• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಕಾವ್ಯ ರಶ್ಮಿ

    ಕಾವ್ಯ ರಶ್ಮಿ


    time September 15, 2008

    ದೀಪವಾಗುವಾ

    - ಸು. ವಿನಯ ದಂಟಕಲ್

    ದೀಪವಾಗುವಾ ಬನ್ನಿ
    ತಿಮಿರ ಕಳೆಯುವಾ….. ||
    ಒಡಲಿನಲ್ಲಿ ಕತ್ತಲಿಟ್ಟು
    ಸುತ್ತ ಬೆಳಕ ಪ್ರಭೆಯ ಬಿಟ್ಟು
    ಜೀವ ರಸವಾ ಒತ್ತೆ ಇತ್ತು
    ಬಾಳು ಬೆಳಗುವಾ ||
    ಕರಿಯ ಮುಸುಕು ಓಡಿಸೀ
    ಬೆಳ್ಳೀ ಬೆಳಕು ಮೂಡಿಸಿ
    ಹೊಸತು ಆಸೆ ಹುಟ್ಟಿಸಿ
    ಮಿನುಗಿ ಮೆರೆಯುವಾ ||
    ಒಡಲ ಬತ್ತಿ ಉರಿಯುವಾಗ
    ಜೀವ ತೈಲ ಆರುವಾಗ
    ವ್ಯರ್ಥ ಬಾಳು ಬೆಳಗುವಾಗ
    ಉರಿದು ಅರಿಯುವಾ ||

    time September 15, 2008

    ಬೇರು

    -ಮಾನಸತೇಜ, ಮೈಸೂರು

    ತನುವು ತನುವಾಗಿ
    ನಶಿಸುತ್ತಿದೆ…..
    ನಶೆಯಿಂದಲಿ ತಾನೇ….
    ಆಶಿಸುತಿದೆ
    ವ್ಯರ್ಥ ಪಷಣೆ…! ||
    ಕರಗಿ ಕಲ್ಲು ಮಣ್ಣು,
    ಮರದಿ ಬೆಳೆದ ಹಣ್ಣು…….
    ಮಣ್ಣಾಗುವುದು ಮತ್ತೆ……!

    ಮತ್ತೆ ಚೇತನಕೆ ಸಾಕ್ಷಿ,
    ’ಸಾಕ್ಷಿ’ ತನಗೆ ತಾನೇ ತಾನೆ?
    ಅರಿವಾದರೆ ಜ್ಞಾನ.
    ಅನುಭೂತಿಯ ಸಾಕ್ಷಾತ್ಕಾರ ||
    ಅಲ್ಲಿಯವರೆಗೆ
    ತನುವು ತನುವಾಗಿ
    ನಶಿಸುತಿದೆ …..
    ನಶೆಯಿಂದಲಿ ತಾನೇ…
    ಆಶಿಸುತ್ತಿದೆ ವ್ಯರ್ಥ ಪೋಷಣೆ… !

    time September 15, 2008

    ಕಳಕಳಿ

    - ಕಮಲಾ.ಜಿ.ಹೆಗಡೆ, ಕೊಂಡದ ಕುಳಿ ಕುಮಟಾ

    (ವಿಶ್ವ ಗೋ-ಸಮ್ಮೇಳನದ ಹಿನ್ನೆಲೆಯಲ್ಲಿ)

    ನಿನಗಾಗಿಯೇ ವಿಶ್ವ ವ್ಯಾಪಕ ನೋಟ
    ಚರ್ಚಾಕೂಟ ಬಿಸಿಬಿಸಿ ಪಾಯಸದೂಟ
    ರಂಗು ರಂಗಿನ ನೋಟ ಭಾವಾವೇಶದ
    ಕೂಗಾಟ, ಕೇಳಿಯೂ ಕೇಳದಂತೆ ನೇಪಥ್ಯದಿ.
    ನೀ ಅದೇನು ಕೊರತೆ ಕಂಡೆ? ಸುಮ್ಮನಾದೆ?
    ಮರದ ನೆರಳಲ್ಲಿ, ಮರಳ ಮಡಿಲಲ್ಲಿ,
    ದಿಬ್ಬದಂಚಿನಲಿ, ಮುದುಡಿ ಮುದುಡಿ,
    ನಿಶ್ಚಲ, ನಿದ್ದೆ ಈಗ್ಯಾಕೆ, ನಿರ್ಲಕ್ಷ ಸರಿಯೇ?
    ಮಲೆನಾಡಗಿಡ್ಡ? ನಕ್ಕೆಯಾ ಮೆಲುಕು ಹಾಕುತ
    ಎಲ್ಲಿ ಗೋಮಾಳ? [...]

