• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಲೇಖನಗಳು

    ಲೇಖನಗಳು


    time September 17, 2008

    ಶರನ್ನವರಾತ್ರಿಯ ಸೊಬಗು…..

    -ಪ್ರಿಯಾ ಎಂ.ಭಟ್ ಕಲ್ಲಬ್ಬೆ, ಕುಮಟಾ

    ಯಾದೇವಿ ಸರ್ವ ಭೂತೇಷು ಮಾತೃರೂಪೇಣ ಸಂಸ್ಥಿತಾ
    ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

    ಶಕ್ತಿ ರೂಪಿ ಜಗನ್ಮಾತೆಯನ್ನು ನವವಿಧರೂಪದಲ್ಲಿ ನವದಿನಗಳು, ನವ ಪಾರಾಯಣ ಮಾಡಿ ಆರಾಧಿಸುವ ದಿನಗಳು ನಮ್ಮನ್ನು ಯಾವುದೋ ಭಕ್ತಿರಸದಲ್ಲಿ ಓಲಾಡಿಸುವುದಂತೂ ನಿಜ. ಮನುಷ್ಯ ತನ್ನ ಪಾಪಕರ್ಮಗಳ ಕಳೆದುಕೊಳ್ಳಲು ದೇವರ ಮೊರೆ ಹೋಗುವುದು [...]

    time September 17, 2008

    ನಮ್ಮದಾಗಲಿ ಸಾರ್ಥಕತೆಯ ಬದುಕು

    ’ಏ ಸುಬ್ಬಯ್ಯನ ಮನೆ ಮಾಣಿ ಬೆಟ್ಟದ ಮ್ಯಾಲೆ ಹೋಗಿ ಸಿಗರೇಟು ಸೇದ್ತಾ ಇದ್ದಿದ್ದನಂತೆ ! ಅದನ್ನ ವೆಂಕಟೇಶ ನೋಡಿದ್ದನಂತೆ !’
    “Breaking News”
    ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ [...]

    time September 17, 2008

    ’ನಾಗಾರ್ಜುನ’ ಇನ್ನೂ ಮುಗಿಯದ ಹೋರಾಟ

    - ಶ್ರೀನಿಧಿ ಅಡಿಗ

    ಎರಡು ದಶಕಗಳಿಗೂ ಮೀರಿದ ಸತತ ಹೋರಾಟಗಳ ನಂತರವೂ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ನಂದಿಕೂರಿನಲ್ಲಿ ’ನಾಗಾರ್ಜುನ’ ಬೃಹತ್ ಉಷ್ಣ ಸ್ಥಾವರ ತನ್ನ ಕಾರ್‍ಯಾಚರಣೆ ಆರಂಭಿಸಿದೆ. ಜನರ ಪ್ರಬಲ ವಿರೋಧದ ನಡುವೆಯೂ ಹಣ, ಅಧಿಕಾರದಿಂದ ಅವರನ್ನು ಸಂಕಷ್ಟಗಳಿಗೆ ಗುರಿಯಾಗಿಸಿ ಭೂಮಿ ಕಸಿಯುವ ಯತ್ನ ಇಲ್ಲಿ ನಿರಂತರವಾಗಿ ಸಾಗಿದೆ.
    [...]

    time September 17, 2008

    ಬರಿಯ ಓದು ವ್ಯರ್ಥ-ಒಳ್ಳೆಯ ಕೆಲಸ ಮಾಡಿದರಷ್ಟೇ ಅದಕ್ಕೊಂದು ಅರ್ಥ

    -ರಾಘವೇಂದ್ರ ಬಿ. ಅಗರ್ಖೇಡ್, ಬೆಂಗಳೂರು

    “ಎಷ್ಟು ಓದಿದರೆ ಏನು ಪ್ರಯೋಜನ? ಒಂದು ಚಿಕ್ಕ ಒಳ್ಳೆ ಕೆಲಸವನ್ನು ನಾನು ಪ್ರಾಯೋಗಿಕವಾಗಿ ಮಾಡದೆ ಹೋದರೆ, ಆ ಪುಸ್ತಕ ಬರೆದವನ ಉದ್ದೇಶ ಖಂಡಿತ ಸಾರ್ಥಕವಾಗುವುದಿಲ್ಲ. ಆ ಲೇಖಕನಿಗೆ ಅಥವ ಕವಿಗೆ ನಾವು ಸಲ್ಲಿಸುವ ಉನ್ನತವಾದ ಗೌರವ ಅಂದರೆ ಅವನ ಉದ್ದೇಶದ ಒಂದಂಶವನ್ನಾದರೂ ಕಾರ್ಯರೂಪಕ್ಕೆ ತರುವುದು ಮಾತ್ರ. [...]

