• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಲೇಖನಗಳು

  ಲೇಖನಗಳು


  time January 12, 2015

  ಸ್ವಾಮಿ ವಿವೇಕಾನಂದರ ಕವನವೊಂದರ ಕನ್ನಡ ಅನುವಾದ

  ಸ್ವಾಮಿ ವಿವೇಕಾನಂದರ ಕವನವೊಂದರ ಕನ್ನಡ ಅನುವಾದ. ಸ್ವಾಮಿ ವಿವೇಕಾನಂದರ ಪ್ರತಿಭೆಯ ಮುಖಗಳು ಅನೇಕ. ಸಿಡಿಲ ಸಂತನಾಗಿ, ದಾರ್ಶನಿಕರಾಗಿ, ವೀರ ಸನ್ಯಾಸಿಯಾಗಿ ಅವರು ನಮಗೆಲ್ಲ ಸುಪರಿಚಿತ. ಆದರೆ ಅವರೊಬ್ಬ ಕವಿಯೂ ಆಗಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಕವಿಯಾಗಿ, ಗದ್ಯಲೇಖಕರಾಗಿ, ಕಲಾವಿಮರ್ಶಕರಾಗಿ, ಸಂಗೀತಜ್ಞರಾಗಿ ಅವರ ಕೊಡುಗೆ ಗಣನೀಯವಾಗಿದ್ದರೂ ಈ ನಿಟ್ಟಿನಲ್ಲಿ ನಡೆದ ಅಧ್ಯಯನಗಳು ವಿರಳ. ಈ ಹಿನ್ನೆಲೆಯಲ್ಲಿ ಸ್ಮಾಮಿ ವಿವೇಕಾನಂದರೇ ಬರೆದ ‘ಇನ್ ಸರ್ಚ್ ಆಫ್ ಗಾಡ್ ಎಂಡ್ ಅದರ್ ಪೊಯೆಮ್ಸ್’ ಇಂಗ್ಲಿಷ್ ಕವನ ಸಂಕಲನದ ಕನ್ನಡ ಅನುವಾದ ‘ವಿವೇಕಾನಂದ […]

  time December 4, 2008

  ನಮ್ಮದಾಗಲಿ ಸಾರ್ಥಕತೆಯ ಬದುಕು

  ’ಏ ಸುಬ್ಬಯ್ಯನ ಮನೆ ಮಾಣಿ ಬೆಟ್ಟದ ಮ್ಯಾಲೆ ಹೋಗಿ ಸಿಗರೇಟು ಸೇದ್ತಾ ಇದ್ದಿದ್ದನಂತೆ ! ಅದನ್ನ ವೆಂಕಟೇಶ ನೋಡಿದ್ದನಂತೆ !’ “Breaking News” ಸಂಜೆ ಆಗುವುದರೋಳಗಾಗಿ ಅಂತಹ ದೊಂದು ಸುದ್ದಿ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಿತ್ತರಗೊಂಡಿತ್ತು. ಬಿತ್ತರಿಸಿದ್ದು ಆಜ್‌ತಕ್ಕೊ, ಓ.ಆ.ಖಿ.ಗಿ ನೋ ಅಲ್ಲಾ. ಬಾಯಿಂದ ಬಾಯಿಗೆ ಹರಡಿದ ಸುದ್ದಿ ಅದು ! ೧೫ ದಿನ ಊರು ಕೇರಿ ಗಳಲ್ಲೆಲ್ಲಾ ಅದೇ ಸಮಾಚಾರ ! ಊರುಮನೆ ಯಾವುದೇ ಕಾರ್ಯಕ್ರಮವಾದರೂ ಹಳ್ಳಿ ಹೆಂಗಸರಿಗೆ ಸುಬ್ಬಯ್ಯನ ಮನೆ ಎಲ್ಲರ ಚರಿತ್ರೆಯ ಪುಟಗಳನ್ನು ತಿರುವುವುದೇ […]

  time September 17, 2008

  ಜೇನುಗೂಡು

  – ಅಕ್ಷಯ ರಾಮ ಕೆ. ,ಕಾವಿನಮೂಲೆ ದ.ಕ. ’ಛೇ! ಯಾವಾಗಲೂ ಇದೇ ಗೋಳು. ಎಲ್ಲರ ಕೈಯಲ್ಲೂ ದಂಡಪಿಂಡ ಅಂತ ಬೈಸಿಕೊಂಡಾಯಿತು. ನನ್ನ ಹಣೆ ಬರಹವೇ ಇಷ್ಟು’ ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅವನದೇ ಆದ ಹತ್ತು ಹಲವು ಕಲ್ಪನೆ, ಕನಸುಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಅಲೆದಾಟಗಳೇ ಅಚ್ಚುಮೆಚ್ಚು. ೬ ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಸದಾ ಆಹಾರವಾಗಿದ್ದ. ಆತನ ಬಗ್ಗೆ ಚುಚ್ಚು ಮಾತು ಆಡದೇ ಇದ್ದರೆ […]

  time September 17, 2008

  ವೃದ್ಧಾಪ್ಯವು ಅಷ್ಟೊಂದು ದಯನೀಯವಾಗಿರಬೇಕೇ?

  – ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು, ಕೊಡಗು ಬದುಕಿನ ಕೊನೆಯ ಘಟ್ಟವೂ ಬಾಲ್ಯ, ಹರೆಯದಷ್ಟೇ ಆನಂದದಾಯಕವಾಗಿರಬೇಕು ಎನ್ನುವುದು ಎಲ್ಲರಲ್ಲೂ ಸರ್ವಥಾ ಅಪೇಕ್ಷಣೀಯವಾಗಿದೆ. ಏಕೆಂದರೆ ಬಾಲ್ಯ, ಹರೆಯಗಳು ಎಂದೂ ಶಾಶ್ವತವಲ್ಲ. ಅಪಮೃತ್ಯುವನ್ನು ಹೊರತುಪಡಿಸಿದಲ್ಲಿ, ಜನಿಸಿದವರೆಲ್ಲರೂ ಕಾಲರಾಯನ ತುಳಿತಕೆ ಸಿಲುಕಿ ಕೊನೆಗೆ ವೃದ್ಧಾಪ್ಯವನ್ನು ಹೊಂದಲೇ ಬೇಕು. ಇದು ಪ್ರಕೃತಿಯ ನಿಯಮ. ಹಾಗಿರುವಾಗ ದಯನೀಯ ಅಂತ್ಯಕ್ಕೆ ತಿಲಾಂಜಲಿ ಹಾಕುವುದು ಪ್ರಸಕ್ತ ಪೀಳಿಗೆಯ ಕರ್ತವ್ಯ ನಾವು ವಿಹಾರಕ್ಕೆಂದೋ ಅಥವಾ ಮತ್ತಾವುದೋ ಘನಕಾರ್ಯಕ್ಕಾಗಿಯೋ ಹೊರಗೆ ಹೋಗಿದ್ದಾಗ ಬಾಗಿದ ಬೆನ್ನು, ಬಕ್ಕ ತಲೆ ಅಥವಾ ನೆರೆತ […]

  time September 17, 2008

  ಅಂದಿನ ದಿನಗಳ ಬಣ್ಣ !! ಎಲ್ಲಿಹೋದವು ಆ ಸುಂದರ ದಿನಗಳು ?

  – ನವೀನ್ ಭಟ್, ಗಂಗೋತ್ರಿ ಕುವೆಂಪು ಹೀಗೆನ್ನುತ್ತಾರೆ, “ಮಗುವು ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಅದನ್ನು ನಾವುಗಳು ಸಾಮಾನ್ಯ ಮಾನವನನ್ನಾಗಿ ಮಾಡುತ್ತೇವೆ………” ಎಷ್ಟೋ ಬಾರಿ – ನನಗೆ ಎಟಕುವ ಆಯಾಮಗಳಲ್ಲಿ ತುಂಬ ನಿಜ ಅನ್ನಿಸಿದ ಮಾತಿದು. ವಿಶ್ವ ಮಾನವತ್ವದ ಮೂಲವೆಂದರೆ ಅನನ್ಯವಾದ ಪ್ರೇಮ ಮತ್ತು ನಿಸರ್ಗದೊಂದಿಗೆ ಒಂದು ಉನ್ನತ ಸ್ಪಂದನ. ಪ್ರಾಯಶಃ ಪ್ರತಿಯೊಂದು ಮಾನವ ಜೀವವೂ ಧರೆಗೆ ಕಾಲಿಡುವಾಗ ವಿಶ್ವಮಾನವತೆಯ ಈ ಮೂಲ ಗುಣಗಳನ್ನು ಹೊಂದಿಯೇ ಇರುತ್ತೆ. ಭೂಮಿಯ ಮೇಲಿನ ಎಂಥ ಕ್ರೌರ್ಯವನ್ನೂ ಒಂದು ಕ್ಷಣ ಕರಗಿಸುವ […]

