ನಿನ್ನ ನೆನಪು
September 15th, 2008.
- ರಕ್ಷಾರಾವ್,ಮೈಸೂರು
ಮೌನ ಕದನದಲೂ ಸೆಳೆವ
ನಿನ್ನ ಕಂಗಳ ಮಿಂಚು
ಬಚ್ಚಿಟ್ಟ ಭಾವಗಳ
ಬಿಚ್ಚಿಡುವ ಕುಡಿನೋಟ
ನಿದ್ದೆಗಳ ಕದ್ದಿರುವ
ಕಿರುನಗೆಯ ಸಂದೇಶ
ಕಣ್ಮುಚ್ಚಿದರೂ ಕಾಡೋ
ನಿನ್ನ ಸ್ಪರ್ಶದ ಪುಳಕ…….
ಬಂದುಬಿಡಲೇ ಗೆಳೆಯಾ
ಎನ್ನೆಲ್ಲಾ ಎಲ್ಲೆಯನು ಮೀರಿ
ಕಾಡುವ ನಿನ್ನ ಕಣ್ಮಿಂಚ
ಹಾದಿಯಲಿ….
ಪುಸ್ತಕದ ಹಾಳೆಯಲೂ
ಸೀರೆಯ ರಂಗಿನಲೂ….
ಬಣ್ಣ ಮಾಸಿದ ಗೋಡೆಯಲೂ
ಬಿಡದೇ ಕಾಡೋ ನಿನ್ನ
ಬಿಂಬವನರಸಿ….
ಬರಲೇನು ನಿನ್ನೆಡೆಗೆ
ಪೌರ್ಣಮಿಯ ಚಂದ್ರನೆಡೆ
ಕೈಚಾಚೋ ಹಸಿದಲೆಗಳಂತೆ
ಮನದಾಳದಿ ಬೇರ್‍ಬಿಟ್ಟ
ಸುಪ್ತ ಉನ್ಮತ್ತ ನೆನಪುಗಳ
ಕಣ್ಣಾಮುಚ್ಚಾಲೆಯಲಿ ನೀನು
ಕಳೆದು ಹೋಗುವ ಮುನ್ನ
ನಿನ್ನ ಕನಸುಗಳಲಿ ನಾ
ಕರಗಿಹೋಗುವ ಮುನ್ನ
ನಾಳೆಗಳು ಕಳೆದು
ನಿನ್ನೆಗಳಾಗುವ ಮುನ್ನ….
May 29th, 2009 at 8:55 am
adbuta kanri intahaddondu kavithe saku jadada musukanna kitteseyalu..
nimma baravanige
akshara
saraswthiya
meravanige…
raksha neu kavya jagattina sundara swpna.. bhava lahari battadirali
May 29th, 2009 at 8:56 am
adbuta kanri intahaddondu kavithe saku jadada musukanna kitteseyalu..
nimma baravanige
akshara
saraswthiya
meravanige…
raksha neu kavya jagattina sundara swapna.. bhava lahari battadirali
December 4th, 2010 at 3:00 am
vaaa….super kanre..
heli bidale ninna hesaru..
hogo modale nanna usiru..
by.venki
January 23rd, 2012 at 11:47 pm
fantastic lines… These are…