ಆಸೆ- ಕನಸು
September 15th, 2008.
- ನಿಶ್ಚಿತಾ ವಿ. ಬೆಂಗಳೂರು
ಆಸೆಯೆಂಬ ರಂಗೋಲಿ ಜೀವನದ ಮನೆಗೆ
ಕನಸೆಂಬ ತೋರಣವು ಮನೆಯ ಬಾಗಿಲಿಗೆ ||
ತೋರಣದ ಹಸಿರೆಲ್ಲಾ ಬಿಸಿಲಿನಲಿ ಒಣಗುವುದು
ರಂಗೋಲಿ ಹೆಸರೆಲ್ಲಾ ಮಳೆಬಂದು ಅಳಿಸುವುದು
ಅದಕಾಗಿ ನೀನೆಂದೂ ಕೊರಗದಿರು ಕೂತು
ನಿನಗಾಗಿ ಕಾದಿಹುದು ಜೀವನವು ಹೊಸತು ||
ಹೊಸಮಾವಿನೆಲೆ ತೋರಣವ ಮರಳಿ ನೀ ಕಟ್ಟು
ಮತ್ತೆ ಸಿಂಗರಿಸು ಹೊಸ ರಂಗೋಲಿ ಇಟ್ಟು
ಒಳಗಿದ್ದರೂ ನೋವುಗಳ ಸಾವಿರಾರು ಮಳಿಗೆ
ಆಸೆ - ಕನಸುಗಳಿರದೆ ಬದುಕಿಲ್ಲ ಘಳಿಗೆ ||