• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಕಂಡದ್ದು ಕಂಡಹಾಗೆ


  time September 17, 2008

  ಬರಿಯ ಓದು ವ್ಯರ್ಥ-ಒಳ್ಳೆಯ ಕೆಲಸ ಮಾಡಿದರಷ್ಟೇ ಅದಕ್ಕೊಂದು ಅರ್ಥ

  -ರಾಘವೇಂದ್ರ ಬಿ. ಅಗರ್ಖೇಡ್, ಬೆಂಗಳೂರು “ಎಷ್ಟು ಓದಿದರೆ ಏನು ಪ್ರಯೋಜನ? ಒಂದು ಚಿಕ್ಕ ಒಳ್ಳೆ ಕೆಲಸವನ್ನು ನಾನು ಪ್ರಾಯೋಗಿಕವಾಗಿ ಮಾಡದೆ ಹೋದರೆ, ಆ ಪುಸ್ತಕ ಬರೆದವನ ಉದ್ದೇಶ ಖಂಡಿತ ಸಾರ್ಥಕವಾಗುವುದಿಲ್ಲ. ಆ ಲೇಖಕನಿಗೆ ಅಥವ ಕವಿಗೆ ನಾವು ಸಲ್ಲಿಸುವ ಉನ್ನತವಾದ ಗೌರವ ಅಂದರೆ ಅವನ ಉದ್ದೇಶದ ಒಂದಂಶವನ್ನಾದರೂ ಕಾರ್ಯರೂಪಕ್ಕೆ ತರುವುದು ಮಾತ್ರ. ಒಬ್ಬನಿದ್ದ ಒಂದು ಊರಲ್ಲಿ. ಅವನಿಗೆ ಓದೋ ಗೀಳು ಚಿಕ್ಕ ವಯಸ್ಸಿನಿಂದ. ಪುಸ್ತಕಕ್ಕೋಸ್ಕರ ಒಂದೂರಿಂದ ಮತ್ತೊಂದೂರಿಗೆ ಪ್ರಯಾಣ ಬೆಳೆಸಿ ಓದಿಕೊಂಡು ಅಥವಾ ಕಡಿಮೆ ಬೆಲೆಯದ್ದಾದರೆ ಕೊಂಡು […]

  time September 17, 2008

  ನಮ್ಮ ಎಸ್.ಎಮ್.ಎಸ್. ಸಂದೇಶಗಳು ಸಭ್ಯವಾಗಿರಲಿ

  – ಸುಧಿಂದ್ರ ಜಮ್ಮಟಿಗೆ, ಉಡುಪಿ ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ | ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಂ | ಅಬ್ಬಾ ! ಈ ಐವರು ಪುಣ್ಯವಂತ ಸ್ತ್ರೀಯರ ಹೆಸರನ್ನು ಮನಸ್ಸಿನಲ್ಲಿ ಭಕ್ತಿಯಿಂದ ಸ್ಮರಿಸಿಕೊಂಡರೇನೇ ನಾವು ಮಾಡಿದ ಮಹಾಪಾಪಗಳೆಲ್ಲಾ ನಾಶವಾಗುತ್ತವೆ. ಈ ನಂಬಿಕೆಯಿಂದಲೇ ಮನೆಯ ಹಿರಿಯರು ಇಂತಹ ಶ್ಲೋಕಗಳನ್ನು ಮಕ್ಕಳಿಗೆ ಹೇಳಿ ಕೊಡ್ತಾ ಇದ್ರು. ಇದರೊಂದಿಗೆ ರಾಮಾಯಣ, ಮಹಾಭಾರತ, ಇನ್ನಿತರ ಪುರಾಣಗಳ ಪಾತ್ರ ಪರಿಚಯವನ್ನು ಆ ಪುಟಾಣಿ ಹೃದಯಗಳಲ್ಲಿ ಮನದಟ್ಟಾಗುವಂತೆ ಮಾಡ್ತಾ ಇದ್ರು. ಮುಂದಿನ […]

