• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಚುಕ್ಕಿ ಚಿತ್ತಾರ

    ಮಕ್ಕಳಿಗಿರಲಿ ಉತ್ತಮ ಬಾಲ್ಯ

    September 15th, 2008.


    ನಿಜಕ್ಕೂ ದಿಗಿಲಾಗೋದು ಈಗಿನ ಮಕ್ಕಳ ಬಾಲ್ಯವನ್ನು ಕಂಡಾಗ. ತೊದಲೋ ಹಾಗಿಲ್ಲ ಸಂಗೀತ, ತೆವಳೋ ಹಾಗಿಲ್ಲ ಭರತನಾಟ್ಯಕ್ಕೆ ಸೇರಿಸಲು ಸಿದ್ಧರಾಗಿರುವ ತಂದೆತಾಯಿ. ನಮ್ಮ ಮಕ್ಕಳು all rounder ಆಗಿರ್‍ಬೇಕು., ’ಈ competative world ನಲ್ಲಿ survive ಆಗ್ಬೇಕು’ ಅನ್ನುತ್ತಲೇ ಶಾಲೆಯ ಜೊತೆ ಜೊತೆಗೇ ಟ್ಯೂಷನ್ಸ್, ಕಂಪ್ಯೂಟರ್ ಕ್ಲಾಸ್, ಜಿ.ಕೆ ಕ್ಲಾಸ್, ಅಬಾಕಸ್, ಚೆಸ್, ಸ್ವಿಮ್ಮಿಂಗ್, ಡ್ರಾಯಿಂಗ್, ಯೋಗ…….ಸಾಕಾ? ಮಕ್ಕಳ ಬಾಲ್ಯವನ್ನು ಈ ರೀತಿಯೆಲ್ಲ ತಿರುಚಿ ಬಿಡುವ ನಾವು ನಾಳೆದಿನ ವಯಸ್ಸಾದ ಮೇಲೆ ಮಕ್ಕಳು ನಮ್ಮ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ, ನಮ್ಮನ್ನ ಸರಿಯಾಗಿ ವಿಚಾರಿಸಿಕೊಳ್ತಿಲ್ಲ ಅಂತ ಕಂಪ್ಲೇಂಟ್ ಮಾಡೋದು ಅಭಾಸ ಅನ್ನಿಸಲ್ವಾ?

    ಮೊನ್ನೆ ’ತಾರೆ ಜಮೀನ್ ಪರ್’ ಸಿನಿಮಾ ನೋಡಿ ಹೊರಬಂದಾಗ ಮನಸ್ಸಿನಲ್ಲೇನೋ ತುಮುಲ. ಯಾರೋ ನನ್ನ ಬಾಲ್ಯವನ್ನು ಕೆದಕಿದಂತೆ. ಒಂದರ ಮೇಲೊಂದರಂತೆ ಮುತ್ತಿಕ್ಕುತ್ತಿದ್ದ ನೆನಪುಗಳ ದಾಳಿಗೆ ಸಿಕ್ಕಿ ಮನಸ್ಸು ಮೌನವಾಗಿತ್ತು. ಸಿನಿಮಾ ನೋಡುವಾಗ ಯಾರ್‍ಯಾರು ಎಷ್ಟೆಷ್ಟು ಸಾರ್ತಿ ಅತ್ತರು ಅನ್ನೋದನ್ನ ಲೆಕ್ಕ ಹಾಕಿ ಹೇಳುತ್ತಿದ್ದ ಸ್ನೇಹಿತನೊಬ್ಬ ’come on yaar we are grown up’ ಅನ್ನುತ್ತಲೇ ಯಾವುದರಿಂದಲೋ ಪಲಾಯನವಾಗಲು ಯತ್ನಿಸುತ್ತಿರುವಂತೆ ಕಂಡ…..

