ಬಾ ಓ ಬೆಳಕೆ
September 15th, 2008.
- ಡಾ|| ನಿವೇದಿತಾ ಹೆಗಡೆ, ಮೈಸೂರು
ಓ ಬೆಳಕೆ ಬಾ ಬೆಳಗು ಮನದಂತರಾಳವನು
ನೀನೋರ್ವ ಬೆಳಗಬಲ್ಲೆ ಹುದುಗಿರುವ
ಕತ್ತಲನು
ಆ ಮತವು, ಈ ಮತವು
ಹೊಡೆದಾಡಲಿದು ನೆಪವು
ಮೂಲ ತತ್ವವನರಿತರೆ ಜಗದ ಹಿತವು
ಛಲವ ಸಾಧಿಸುವ ಬದುಕು
ಜಗದೋದ್ಧಾರಕೆ ತೊಡುಕು
ಮನುಕುಲವೊಂದೆಯಾದರೂ
ತಮ್ಮತಮ್ಮೊಳಗೆ ಒಡಕು
ಶುದ್ಧ ಶ್ರದ್ಧೆಯ ಮನವು ನೈಜತೆ
ತುಂಬಿದ ಭಕ್ತಿ
ಇಷ್ಟೆ ಸಾಕು, ಪಡೆಯಲು
ಸುಖದುಃಖದಿಂ ಮುಕ್ತಿ.
ಓ ಬೆಳಕೆ ಬಾ ಬೆಳಗು ಸನ್ಮಾರ್ಗದೆಡೆಗೆ
ಅಡ್ಡದಾರಿಯಲಿ ತೊಳಲಿರುವ ಈ
ಜನರಿಗೆ
May 29th, 2009 at 8:47 am
channagide kanri… olleya lahari… kattalalli mulugiruva samajakke chandada salina kavi matu