• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಚಿಂತನ ರಶ್ಮಿ

  ಬೆಳ್ಳಂಬೆಳಿಗ್ಗೆ ವಧಾಸ್ಥಾನದಲ್ಲಿ ನಿಂತು….

  September 15th, 2008.


  – ಸಂಜಯ್ ಭಟ್ ಬೆಣ್ಣೆ, ಶಿರಸಿ

  ಅಂದು ಬೆಳಿಗ್ಗೆ ಹಾಗಿತ್ತು. ರತ್ತ ತರ್ಪಣವನ್ನೇ ಬೆಳಗಿನ ಉಸಿರಾಗಿಸಿಕೊಂಡ ಕ್ಷೇತ್ರದಲ್ಲಿ ಕಾಲಿಡಬೇಕಾಗಿ ಬಂದಿದ್ದಕ್ಕೆ ಬಹುಶಃ ಜೀವನದ ಕೊನೆಯವರೆಗೂ ವಿಷಾದಿಸುತ್ತೇನೆ. ಕಣ್ಣಂಚಿನಲ್ಲಿ ಹನಿಕೂಡ ನೆನಪಾದಾಗಲೆಲ್ಲ ಸಾಂದ್ರಗಟ್ಟುತ್ತಲೇ ಇರುತ್ತದೆ. ಮಾನವನೆದೆಯಲಿ / ಆರದೆ ಉರಿಯಲಿ / ದೇವರು / ಹಚ್ಚಿದ ದೀಪ || ರೇಗುವ ದನಿಗೋ / ರಾಗವು ಒಲಿಯಲಿ / ಮೂಡಲಿ / ಮಧುರಾಲಾಪ ಎಂಬ ಸಾಲುಗಳಲ್ಲಿ ಪರಮ ನಂಬಿಕೆ ಇಟ್ಟ ನಾನು ಆ ಚಳಿಗಾಲದ ಬೆಳ್ಳಂಬೆಳಿಗ್ಗೆ ಸಾವೆಂಬ ಆಕ್ರಂದನದ ಪರಮ ಉತ್ತುಂಗದಲ್ಲಿ ರಕ್ತವನ್ನು ಛಿಲ್ಲನೆ ಚಿಮ್ಮಿಸಿ ಆ ಮೂಕ ಜೀವಗಳು ವಿಲವಿಲನೆ ಒದ್ದಾಡಿ ಸ್ಥಬ್ಧವಾಗುವ ಆ ದೃಶ್ಯ ನನಗೆ ಅರಗಿಸಿಕೊಳ್ಳಲಾರದೇ ಹೋಗಿತ್ತು. ಪರಮಾಶ್ಚರ್ಯ ಸಹಿತ ಸಖೇಧ ಸಂಗತಿ ಏನೆಂದರೆ ಎಲ್ಲರ ಮನೆ ಅಂಗಳದಿಂದ ಮುಂಜಾವಿನಲ್ಲಿ ಧೂಪದ ಪರಿಮಳ ರಂಗೋಲಿಯ ರಂಗು ಕಂಡು ಬಂದರೆ (ಈಗ ಅದೂ ಇಲ್ಲಬಿಡಿ) ಶಿರಸಿ ಬಸ್ ನಿಲ್ದಾಣದ ಹಿಂಭಾಗ ಪ್ರತಿದಿನ ತುಂಬ ಉತ್ಸಾಹದಿಂದ ಬೆಳಗು ಮೂಡುತ್ತದೆ. ಆದರೆ ಅಲ್ಲಿಂದ ಬರುವುದು ರಕ್ತದ ರಂಗೋಲಿ, ಮಾಸದ ಆರತಿ, ಅಸಹ್ಯವಾಸನೆಯ ಧೂಪ, ಎಲ್ಲರ ಮನೆಯಲ್ಲೂ ದೇವರನಾಮ ಸ್ಮರಣೆ ಕೇಳಿ ಬಂದರೆ ಅಲ್ಲಿಂದ ಬರುವುದು ಬೀಸು ಮಚ್ಚುಗಳು ಮಾಂಸ ಕತ್ತರಿಸುವ ಕೊಚ ಕೊಚ ಶಬ್ಧ. ಅಲ್ಲಿ ನಿಂತ ಇಪ್ಪತ್ತು ನಿಮಿಷಗಳ ಅವಧಿ ನನ್ನ ಬದುಕಿನ ವಿಚಾರ ಧಾರೆಯ ಹರಹನ್ನೇ ಕದಡಿಬಿಡುವ ಒಂದು ಭರ್ಜರಿ ಬರೆ ಹಾಕಿತ್ತು.