    ಬಾಲ್ಯ. ಅದರ ನೆನಪೇ ಒಂದು ಹಬ್ಬ. ಒಂದಷ್ಟು ನಗು - ಒಂದಷ್ಟು ಜಗಳ. ಒಂದಷ್ಟು ಅಚ್ಚರಿ- ಒಂದಷ್ಟು ತರಲೆಗಳ ನಡುವೆಯೇ ಒಂದಷ್ಟು ಸಮಸ್ಯೆಗಳ ಸುಳಿ. ಹೌದು ಮಕ್ಕಳಿಗೂ ಸಮಸ್ಯೆಗಳಿರುತ್ತವೆ. ಆದರಿದನ್ನು ಒಪ್ಪಲು ಎಷ್ಟೋ ಹಿರಿಯರು ಸಿದ್ಧರಿಲ್ಲ. .ಅವರಿಗೆಂತಹ ಸಮಸ್ಯೆ ಮಾರಾಯ್ತಿ, ಏನೊಂದು ಜವಾಬ್ದಾರಿನಾ? ಕರ್ತವ್ಯನಾ? ಮಾಡಿಹಾಕ್ಲಿಕ್ಕೆ ಅಮ್ಮ ಇರ್ತಾಳೆ, ತಂದ್ಹಾಕ್ಲಿಕ್ಕೆ ಅಪ್ಪ ಇರ್ತಾನೆ. ಗಟ್ಟಿ ಕೂತ್ಕೊಂಡು ಶಿಸ್ತಿನಿಂದ ಓದಿದ್ರೆ ಆಯ್ತು. ಇನ್ನೆಂತಹ ಸಮಸ್ಯೆ ಅವಕ್ಕೆ? ಅನ್ನೋ ಅಭಿಪ್ರಾಯ ಹಲವರದ್ದು. ವಿಪರ್ಯಾಸ ಅಂದ್ರೆ ಇವ್ರೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಆ ಬಾಲ್ಯದ ಸಮಸ್ಯೆಗಳನ್ನು ದಾಟಿ ಬಂದವರೇ! ನಿಜ ಹೇಳಬೇಕಂದ್ರೆ ಯೌವ್ವನ ಮತ್ತು ನಡುವಯಸ್ಸಿಗಿಂತ, ಬಾಲ್ಯ ಮತ್ತು ವೃದ್ಧಾಪ್ಯದ ಸಮಸ್ಯೆಗಳು ಸೂಕ್ಷ್ಮ. ಸ್ವಸಾಮರ್ಥ್ಯವಿಲ್ಲದೆ ಬೇರೆಯವರನ್ನು ಅವಲಂಬಿಸಿರುವ ಆ ಕಾಲದಲ್ಲಿ ಅವಲಂಬನೆ ಒಂದಿಷ್ಟು ಅಲುಗಾಡಿದರೂ ಸಾಕು ಅಸಹಾಯಕತೆ ತೀವ್ರವಾಗಿ ಕಾಡುತ್ತೆ. ಮನೆಗೆ ನೆಂಟರು ಬಂದಾಗ ಅಮ್ಮ ತನ್ನ ಬಗ್ಗೆ ಗಮನವಹಿಸದಿದ್ದರೆ ಸಾಕು, ಮನಸ್ಸು ಚಡಪಡಿಸಿ ಹೋಗುತ್ತೆ. ಏನೋ ಒಂಥರಾ . ಅಮ್ಮ ತನ್ನನ್ನು ಕಡೆಗಣಿಸ್ತಿದ್ದಾಳೇನೋ, ಅವಳ ದೃಷ್ಟಿಯಲ್ಲಿ ನಾನು ಅಷ್ಟೇನು ಪ್ರಾಮುಖ್ಯ ಅಲ್ಲವೇನೋ ಅನ್ನೋ ಅನುಮಾನ. ಇದೊಂದು ಸಣ್ಣ ಉದಾಹರಣೆಯಷ್ಟೇ. ಇದೆಲ್ಲಕ್ಕಿಂತ ನಂಗೆ ವಿಪರ್ಯಾಸ ಅನ್ನಿಸೋದು ಹೆತ್ತವರ ಡಬಲ್ ಸ್ಟಾಂಡರ್ಡ್ ಬಗ್ಗೆ. ಸದಾ ಇತರೆ ಮಕ್ಕಳ ಜೊತೆ ಮಗುವನ್ನು ಹೋಲಿಸಿ, ಹೀಯಾಳಿಸುವ ಬೈಯ್ಯುವ ಅವ್ರಿಗೆ ಅದೇ ಮಗುವೇನಾದ್ರೂ ಬೇರೆ ಮಕ್ಕಳಿಗೆ ಅವರ ಪಾಲಕರು ಕೊಟ್ಟಿರುವ ಸೌಲಭ್ಯದ ಬಗ್ಗೆ ಮಾತಾಡಿದ್ರೆ ಸಹಿಸಲಾಗದ ಇರಿಸು ಮುರಿಸು. .ನಾವು ಅವರ ಜೊತೆ ಸ್ವಲ್ಪ ಜಾಸ್ತಿ ಮಾತಾಡಿದ್ರೂ ಬಯ್ಯುವ ಅಪ್ಪ ಅಮ್ಮ, ತಾವು ಮಾತ್ರ ಅಜ್ಜ - ಅಜ್ಜಿಗೆ ಎದುರು ಮಾತಾಡೋದು ಯಾಕೆ? ಅವರ ಫ್ರೆಂಡ್ಸ್ ಏನಾದ್ರೂ ಗಾಡಿ, ಮನೆ ತಗೊಂಡ್ರೆ ತಾವೂ ತಗೋಬೇಕು ಅಂತ ಆಸೆ ಪಡೋವ್ರು ನಾನೇನಾದ್ರೂ ಫ್ರೆಂಡ್ಸ್ ಹತ್ರ ಇರೋಂತದ್ದೇನಾದ್ರೂ ಬೇಕು ಅಂದ್ರೆ ಬಯ್ಯೋದ್ಯಾಕೆ?