    time September 17, 2008

    ನಮ್ಮ ಎಸ್.ಎಮ್.ಎಸ್. ಸಂದೇಶಗಳು ಸಭ್ಯವಾಗಿರಲಿ

    - ಸುಧಿಂದ್ರ ಜಮ್ಮಟಿಗೆ, ಉಡುಪಿ

    ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
    ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಂ |

    ಅಬ್ಬಾ ! ಈ ಐವರು ಪುಣ್ಯವಂತ ಸ್ತ್ರೀಯರ ಹೆಸರನ್ನು ಮನಸ್ಸಿನಲ್ಲಿ ಭಕ್ತಿಯಿಂದ ಸ್ಮರಿಸಿಕೊಂಡರೇನೇ ನಾವು ಮಾಡಿದ ಮಹಾಪಾಪಗಳೆಲ್ಲಾ ನಾಶವಾಗುತ್ತವೆ. ಈ ನಂಬಿಕೆಯಿಂದಲೇ ಮನೆಯ ಹಿರಿಯರು ಇಂತಹ ಶ್ಲೋಕಗಳನ್ನು ಮಕ್ಕಳಿಗೆ ಹೇಳಿ [...]

    time September 17, 2008

    ಪ್ರೀತಿ - ಜೀವನದ ಧರ್ಮ

    - ಸುಂಕಸಾಳ ವಿಶ್ವನಾಥ, ಶಿರಸಿ.

    ’ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ಸುಳ್ಳು ಎಲ್ಲವೂ ಶೂನ್ಯ’ ಎಂದೆಲ್ಲಾ ಬಡಬಡಿಸುವ, ಹಲುಬುವ ವ್ಯಕ್ತಿಗಳನೇಕರನ್ನು ನಮ್ಮ ನಿತ್ಯ ಜೀವನದ ಸುತ್ತಮುತ್ತಲೂ ಕಾಣುತ್ತೇವೆ. ಹಾಗೆಲ್ಲಾ ಹೇಳುತ್ತಾ ತಾವು ನೊಂದುಕೊಂಡು ಬೇರೆಯವರನ್ನೂ ಬೇಸರದ ಕೂಪಕ್ಕೆ ನೂಕುವ ಅಂತಹ ಜನ ಒಂದೋ ಅಸಹಾಯಕ ವೃದ್ಧರಾಗಿರಬೇಕು ಅಥವಾ ಯಾರಿಂದ ಲಾದರೂ ಮೋಸ ಹೋಗಿ [...]

    time September 17, 2008

    ಯುಗಾದಿಗೆ ಸ್ವಾಗತ

    - ಸುನಿಲ್ ಎಸ್. ಕಯ್ಯಾರು
    ಸರ್ವಜಿತು : ಸಂತಸ ತರಲಿ ಸರ್ವ‌ಋತು

    ಕಳೆದು ಕಲುಷವ ಮರೆಸಿ ದುಗುಡವ
    ತಳೆದು ನವ ಉನ್ಮೇಷವ
    ತೊಳೆದು ಮನಸಿನ ಸುತ್ತ ಸುಳಿದಿಹ
    ಕೊಳೆಯನೆಲ್ಲವ ಬಿಸುಡುತ
    ಮರಳಿ ಬರುತಿಹ ಹೊಸಯುಗಾದಿಗೆ
    ಹೊಸತನದ ಸುಸ್ವಾಗತ |
    ಮುದ್ದು ಮಾತಿನ ಸಹನೆ ತುಂಬಲಿ
    ಬಿದ್ದು ಹೋಗಲಿ ದರ್ಪವು
    ಪೆದ್ದುತನ ಅಜ್ಞಾನ ತೊರೆಯಲಿ
    ಎದ್ದು ಹೊಮ್ಮಲಿ ಜ್ಞಾನವು
    ಸದ್ದುಗದ್ದಲವಿರದೆ ಬರುತಿಹ
    ಹೊಸ ಯುಗಾದಿಗೆ ಸ್ವಾಗತ |
    ಸುತ್ತಮುತ್ತಲ ಮೌಢ್ಯ ತೊಲಗುತ [...]

    time September 17, 2008

    ಅವರು ಕಿರಿ ’ಕೆಟ್’ ಕೋಡಂಗಿಗಳು, ನಾವು ತಲೆಕೆಟ್ ಈರಭದ್ರರು !!