  ನಿನ್ನೆ ಇವತ್ತು, ಈಗ ಮತ್ತು ನಾಳೆಕೂಡ ಔಷಧಿಗೆ ಬೇಕು ನಾಟಿ ವೈದ್ಯಕ್ಕೆ ಬೇಕು. ಕುಡಿಯಲುಬೇಕು, ಬೆಣ್ಣೆ ತುಪ್ಪಕ್ಕೆ ಬೇಕು, ಕುರಿ ಹಾಲೇ ಆಗಬೇಕು, ಕೋಣನ ರಕ್ತವೇ ಆಗಬೇಕು, ಹಸುವಿನ ಹಾಲೇ ಬೇಕು ಒಟ್ಟೂ ಬೇಕೇ ಬೇಕು ಎಂದು ತೆಗೆದುಕೊಂಡು ಹೋಗುತ್ತೇವೆ. ಆ ಪಾಪದ ಪ್ರಾಣಿ ತನ್ನ ಸಂಕಟ, ವಿಷಾದ ಕೊನೆಗೆ ಅಂತಿಮ ಉಸಿರಿನ ಇಷಾರೆಯನ್ನೂ ಮಾಡಲಾಗದೇ ಗೋಣು ಮುರಿದುಕೊಂಡು ಬಿದ್ದಿರುತ್ತದೆ. ಅಲ್ಲಿ ನಾವು ಪ್ರೀತಿಯಿಂದ ಮೈದಡವಿದ್ದ ಅಕ್ಕರೆಯಿಂದ ಮೇವು ತಿನ್ನಿಸಿದ್ದ, ಲಲ್ಲೆಯಿಂದ ಮುದ್ದು ಮಾಡಿದ್ದ, ಮನೆಯ ತೆಂಗಿನಮರಕ್ಕೆ ಗೊಬ್ಬರ ಕೊಟ್ಟಿದ್ದ ಮೂಕ ಜೀವಿ ಹೇಳಿಕೇಳುವ ದಾತಾರರಿಲ್ಲದೇ ಈ ಕ್ಷಣದಲ್ಲಿ ಸಾವು ತನ್ನ ಮುರಕೊಂಡು ತಿನ್ನುತ್ತದೆ ಅಂತ ತಿಳಿಯದೆ ನಿಂತಿದ್ದರೆ, ಮನಸಿರುವ ಯಾರಿಗಾದರೂ ಚುಳ್ ಎನಿಸುತ್ತದೆ.