    ಹೀಗೆ ಅವರ ತಲೆಯಲ್ಲಿ ಹತ್ತಾರು ಪ್ರಶ್ನೆಗಳು. ಎಲ್ಲಾ ಸಂದರ್ಭಗಳಲ್ಲೂ ಇಬ್ಬರಿಗೂ ಒಂದೇ rules apply  ಮಾಡಕ್ಕಾಗಲ್ಲ ನಿಜ. ಆದ್ರೆ ಅದು ಮಕ್ಕಳಿಗೆ ಹೇಗೆ ಅರ್ಥ ಬೇಕು? ಮಕ್ಕಳ ಭವಿಷ್ಯದ ನೆಪ ಹೇಳುತ್ತ, ತಮ್ಮ ಕನಸಿನ ಮೂಟೆಗಳನ್ನು ಅವರ ಮೇಲೆ ಹೊರೆಸಿ, ಮಕ್ಕಳ ವಿದ್ಯಾಭ್ಯಾಸ ಚಟುವಟಿಕೆಗಳನ್ನು ಪ್ರತಿಷ್ಠೆಯ ವಸ್ತುವಾಗಿಸಿ ಕೊಳ್ಳುವ ಹೆತ್ತವರಿಗೆ, ಅದರ ಒತ್ತಡ ತಡೆಯಲಾರದೆ ಕಂಗಾಲಾಗಿರುವ ಮಗುವಿನ ಮನಸ್ಥಿತಿಯನ್ನು ತಿಳಿಯುವ ತಾಳ್ಮೆಯೂ ಇರಲ್ಲ. ಮಗು ಹಾಸಿಗೆ ಒದ್ದೆ ಮಾಡಿದ್ರೆ ಅದಕ್ಕೆ ಬಯ್ಯವ, ಎಲ್ಲರೆದುರೂ ಅದನ್ನು ತಮಾಷೆಯ ವಿಷಯವೆಂಬಂತೆ ಹೇಳಿ ನಗುವ ಹೆತ್ತವರಿಗೆ ಅದರ ಹಿಂದಿರುವ ಕಾರಣದ ಬಗ್ಗೆ ಗಮನವಿರಲ್ಲ.

    ಬಾಲ್ಯದ ಘಟನೆಯೊಂದು ನೆನಪಾಗ್ತಿದೆ. ಚಿಕ್ಕಂದಿನಲ್ಲಿ ನನ್ನ ಸ್ನೇಹಿತೆಯಾಗಿದ್ದವಳೊಬ್ಬಳ ಮನೆಗೆ ಒಬ್ಬ ಯುವಕ ಬರ್ತಿದ್ದ. ಅವನ ಮನೇಲಿ ಬೆಳೀತಿದ್ದ ಕರೀಬೇವಿನ ಸೊಪ್ಪು, ಕಾಕಡ, ಮಲ್ಲಿಗೆ ಕಿತ್ತು ತರಲು ಅವಳಮ್ಮ ಅವಳನ್ನ ಕಳಿಸ್ತಿದ್ರು. ಅವನೊಬ್ಬನೇ ಇರುವಾಗ ಇವಳು ಹೋಗಲು ಹಿಂಜರೀತಿದ್ದಳು. ಅವಳಿಗೆ ಹೊಡೆದು, ಬೈದಾದರೂ ಸರಿ ಅವಳಮ್ಮ ಅವಳನ್ನು ಅಲ್ಲಿಗೆ ಅಟ್ಟುತಿದ್ರು. ಆಮೇಲೆ ನಿಧಾನವಾಗಿ ತಿಳಿದು ಬಂದ ವಿಷಯವೇನೆಂದ್ರೆ ಒಂಟಿಯಾಗಿ ಸಿಕ್ಕಾಗಲೆಲ್ಲ ಅವನು ಅವಳೊಂದಿಗೆ ಅನುಚಿತವಾಗಿ ನಡ್ಕೊಳ್ತಿದ್ದ ಅಪ್ಪಿ ತಪ್ಪಿ ಬಿದ್ದು ಬಂದ್ರೂ ಅದಕ್ಕಾಗಿ ಹೊಡಿಯುವ ಅಮ್ಮನ ಹತ್ತಿರ ಇದನ್ನ ನೇರವಾಗಿ ಹೇಳಲು ಅವಳಿಗೆ ಭಯ. ಪಾಪದ ಹುಡುಗಿ ಎಷ್ಟು ಸಮಯ ಅನುಭವಿಸಿದಳೋ ಗೊತ್ತಿಲ್ಲ ಆ ನರಕವನ್ನ……..

