• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನ

  ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನ


  time September 16, 2008

  ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಉಣಿಸು ನನಗೆ

  – ಭವಾನಿ ಎಚ್.ಎಸ್. ಬಿಕ್ಕೋಡು, ಬೇಲೂರು ’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆನೀಡುವೆನು ರಸಿಕ ನಿನಗೆ!’ಹೀಗೆ ’ಸಖಿಗೀತ’ ದಲ್ಲಿ ಬೇಂದ್ರೆಯವರು ಹೇಳುತ್ತಾರೆ. ಓದುವ ರಸಿಕನಿಗೆ, ಸಾಹಿತ್ಯದಸವಿಯುಣ್ಣಿಸುತ್ತಿರುವುದು ನಮ್ಮ ’ಚೈತ್ರರಶ್ಮಿ’.ಈ ನಮ್ಮ ಗೆಳತಿ, ನನಗೆ ಭೇಟಿಯಾದದ್ದು, ಆಕಸ್ಮಿಕವಾಗಿ ಬೆಂಗಳೂರಿನಲ್ಲಿ ನನ್ನ ಸ್ನೇಹಿತರ ಮೂಲಕ,ಈ ದಿನ ನನಗೆ ಚಿರಪರಿಚಿತ ಗೆಳತಿಯಾಗಿದ್ದಾಳೆ. ಒಂದೇ ನಿಮಿಷದ ಪರಿಚಯಕ್ಕೆ, ಈ ಒಲವಿನಗೆಳತಿಯನ್ನು ನನ್ನ ಬಳಿ ಕಳುಹಿಸುತ್ತಿರುವ ನಮ್ಮ ಪ್ರೀತಿಯ ರಾಚಂಗೆ ತುಂಬು ಹೃದಯದ ನಮನ.ಯುವ ಜನತೆಯ ಮಡಿಲಿಗೆ, ನವ ಸಾಹಿತ್ಯದ ಕಂಪನ್ನು ಸೂಸುತ್ತಾ, ಗ್ರಾಮ್ಯದ ನವ […]

  time September 16, 2008

  ಸೃಜನಶೀಲತೆಯ ಹುಡುಕಾಟ ನಿರಂತರವಿರಲಿ

  – ನವೀನ ಭಟ್, ಗಂಗೋತ್ರಿ ಶೇವ್ಕಾರ್ ’ಚೈತ್ರರಶ್ಮಿ’ ಒಬ್ಬ ಕನಸುಗಾರನ, ಕಲಾ ಕುಸುಮವಾಗಿಗಂಧಿಸುತ್ತಿರುವ ಸುಂದರ ಪುಪ್ಪ. ಪತ್ರಿಕೆಯೊಂದು ನೂರೆಂಟು ಬಗೆಯ ಮನಸ್ಸುಗಳಿಗೆ ಇಷ್ಟವಾಗುವಂತೆ ಜೀವಿಸಬೇಕಾದಾಗ ಕೆಲವುಸಾಮಾನ್ಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ವಿಪರ್ಯಾಸವೆಂದರೆ, ಇಂದಿನ ಬಹುತೇಕಪತ್ರಿಕಾ ಪ್ರಪಂಚಕ್ಕೆ ಹಣ ಹಾಗೂ ಜನಪ್ರಿಯತೆಯ ಹೊರತಾಗಿ, ಪತ್ರಿಕೆಯೊಂದರ ಸಾಮಾನ್ಯ ನಿಯಮ,ಹಾಗೂ ಕರ್ತವ್ಯಗಳ ಬಗ್ಗೆ ಆಸ್ಥೆಯಿಲ್ಲ. ಆದರೆ ಇಂತಹ ಪ್ರಪಂಚದಲ್ಲಿ ನಮ್ಮ ರಶ್ಮಿ, ಹಣದ ಜನಪ್ರಿಯತೆಯ‌ಉದ್ದೇಶವನ್ನು ಗೌಣವಾಗಿಸಿಕೊಂಡು ಸೃಜನಶೀಲತೆ ಅನ್ನುವ ಜೀವಂತಿಕೆಗಾಗಿ ದುಡಿಯುತ್ತಿರುವುದು ಅತ್ಯಂತ‌ಇಷ್ಟವಾಗುವ ಮೊದಲ ವಿಚಾರ. ಕೇವಲ – ಮಾಹಿತಿ, ದೈನಿಕ […]