  ಎಲ್ಲಕ್ಕಿಂತ ಗಮನಿಸಿ ನಮ್ಮೆದುರೇ ಸಜೀವವಾಗಿ ಇರುವ ಜೀವಿಯೊಂದು ನಮ್ಮೆದುರೇ ಗತಪ್ರಾಣ ಅಲ ಹತಪ್ರಾಣವಾಗುವ ರೀತಿಯಿದೆಯಲ್ಲ ಅದು ಮನಕಲಕುವಂಥದ್ದು. ಆಗ ಕಡಿದ ಆ ಜೀವಗಳ ದಿಟ್ಟಿಸಿದರೆ ಕುಡಿದ ಹಾಲು, ಉಂಡ ಮಜ್ಜಿಗೆ, ಸವಿದ ತುಪ್ಪಗಳೆಲ್ಲ ಹೊಟ್ಟೆಯಲ್ಲಿ ನಿಷ್ಠುರವಾಗಿ ನರ್ತಿಸಿದಂತಾಗುತ್ತದೆ. ಆ ನಿರ್ಜೀವ ರುಂಡದ ಎರಡು ಕಣ್ಣುಗಳೆಡೆಯಲ್ಲಿ ಒಂದು ಅವ್ಯಕ್ತ ಭೀತಿ, ಅನುಭವಿಸಿದ ವಿಶ್ವಾಸದ್ರೋಹದ ಮಡುಗಟ್ಟಿದ ದುಃಖ ಎಲ್ಲ ಸೇರಿ ಹಲ್ಕಿಸಿದು ಹಂಗಿಸಿದಂತಾಗುತ್ತದೆ. ಅಲ್ಲಿ ಏಳುವ ಒಂದೇ ಪ್ರಶ್ನೆ ನೀನ್ಯಾರಿಗಾದೆಯೋ ಎಲೆ ಮಾನವ!? ಅಲ್ಲಿ ಕಡಿಯುವುದು ಬಹುಸಂದರ್ಭದಲಿ ಕುರಿ-ಕೋಳಿಯಾಗಿರುತ್ತದೆ. ಗೋವನ್ನೂ ಕಡಿದು ದಕ್ಕಿಸುವವರಿದ್ದಾರೆ. ಗೋವಿರಲಿ-ಕುರಿ-ಕೋಳಿಗಳಿರಲಿ ಗೋವಿನ ಬಗೆಗಿರುವ ಪ್ರೀತಿ ಗೌರವ, ಅದರ ಒಂದು ಮಾನಸಿಕ ಬಂಧ ಸಾಮೀಪ್ಯ ಅಲ್ಲಿರುತ್ತದೆ. ಮೌಲ್ಯಗಳಿಂದ ಕಟ್ಟಿದ್ದ ನಂಬಿಕೆಯೊಂದು ಇದ್ದಕ್ಕಿದಂತೆ ಅಪ್ಪಚ್ಚಿಯಾಗಿ ಬಿಡುತ್ತದೆ. ಇಲ್ಲಿ ಎಲ್ಲರೂ ನಮಾಜು, ನಮಸ್ತೆ, ಪೂಜೆ ಮಾಡಿ ಬರುವವರೇ, ನಂತರದ್ದೆಲ್ಲ ನರಕದ ದಾರಿ. ಇರಲಿ ಹೊಟ್ಟೆಪಾಡು ಕುಲಕಸುಬು ಅಂತಿಟ್ಟುಕೊಳ್ಳೋಣ. ನನಗಂತೂ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ದೇಶದಲಿ ಕುಲಕಸುಬು ಹೆಸರಿಗೆ ಮಾತ್ರ. hidden activity ಬೇರೆಯೇ ಇದೆ.

