• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಹನಿಕವನಗಳು

    ಹನಿಕವನಗಳು


    time September 15, 2008

    ’ಬೇಲಿ’ಗವನಗಳು

    -ಎನ್ವೀ ವೈದ್ಯ ಹೆಗ್ಗಾರ್,ಶಿರಸಿ

    ಬೀಸುಗಾಳಿಗೆ
    ಬೇಲಿ ಕಟ್ಟಿ
    ನನ್ನ ಪಾಲಿನದಷ್ಟನ್ನು
    ಮಾರಿ ಬಿಡಬೇಕು
    ಬಂದ ಹಣದಲ್ಲಿ
    ನನ್ನ ಉಸಿರಿಗೆ
    ಮೂಗುತಿ
    ತೊಡಿಸಬೇಕು!
    —————
    ನಿನ್ನ ತೋಳ್ತೆಕ್ಕೆ
    ಹಿತ ಕೊಡುತ್ತದೆ
    ನಿಜ…….
    ನನ್ನ ಸುತ್ತ
    ಬೇಲಿಯಾಗುತ್ತದೆ !
    ———–
    ಯಾರೋ
    ನೆಟ್ಟುಹೋದರು
    ಕಂಬಗಳನ್ನು
    ತಂತಿಯೆಳೆದು
    ಸಂಬಂಧ ಬೆಸೆದೆ
    ಪರಸ್ಪರ…..
    ಈಗ ಹೊರಬರುವ
    ದಾರಿ ಹುಡುಕುತ್ತಿದ್ದೇನೆ
    ಕತ್ತು ಹಿಚುಕಿದೆ
    ಅಪಸ್ವರ!
    ———
    ಯಾವುದೋ
    ಉಮೇದಿಯಲ್ಲೊಮ್ಮೆ
    ಬೇಲಿ ಕಟ್ಟಲು ಶುರುವಿಟ್ಟಿದ್ದೆ
    ಈಗ ನೋಡಿದರೆ
    ನನ್ನ ಸುತ್ತ
    ಎಷ್ಟೊಂದು ಬೇಲಿಗಳು!

    time September 15, 2008

    ವಿಪರ್ಯಾಸ

    - ನವೀನ್ ಭಟ್, ಗಂಗೋತ್ರಿ,ಶಿರಸಿ

    ನನ್ನೊಳಗೇ ಹುಟ್ಟಿ
    ಉಸಿರುಗಟ್ಟಿ ಸತ್ತ
    ಅವಳ ಸಮಾಧಿಯ ಮೇಲೆ
    ಅವಳಿಗೇ ಕೊಡಬೇಕೆಂದಿದ್ದ
    ಕೆಂಗುಲಾಬಿಯೊಂದನಿಟ್ಟು
    ಮೂಕವಾಗಿ ಅಳುತ್ತಿದ್ದೇನೆ
    ನಾನು ಕೊಂದೆನಾ?
    ಅವಳೇ ಸತ್ತಳಾ?
    ಗೊತ್ತಿಲ್ಲದಿದ್ದರೂ….
    ನಾನಂತೂ ಅನುಕ್ಷಣವೂ
    ಸಾಯುತ್ತಿದ್ದೇನೆ ಅವಳಿಗಾಗಿ
    ನಾನು ಬಯಸಿರಲಿಲ್ಲ
    ಅವಳೇ ನನ್ನೊಳಗೆ ಚಿಗುರಿದಳು
    ನಾನು ಚಿವುಟಲಿಲ್ಲ
    ಆದರೆ…..ನೀರೆರೆಯಲೂ ಇಲ್ಲ
    ಮೊಗ್ಗು ಬಿಟ್ಟ ಲತೆ
    ಹೂವರಳಿಸುವ ಮುನ್ನ
    ಬತ್ತಿ ಹೋದ ಬಗ್ಗೆ,
    ನನ್ನ ನೋವು ಅದಮ್ಯ
    ಹಳೆ ನೆನಪುಗಳ ಮಂಜು ಕವಿದು
    ಕಾಣದಾಗಿದೆ ಗಮ್ಯ

    time September 15, 2008

    ನಾಡಸಿರಿ

    - ಪ್ರಿಯಾ ಎಂ. ಭಟ್,ಕಲ್ಲಬ್ಬೆ, ಕುಮಟಾ

    ನಾಡು ನಮ್ಮದು ನದಿಯು ನಮ್ಮದು
    ನಮ್ಮದೀ ಕರ್ನಾಟಕ
    ನೆಲವು ನಮ್ಮದು ಜಲವು ನಮ್ಮದು
    ನಾಡಸಿರಿ ಶುಭದಾಯಕ