  time September 16, 2008

  ಸಾಹಿತ್ಯ ಪ್ರೀತಿ ಹೆಚ್ಚಲಿ ಸಮಾಜ ಮುಖಿಯಾಗಲಿ

  -ವಿಶ್ವನಾಥ ಹೆಗಡೆ ಸುಂಕಸಾಳ, ಶಿರಸಿ ಚೈತ್ರರಶ್ಮಿ’ನಮ್ಮ ಪತ್ರಿಕೆ’.ಓದುಗರಿಂದಲೇ ರಚಿತವಾಗಿ‌ಒಳ್ಳೆಯ ಓದುಗಬರಹಗಾರರಿಗಾಗಿಯೇಮೀಸಲಾದ ಪತ್ರಿಕೆ ಈ ನಮ್ಮರಶ್ಮಿ’. ಸಾಹಿತ್ಯದ ದೃಷ್ಟಿಯಿಂದ‌ಎಲ್ಲಾ ವಿಭಾಗಗಳನ್ನುಪರಿಚಯಿಸಿ (ಕಥೆ, ಕವನ,ಲೇಖನ, ವಿಮರ್ಶೆ, ವ್ಯಂಗ್ಯಚಿತ್ರ, ಹಾಸ್ಯ….) ಎಲ್ಲ ರೀತಿಯಬರಹಗಾರಿರಗೂ ಆದ್ಯತೆನೀಡಬೇಕಾಗಿದೆ. ಬರವಣಿಗೆಹಾಗೂ ಗುಣಮಟ್ಟದ ಕುರಿತುಚಿಂತಿಸಬೇಕಾದ ಸಮಯದಲ್ಲೇ‌ಆರ್ಥಿಕವಾಗಿಯೂ ನಮ್ಮಬೆಂಬಲ ಅಗತ್ಯವಿದೆ. ಒಂದು ಪತ್ರಿಕೆ ಎಂದರೆ ಅದರದ್ದೇ ಆದ ಚೌಕಟ್ಟುಗಳಿರುತ್ತವೆ. ಅದರಲ್ಲೂ‌ಅದರ ಧ್ಯೇಯ, ಉದ್ದೇಶಗಳು, ಹೊರಡುವ ಅವಧಿಯನ್ನನುಸರಿಸಿ ಅದುಹೇಗಿರಬೇಕು ಎಂಬುದಾಗಿ ಚಿಂತಿಸಬಹುದು/ಅಪೇಕ್ಷಿಸಬಹುದು. ಪ್ರಸ್ತುತ‌ಅಂಕಣದ ಹೆಸರು ’ನಮ್ಮ ರಶ್ಮಿ ನಮ್ಮ ದೃಷಿ’. ಹೆಸರಿನಲ್ಲಿಯೇಮೂಲ ಉದ್ದೇಶಗಳನ್ನು ಅರಿತುಕೊಳ್ಳಬಹುದು. ಬೇರೆಲ್ಲಪತ್ರಿಕೆಗಳು ಸಂಪಾದಕರ/ಪ್ರಕಾಶಕರ ಪತ್ರಿಕೆಯಾಗಿ, ಉಳಿದವರುಕೇವಲ […]

