• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ವಿಚಾರ ರಶ್ಮಿ

  ವಿಚಾರ ರಶ್ಮಿ


  time September 17, 2008

  ‘ನೂಪುರ ಭ್ರಮರಿ’ಗೆ ಮೊದಲ ವರ್ಷದ ಸಂಭ್ರಮ

    – ರಾಚಂ     ’ನೂಪುರ ಭ್ರಮರಿ’ ನರ್ತನ ಜಗತ್ತಿನ ಪರಿಭ್ರಮಣಕ್ಕೆ ಒಂದು ವರ್ಷನೂಪುರ ಭ್ರಮರಿ …ನರ್ತನ ಜಗತ್ತಿಗೊಂದು ಪರಿಭ್ರಮಣ ’ನೂಪುರ ಭ್ರಮರಿ- ನರ್ತನ ಜಗತ್ತಿಗೊಂದು ಪರಿಭ್ರಮಣ’ ಎಂಬ ಒಂದು ವಿಭಿನ್ನ ಕನಸು ಮೈತಳೆದದ್ದು ಒಂದು ವರ್ಷದ ಹಿಂದೆ. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಎಂ.ಎ ಪದವೀಧರೆ ಮನೋರಮಾ ಬಿ.ಎನ್ ಅವರ ಈ ವಿಶಿಷ್ಟ ಕನಸು ’ನೂಪುರ ಭ್ರಮರಿ’ ಎಂಬ ನೃತ್ಯ ಕ್ಷೇತ್ರದ ದ್ವೈಮಾಸಿಕವಾಗಿ ರೂಪತಳೆದು ಕಳೆದ ಒಂದು ವರ್ಷದಿಂದ ನೃತ್ಯಾಸಕ್ತರ, ನೃತ್ಯಕ್ಷೇತ್ರದ ಹಿರಿಯರ ಮೆಚ್ಚುಗೆಗೆ ಪಾತ್ರವಾಗಿ […]

  time September 17, 2008

  ದೇಶ ಕಾಯುವ ಯೋಧರು ನೆನಪಾಗಲಿ ಒಮ್ಮೆ

  (ಯೋಧ ಕ್ಯಾಪ್ಟನ್ ವಿಜಯಂತ್ ಥಾಪರ್ ತಂದೆ ಬರೆದ ಪತ್ರ) ಪ್ರಿಯ ರಾಮಚಂದ್ರ, ಕ್ಯಾಪ್ಟನ್ ವಿಜಯಂತ್ ಥಾಪರ್ ಕುರಿತು ನೀವು ಬರೆದ ವಿಚಾರಪೂರ್ಣ, ಅಭಿಮಾನ ಪೂರ್ವಕ ಈ-ಮೇಲ್ ನೋಡಿದೆ. ಧನ್ಯವಾದ. ಕಾರ್ಗಿಲ್ ಸಮರ ಕಳೆದ ಎಂಟು ವರ್ಷಗಳ ನಂತರವೂ ಹುತಾತ್ಮ ಯೋಧರನ್ನು ನೆನೆವ ನಿಮ್ಮಂತಹ ದೇಶವಾಸಿಗಳೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಕೃತಜ್ಞರಾಗಿದ್ದೇವೆ. ನಮಗಾಗಿ, ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ. ವಿಜಯಂತ್ ನಂತಹ ಸಾವಿರಾರು […]

  time September 17, 2008

  ಮಾಸ್ತಿ ಆಸ್ತಿ ಅನ್ನಿಸೋದೇ ಇದಕ್ಕೆ!

  – ಚಕ್ರವರ್ತಿ ಸೂಲಿಬೆಲೆ ನಮ್ಮಲ್ಲಿ ಬಹಳ ಜನರಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತರು ಅಂತಷ್ಟೇ ಗೊತ್ತು. ಇನ್ನು ಸ್ವಲ್ಪ ಬಲ್ಲವರು ಅವರು ಬರೆದ ಕೃತಿಗಳ ಬಗ್ಗೆ ಮಾತನಾಡಿಯಾರು. ಆದರೆ, ಅವರ ಮಾನವೀಯ ಮುಖದ ಅರಿವಿರೋರು ಮಾತ್ರ ಬಹಳ ಕಡಿಮೆ ಜನ. ಬಹಳ ಹಿಂದಿನ ಮಾತು. ಮಾಸ್ತಿಯವರು ತಮ್ಮ ಗೆಳೆಯರೊಡನೆ ಮನೆಯಿಂದ ಹೊರ ಹೋಗ್ಲಿಕ್ಕೆ ತಯಾರಿ ನಡೆಸಿದ್ರು. ಎಂದಿನಂತೆ ಒಪ್ಪವಾಗಿ ವಸ್ತ್ರ ಧರಿಸಿ, ಗತ್ತಿನಿಂದ ಹೊರಗಡಿ ಇಡಲು ಅನುವಾದರು. ಅವರು ಹೊಸ್ತಿಲು ದಾಟುವಷ್ಟರಲ್ಲಿ ಎದುರಿಗೆ […]

