ನಿದ್ರೆ
September 15th, 2008.
- ಸರೋಜಿನಿ ಭಟ್,ಚಾಮರಾಜನಗರ
ಮುಗಿದ ಹಗಲಿನ
ಸಿಂಹಾವಲೋಕನದಿ….
ನೋವು ನಿರಾಶೆಗಳ ಮೊತ್ತ
ಮೇಲಾಗಿ ತೋರಿದಾಗ …
ಅಸಹಾಯಕತೆಯ ಬಿಸಿ ಕಂಬನಿ,
ನಿರಾಸೆಯ ನಿಟ್ಟುಸಿರಲ್ಲಿ ತೋಯ್ದು
ಸುಕ್ಕಾದ ಹಾಸಿಗೆಯಲ್ಲಿ ಜೀವ
ಹಿಡಿಯಾಗಿ ತೋರುತಿರಲು…
ಅದೆಲ್ಲಿಂದಲೋ ಬಂದು ತನ್ನ
ತೋಳ್ತೆಕ್ಕೆಯಲ್ಲಿ ನನ್ನ ಬಂಧಿಸುವ
ಆತ್ಮೀಯ ಬಂಧು.