  ಈ ದೇಶದಲ್ಲಿ ಸ್ವಾತಂತ್ರ ಪೂರ್ವದಲ್ಲಿ ೨೦೦೦ವಿದ್ದ ವಧಾಸ್ಥಾನಗಳು ಸ್ವಾತಂತ್ರೋತ್ತರದ ಷಷ್ಟ್ಯಬ್ಧಿಯಲಿ ೩೫,೦೦೦ ಮಿಕ್ಕಿವೆ. ಎಲ್ಲೂ ಕಾನೂನು ಪಾಲನೆ ಆಗುತ್ತಿಲ್ಲ. ಕನಿಷ್ಠ ಕಡಿಯುವಾಗ ಒಂದು ಪ್ರಜ್ಞೆ ತಪ್ಪಿಸು ಔಷಧಿಯನ್ನು ಇಂಜೆಕ್ಟ್ ಮಾಡುವುದಿಲ್ಲ. ಅದು ಹೋಗಲಿ ರೋಗರುಜಿನಗಳಿದ್ದಾವೆಯೇ ಎಂದೂ ನೋಡುವುದಿಲ್ಲ. ಹಿಡಿ-ನಿಲ್ಲಿಸು-ಕಡಿ-ತಿನ್ನು ಇದು ಸೂತ್ರ. ನಾನು ದೇಶ ಸುತ್ತಿಲ್ಲದಿರಬಹುದು. ಉತ್ತರ ಕನ್ನಡದ ಮೂರು ವಧಾಸ್ಥಾನ, ಅಂಧ್ರದ ಒಂದು ವಧಾಸ್ಥಾನ, ಗೋವಾದ ಒಂದು ವಧಾಸ್ಥಾನ ನೋಡಿದ್ದೇನೆ. ಎಲ್ಲೂ ನಿಯಮಗಳಿಲ್ಲ, ನೀತಿಯಂತೂ ಮೊದಲಿಲ್ಲ. ಮತ್ತು ಭಾರತದ ಬಹುತೇಕ ರಾಜ್ಯಗಳ ಮಾಂ ತಿನ್ನುವವರ ಆಯುಷ್ಯ ತಿನ್ನದವರಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ ವಿಶ್ವದಲ್ಲಿ ಕೂಡ. ಮಾಂಸಾಹಾರಿಗ ಆರೋಗ್ಯ ಮಟ್ಟವೂ ಶಾಖಾಹಾರಿಗಳಿಂತ ಕನಿಷ್ಠವಾದದ್ದೇ. ಆದರೆ ಮಾಂಸ ತತ್ಕಾಲ ಶಕ್ತಿದಾತ ಮಾತ್ರ. ನಾನು ಅಲ್ಲಿಗೆ ಹೋಗಿದ್ದು ಕುರಿಯ ಮೆಲುಕಿನ ಚೀಲದ ನೀರು ತರಲು. (೯೫% ಜೀರ್ಣವಾದ ಸೆಗಣಿ ನೀರಿನಂತಹ ಆಹಾರ) ಯಾಕೆಂದರೆ ನನ್ನ ಭಾವನೆ ಆರ್ಥಿಕತೆ ಎಲ್ಲ ಮೇಳೈಸಿದ, ಧಾರ್ಮಿಕ ಭಾ ನೆಲೆಯಾದ ಬೆಲೆಕಟ್ಟಲಾಗದ ಗರ್ಭಿಣಿ ’ಆಕಳು’ ತನ್ನ ಜೀರ್ಣಾಂಗ ವ್ಯವಸ್ಥೆಯ ನಿಷ್ಕ್ರಿಯತೆ (ಮತ್ತೆ ಮೇವು ಜಿಗಿದು ಜೀರ್ಣವ್ಯೂಹದ ಪುನರುತ್ಥಾನದ ಶಕ್ತಿ ಇರಲಿಲ್ಲ) ಯಿಂದ ಸಾವಿನಂಚಿಗೆ ಬಂದಿತ್ತು. ಕೊನೆಯ ಹಂತದ ಸರಳ ಮತ್ತು ಪರಿಣಾಮಕಾರಿ ಔಷಧಿಯೆಂದರೆ ಕುರಿ ಮೆಲುಕು. ಕುರಿ ಮೆಲುಕು ಅಂದರೆ ಕುರಿ ಸೇವಿಸಿದ ಆಹಾರ ಪಚನವಾಗಿ ಜಠರದ ಪಕ್ಕದ ಮೆಲುಕಿನ ಚೀಲದಲ್ಲಿ ನೀರಾಗಿ ಸಂಗ್ರಹವಾಗಿರುತ್ತದೆ ಮತ್ತು ಈ ರಸದಲ್ಲಿ ಹಸಿವು ಜೀರ್ಣಕ್ರಿಯೆ ಹೆಚ್ಚಿಸುವ ಹೆಚ್ಚಿನ ಪ್ರಮಾಣದ ಯೀಸ್ಟ್‌ಗಳಿರುತ್ತವೆ. ನಾನು ಎರಡು ಜೀವ ಉಳಿಸಲು ಅಳಿದ ಜೀವದ ದೇಹರಸ ತಂದರೆ, ಅವರು ಮನುಷ್ಯ ಜೀವಗ ತೆವಲು ತೀರಿಸಲು ಹಲವು ಜೀವಗಳನ್ನು ಅಳಿಸಿದ್ದರು.

  ಇವತ್ತಿಗೂ ಆ ದೃಶ್ಯ – ಆ ಶಕ್ತಿ – ಆ ಮಾಂಸ, ಒಳಗಿನ ವಿಭಿನ್ನ ಧಾತುಗಳೆಲ್ಲ ಕಣ್ಮುಂದೆ ಒಂದು ಹೊಟ್ಟೆಯಲ್ಲಿ ಹಾರೆ-ಒನಕೆಗಳಿಂದ ಅವಲಕ್ಕಿ ಕುಟ್ಟಿದಂತಾಗುತ್ತದೆ. ಅದನ್ನು ನೆನೆಸಿಕೊಂಡರೂ ಸಾಕು ತಿನ್ನುವವರ ಹೊಟ್ಟೆಯಲ್ಲಿ ಮೇಕೆ ಮೇ,, ಎನ್ನಬಾರದೆ, ಆಕಳಿಕೆಯಲಿ ಆಕಳು ಕೆಮ್ಮ ಬಾರದೆ, ಒದ್ದಾಡಬಾರದೇ ಎನ್ನಿಸುತ್ತದೆ.