  time September 17, 2008

  ಸಿಪಾಯಿ ದಂಗೆ ಅಂತ ಕರೆದರೆ ರಾಷ್ಟ್ರೀಯ ಅವಮಾನ

  “ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ೧೫೦ ವರ್ಷ” ’೧೮೫೭ ಸಿಪಾಯಿದಂಗೆ’ ಹಾಗಂತಲೇ ಬ್ರಿಟಿಷರು ಅದನ್ನು ಕರೆದಿದ್ದರು. ಬ್ರಿಟಿಷ್ ಇತಿಹಾಸವೂ ಹಾಗಂತಲೇ ಹೇಳುತ್ತದೆ. ನಮ್ಮ ಇತಿಹಾಸದ ಪಠ್ಯಗಳೂ ಅದೇ ಗುಲಾಮಿತನವನ್ನು ಮುಂದುವರಿಸಿವೆ. ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರ ಅಸ್ತಿತ್ವವನ್ನು ಬುಡಸಹಿತ ಅಲ್ಲಾಡಿಸಿದ ಅತ್ಯಂತ ಶಕ್ತಿಶಾಲಿ ಸಂಘರ್ಷವದು. ತಮ್ಮ ಅಡಿಯಾಳಾಗಿದ್ದ ಜನರು ಸ್ವಾತಂತ್ರ್ಯಕ್ಕಾಗಿ ಸಿಡಿದೆದ್ದು ರಕ್ತ ಚೆಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ ಬ್ರಿಟಿಷರು ಅದನ್ನು ’ದಂಗೆ’ ಅಂತ ಕರೆದಿದ್ದು ಸಹಜವೇ. ಆದರೆ ನಮ್ಮದೇ ತಾಯಿಯ ಮುಕ್ತಿಗಾಗಿ ನಮ್ಮದೇ ನಾಡಿನ ದಾಸ್ಯ […]

  time September 17, 2008

  ಮೂರು ತುಂಬಿದ ಕಿಶೋರಿಗೆ ಪುಟ್ಟದೊಂದು ಮುಕುಟ

  ನಿಜಕ್ಕೂ ಖುಷಿಪಡಲು ಕಾರಣವಿದೆ. ನಮ್ಮ ಸೃಜನಶೀಲತೆಯ ಹುಡುಕಾಟದ ತಿಂಗಳ ಪತ್ರಿಕೆ ’ಚೈತ್ರರಶ್ಮಿ’ಗೆ ದೆಹಲಿಯ ’ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್‍ಸ್ ಫಾರ್ ಇಂಡಿಯಾ’ (ಆರ್ ಎನ್ ಐ KARKAN/೨೦೦೬/೧೯೧೦೯)ದ ಮಾನ್ಯತೆ ದೊರೆತಿದೆ. ಆ ಮೂಲಕ ನಮ್ಮ ಒಂದೂವರೆ ವರ್ಷಗಳ ಪ್ರಯತ್ನಕ್ಕೆ ಯಶಸ್ಸು ದೊರೆತಂತಾಗಿದೆ. ಪತ್ರಿಕೋದ್ಯಮ ಜಗತ್ತಿನಲ್ಲಿ ಆರ್.ಎನ್.ಐ ಪಡೆಯುವುದೇನೂ ದೊಡ್ಡ ಸಾಧನೆ ಅಲ್ಲವಾದರೂ ಈ ಜಡ್ಡುಗಟ್ಟಿದ ಸರಕಾರೀ ವ್ಯವಸ್ಥೆಯಲ್ಲಿ ದುಡ್ಡು ಮತ್ತು ಶಿಫಾರಸ್ಸು ಎರಡೂ ಇಲ್ಲದ ಸಾಮಾನ್ಯನೊಬ್ಬನಿಗೆ ಅದು ಅತೀ ದೊಡ್ಡ ಸವಾಲೇ ಸರಿ. ದಾಖಲೆ ಪತ್ರಗಳನ್ನು ಹಿಡಿದು […]