  time September 17, 2008

  ಪ್ರೀತಿ – ಜೀವನದ ಧರ್ಮ

  – ಸುಂಕಸಾಳ ವಿಶ್ವನಾಥ, ಶಿರಸಿ. ’ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ಸುಳ್ಳು ಎಲ್ಲವೂ ಶೂನ್ಯ’ ಎಂದೆಲ್ಲಾ ಬಡಬಡಿಸುವ, ಹಲುಬುವ ವ್ಯಕ್ತಿಗಳನೇಕರನ್ನು ನಮ್ಮ ನಿತ್ಯ ಜೀವನದ ಸುತ್ತಮುತ್ತಲೂ ಕಾಣುತ್ತೇವೆ. ಹಾಗೆಲ್ಲಾ ಹೇಳುತ್ತಾ ತಾವು ನೊಂದುಕೊಂಡು ಬೇರೆಯವರನ್ನೂ ಬೇಸರದ ಕೂಪಕ್ಕೆ ನೂಕುವ ಅಂತಹ ಜನ ಒಂದೋ ಅಸಹಾಯಕ ವೃದ್ಧರಾಗಿರಬೇಕು ಅಥವಾ ಯಾರಿಂದ ಲಾದರೂ ಮೋಸ ಹೋಗಿ ನಿರಾಶರಾದವರಾಗಿರಬೇಕು. ಇಲ್ಲದಿದ್ದಲ್ಲಿ ಅಂದುಕೊಂಡ ಕಾರ್ಯದಲ್ಲಿ ಪುನಃ ಪುನಃ ಸೋತು ಆಶಾವಾದವನ್ನೇ ಕಳೆದುಕೊಂಡವರಾಗಿರಬೇಕು. ಎಲ್ಲರ ಜೀವನದಲ್ಲೂ ಈ ರೀತಿಯ ಕ್ಷಣಿಕ ವೈರಾಗ್ಯ ಬಂದೇ ಬರುತ್ತದೆ. […]

  time September 17, 2008

  ಯುಗಾದಿಗೆ ಸ್ವಾಗತ

  – ಸುನಿಲ್ ಎಸ್. ಕಯ್ಯಾರು ಸರ್ವಜಿತು : ಸಂತಸ ತರಲಿ ಸರ್ವ‌ಋತು ಕಳೆದು ಕಲುಷವ ಮರೆಸಿ ದುಗುಡವ ತಳೆದು ನವ ಉನ್ಮೇಷವ ತೊಳೆದು ಮನಸಿನ ಸುತ್ತ ಸುಳಿದಿಹ ಕೊಳೆಯನೆಲ್ಲವ ಬಿಸುಡುತ ಮರಳಿ ಬರುತಿಹ ಹೊಸಯುಗಾದಿಗೆ ಹೊಸತನದ ಸುಸ್ವಾಗತ | ಮುದ್ದು ಮಾತಿನ ಸಹನೆ ತುಂಬಲಿ ಬಿದ್ದು ಹೋಗಲಿ ದರ್ಪವು ಪೆದ್ದುತನ ಅಜ್ಞಾನ ತೊರೆಯಲಿ ಎದ್ದು ಹೊಮ್ಮಲಿ ಜ್ಞಾನವು ಸದ್ದುಗದ್ದಲವಿರದೆ ಬರುತಿಹ ಹೊಸ ಯುಗಾದಿಗೆ ಸ್ವಾಗತ | ಸುತ್ತಮುತ್ತಲ ಮೌಢ್ಯ ತೊಲಗುತ ಎತ್ತಿ ಬಿಸುಡುತ ಮಿಥ್ಯವ ನಿತ್ಯ ಸ್ಪೂರ್ತಿಯ […]

  time September 17, 2008

  ಅವರು ಕಿರಿ ’ಕೆಟ್’ ಕೋಡಂಗಿಗಳು, ನಾವು ತಲೆಕೆಟ್ ಈರಭದ್ರರು !!