    ಬಾಲ್ಯದಲ್ಲಿ ಎದುರಿಸುವ ಮತ್ತೊಂದು ತೀವ್ರ ಸಮಸ್ಯೆಯೆಂದರೆ ಪಾರ್ಶಿಯಾಲಿಟಿ ಅದು ಮನೇಲಿರಬಹುದು, ಶಾಲೆಯಲ್ಲಿರಬಹುದು. ನನಗದರ ಸ್ಪಷ್ಟ ಅನುಭವವಾಗಿದ್ದು ಶಾಲೆಯಲ್ಲಿ. ಶಿಕ್ಷಕರು ತಮ್ಮ ಪರಿಚಿತರ, ನಗರದಲ್ಲಿ ಪ್ರತಿಷ್ಠಿತರ, ತಮ್ಮ ಧರ್ಮಕ್ಕೆ ಸೇರಿದ ಮಕ್ಕಳನ್ನೂ ಉಳಿದ ಮಕ್ಕಳನ್ನು ಟ್ರೀಟ್ ಮಾಡ್ತಿದ್ದ ರೀತಿಯಲ್ಲಿ ತುಂಬಾ ವ್ಯತ್ಯಾಸವಿರ್ತಿತ್ತು. ಇದರೊಂದಿಗೆ ಹೆಣೆದುಕೊಂಡಿರುವ ಬಾಲ್ಯವನ್ನು ನೆನೆಸಿಕೊಂಡಾಗಲೆಲ್ಲ ಮನಸ್ಸು ಭಾರವಾಗುತ್ತೆ. ಬಿಡಿ ಬೇರೆ ಉದಾಹರಣೆಗಳ ಬಗ್ಗೆ ಯೋಚಿಸಿದಾಗ ಇದು ಗೌಣ. ಅನಾಥರಾಗಿಯೋ, ಮಲತಾಯಿಯ ಕೈ ಕಳಗೋ, ಕುಡುಕ ತಂದೆಯ ಆಶ್ರಯದಲ್ಲೋ, ಚಿಕ್ಕ ಮನಸ್ಸಿನಲ್ಲೇ ಕೆಲಸಕ್ಕೆ ಸೇರಿ ಮಾಲೀಕನಿಂದ ಏಟು ತಿನ್ನುತ್ತಲೋ ಕಳೆದವರ ಬಾಲ್ಯಗಳಿಗೆ ಹೋಲಿಸಿದರೆ ನಾವೇ ಪುಣ್ಯವಂತರು. ಆದರೆ ನಿಜಕ್ಕೂ ದಿಗಿಲಾಗೋದು ಈಗಿನ ಮಕ್ಕಳ ಬಾಲ್ಯವನ್ನು ಕಂಡಾಗ. ತೊದಲೋ ಹಾಗಿಲ್ಲ ಸಂಗೀತ, ತೆವಳೋ ಹಾಗಿಲ್ಲ ಭರತನಾಟ್ಯಕ್ಕೆ ಸೇರಿಸಲು ಸಿದ್ಧರಾಗಿರುವ ತಂದೆತಾಯಿ. ನಮ್ಮ ಮಕ್ಕಳು all rounder ಆಗಿರ್‍ಬೇಕು., . ಈ competative world ನಲ್ಲಿ survive ಆಗ್ಬೇಕು. ಅನ್ನುತ್ತಲೇ ಶಾಲೆಯ ಜೊತೆ ಜೊತೆಗೇ ಟ್ಯೂಷನ್ಸ್, ಕಂಪ್ಯೂಟರ್ ಕ್ಲಾಸ್, ಜಿ.ಕೆ ಕ್ಲಾಸ್, ಅಬಾಕಸ್, ಚೆಸ್, ಸ್ವಿಮ್ಮಿಂಗ್, ಡ್ರಾಯಿಂಗ್, ಯೋಗ…….ಸಾಕಾ? ಮಕ್ಕಳ ಬಾಲ್ಯವನ್ನು ಈ ರೀತಿಯೆಲ್ಲ ತಿರುಚಿ ಬಿಡುವ ನಾವು ನಾಳೆದಿನ ವಯಸ್ಸಾದ ಮೇಲೆ ಮಕ್ಕಳು ನಮ್ಮ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ, ನಮ್ಮನ್ನ ಸರಿಯಾಗಿ ವಿಚಾರಿಸಿಕೊಳ್ತಿಲ್ಲ ಅಂತ ಕಂಪ್ಲೇಂಟ್ ಮಾಡೋದು ಅಭಾಸ ಅನ್ನಿಸಲ್ವಾ? future ನೆಪ ಹೇಳುತ್ತಾ ನಾವು ಮಗುವನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸಬಹುದಾದದ್ರೆ, ಛಿಚಿಡಿಡಿieಡಿ ನೆಪಕೊಟ್ಟು ನಾಳೆ ದಿನ ಅವ್ನು ಫಾರಿನ್‌ಗೆ ಹಾರಿ ಹೋಗುವುದರಲ್ಲಿ ತಪ್ಪೇನು? ನಮ್ಮನ್ನೀಗ ವೃದ್ಧಾಶ್ರಮದಲ್ಲಿ ಕಾಡುವ ಅನಾಥ ಪ್ರಜ್ಞೆಯೇ ಅಲ್ವಾ ಮಗುವನ್ನು ಬೋರ್ಡಿಂಗ್

