September 16, 2008ಮನಸ್ಸಿಗೆ ಧನ್ಯತೆ, ಹೃದಯಕೆ ಆನಂದ
ಸ್ವಾಮಿ ಜಗದಾತ್ಮಾನಂದರ ಆಶೀರ್ವಾದ
ಚೈತ್ರರಶ್ಮಿಯ ಈ ೩ ವರ್ಷಗಳ ಭಾವಯಾನದಲ್ಲಿ ನಾನು ಹಲವು ಬಾರಿ ಕೆಲವು ಅನಿರೀಕ್ಷಿತ, ಅಚ್ಚರಿಯ ಸಂಭ್ರಮದ ಕಣಗಳಿಗೆ ಸಾಕ್ಷಿಯಾದದ್ದಿದೆ. ಅಂತಹ ಸಂಭ್ರಮಗಳೇ ನನ್ನನ್ನು ಒತ್ತಡದ, ಸವಾಲಿನ ಸನ್ನಿವೇಶಗಳಲ್ಲಿ ಶಕ್ತಿಯುತವಾಗಿ ನಡೆಯುವಂತೆ ಸ್ಫೂರ್ತಿ ನೀಡಿ ಮುನ್ನಡೆಸಿದ್ದು. ಮತ್ತೊಮ್ಮೆ ಅಂತಹದೊಂದು ಸಂಭ್ರಮಕ್ಕೆ ಕಾರಣವಾದದ್ದು ಪೂಜ್ಯ ಸ್ವಾಮಿ ಜಗದಾತ್ಮಾನಂದರ ದೂರವಾಣಿ [...]