  -ಚಂದ್ರಕಾಂತ್ ಆರ್. ತಾಳಗುಪ್ಪ ’ಟೀಂ ಇಚಿಡಿಯಾ’ ಎಂಬ ಹನ್ನೊಂದು ಮಂದಿ ಜಾಹೀರಾತು ವೀರರ ಪಡೆ ವಿಶ್ವಕಪ್ ಅಭಿಯಾನದ ಪ್ರಾಥಮಿಕ ಪರೀಕ್ಷೆಯಲ್ಲೇ ಸೋತು ಮನೆಗೆ ಮರಳಿದ್ದು ಈಗ ಹಳೆಯ ಸುದ್ದಿ. ಅದರ ಜತೆ ಅಭಿಮಾನಿಗಳ ಅತಿರೇಕವೂ ಗೊತ್ತಲ್ಲ. ಇದರ ಮೂಲಕ ’ಕ್ರಿಕೆಟ್ ತಂಡ ಬೆಂಬಲಿಸುವುದೇ ದೇಶಪ್ರೇಮ’ ಎಂಬ ಸಾಮಾನ್ಯರ ನಂಬಿಕೆಗೆ ಕಿಂಚಿತ್ತೂ ಬೆಲೆಕೊಡದೆ ’ಇಲ್ಲ, ನಾವು ದೇಶಕ್ಕಾಗಿ ಆಡುತ್ತಿಲ್ಲ, ದುಡ್ಡಿಗಾಗಿ ಮಾತ್ರ’ ಎಂಬ ಸತ್ಯವನ್ನು ದಾಂಡಿಗರು ನಿಜವಾಗಿಸಿದ್ದಾರೆ. ಇನ್ನೊಂದು ದೃಷ್ಟಿಯಲ್ಲಿ ಪರೀಕ್ಷೆಯನ್ನೇ ಮರೆತು ಟಿವಿ ಮುಂದೆ ಕೂರುತ್ತಿದ್ದ ಮಕ್ಕಳನ್ನು […]

  time September 17, 2008

  ಅವರು ’ಕಾರ್ನಾಡ್’ ಅಲ್ಲ : ಗಿರೀಶ್ ತಮಿಳ್ನಾಡ್ !!

  – ಮಂಜುನಾಥ್, ಆನೆಕೆರೆಬೀದಿ ಮಂಡ್ಯ ’ಬಹುಶಃ ಅವರು ಒಳ್ಳೆಯ ತಾಯಿಗೆ ಹುಟ್ಟಿದ ಮಕ್ಕಳಲ್ಲ. ಮನೆಯಲ್ಲಿ ಒಳ್ಳೆಯ ತಾಯಿ ಇದ್ದಿದ್ರೆ ಅವರು ಹೀಗೆ ಪ್ರತಿಭಟನೆ ಮಾಡತಿರಲಿಲ್ಲ’- ಹೀಗೆ ಅಣಿಮುತ್ತು ಉದುರಿಸಿದ್ದು ಜ್ಞಾನಪೀಠಿ ಅನಂತಮೂರ್ತಿ. ಅವರು ಹೀಗೆ ಹೇಳಿದ್ದು ಕಾವೇರಿ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ ಮಂಡ್ಯದ ರೈತರ ಮಕ್ಕಳ ಕುರಿತು. ಸಾಹಿತ್ಯ ಕ್ಷೇತ್ರದ ಅತಿರಥ- ಮಹಾರಥರನ್ನು, ಶ್ರೇಷ್ಠರನ್ನು ಸೈಡಿಗೆ ಹಾಕಿ ಜ್ಞಾನಪೀಠ ’ಪಡೆದುಕೊಂಡವರಿಗೆ’, ರಾಜಕಾರಣವನ್ನು ಬೈಯುತ್ತಲೇ ಯಾರದ್ದೋ ಕೈಕಾಲು ಹಿಡಿದು ಡಾಲರ್‍ಸ್ ಕಾಲೋನಿಯಲ್ಲಿ ತಮಗೊಂದು ಮನೆ ಗಿಟ್ಟಿಸಿಕೊಂಡವರಿಗೆ ಮಣ್ಣಿನ ಮಕ್ಕಳ […]