  time September 17, 2008

  ಮನೆಗೆ ಸೊಬಗು ಮನಕೆ ಮೆರುಗು…. ರಂಗು ರಂಗಿನ ರಂಗೋಲಿ

  – ರೋಹಿಣಿ ಸತ್ಯ, ಬೆಂಗಳೂರು ಭವ್ಯವಾದ ಬಂಗಲೆಯಾಗಲಿ, ಚಿಕ್ಕದಾದ ಚೊಕ್ಕದಾದ ಪುಟ್ಟ ಮನೆಯಾಗಿರಲಿ ಅಥವಾ ಸಣ್ಣ ಗುಡಿಸಲೆ ಆಗಿರಲಿ ಅದರ ಅಂಗಳದಲ್ಲಿ ಸೂರ್ಯೋ ದಯಕ್ಕೆ ಮನಮೋಹಕವಾದ ರಂಗೋಲಿ ಇರುವುದು ನಮ್ಮ ಭಾರತೀಯ ಸಂಪ್ರದಾಯ. ಮನೆಯೊಳಗಿನ ಸೌಂದರ್‍ಯವು ಒಳಗಿನ ವಿನ್ಯಾಸಕಲೆ ಮತ್ತು ಪೀಠೋಪಕರಣಗಳಿಂದ ಅಳೆಯಬಹುದಾಗಿದೆ. ಒಂದು ಮನೆಯ ಅಂದ ಚೆಂದ ಕೇವಲ ಇಷ್ಟಕ್ಕೆ ಸೀಮಿತವಲ್ಲ. ಆ ಮನೆಯ ಪರಿವಾರದ ಮನದೊಳಗಿನ ಮೈತ್ರೀಭಾವ, ಸಂಸ್ಕಾರ ಅವರ ನಡೆನುಡಿಗಳು ಸೌಹಾರ್ದತೆಯು ಆ ಮನೆಗೆ ಸೊಬಗನ್ನು ನೀಡುವಲ್ಲಿ ತಮ್ಮ ಪಾಲನ್ನು ಹಂಚಿಕೊಳ್ಳುತ್ತವೆ. ಹಾಗೆಯೇ […]

  time September 17, 2008

  ಸ್ನೇಹದ್ದೊಂದು ಹೊಸಮುಖ……..

  – ನವೀನ ಭಟ್ ಗಂಗೋತ್ರಿ ಸಾಲ್ಕಣಿ, ಶಿರಸಿ. ಈ ಪ್ರಪಂಚದಲ್ಲಿ ಅತ್ಯಂತ ಸುಂದರವಾದದ್ದು, ಆಸ್ವಾದನೀಯ ಆದದ್ದು ಮತ್ತು ಹೆಚ್ಚಿನ ಮೌಲ್ಯಯುತ ವಾದದ್ದು ಸ್ನೇಹ. ಒಂದು ನಿಚ್ಚಳ, ನಿರ್ಮಲ ಸ್ನೇ ಕೊಡುವ ಆನಂದ ಬದುಕಿನ ಉಳಿದ ಆನಂದಗಳಿಗಿಂತ ಹೆಚ್ಚು ಅಪೇಕ್ಷಣೀಯವಾಗಿ ತೋರುತ್ತದೆ. ಈ ಭೂಮಿ ಮೇಲೆ ಎಷ್ಟು ಜೊತೆ ಹೃದಯಗಳಿವೆಯೋ ಅಷ್ಟು ಬಗೆಯ ವಿಭಿನ್ನ ಸ್ನೇಹಗಳಿವೆ. ’ಸಮಾನ ಗುಣ ವ್ಯಸನೇಷು ಸಖ್ಯಂ’ ಎನ್ನುತ್ತದೆ. ಸಂಸ್ಕೃತ ಸುಭಾಷಿತದ ಒಂದು ಸಾಲು. ಸಮಾನ ಗುಣ ಮತ್ತು ಒಂದೇ ಬಗೆಯ ಹವ್ಯಾಸ (ವರ್ತನೆ) […]

  time September 17, 2008

  ಪ್ರೀತಿ ಎಂಬ ಸುರಿಮಳೆಯೋ ! ಮೋಹವೆಂಬ ಬೆಂಕಿಮಳೆಯೊ !!

  – ಕೃತಿಕಾ ಹೆಚ್.ಎಸ್.,ಬೆಂಗಳೂರು ’ಪ್ರೀತಿ ಹುಟ್ಟೋದು ಕಣ್ಣಿಂದ’ ಎಂದು ಬಹಳ ಜನರ ಅನಿಸಿಕೆ. ಆದರೆ ನನ್ನ ಪ್ರಕಾರ ಪ್ರೀತಿ ಹುಟ್ಟೋದು ಹೃದಯದಲ್ಲಿ. ಇಂದಿನ ಯುವ ಜನಾಂಗದ ಪ್ರಕಾರ ಪ್ರೀತಿಯ ಉದ್ಭವವಾಗುವುದು ಕಣ್ಣಿನಲ್ಲೇ ಎಂಬುದು ಸತ್ಯದ ಮಾತು. ಪ್ರೀತಿಗೆ ಕೇವಲ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಆಂತರಿಕ ಸೌಂದರ್ಯ ಬಹಳ ಮುಖ್ಯವಾಗುತ್ತದೆ. ನಾವು ಯಾವುದೇ ವ್ಯಕ್ತಿಯನ್ನು ನೋಡಿದಾಗ ಆತನಲ್ಲಿ ಆತನ ಹೊರಗಿನ ಸೌಂದರ್ಯದ ಜೊತೆಗೆ ಆತನ ಆಂತರಿಕತೆ ಹಾಗೂ ವ್ಯಕ್ತಿತ್ವವೂ ಕಾಣುತ್ತದೆ. ಪ್ರೀತಿ ಅಂದ್ರೆ, It’s not just for […]