    time September 15, 2008

    ’ಸುನಾಮಿ’

    - ಪೂರ್ಣಿಮಾ ಜಿ. ಹೆಗಡೆ, ಭಟ್ಕಳ

    ಬದುಕು ಭವಿಷ್ಯವ ಕಳೆದು,
    ಕಹಿ ವಾಸ್ತವ ಕಣ್ಣೆದುರೇ ತೆರೆದು,
    ಸುತ್ತ ಮುತ್ತೆಲ್ಲ ಮೌನ ಕವಿದು
    ಬದುಕು ಬೀದಿಗೆ ಬಿದ್ದಿದೆ!
    ಕಾತರ ಕನವರಿಕೆಗಳೆಲ್ಲಾ ಕಳೆದು
    ಹೊಸತನದ ಸುಳಿವಿಲ್ಲ,
    ಅದೆಷ್ಟೋ ಜೀವಗಳಿಗೆ ಬದುಕು
    ಬರಡಾದ ಗಳಿಗೆಯೂ ಅರಿವಿಲ್ಲ!
    ಮತ್ತೆಂದೂ ತಲೆಯ ಮೇಲೊಂದು
    ಸೂರು ದಕ್ಕುವ ಖಾತರಿಯಿಲ್ಲ
    ’ಸಹಾಯ ಹಸ್ತ’ದ ನಡುವೆ ಗುಂಡಿಗಳಿವೆಯಲ್ಲ!
    ಅಳಿದು-ಉಳಿದವರ ಬದುಕು ಬಾಡುತಿಹುದಲ್ಲ!
    ಭೋರ್ಗರೆದ ’ಸುನಾಮಿ’ ಎಲ್ಲ ಮುಗಿಸಿ ಹೋಯಿತಲ್ಲ!
    [...]

    time September 15, 2008

    ಬಾ ಕವಿತಾ

    - ಸುಧಾ.ಎಂ, ಸಿದ್ದಾಪುರ

    ನಿನ್ನ ನೆನಹುಗಳಲ್ಲಿ
    ನಾನಿರುವೆ ಬಾ ಕವಿತಾ
    ನನ್ನ ನೋವುಗಳಲ್ಲಿ ಭಾಗಿಯಾಗಲು ಬಾ
    ಹೃದಯದಲಿ ಹೆಪ್ಪುಗಟ್ಟಿದ ಮನಗುದಿಗೆ
    ಪನ್ನೀರ ನೀ ಸುರಿದು ತಣ್ಣಗಾಗಿಸು ಬಾ
    ನಿನ್ನ ಸ್ನೇಹದಲ್ಲಿ ಸುಂದರ
    ಕನಸ ಕಂಡಿರುವ ನಾನು
    ವಾಸ್ತವಿಕ ಬದುಕಿಗೆ ದೂರವಾದೆ
    ವಿಷದೂಟದ ಹೋರಾಟದಲಿ
    ಸತ್ತು ಬದುಕಿ ಬಂದೆ.
    ಛಲ ಬಲವನಿತ್ತು ಬದುಕಿಸಿದೆ ಏಕೆ ?
    ಸ್ನೇಹ ಸಿಂಚನದಲ್ಲಿ ಮಮತೆಯ
    ಮಧುರ ನುಡಿ, ಸ್ವಾತಿ ಮುತ್ತಿನ ಮಳೆಯು
    ಸುರಿದಂತೆ ತಂಪಾಯ್ತು ಮನಕೆ
    ದೂರ ಹೋಗದಿರು, [...]

