• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಚಿಂತನ ರಶ್ಮಿ

  ಪ್ರೀತಿಯೆಂಬುದು ಪ್ರದರ್ಶನವಲ್ಲ:ಅದೊಂದು ಮಧುರ ಅನುಭೂತಿ

  September 15th, 2008.


  – ಪ್ರಿಯಾ. ಎಂ. ಭಟ್ ಕಲ್ಲಬ್ಬೆ, ಕುಮಟಾ

  ಪ್ರೇಮವೊಂದು ಅದ್ಬುತ ’ಭಾವಯಾನ’. ಪ್ರೇಮವೆನ್ನುವುದು ಭಾವನೆಗಳಿಗೆ ಜೊತೆಗೂಡುವ ಒಂದು ಅನುಭೂತಿ. ವ್ಯಾಲೆಂಟೇನ್ಸ್ ಡೇ ಗೆ ಸೀಮಿತವಾಗುವ, ಊರು ಪಾರ್ಕು ಸುತ್ತುವ, ಸಿನಿಮಾ ಐಸ್‌ಕ್ರೀಮ್ ಗಳಲ್ಲಿ ಮುಗಿಯುವ ’ಐ‌ಔಗಿ‌ಇ’ ಗೂ ವಿಶ್ವಜನ್ಯವಾದ ಸೃಷ್ಟಿ ಸಂಕೇತವಾದ ಪ್ರೇಮಕ್ಕೂ ವ್ಯತ್ಯಾಸವಿದೆ.

  ’ಚೈತ್ರರಶ್ಮಿ’ ಯ ಭಾವಯಾನ ಹೀಗೊಂದು ಹೊಸ ಹೊಸ ದೃಷ್ಟಿಕೋನಗಳಿಗೆ ವಿಚಾರ ವಿನಿಮಯಗಳಿಗೆ ಅವಕಾಶವಾಗುವುದಾದಲ್ಲಿ ಮೊದಲು ಪತ್ರಿಕೆಯನ್ನು ಅಭಿನಂದಿಸಿ ಆರಂಭಿಸುತ್ತೇನೆ. ಸಾಹಿತ್ಯವೆನ್ನುವುದು ಅಭಿವ್ಯಕ್ತಿಯ ರೂಪವಾದರೆ ಒಂದು ವಿಧದಲ್ಲಿ ’ಆನಂದ’ ದ ರಸಾನುಭವಕ್ಕೆ ಸ್ಪೂರ್ತಿಯೂ ಹೌದು. ಯಾವುದೇ ಒಬ್ಬ ಲೇಖಕನ ಅದ್ಬುತ ಕೃತಿಯನ್ನು ಓದುವಾಗಿನ ’ಮನತುಂಬುವಿಕೆ’ ಅಥವಾ ಭಾವಸ್ಪಂದನ ನಮ್ಮ ಪುಟ್ಟ ಪತ್ರಿಕೆಯಿಂದಲೂ ಉಂಟಾದರೆ ಅದಕ್ಕೆ ಸಾಟಿ ಯಾವುದು? ಪ್ರತಿಬಾರಿ ಈ ಭಾವನೆಯಿಂದ ಸಂಚಿಕೆ ಕೈ ಸೇರಿದಾಗ ಬರೀ ಮನತುಂಬುವುದಷ್ಟೇ ಅಲ್ಲ ತಲೆಯೊಳಗೆ ಕೊರೆಯುತ್ತದೆ ಪ್ರಶ್ನೆಗಳ ಸರಮಾಲೆ.

