• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹನಿಕವನಗಳು

    ಬೆಳಗು

    September 15th, 2008.


    - ಸುಂಕನಾಳ ವಿಶ್ವನಾಥ, ಶಿರಸಿ

    ಒಂದು ಮಾಘದ ಮುಂಜಾವು

    ಪಸರಿಸಿದ ಮಬ್ಬಾದ ಮಂಜಿನಲಿ

    ರವಿತೇಜದ ಸುಳಿವೇ ಇಲ್ಲ

    ಪ್ರಕೃತಿಯೊಂದಿಗೆ ರವಿಯ ಸರಸವಿನ್ನೂ…… ?

    ರಾತ್ರಿ ಕಳೆದುದೇ ತಿಳಿಯದೇ!

    ಎತ್ತ ನೋಡಿದರತ್ತ ಶ್ವೇತ

    ವರ್ಣದ ಛಾಯೆ, ಪಟಪಟನೆ

    ಉದುರಿ ಹವಳ ಮಣಿಯು

    ಗೆಳತಿಯ ಹೆರಳುಗಳಂತೆ ಅದುರಿವೆ

    ಎಲೆಗಳು ಸೊಂಪಾದ ಗಾಳಿಗೆ

    ಅಂತೂ ಮೂಡಣದಲಿ ಮೂಡಿದನು

    ರವಿಯು ಕಿರಣ ಬಾಹುಗಳಿಂದ

    ಬಿಗಿದಪ್ಪಿದನು ಲೋಕವ ರವಿಯ

    ಸರಸಕೆ ಮಂಜು ನಾಚಿ

    ನೀರಾಯಿತು ಕಳಚಿ ಬಿದ್ದಿತು ಶ್ವೇತವರ್ಣದ ಪರದೆ,

    ಬೆಳಗು ಹರಿಯಿತು ಸರ್ವದಿಗಂತದೆಡೆಗೆ

    ಮನವು ಉಲಿಯಿತು ಅಲ್ಲೇ ಇದು

    ಬರೀ ಬೆಳಗಲ್ಲೋ ಅಣ್ಣಾ


    ಪ್ರತಿಕ್ರಿಯಿಸಿ :