  time September 16, 2008

  ಸಾಧನೆಯ ಪಥದಲ್ಲಿ ಯಶಸ್ವಿ ಹೆಜ್ಜೆಯನಿಟ್ಟು ಬೆಳಗಲಿ ಬೆಳೆಯಲೀ ಚೈತ್ರರಶ್ಮಿಯು

  – ಕಮಲಾ ಜಿ. ಹೆಗಡೆ,ಕೊಂಡದ ಕುಳಿ, ಕುಮಟಾ ಎಲ್ಲದಾಹಕ್ಕಿಂತಲೂ ಮನ್ನಣೆಯ ದಾಹವೇ ದೊಡ್ಡದೆಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ತಿಳಿಸಿರುವಂತೆ ಪ್ರತಿಯೋರ್ವ ವ್ಯಕ್ತಿಯೂ ತನ್ನನ್ನುಗುರುತಿಸಲಿ, ಗಮನಿಸಲಿ ಎಂದು ತನ್ನ ಮನ್ನಣೆಗಾಗಿ ಪ್ರತಿಕ್ಷಣವೂ ಅಪೇಕ್ಷೆಪಡುತ್ತಾನೆ. ಆ ದಿಶೆಯಲ್ಲಿ ಹೋರಾಡುತ್ತಲೇ ಇರುತ್ತಾನೆ. ನಾಗರೀಕತೆಯನೆಪದಲ್ಲಿ ಇಂದು ಎಲ್ಲವನ್ನೂ ದಾಪುಗಾಲಿಟ್ಟು ದಾಟಿಹೋಗುವ ಧಾವಂತ‌ಎಲ್ಲರಲ್ಲೂ. ಇನ್ನೊಬ್ಬರನ್ನು ಗಮನಿಸುವ ವ್ಯವಧಾನ ಎಷ್ಟು ಜನರಲ್ಲಿದೆ?ಇದ್ದರೂ ಅದು ಯಾರಿಗಾಗಿ ಎನ್ನುವುದೂ ಒಂದು ಪ್ರಶ್ನೆ. ಅವಗಾಹನೆ,ಕೊರತೆಯಿಂದಾಗಿ, ಒಂದು ಒಳ್ಳೆಯ ಮನಸ್ಸು, ಒಂದು ವ್ಯಕ್ತಿತ್ವಯಾವುದೇ ರಂಗದಲ್ಲಾಗಿರಲಿ ಅರಳುವ ಪ್ರತಿಭೆಗಳು ಕಮರಿಹೋಗುತ್ತದೆ. ಇದಕ್ಕೊಂದು ಅಪವಾದವೋ […]

  time September 16, 2008

  ಪತ್ರಿಕೆ ಮಸ್ತು, ಸಂಗ್ರಹಯೋಗ್ಯ ವಸ್ತು,ಆದರೆ ಸಂಪಾದಕರು ಸುಸ್ತು !

  -ಹಾಗಲ್ವಾಡಿಮಹೇಶ್ ಶೆಟ್ಟಿ, ಪತ್ರಕರ್ತ, ಬೆಂಗಳೂರು ಚೈತ್ರರಶ್ಮಿ ಗ್ರಾಮೀಣಬರಹಗಾರರಿಗೆ ವೇದಿಕೆ‌ಎಂಬುದು ಸಂತಸದ ವಿಷಯ.ಅದನ್ನು ದುರುಪಯೋಗಪಡಿಸಿಕೊಂಡರೆ ’ಸೃಜನಶೀಲತೆ’,’ಚೈತ್ರರಶ್ಮಿ ಬಳಗ’ ಎಂಬೆಲ್ಲಾಕನಸುಗಳಿಗೆ ಅರ್ಥವೇ‌ಇರುವುದಿಲ್ಲ. ಹಾಗೆಯೇ ಇಷ್ಟೆಲ್ಲಾಬರಹಗಾರರಿದ್ದೂ, ಇಷ್ಟೆಲ್ಲಾಸಮಾನಾಸಕ್ತರಿದ್ದೂ, ಇಷ್ಟೆಲ್ಲಾ‌ಒಳ್ಳೆಯ ಚಿಂತನೆ, ಕನಸು,ಧ್ಯೇಯಗಳಿದ್ದೂ ’ಚೈತ್ರರಶ್ಮಿ’ಯಂತಹ ಪ್ರಯತ್ನನಿಂತುಹೋದರೆ ಅದುಖಂಡಿತವಾಗಿ ಗೊತ್ತಿದ್ದೂ ನಮಗೆನಾವೇ ’ಆತ್ಮವಂಚನೆ’ಮಾಡಿಕೊಂಡಂತಾಗುತ್ತದೆ. ಸೃಜನಶೀಲತೆಯ ಹುಡುಕಾಟದಗೆಳೆಯರೆಲ್ಲರಿಗೆ ನಮಸ್ಕಾರ. ಇದನ್ನುದೃಷ್ಟಿಕೋನ ಎನ್ನುವುದಕ್ಕಿಂತ ’ಚೈತ್ರರಶ್ಮಿಬಳಗಕ್ಕೊಂದು ಪತ್ರ’ ಎನ್ನುವುದುಸೂಕ್ತವೇನೋ. ’ನಿಮ್ಮ ಪತ್ರಿಕಾ ಅನುಭವದಹಿನ್ನೆಲೆಯಲ್ಲಿ ಚೈತ್ರರಶ್ಮಿಯ ಎರಡೂವರೆವರ್ಷ ಸಂಚಿಕೆಗೊಂದು ವಿಶೇಷ ದೃಷ್ಟಿಕೋನಬರೆದುಕೊಡಿ’ ಎಂದು ರಾಚಂ ಕೇಳಿದಾಗನಾನು ’ನನ್ನ ಅಭಿಪ್ರಾಯಕ್ಕೆ ಮುಕ್ತಸ್ವಾತಂತ್ರ ವಿರುವುದಾದರೆ ಮಾತ್ರ’ ಎಂದಿದ್ದೆ.ಅದಕ್ಕವರು ’ಖಂಡಿತಾ ಬೈದರೂ ಪರವಾಗಿಲ್ಲ.ಆದರೆ ದಯವಿಟ್ಟು […]

