• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಹನಿಕವನಗಳು

    ಬಂಧನ

    September 15th, 2008.


    - ಡಾ|| ರಕ್ಷಾ ರಾವ್ ,ಮೈಸೂರು

    ಆ ಮೋಹಕ ಸಂಜೆಯಲಿ, ಹೊಂಗೆಯ ನೆರಳಿನಲಿ

    ಕುಳಿತಿರಲು ಕಂಡೆನಾ ಹಕ್ಕಿ

    ವೈಭವದಿ ಗರಿಗೆದರಿ, ಭುವಿಯಿಂದ ಗಗನದೆಡೆ

    ಹಾರುತಿದೆ ಸಂತಸ ಉಕ್ಕಿ ||

    ಮೈಯೆಲ್ಲಾ ಹಗುರಾಗಿ, ಮನವೆಲ್ಲಾ ಹೂವಾಗಿ

    ಉಕ್ಕಿತು ಹಾರುವ ಬಯಕೆ

    ಯಾವ ಮೋಹವೂ ಇರದ, ಯಾವ

    ಬಂಧವೂ ಇರದ ತಾರೆಗಳ ಗೂಡಾದ ನಭಕೆ ||

    ಬಳಸಿ ಎಳೆದವು ನನ್ನ ಬಂಧಗಳ ಸರಪಳಿಯು

    ಏರದಂತೆ ಆ ಎತ್ತರಕೆ

    ದುಃಖ ನೋವುಗಳಿರುವ ಮೋಹ ಮಮಕಾರಗಳ

    ಭುವಿಯೆಂಬ ಈ ಕ್ಷಣಿಕ ಜಗಕೆ ||

    ತೇಲಿ ಹೋಯಿತು ಕನಸು ಆ ಕ್ಷಿತಿಜದೆಡೆಗೆ

    ಹಿಡಿದರೂ ಸಿಗದಂತೆ ಕೈಗೆ

    ಒಂಟಿಯಾಗಿಸಿ ನನ್ನ, ಭುವಿಯ ಜಂಜಡದಲ್ಲಿ

    ಕರಗಿಹೋಯಿತಲ್ಲಾ ಹೀಗೆ ||

    ಆದರೂ ಹಿತವಾಗಿ ತುಡಿಯುತಿದೆ ಈ ಮನ

    ಬೇಕೆನಗೆ ಬಂಧಗಳ ಕಟ್ಟು

    ಸಹಕಾರ, ಸಹಬಾಳ್ವೆ, ಪ್ರೀತಿಯ ಬಂಧನವೇ

    ಸುಂದರ ಜೀವನದ ಗುಟ್ಟು ||


    ಪ್ರತಿಕ್ರಿಯಿಸಿ :