‘ಚೈತ್ರರಶ್ಮಿ ಪ್ರಕಾಶನ’ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ
November 20th, 2010.
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ ‘ಚೈತ್ರರಶ್ಮಿ’ ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ ‘ಚೈತ್ರರಶ್ಮಿ ಪ್ರಕಾಶನ’ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.
ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಡಿಸೆಂಬರ್ 30 ರ ಒಳಗೆ ತಲುಪುವಂತೆ ಕಳುಹಿಸಬೇಕು. ಡಿಸೆಂಬರ್ 30 ಕೊನೆಯ ದಿನ.
ಕಥೆಗಳನ್ನು ಕಳುಹಿಸಬೇಕಾದ ವಿಳಾಸ:
ರಾಮಚಂದ್ರ ಹೆಗಡೆ.ಸಿ.ಎಸ್.
ಸಂಪಾದಕರು, ಚೈತ್ರರಶ್ಮಿ ಮಾಸಪತ್ರಿಕೆ
`ನೆನಪು’ ನಂ. 33(172/3)
3ನೇ ಸಿ ಅಡ್ಡರಸ್ತೆ, ಕತ್ರಿಗುಪ್ಪ ಮುಖ್ಯರಸ್ತೆ.
ವಿವೇಕಾನಂದನಗರ, ಬೆಂಗಳೂರು 560085
editor@chaitrarashmi.com ಕಳುಹಿಸಬಹುದು.
October 24th, 2011 at 9:32 am
ಮಾನ್ಯರೇ,
ನಾನು ಎಲೆ ಮರೆ ಕಾಯಿಯಾಗಿ ಬದುಕುತ್ತಿರುವ ಬಾಳಿಗೆ ಬೆಳಕಾದವರ ಬಗ್ಗೆ ಬರೆಯಿರಿ ಅಂತ ಏರ್ಪಡಿಸಿದ್ದ ಲೇಖನ ಸ್ಪರ್ಧೆಗೆ ನನ್ನ ಲೇಖನವನ್ನು ಕಳುಹಿಸ ಬಯಸಿದ್ದೆ. ನಾನು ಶಿವಮೊಗ್ಗೆಯ ಶ್ರೀಯುತ ಕೆ.ಪುರುಷೋತ್ತಮ ಭಟ್ಟ ಎಂಬ ನಿವೃತ್ತ ಮಾಸ್ತರರ ಬಗ್ಗೆ ಬರೆದಿದ್ದೇನೆ..ನನ್ನ ಆ ಕಿರುಬರಹವನ್ನು editor@chaitrarashmi.com ಗೆ ಕಳುಹಿಸಿದ್ದೇನೆ. ಆಗಬಹುದೆ? ಬೇರೆ ವಿಳಾಸವಿದ್ದರೆ ನನ್ನ ಮಿಂಚೆ ವಿಳಾಸಕ್ಕೆ ಪ್ರತಿಕ್ರಿತಿಸಬೇಕಾಗಿ ವಿನಂತಿಸುವೆ. ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ,
ಪ್ರಶಸ್ತಿ.ಪಿ, ಸಾಗರ