    time September 15, 2008

    ಪ್ರತೀಕ್ಷೆ

    -ಕಮಲಾ ಜಿ. ಹೆಗಡೆ,ಕೊಂಡದಕುಳಿ ಕುಮಟಾ

    ತುಳಿದು ತುಳಿಯುತ್ತಲೇ ಓಡುವರು
    ಕಾಣುವುದೇ ಇಲ್ಲ ನಾ
    ಕಂಡಂತೆ ಕಾಣುಗರ
    ಮುಗಿಲಕಡೆ ಮುಖ ಮಾಡಿ
    ಬಾಚುತ್ತ ಬಯಕೆಗಳ ಇಹದೆಚ್ಚರವಿಂದೇ
    ಕಾಣುವುದೇ ಇಲ್ಲ ನವಿರು
    ನಿಸ್ತೇಜ ನಿರ್ಜೀವ ಗಾಳಿಯಲಿ ತೇಲಿದಂತೆ
    ನಗುವಿತ್ತು ಲೋಲ, ಲೋಲೆಯರಲಿ
    ಕಸುವಿತ್ತು ಕೆಲವರಲಿ
    ಬಾನಾಡಿ ಮೃದುಸ್ಪರ್ಷ ಜಿಗಿದಾಡೋ
    ಎಳೆಕಂದ ಒಮ್ಮೊಮ್ಮೆ ಮಡಿಲೊಳಗೆ
    ಮುನಿಸಿಗೋ.ಮರುಳಿಗೋ..
    ಬಾಳಸಂಜೆಯ ಮುಗುಳು ಮುಳುಗು
    ಅರಳಿತ್ತು …ಬಾಡಿತ್ತು, ಕಾಣುತೆಲ್ಲವ ನಾ
    ಕಾಣದಿರೆ ನನ್ನ ಮೂಕಸಾಕ್ಷಿಯಲೂ
    ಅದೇನೋ ಸುಖವಿತ್ತು
    ಮರುಕಳಿಸೆ [...]

    time September 15, 2008

    ಆಸೆ- ಕನಸು

    - ನಿಶ್ಚಿತಾ ವಿ. ಬೆಂಗಳೂರು

    ಆಸೆಯೆಂಬ ರಂಗೋಲಿ ಜೀವನದ ಮನೆಗೆ
    ಕನಸೆಂಬ ತೋರಣವು ಮನೆಯ ಬಾಗಿಲಿಗೆ ||

    ತೋರಣದ ಹಸಿರೆಲ್ಲಾ ಬಿಸಿಲಿನಲಿ ಒಣಗುವುದು
    ರಂಗೋಲಿ ಹೆಸರೆಲ್ಲಾ ಮಳೆಬಂದು ಅಳಿಸುವುದು
    ಅದಕಾಗಿ ನೀನೆಂದೂ ಕೊರಗದಿರು ಕೂತು
    ನಿನಗಾಗಿ ಕಾದಿಹುದು ಜೀವನವು ಹೊಸತು ||

    ಹೊಸಮಾವಿನೆಲೆ ತೋರಣವ ಮರಳಿ ನೀ ಕಟ್ಟು
    ಮತ್ತೆ ಸಿಂಗರಿಸು ಹೊಸ ರಂಗೋಲಿ ಇಟ್ಟು
    ಒಳಗಿದ್ದರೂ ನೋವುಗಳ [...]

    time September 15, 2008

    ನಿದ್ರೆ

    - ಸರೋಜಿನಿ ಭಟ್,ಚಾಮರಾಜನಗರ

    ಮುಗಿದ ಹಗಲಿನ
    ಸಿಂಹಾವಲೋಕನದಿ….
    ನೋವು ನಿರಾಶೆಗಳ ಮೊತ್ತ
    ಮೇಲಾಗಿ ತೋರಿದಾಗ …
    ಅಸಹಾಯಕತೆಯ ಬಿಸಿ ಕಂಬನಿ,
    ನಿರಾಸೆಯ ನಿಟ್ಟುಸಿರಲ್ಲಿ ತೋಯ್ದು
    ಸುಕ್ಕಾದ ಹಾಸಿಗೆಯಲ್ಲಿ ಜೀವ
    ಹಿಡಿಯಾಗಿ ತೋರುತಿರಲು…
    ಅದೆಲ್ಲಿಂದಲೋ ಬಂದು ತನ್ನ
    ತೋಳ್ತೆಕ್ಕೆಯಲ್ಲಿ ನನ್ನ ಬಂಧಿಸುವ
    ಆತ್ಮೀಯ ಬಂಧು.