  time September 16, 2008

  ಚೈತ್ರ ರಶ್ಮಿ ಹೇಗಿರಬೇಕು?

  -’ಸಹಜ ಸ್ಪಂದನ’, ಉತ್ತರ ಕನ್ನಡ ನಮ್ಮ ಚೈತ್ರರಶ್ಮಿಹೇಗಿರಬೇಕು ಎಂಬ‌ಓದುಗರ ಚಿಂತನೆಚೈತ್ರ ರಶ್ಮಿ ಹೇಗಿರಬೇಕು? ಪುಸ್ತಕದ ತುಂಬ ಕಥೆಗಳಿರಬೇಕು!ಹಾಗೆಂದ್ರೆ ಹೇಗೆ, ಕಥೆಗಳೇ ತುಂಬಿದ್ರೆ ಪುಸ್ತಕಬೆಳೆಯುತ್ತದಾ ಓದುಗರ ಮಸ್ತಕ?ಅದಕ್ಕೆ ಕಥೆಗಿಂತ ಬುದ್ದಿಗೆ ಇರಲಿ ಆಹಾರ‌ಆಮೇಲೆ ಕಥೆಯೊಂದಿಗಿರಲಿ ವಿಹಾರನನ್ನನಿಸಿಕೆ ಹಾಗಲ್ಲ ಬೇಕು ರಾಜಕೀಯ ಸುದ್ದಿ‌ಅದರ ನಂತರ ತುಂಬ್ಕೊಳ್ಳಿ ನಿಮ್ಮ ಕಥೆ, ಬುದ್ಧಿ, ಛೇ!ರಾಜಕೀಯ ಬೇಡ, ಕವನ ಚುಟುಕು ಇರಲಿ.ಆಮೇಲೆ ಬೇಕಾದರೆ ಉಳಿದದ್ದೆಲ್ಲ ಬರಲಿನನಗಂತೂ ಬೇಕು ಅಧ್ಯಾತ್ಮಿಕ ವಿಚಾರನಂತರ ನಿಮ್ಮ ಕವನ, ಕಥೆ, ರಾಜಕೀಯ ಪ್ರಚಾರ‌ಇಷ್ಟೆಲ್ಲ ಇದ್ದು ಆರ್ಥಿಕ ವಿಷಯಕ್ಕೆ ಇಲ್ದೆ ಇದ್ರೆ […]