  time September 17, 2008

  ನಾಡಹಬ್ಬಕ್ಕೊಂದು ಚಿಂತನೆ

  -ಪ್ರಿಯಾ ಎಂ., ಕಲ್ಲಬ್ಬೆ ನಾಡ ದೇವಿಯ ಗುಡಿಯ ಮುಂಗಡೆ ಹಾಡುತಿರುವುದು ಕೋಗಿಲೆ ಕಾಳ ಕತ್ತಲೆ ಕಳೆದು ಬೆಳಗಿನ ಕೋಳಿ ಕೂಗಿತು ಆಗಲೇ ನಮ್ಮ ನಾಡದೇವಿಯ ಮುಂದೆ ಕೋಗಿಲೆ ಹಾಡುತ್ತಿದೆ. ಆದರೆ ಅದರ ದನಿಯ ಇಂಪು ತಾಯಿಯ ಕಿವಿಯನ್ನು ತಲುಪಲು ನಾವು ಬಿಡುತ್ತಿಲ್ಲ ಮುಂಜಾನೆಯಿಂದ ಸಂಜೆಯವರೆಗೂ ಕರ್ಕಶದನಿ ಯಿಂದಲೇ ತುಂಬಿದೆ ಇಂದು ನಾಡದೇವಿಯ ಮಡಿಲು. ಅಬ್ಬರದ ಸ್ಟೀರಿಯೋಗಳ ಗಬ್ಬು ಹಾಡುಗಳಲ್ಲಿ ಕನ್ನಡ, ಕನ್ನಡ ಅಂತ ನವೆಂಬರ್ ತಿಂಗಳಿಡೀ ಕೂಗಿದರೆ ಮುಗಿದು ಹೋಯಿತೆ ನಾಡಹಬ್ಬ? ಈ ಪರಿಯ ಹಬ್ಬ ದೇವಿಯ […]

  time September 17, 2008

  ’ಸ್ತ್ರೀ’ ಎಂದರೆ ಅಷ್ಟೇ ಸಾಕೆ?

  – ಸಿಂಚನ, ಎನ್.ಮೂರ್ತಿ, ಶಿವಮೊಗ್ಗ ಪ್ರಾಕೃತವಾಗಿ ಅವಳು ಶ್ರೇಷ್ಠಳೇ, ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಶ್ರೇಷ್ಠತೆಯನ್ನು ಅವಳು ಮೈಗೂಡಿಸಿ ಕೊಂಡಾಗ ಮಾತ್ರ ಆಕೆ ಶ್ರೇಷ್ಠ ಸ್ತ್ರೀ ಆಗುತ್ತಾಳೆ ಅಲ್ಲವೇ? ಅದನ್ನು ಬಿಟ್ಟು ಕೇವಲ ಆರ್ಥಿಕ ಅಥವಾ ದೈಹಿಕ ಸ್ವಾವಲಂಬನೆಯನ್ನೇ ಸ್ತ್ರೀತ್ವದ ಪರಿಪರ್ಣತೆ ಎಂದರೆ ಹೇಗೇ? ಆಕೆ ಮಾನಸಿಕವಾಗಿ, ಬೌದ್ಧಿಕವಾಗಿ ಹೆಚ್ಚಾಗಿ ಹಾರ್ದಿಕವಾಗಿ ಆಕೆ ಸ್ತ್ರೀ ಆಗಬೇಕು. ಆಗ ಆಕೆ ಪರಿಪೂರ್ಣ ಅಲ್ಲವೇ? ಮೊನ್ನೆ ಎಂದಿನಂತೆ ನಮ್ಮ ’ಬಡವರ ಬಂಧು’ ಬಿ.ಎಂ.ಟಿ.ಸಿ. ಬಸ್‌ನಲ್ಲಿ ನೇತಾಡುತ್ತಾ, ಓಲಾಡುತ್ತಾ ಕಾಲೇಜ್‌ಗೆ […]