• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹನಿಕವನಗಳು

    ಸುಖಿ

    September 15th, 2008.


    - ಕಮಲಾ ಜಿ ಹೆಗಡೆ, ಕೊಂಡದಕುಳಿ,ಕಲ್ಲಬ್ಬೆ ಕುಮಟಾ

    ಗೊರಕೆ, ಗೊರಕೆ, ಗೊರಕೆ

    ಹಾಡು ಹಗಲೇ ಗಡದ್ದೇ

    ಸೊಗಸಾದ ಸುಖ ನಿದ್ದೆ.

    ಜಗುಲಿಮೇಲೆ ಅಂಗಾತ ಮಲಗಿ

    ಅಪ್ಪನ ಗೊರಕೆ ಪುಂಖಾನುಪುಂಖವಾಗಿ.

    ಅಡಿಕೆ ಬೆಲೆ ಕುಸಿತ, ತೆಂಗಿನ ’ನುಸಿ’ರೋಗ

    ಮದುವೆ ಕಾಣದೆ ತಲೆನೆರೆತ ಮಗ

    ಚೊಚ್ಚಲ ಬಾಣಂತನಕೆ ತವರಿಗೆ

    ಬಂದ ಹೆಣ್ಮಗಳು ಇದಾವುದರ,

    ಹಂಗಿಲ್ಲದೇ ಹೊರಟಿಹ ನಿರಂತರ

    ಗೊರಕೆ.

    ಪಕ್ಕದಲ್ಲೇ ಅಮ್ಮನ, ಸಣ್ಣಗೆ ತೂಕಡಿಕೆ,

    ನರಳಿಕೆ ’ಮಕ್ಕಳೇ ಎಲ್ಲೋದಿರೋ’

    ಅಲ್ಲಲ್ಲೆ ಕಾಳಜಿ ’ಸೊರಸೊರ’ ಮೂಗೆಳೆದು

    ಗೋಲಿ ಆಡುವ ಹುಡುಗರ ’ಕಚಪಿಚ’

    ಅಂಗಳದಂಚಿನ ಮರದಿ ಕಾಗೆ

    ಕರ್ಕಶಕೂಗು.

    ಗತವೈಭವದ ಭವ್ಯಕತೆಯ ಹೇಳುತ್ತ

    ಹೇಳಿದ್ದೇ ಹೇಳುತ್ತ ಎತ್ತೆತ್ತಿ, ಎಲೆ ಅಡಿಕೆ

    ಕುಟ್ಟುವ, ಕುಟ್ಟೆ ಕುಟ್ಟುವ ಅಜ್ಜಿಯ

    ಅವಿರತ ಕೊರೆತ

    ಇವೆಲ್ಲವನ್ನೂ…….

    ಮೀರಿ ನಿಂತಿತ್ತು ಅಪ್ಪನ ಅಸಾಧ್ಯ ಗೊರಕೆ.



    ಪ್ರತಿಕ್ರಿಯಿಸಿ :