  ಈeeಟiಟಿgs ಗಳ ಬಗ್ಗೆ ಅದ್ಬುತ ವಿಚಾರ ಸರಣಿ ವ್ಯಕ್ತಪಡಿಸುವ ವ್ಯಕ್ತಿಯೊಬ್ಬ ಪ್ರೇಮವನ್ನು ’ಮೂರ್ಖತನ’ವೆಂದು ಸಾರಾಸಗಟಾಗಿ ತಳ್ಳಿಹಾಕುತ್ತಾ, ಮತ್ತೊಮ್ಮೆ ಅದೇ ಭಾವನೆಗಳ ಬೆನ್ನೇರಿ ಪ್ರೀತಿಯ ಕಾವ್ಯಕ್ಕೆ ತೊಡಗುತ್ತಾನೆ. ಇಂತಹದೊಂದು ವಿರುದ್ಧವೂ ವೈಚಾರಿಕವೂ ಆದ ತತ್ವಗಳ ಯೋಚನೆಗೆ ನಾವು ಬಿದ್ದಿದ್ದೇವೆಂದರೆ ಸಮಾಜದ ಶ್ರೇಯೋಭಿವೃದ್ದಿ ಸಾಧ್ಯವಿದ. ಎಲ್ಲಿ ’ಮೆಟೀರಿಯಲಿಸಂ’ ತನ್ನ ಕೈಚಾಚಿಕೊಳ್ಳುತ್ತಿದೆಯೋ ಅಲ್ಲೇ ಭಾವಯಾನದ ದೀಪ ಹೊತ್ತಿಕೊಂಡರೆ ಅಂತಹ ಸಂಸ್ಕೃತಿ ಅದು ನಿಂತ ನೀರಾಗುವುದಿಲ್ಲ. ಬದಲು ಬೆಳೆಯುತ್ತದೆ. ಬೆಳೆಸುತ್ತದೆ. ಒಂದು ಪುಟ್ಟ ವಾಕ್ಯ ನಮ್ಮನ್ನೆಷ್ಟು ಗಾಢ ಚಿಂತನೆ ಹಚ್ಚಬಲ್ಲುದೆಂದು ನೀವೇ ಯೋಚಿಸಿ. ನಮ್ಮವರಿಗೆ ಭಾವಗಳನ್ನು (ಈeeಟiಟಿgs) ಸೋಪಾನಗಳನ್ನಾಗಿ ಮಾಡಿಕೊಂಡು ಮೇಲೇರುವ ಬಗೆ ಗೊತ್ತಿಲ್ಲ. ಭಾವಗಳೆಂದರೆ ’ಪ್ರೇಮ’ ಎಂದುಕೊಳ್ಳುವುದು ಮೂರ್ಖತನವೆನ್ನದೇ ವಿಧಿಯಿಲ್ಲ ನಿಜವಲ್ಲವೆ? ಭಾವನೆಗಳೆಂದರೆ ’ಪ್ರೇಮ’ ವೊಂದೇ ಯಾಕಾಗಬೇಕು? ಈ ಭಾವಗಳನ್ನ ಆನಂದವಾಗಿಸಿಕೊಳ್ಳಲು ಅದು ಪ್ರೇಮವಾಗಿರ ಲೇಬೇಕೆಂದೇನಿಲ್ಲ . ಅರಳುವ ಹೂ, ಚಿಗುರುವ ಮೊಳಕೆ, ಬೆಳಗಿನ ಸೂರ್ಯ, ಮಂಜಿನ ಹನಿಯ ಮೇಲೆ ಪ್ರತಿಫಲಿಸಿದ ರಶ್ಮಿ, ಕತ್ತಲೆಯ ಒಳಗಿನ ಮೌನ, ಸಮುದ್ರದ ಮೇಲಿನ ತಂಗಾಳಿ, ಅಲೆಗಳ ಮೇಲಿನ ಮುತ್ತು ಇವೆಲ್ಲವನ್ನು ಆನಂದಿಸಬಲ್ಲವ ಭಾವಜೀವಿ. ಅಮ್ಮನ ಮಡಿಲು, ಅಕ್ಕನ ಸೆರಗು ತಮ್ಮನ ಕೀಟಲೆ, ಗೆಳತಿಯ ಗುದ್ದು, ಗುರುಗಳ ಬೈಯ್ಗುಳಗಳಲ್ಲೂ ಭಾವದ ಒಲುಮೆ ಕಾಣಬಹುದು. ಇವೆಲ್ಲವನ್ನು ಸೋಪಾನವಾಗಿಸಿಕೊಂಡು, ವಾಸ್ತವದ ಬದುಕಿನತ್ತ ನಡೆಯಬಲ್ಲವನೇ ನಿಜವಾಗಿ ಗೆಲುವಿನ ದಾರಿ ಹಿಡಿಯುತ್ತಾನೆ. ಹೀಗಿದ್ದಾಗಲೂ ನಾನು ಪ್ರೇಮವೆನ್ನುವುದು ಮೂರ್ಖತನ ಎನ್ನುವುದನ್ನು ಪೂರ್ಣವಾಗಿ ಒಪ್ಪುದಿಲ್ಲ.