    ಜಲಲಧಾರೆಯ ಸುಧೆಯ ಕನ್ನಡ
    ಹರಿದು ಹರಡಲಿ ನಾಡೊಳು
    ಭಾವಭಕ್ತಿಯು ಚಿಮ್ಮಿ ಹೊಮ್ಮಲಿ
    ಕನ್ನಡಿಗನ ನರ ನರದೊಳು

    ಹಂಪೆ ಹೊನ್ನಿನ ನುಡಿಯ
    ಮುಡಿಯಲಿ
    ಚೆಲುವ ಚಿನ್ನದ ನಾಡಿದು
    ರನ್ನ ಪಂಪರು ಹಾಡಿ ಹರಸಿದ
    ಸಿರಿಯ ಸಂಪದ ಬೀಡಿದು

    ಸ್ವರ್ಣ ದೀಪವ ಹಿಡಿದು ನಿಂತಿಹ
    ಭಾರತಾಂಬೆಯ [...]

    time September 15, 2008

    ಬಾ ಓ ಬೆಳಕೆ

    - ಡಾ|| ನಿವೇದಿತಾ ಹೆಗಡೆ, ಮೈಸೂರು

    ಓ ಬೆಳಕೆ ಬಾ ಬೆಳಗು ಮನದಂತರಾಳವನು
    ನೀನೋರ್ವ ಬೆಳಗಬಲ್ಲೆ ಹುದುಗಿರುವ
    ಕತ್ತಲನು
    ಆ ಮತವು, ಈ ಮತವು
    ಹೊಡೆದಾಡಲಿದು ನೆಪವು
    ಮೂಲ ತತ್ವವನರಿತರೆ ಜಗದ ಹಿತವು
    ಛಲವ ಸಾಧಿಸುವ ಬದುಕು
    ಜಗದೋದ್ಧಾರಕೆ ತೊಡುಕು
    ಮನುಕುಲವೊಂದೆಯಾದರೂ
    ತಮ್ಮತಮ್ಮೊಳಗೆ ಒಡಕು
    ಶುದ್ಧ ಶ್ರದ್ಧೆಯ ಮನವು ನೈಜತೆ
    ತುಂಬಿದ ಭಕ್ತಿ
    ಇಷ್ಟೆ ಸಾಕು, ಪಡೆಯಲು
    ಸುಖದುಃಖದಿಂ ಮುಕ್ತಿ.
    ಓ ಬೆಳಕೆ ಬಾ ಬೆಳಗು ಸನ್ಮಾರ್ಗದೆಡೆಗೆ
    ಅಡ್ಡದಾರಿಯಲಿ ತೊಳಲಿರುವ ಈ
    ಜನರಿಗೆ
    [...]

