ನಾಡಸಿರಿ
September 15th, 2008.
- ಪ್ರಿಯಾ ಎಂ. ಭಟ್,ಕಲ್ಲಬ್ಬೆ, ಕುಮಟಾ
ನಾಡು ನಮ್ಮದು ನದಿಯು ನಮ್ಮದು
ನಮ್ಮದೀ ಕರ್ನಾಟಕ
ನೆಲವು ನಮ್ಮದು ಜಲವು ನಮ್ಮದು
ನಾಡಸಿರಿ ಶುಭದಾಯಕ
ಜಲಲಧಾರೆಯ ಸುಧೆಯ ಕನ್ನಡ
ಹರಿದು ಹರಡಲಿ ನಾಡೊಳು
ಭಾವಭಕ್ತಿಯು ಚಿಮ್ಮಿ ಹೊಮ್ಮಲಿ
ಕನ್ನಡಿಗನ ನರ ನರದೊಳು
ಹಂಪೆ ಹೊನ್ನಿನ ನುಡಿಯ
ಮುಡಿಯಲಿ
ಚೆಲುವ ಚಿನ್ನದ ನಾಡಿದು
ರನ್ನ ಪಂಪರು ಹಾಡಿ ಹರಸಿದ
ಸಿರಿಯ ಸಂಪದ ಬೀಡಿದು
ಸ್ವರ್ಣ ದೀಪವ ಹಿಡಿದು ನಿಂತಿಹ
ಭಾರತಾಂಬೆಯ ಪುತ್ರಿಯು
ಹಚ್ಚಿ ಉರಿಸಲಿ ಭಾವ ದೀವಿಗೆ
ಕನ್ನಡಿಗನ ಮನ ಮನದೊಳು