ಪ್ರತಿಬಿಂಬ
September 15th, 2008.
- ಸುಲೋಚನಾ, ಶಿರಸಿ
ಇತ್ತೀಚೆಗೆ ಕನ್ನಡಿ
ನೋಡುವುದೆಂದರೆ ಭಯವಾಗುತ್ತಿದೆ,
ಅಲ್ಲಿ ನನ್ನ ಬದಲು
ಅಮ್ಮ ಕಾಣುತ್ತಾಳೆ
ಆ ವೇದನೆ ತುಂಬಿದ ಮುಖ
ಅಪ್ಪನ ಹಿಂಸೆಯನ್ನು
ಗುಟ್ಟಾಗಿಟ್ಟು, ಏನೋ ಹೇಳಲು
ಬಯಸುವ ಕಣ್ಣು,
ಮತ್ತೆ ಮತ್ತೆ ನೋಡಿದರೂ
ಅಮ್ಮನೇ ಕಾಣುತ್ತಾಳೆ
ಅವಳ ಕಣ್ಣೀರಿನೊಂದಿಗೆ
ನನ್ನ ಬದುಕು ಬೆಸೆದಿದ್ದಕ್ಕೊ
ಅಥವಾ,
ಆ ಮೂಕ ವೇದನೆ ಇನ್ನು
ನನ್ನದಾಗಲಿವೆಯೆಂಬ ಸೂಚನೆಯೋ?
ಭಯದಿಂದ ಕನ್ನಡಿ ನೋಡುವುದನ್ನೇ
ಬಿಟ್ಟಿದ್ದೇನೆ.
May 29th, 2009 at 8:49 am
mkaviteya modalina salu hidididuvantide….