  ಪ್ರೇಮವೆನ್ನುವುದು ಭಾವನೆಗಳಿಗೆ ಜೊತೆಗೂಡುವ ಒಂದು ಅನುಭೂತಿ. ಇಂದಿನ ’ಐ‌ಔಗಿ‌ಇ’ ಗಳಿಗೆ ಈ ಪ್ರೇಮದ ಅರ್ಥ ಗೊತ್ತಿಲ್ಲ. ವ್ಯಾಲೆಂಟೇನ್ಸ್ ಡೇ ಗೆ ಸೀಮಿತವಾಗುವ, ಊರು ಪಾರ್ಕು ಸುತ್ತುವ, ಸಿನಿಮಾ ಐಸ್‌ಕ್ರೀಮ್ ಗಳಲ್ಲಿ ಮುಗಿಯುವ ’ಐ‌ಔಗಿ‌ಇ” ಗೂ ವಿಶ್ವಜನ್ಯವಾದ ಸೃಷ್ಟಿ ಸಂಕೇತವಾದ ಪ್ರೇಮಕ್ಕೂ ವ್ಯತ್ಯಾಸವಿದೆ. ನಮ್ಮ ಸಮಾಜದ ತಮಾಷೆಯೆಂದರೆ ಇದೇ. ಗಂಡ ಹೆಂಡತಿಯ ನಡುವೆ ಬೇರುಬಿಟ್ಟಿರುವುದು ಪ್ರೇಮ. ಆದರೆ ಅವರೆಂದೂ ಅದನ್ನು ಹೇಳಿಕೊಳ್ಳುವುದೂ ಇಲ್ಲ. ಆಚರಿಸುವುದೂ ಇಲ್ಲ. ಪ್ರದರ್ಶಿಸುವುದೂ ಇಲ್ಲ. ಆದರೆ ಗಂಡಹೆಂಡತಿ ಆಗುತ್ತೇವೆಂಬ (ಅದು ೯೯% ಆಗೋದಿಲ್ಲ) ಕಲ್ಪನೆಯಲ್ಲಿ ಪ್ರೇಮಿಗಳು ಅದನ್ನು ಪ್ರದರ್ಶಿಸುತ್ತಾರೆ !. ಹೇಳಿಕೊಳ್ಳುತ್ತಾರೆ!. ಅದೇ ಪ್ರೇಮವೆಂದು ಪ್ರಚಾರ ಪಡೆದು ಕೊಳ್ಳುತ್ತದೆ. ಪ್ರೇಮವೆನ್ನುವುದು ಮದುವೆಯಲ್ಲಿ ಆರಂಭಗೊಳ್ಳಬೇಕಾಗಿದ್ದು ಆದರೀಗ ಪ್ರೇಮ ಪ್ರಕರಣಗಳು ಮದುವೆಯಲ್ಲಿ ಮುಕ್ತಾಯ ಗೊಳ್ಳುತ್ತವೆ ! ಎಂಥಾ ವಿಪರ್‍ಯಾಸ ! ಪ್ರೀತಿಗೂ ಪ್ರೇಮಕ್ಕೂ ನಡುವೆ ಒಂದು ಪುಟ್ಟ ಚುಕ್ಕೆಯಷ್ಟು ವ್ಯತ್ಯಾಸವಿರಬಹುದು. ಪ್ರೀತಿ ಎಲ್ಲರಿಗೂ ಕೊಡಬಹುದು. ಪ್ರೇಮ ಹಾಗಲ್ಲ. ಅದು ವಿಶೇಷ ವ್ಯಕ್ತಿಗಳಿಗೆ ಸೀಮಿತ. ಪ್ರೇಮದಲ್ಲಿ ಸೃಷ್ಟಿ ನಿಯಮವಿದೆ. ಕರ್ತವ್ಯ ಹಕ್ಕು, ಮೋಹ, ಕಾಮ ಎಲ್ಲವೂ ಇದೆ. ಬಹುಶಃ ಈ ವೇಗದ ದಿನಗಳಲ್ಲಿ ಪ್ರೇಮದ ಬಗ್ಗೆ ವಿಚಾರ ಮಾಡುವಷ್ಟು