  ವಂದೇ ಗೋಸಮಾನಸಂಕುಲಂ ||

  ಬೆಳ್ಳಂಬೆಳಿಗ್ಗೆ ವಧಾಸ್ಥಾನದಲ್ಲಿ ನಿಂತು…. :- ಈವರೆಗೆ ೧ ಪ್ರತಿಕ್ರಿಯೆ

  1. ಮಹೇಶ

   ಇದಕ್ಕೆಲ್ಲ ಉತ್ತರ ಮಾಂಸ ಭಕ್ಷಕರನ್ನು ದೂರುವುದರಲ್ಲಾಗಲೀ ಅಥವಾ ಅಥವಾ ಅದರ ಬಗ್ಗೆ ದುಃಖಿಸುವುದರಲ್ಲಾಗಲೀ ಇಲ್ಲ. ನಮ್ಮನ್ನು ನಾವೇ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಂಡರೆ ಇದಕ್ಕೆ ಪರಿಹರ ಸಿಗಬಹುದೆಂದು ನನ್ನ ಅನಿಸಿಕೆ:

   ೧. ಫಲವತ್ತತೆ ಕಳೆದುಕೊಂದ ಹಸುಗಳನ್ನು ಸಾಕುವಷ್ಟು ನಾವು ಸಂಪತ್ತನ್ನು (ಹುಲ್ಲುಗಾವಲು/ಹಸುರು) ನವು ಉಳಿಸಿಕೊಂಡಿದ್ದೇವೆಯೆ?
   ೨. ತೋಟಗಾರಿಕೆ ನೆಪದಲ್ಲಿ ಹಸಿರು ಬೆಟ್ಟಗಳನ್ನೆಲ್ಲ ಸೊಪ್ಪಿನ ಬೆಟ್ಟಗಳನ್ನಾಗಿ ಮಾಡಿ ದನಗಳಿಗೆ ಮೇವಿನ ಕೊರತೆ ಉಂಟು ಮಾಡಿದ್ದು ನಾವೇ (ಸಸ್ಯಾಹಾರಿಗಳು) ಅಲ್ಲವೆ?
   ೩. ಸಾಕಷ್ಟು ಹಸುರಿದ್ದರೆ ಸಾಕಲಾಗದ ಹಸುಗಳನ್ನು ಕಟುಕನಿಗೆ ಮಾರುವ ಅನಿವಾರ್ಯತೆ ನಮಗೆ ಬರುತ್ತಿತ್ತೆ?
   ೪. ಲಾಭದ ಅಸೆಗೆ ಬಿದ್ದು ನಾವು ಹಸುವಿನ ಹಾಲನ್ನು ಕೇವೆಲ ಮಾರಾಟಕ್ಕಾಗಿ ಉತ್ಪಾದಿಸುತ್ತಿರುವುದು ತಪ್ಪಲ್ಲವೆ?
   ೫. ಕರೆಯುವ ಹಸುವನ್ನು ನಾವು ಕಟುಕನಿಗೆ ಮಾರುತ್ತೇವೋ ಅಥವ ಬಡವನಿಗೆ ಉಚಿತವಾಗಿ ಕೊಡುತ್ತೇವೆಯೋ?

   ನನ್ನ ಪ್ರಕರ ಈ ಎಲ್ಲಾ ಸಮಸ್ಯೆಗಳು ನಾವು ಲಾಭದ ಆಸೆಗೆ ಬಿದ್ದು ನಮ್ಮ ನೈಸರ್ಗಿಕ ಸಂಪತ್ತನ್ನು ಹಾಳುಗೆಡವಿದ ಫಲ ಹಾಗೂ ನಮ್ಮ ನಮ್ಮಲ್ಲಿ ಒಗ್ಗಟ್ಟಿನ ಕೊರತೆ. ಇನ್ನಾದರೂ ನಮ್ಮ ಪೂರ್ವಿಕರು ನಡೆಸಿದ ಪ್ರಕ್ರಿತಿಯೊಂದಿಗಿನ ಪರಿಪೂರ್ಣ ಜೀವನ ಸಗಿಸೋಣ.. ತಂತ್ರಜ್ಞಾನದ ಬೆನ್ನು ಬಿದ್ದರೆ ಮರೀಚಿಕೆಯ ಬೆನ್ನು ಹತ್ತಿದಂತಾದೀತು ಅಲ್ಲವೆ?

  ಪ್ರತಿಕ್ರಿಯಿಸಿ :