  time September 16, 2008

  ದೇಶಾಭಿಮಾನದ ಪತ್ರಿಕೆ : ಆಗಲಿ ಸಂಸ್ಕೃತಿ ಜಾಗೃತಿದೀವಿಗೆ

  – ಎನ್.ಆರ್. ಹಳವಳ್ಳಿ, ಅಂಕೋಲಾ ಚೈತ್ರರಶ್ಮಿ ನನ್ನನ್ನು ತಟ್ಟಿ ಎಬ್ಬಿಸಿಕೈಗೆ ಪೆನ್ನು ಹಿಡಿಸದಿದ್ದರೆ ಅಕ್ಷರಗಳೇಮರೆತು ಹೋಗುತ್ತಿತ್ತೇನೋ! ಹೀಗೆಗ್ರಾಮೀಣ ಪ್ರದೇಶದಲ್ಲಿ ಕಾಣದೇ ಕರಗಿಹೋಗುವ ಬರಹಗಾರರನ್ನು ಹೆಕ್ಕಿತೆಗೆಯುವ ಚೈತ್ರರಶ್ಮಿಯ ಪ್ರಯತ್ನಪ್ರಶಂಸನಾರ್ಹ. ಈಗಿರುವಂತೆರಾಷ್ಟ್ರಾಭಿಮಾನ, ಸಂಸ್ಕೃತಿ-ಸಂಸ್ಕಾರಗಳಬಗ್ಗೆ ತಿಳಿಸುವ, ಆ ಮೂಲಕದೇಶಾಭಿಮಾನವನ್ನು ಜಾಗ್ರತೆಗೊಳಿಸುವಪತ್ರಿಕೆಯಾದರೆ ಅದು ಈ ಮೂಲಕನಾವು ರಾಷ್ಟ್ರಕ್ಕೆ ಕೊಡುವ ಅಲ್ಪಕೊಡುಗೆಯಾಗಬಹುದು. ಒಂದು ಪತ್ರಿಕೆ ಹೇಗಿರಬೆಕು? ಎಂದು ನಿರ್ಧರಿಸುವುದು ತುಂಬಾಕಷ್ಟದ ವಿಚಾರ!. ಯಾಕಂದ್ರೆ ಹಲವು ವಿವಿಧ ಮನಃಸ್ಥಿತಿಯ ಓದುಗರನ್ನು‌ಒಳಗೊಂಡಿರುವ ಪತ್ರಿಕೆ ’ಉತ್ತಮ ಪತ್ರಿಕೆ’ ಎನ್ನಿಸಿಕೊಳ್ಳುವುದು ಸುಲಭದವಿಚಾರವಲ್ಲ. ಇಂದಿನ ದಿನಗಳಲ್ಲಿ ವಾರಕ್ಕೊಂದು ಪತ್ರಿಕೆ ಹುಟ್ಟಿಕೊಳ್ಳುತ್ತಿದೆ.ಹಾಗೇ ಕೆಲವೇ […]

  time September 16, 2008

  ವಿಚಾರಗಳ ಲಹರಿ, ಆಗಲಿ ಭಾವನೆಗಳ ಬುಗುರಿ

  – ವಿನಾಯಕ ಕೆ.ಎಸ್, ಉಡುಪಿ ಚೈತ್ರರಶ್ಮಿಯ ರಾಷ್ಟ್ರಹಬ್ಬಸಂಚಿಕೆ ಪತ್ರಿಕೆಯನ್ನು ಲಘುವಾಗಿಪರಿಗಣಿಸಿದವರಿಗೆ ದಿಟ್ಟ ಉತ್ತರನೀಡಿದೆ. ಅಂತಹ ಸಂಚಿಕೆಗಳುಹೆಚ್ಚಲಿ. ಆದರೆ ಯಾವುದೇಸಿದ್ಧಾಂತ ವಾದಿಯಾಗುವುದುಬೇಡ. ರಶ್ಮಿಯ ಪ್ರಭೆ ನಿಲ್ಲದಿರಲಿ.ಅದರ ಜೈತ್ರಯಾತೆ ನಿರಂತರವಾಗಿರಲಿ. ಚಕ್ರವರ್ತಿ ಸೂಲಿಬೆಲೆ ಅವರು ’ಗರ್ವ’ ವಾರಪತ್ರಿಕೆಯಲ್ಲಿ ’ಚೈತ್ರರಶ್ಮಿ’sಬಗ್ಗೆ ಬರೆದಾಗಲೇ ಆ ಪತ್ರಿಕೆಯಲ್ಲಿ ಏನೋ ವೈಶಿಷ್ಟ ವಿದೆ, ಅದಕ್ಕೆ‌ಒಂದಿಷ್ಟು ಸಿದ್ಧಾಂತಗಳಿದೆ ಎಂದು ಭಾವಿಸಿದ್ದೆ. ರಶ್ಮಿ ಕೈ ಸೇರಿದಾಗನನ್ನ ಕಲ್ಪನೆ ಅಕ್ಷರಶಃ ನಿಜವಾಗಿತ್ತು. ಈ ಬಾರಿಯ ರಾಷ್ಟ್ರ ಹಬ್ಬ ಸಂಚಿಕೆರಶ್ಮಿಯ ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿದೆ. ’ಅಯ್ಯೋ ಹಳ್ಳಿ ಹುಡುಗರಪುಟಗೋಸಿ ಪತ್ರಿಕೆ, ಅದರಲ್ಲಿ […]