ಬಾ ಕವಿತಾ
September 15th, 2008.
- ಸುಧಾ.ಎಂ, ಸಿದ್ದಾಪುರ
ನಿನ್ನ ನೆನಹುಗಳಲ್ಲಿ
ನಾನಿರುವೆ ಬಾ ಕವಿತಾ
ನನ್ನ ನೋವುಗಳಲ್ಲಿ ಭಾಗಿಯಾಗಲು ಬಾ
ಹೃದಯದಲಿ ಹೆಪ್ಪುಗಟ್ಟಿದ ಮನಗುದಿಗೆ
ಪನ್ನೀರ ನೀ ಸುರಿದು ತಣ್ಣಗಾಗಿಸು ಬಾ
ನಿನ್ನ ಸ್ನೇಹದಲ್ಲಿ ಸುಂದರ
ಕನಸ ಕಂಡಿರುವ ನಾನು
ವಾಸ್ತವಿಕ ಬದುಕಿಗೆ ದೂರವಾದೆ
ವಿಷದೂಟದ ಹೋರಾಟದಲಿ
ಸತ್ತು ಬದುಕಿ ಬಂದೆ.
ಛಲ ಬಲವನಿತ್ತು ಬದುಕಿಸಿದೆ ಏಕೆ ?
ಸ್ನೇಹ ಸಿಂಚನದಲ್ಲಿ ಮಮತೆಯ
ಮಧುರ ನುಡಿ, ಸ್ವಾತಿ ಮುತ್ತಿನ ಮಳೆಯು
ಸುರಿದಂತೆ ತಂಪಾಯ್ತು ಮನಕೆ
ದೂರ ಹೋಗದಿರು, ಬಿಟ್ಟು ಇರೆನು ನಾನು,
ನನ್ನನ್ನು ಕರೆದೊಯ್ಯೆ ನಿನ್ನ ಜೊತೆಗೆ
ನನ್ನಂತ-ರಂಗವನೆ ತೆರೆದಿಟ್ಟೆ ನಿನ್ನಲ್ಲಿ
ನಿನ್ನಾತ್ಮದಲಿ ನನ್ನ ಸೇರಿಸಿಕೋ ಮತ್ತೆ…..!