  time September 17, 2008

  ಪ್ರೇಮಕವಿಗೆ ಪ್ರೀತಿಯ ಭೋಪರಾಕ್

  ’ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ ಬೆಳಕಾಗಲಿ, ತಂಪಾಗಲಿ ನಿನ್ನೊಲವಿನ ಒಳಮನೆ’. ಇಂತಹ ಅಮೋಘ ಸಾಲುಗಳ ಆ ಸುಂದರ ಹಾಡನ್ನು ಕೇಳುವಾಗ ಇದು ನಮ್ಮೊಲವಿನ ಮಾತು, ನಮ್ಮೊಳಗಿನ ಹಾಡು, ನಮ್ಮೆದೆಯ ಪಿಸುಮಾತೇ ಇದು ಎನಿಸುವಷ್ಟು ಅದು ಕಾಡುತ್ತದೆ. ಪ್ರೀತಿಯ ಬಗ್ಗೆ, ಪ್ರೇಮದ ಬಗ್ಗೆ ಇದಕ್ಕಿಂತ ಸರಳವಾಗಿ, ಇದಕ್ಕಿಂತ ಹೃದಯಸ್ಪರ್ಶಿಯಾಗಿ ಬರೆಯಲು ಸಾಧ್ಯವೇ ಇಲ್ಲವೇನೋ ಎನ್ನಿಸುವಷ್ಟು ಮನಮುಟ್ಟುವಂತೆ ಬರೆದವರು ಕನ್ನಡದ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ. ಬದುಕಿನುದ್ದಕ್ಕೂ ಪ್ರತಿಕೂಲ ಪರಿಸ್ಥಿತಿಯಲ್ಲೇ ಹೋರಾಟ ನಡೆಸುತ್ತಾ ಬಂದರೂ ನೋವನ್ನು ನುಂಗಿ ತಮ್ಮ ನಲಿವನ್ನು […]

  time September 17, 2008

  ಹತಾಶೆಗೊಳದಿರು, ಓ ಧೀರಾತ್ಮನೆ

  ಸ್ವಾಮಿ ವಿವೇಕಾನಂದರ ಪ್ರತಿಭೆಯ ಮುಖಗಳು ಅನೇಕ. ಸಂತನಾಗಿ, ದಾರ್ಶನಿಕನಾಗಿ, ವೀರಸನ್ಯಾಸಿಯಾಗಿ ಅವರು ನಮಗೆ ಸುಪರಿಚಿತ. ಆದರೆ ಕವಿಯಾಗಿ, ಗದ್ಯಲೇಖಕರಾಗಿ, ಕಲಾವಿಮರ್ಶಕರಾಗಿ, ಸಂಗೀತಜ್ಞರಾಗಿ ಅವರ ಸ್ವೋಪಜ್ಞವಾದ ಕೊಡುಗೆ ಗಮನೀಯವಾಗಿದ್ದರೂ ಈ ನಿಟ್ಟಿನಲ್ಲಿ ನಡೆದ ಅಧ್ಯಯನಗಳು ವಿರಳ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರೇ ಬರೆದ ’ಇನ್ ಸರ್ಚ್ ಆಫ್ ಗಾಡ್ ಅಂಡ್ ಅದರ್ ಪೊಯಮ್ಸ್’ ಇಂಗ್ಲೀಷ್ ಕವನ ಸಂಕಲನದ ಕನ್ನಡಾನುವಾದ ’ವಿವೇಕಾನಂದ ಕವಿತಾವಳಿ’ ಯಿಂದ ಆಯ್ದ ಸ್ಫೂರ್ತಿದಾಯಕ ಕವನವೊಂದನ್ನು ಇಲ್ಲಿ ನೀಡಿದ್ದೇವೆ. ಇದು ಸ್ವಾಮೀಜಿಯವರ ಜನ್ಮದಿನದ (ಜನವರಿ ೧೨) ಪ್ರಯುಕ್ತ […]