enjoy this love life thanku

    3. SHASHI

      sorry this is my email ok sir

    4. sudarshan murthy

      sudarshan murthy mamatha

    5. Sateesh Desai

      You have nice thoughts about love.

    6. chidanand

      hi can i take this article for my magazine if you have any problem plz reply me
      its nice

    7. Anil

      Hi.. Ivu Bichchu manassina soopta nudigalu.. nice feelings

    ಪ್ರತಿಕ್ರಿಯಿಸಿ :