ತಾಳ್ಮೆ ಯಾರಿಗೂ ಇರುತ್ತಾ ಇಲ್ಲವೇನೋ ಅನ್ನಿಸುತ್ತದೆ. ’ಲವ್’ ನ ಮೊದಲ ವ್ಯಾಖ್ಯೆ ’ಆಕರ್ಷಣೆ ’ ಗೊಳಗಾಗುವುದು. ಒಂದಿಷ್ಟು ಜಾಣ್ಮೆಯ ಮಾತುಗಳನ್ನಾಡಿ ಒಲಿಸಿಕೊಳ್ಳುವುದು ’ಲವ್’ ಆಗಬಹುದೇ ವಿನಃ ಪ್ರೇಮವಾಗೋದು ಕಷ್ಟ. ಇಂದಿನ ಸಿನಿಮಾಗಳು, ಟಿ.ವಿ. ಮಾಧ್ಯಮಗಳೂ ಈ ’ಲವ್’ ನ ಅರ್ಥವನ್ನೆ ಇದೇ ಥರ ಬಿಂಬಿಸಿ ’ಲವ್’ ಅಂದರೆ ಊರು ಸುತ್ತೋದು, ಕನಸು ಕಾಣೋದು, ಅಪ್ಪ ಅಮ್ಮನ ವಿರೋಧಿಸಿ ಅಥವಾ ಕದ್ದು ಓಡಿಹೋಗೋದು, ಒಂದಷ್ಟು ವಿರೋಧಗಳ ನಡುವೆ ಹೀರೋಗ ಳಾಗುವುದು ಅಂತಲೇ ತೋರಿಸುತ್ತಿದ್ದಾರೆ. ಬೆಳೆಯುವ ಅರಳುವ ಮುಗ್ದ ಮನಸುಗಳ ಮೇಲೆ ಈ ಮಾಧ್ಯಮಗಳ ಪ್ರಭಾವದಿಂದಾಗಿಯೇ ಪ್ರೇಮ ಅರ್ಥ ಕಳೆದು ಕೊಳ್ಳುತ್ತಿದೆಯೇನೋ ಅನ್ನಿಸುತ್ತದೆ ನನಗೆ. ಇಷ್ಟೆಲ್ಲದರ ನಡುವೆಯೂ ಪ್ರೇಮವೊಂದು ಅದ್ಬುತ ’ಭಾವಯಾನ’. ಎಂಥ ಕಲ್ಲು ಮನಸಿನಲ್ಲೂ ರಾಗವೇಳಿಸಬಲ್ಲ ಬದುಕಿನ ಅಗತ್ಯವೂ ಅನಿ ವಾರ್‍ಯತೆಯೂ ಹೌದು. ತುಂಬಾ ಖಾಸಗಿಯಾದ ಜೀವನ, ಕುಟುಂಬ ವ್ಯವಸ್ಥೆಯ ತಳಪಾಯವಾಗಿ ಪ್ರೇಮ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯು ಇರುತ್ತದೆಂಬುದರಲ್ಲಿ ಮಾತಿಲ್ಲ. ಹಾಗಾಗಿ ಪ್ರೇಮಕ್ಕೆ ಜಯವಾಗಲಿ.

  ಪ್ರೀತಿಯೆಂಬುದು ಪ್ರದರ್ಶನವಲ್ಲ:ಅದೊಂದು ಮಧುರ ಅನುಭೂತಿ :- ಈವರೆಗೆ ೧ ಪ್ರತಿಕ್ರಿಯೆ

  1. chandru

   premada bhage chanagi tilissediri

  ಪ್ರತಿಕ್ರಿಯಿಸಿ :