    ಸ್ಕೂಲ್‌ನಲ್ಲಿ ಕಾಡಿದ್ದು ! .ಜೋ ಕರ್‌ನಿ ವೋ ಭರ್‌ನಿ. ಎಷ್ಟು ನಿಜ ಅಲ್ವಾ?

    - ಚುಕ್ಕಿ

    ಮಕ್ಕಳಿಗಿರಲಿ ಉತ್ತಮ ಬಾಲ್ಯ :- ಈವರೆಗೆ 2 ಪ್ರತಿಕ್ರಿಯೆಗಳು

    1. Raghavendra agarkhed

      ಬಾಲ್ಯದ ಸಮಸ್ಯೆಗಳು, ಅದರಲ್ಲಿ ತಂದೆ ತಾಯಿಯರ ಪಾತ್ರ ಇದರ ಬಗ್ಗೆ ನೀವು ಬರೆದಿರುವ ಕೆಲವು ಅಂಶಗಳು ಮೆಚ್ಚಿಗೆಯಾದವು. ಆದರೆ ಕೆಲವು ಪರಿಸ್ಥಿತಿಗಳಿಗೆ ಅನುಗುಣವಾಗಿ ತಂದೆ ತಾಯಂದಿರು ನಡೆದು ಕೊಳ್ಳಬೇಕಾಗುತ್ತದೆ . ಅಂಥಹ ಸಂದರ್ಭಗಳಲ್ಲಿ ಅವರ ಕೈ ಮೀರಿ ಹೋಗುವ ಎಷ್ಟೋ ಸಂಗತಿಗಳಿರುತ್ತವೆ . ಆದ್ದರಿಂದ ನೀವು ವ್ಯಕ್ತ ಪಡಿಸಿರುವ ಕೆಲವು ಅಂಶಗಳು ಇಲ್ಲಿ ಸರಿ ಹೊಂದುವುದಿಲ್ಲ . ಹಾಗೆ generalize ಮಾಡಲು ಆಗುವುದಿಲ್ಲ . ಪ್ರಸ್ತುತ ಸಾಮಾಜಿಕ, ಸಾಂಸ್ಕೃತಿಕ ಪರಿಸರದ ಮೇಲೆ ಎಷ್ಟೋ ಅಂಶಗಳು ಅವಲಂಬಿತವಾಗಿರುತ್ತವೆ . ತಂದೆ ತಾಯಂದಿರು ಕೆಲವೊಮ್ಮೆ ನಿಮಿತ್ತ ಮಾತ್ರವೇನೋ ಅನ್ನಿಸುವಷ್ಟು ದುಸ್ಥಿತಿ ಬರುವುದರಲ್ಲೂ ಆಶ್ಚರ್ಯವಿಲ್ಲ!!!!!!

    2. Ganga.N Navali

      nimma lekhana nodi bahala khushi aaytu. idanna nodidre gottagutte, makkala manassu tumba mrudu. adakke makkala manassina bagge niga vahisi. As we all kno that “TIT FOR TAT” balyavannu vyarta golisabedi.

    ಪ್ರತಿಕ್ರಿಯಿಸಿ :