    -ಚಂದ್ರಕಾಂತ್ ಆರ್. ತಾಳಗುಪ್ಪ

    ’ಟೀಂ ಇಚಿಡಿಯಾ’ ಎಂಬ ಹನ್ನೊಂದು ಮಂದಿ ಜಾಹೀರಾತು ವೀರರ ಪಡೆ ವಿಶ್ವಕಪ್ ಅಭಿಯಾನದ ಪ್ರಾಥಮಿಕ ಪರೀಕ್ಷೆಯಲ್ಲೇ ಸೋತು ಮನೆಗೆ ಮರಳಿದ್ದು ಈಗ ಹಳೆಯ ಸುದ್ದಿ. ಅದರ ಜತೆ ಅಭಿಮಾನಿಗಳ ಅತಿರೇಕವೂ ಗೊತ್ತಲ್ಲ. ಇದರ ಮೂಲಕ ’ಕ್ರಿಕೆಟ್ ತಂಡ ಬೆಂಬಲಿಸುವುದೇ ದೇಶಪ್ರೇಮ’ ಎಂಬ ಸಾಮಾನ್ಯರ ನಂಬಿಕೆಗೆ ಕಿಂಚಿತ್ತೂ ಬೆಲೆಕೊಡದೆ [...]

    time September 17, 2008

    ಅವರು ’ಕಾರ್ನಾಡ್’ ಅಲ್ಲ : ಗಿರೀಶ್ ತಮಿಳ್ನಾಡ್ !!

    - ಮಂಜುನಾಥ್, ಆನೆಕೆರೆಬೀದಿ ಮಂಡ್ಯ

    ’ಬಹುಶಃ ಅವರು ಒಳ್ಳೆಯ ತಾಯಿಗೆ ಹುಟ್ಟಿದ ಮಕ್ಕಳಲ್ಲ. ಮನೆಯಲ್ಲಿ ಒಳ್ಳೆಯ ತಾಯಿ ಇದ್ದಿದ್ರೆ ಅವರು ಹೀಗೆ ಪ್ರತಿಭಟನೆ ಮಾಡತಿರಲಿಲ್ಲ’- ಹೀಗೆ ಅಣಿಮುತ್ತು ಉದುರಿಸಿದ್ದು ಜ್ಞಾನಪೀಠಿ ಅನಂತಮೂರ್ತಿ. ಅವರು ಹೀಗೆ ಹೇಳಿದ್ದು ಕಾವೇರಿ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ ಮಂಡ್ಯದ ರೈತರ ಮಕ್ಕಳ ಕುರಿತು. ಸಾಹಿತ್ಯ ಕ್ಷೇತ್ರದ ಅತಿರಥ- [...]

    time September 17, 2008

    ನಮಗಿಂತ ಪೂರ್ವಜರೇ ಸುಖಿಗಳು

    -ವಿನುತಾ ಎಸ್. ಸಿದ್ದಾಪುರ

    ಹಗಲು ಇರುಳು ಜಾರುತಿದೆ, ದಿನ ದಿನಗಳು ಉರುಳುತಿದೆ
    ವರುಷ ವರುಷ ತೆರಳುತಿದೆ, ಹರುಷ ಮರೆಯಾಗುತಿದೆ !
    ನಾವೆಲ್ಲಾ ಇಂದು ೨೧ ನೇ ಶತಮಾನದಲ್ಲಿದ್ದೇವೆ. ತುಂಬಾ ಆಧುನಿಕತೆಯಲ್ಲಿ ಮುಂದುವರಿದಿದ್ದೇವೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಮನೆಯಲ್ಲೇ ಕುಳಿತು ಮಾತನಾಡುವಷ್ಟು ವಿಜ್ಞಾನ ಮುಂದುವರಿದಿದೆ. ಯಾವುದೇ ಕಂಪನಿಗಳಲ್ಲಿ, ಯಾವುದೇ ಆಸ್ಪತ್ರೆಗಳಲ್ಲಿ, ಯಾವುದೇ ಸಂಘ-ಸಂಸ್ಥೆಗಳಲ್ಲಿ ಅಲ್ಲಿಯ ವಿಷಯ [...]