    time September 15, 2008

    ಬೆಳಗು

    - ಸುಂಕನಾಳ ವಿಶ್ವನಾಥ, ಶಿರಸಿ

    ಒಂದು ಮಾಘದ ಮುಂಜಾವು
    ಪಸರಿಸಿದ ಮಬ್ಬಾದ ಮಂಜಿನಲಿ
    ರವಿತೇಜದ ಸುಳಿವೇ ಇಲ್ಲ
    ಪ್ರಕೃತಿಯೊಂದಿಗೆ ರವಿಯ ಸರಸವಿನ್ನೂ…… ?
    ರಾತ್ರಿ ಕಳೆದುದೇ ತಿಳಿಯದೇ!
    ಎತ್ತ ನೋಡಿದರತ್ತ ಶ್ವೇತ
    ವರ್ಣದ ಛಾಯೆ, ಪಟಪಟನೆ
    ಉದುರಿ ಹವಳ ಮಣಿಯು
    ಗೆಳತಿಯ ಹೆರಳುಗಳಂತೆ ಅದುರಿವೆ
    ಎಲೆಗಳು ಸೊಂಪಾದ ಗಾಳಿಗೆ
    ಅಂತೂ ಮೂಡಣದಲಿ ಮೂಡಿದನು
    ರವಿಯು ಕಿರಣ ಬಾಹುಗಳಿಂದ
    ಬಿಗಿದಪ್ಪಿದನು ಲೋಕವ ರವಿಯ
    ಸರಸಕೆ ಮಂಜು ನಾಚಿ
    ನೀರಾಯಿತು ಕಳಚಿ ಬಿದ್ದಿತು ಶ್ವೇತವರ್ಣದ ಪರದೆ,
    ಬೆಳಗು ಹರಿಯಿತು [...]

    time September 15, 2008

    ಬಂಧನ

    - ಡಾ|| ರಕ್ಷಾ ರಾವ್ ,ಮೈಸೂರು

    ಆ ಮೋಹಕ ಸಂಜೆಯಲಿ, ಹೊಂಗೆಯ ನೆರಳಿನಲಿ
    ಕುಳಿತಿರಲು ಕಂಡೆನಾ ಹಕ್ಕಿ
    ವೈಭವದಿ ಗರಿಗೆದರಿ, ಭುವಿಯಿಂದ ಗಗನದೆಡೆ
    ಹಾರುತಿದೆ ಸಂತಸ ಉಕ್ಕಿ ||
    ಮೈಯೆಲ್ಲಾ ಹಗುರಾಗಿ, ಮನವೆಲ್ಲಾ ಹೂವಾಗಿ
    ಉಕ್ಕಿತು ಹಾರುವ ಬಯಕೆ
    ಯಾವ ಮೋಹವೂ ಇರದ, ಯಾವ
    ಬಂಧವೂ ಇರದ ತಾರೆಗಳ ಗೂಡಾದ ನಭಕೆ ||
    ಬಳಸಿ ಎಳೆದವು ನನ್ನ ಬಂಧಗಳ ಸರಪಳಿಯು
    ಏರದಂತೆ ಆ ಎತ್ತರಕೆ
    ದುಃಖ ನೋವುಗಳಿರುವ ಮೋಹ [...]

    time September 15, 2008

    ಚಾಲಾಕು

    -ಸಂಜೆಬಕುಲ, ಶಿರಸಿ

    ಕಣ್ಣಲ್ಲೇ ಹುಟ್ಟುವ ಮಧುರ ಪ್ರೀತಿಗೆ
    ಕಣ್ಣನ್ನೇ ಕೀಳುವ ರೀತಿಯುಂಟು
    ಎದೆಯಲ್ಲೇ ಮನೆ ಮಾಡುವ ಪ್ರೇಮಕೆ
    ಎದೆಯನ್ನು ಬಗೆವ ಛಾತಿಯುಂಟು

    time September 15, 2008

    ನಿರೀಕ್ಷೆ

    - ಡಾ|| ರಾಜೇಶ್.ವಿ, ಮೈಸೂರು.
    ಅಲೆಗಳು ಕಾಯುವುದಿಲ್ಲ
    ಯಾರಿಗೂ,
    ಕ್ಷಣಗಳೂ ಹಾಗೆಯೇ
    ಆದರೂ ಕಾಯುತ್ತಿದ್ದೇನೆ
    ನಾನು ನಿನಗಾಗಿ
    ಅಲೆಗಳಂತೆ
    ಅಲೆಮಾರಿಯೂ
    ಕ್ಷಣಗಳಂತೆ ಕ್ಷಣಿಕನೂ
    ನಾನಲ್ಲವಾದ್ದರಿಂದ

    time September 15, 2008

    ರಕ್ತ

    ಸಂಜೆಬಕುಲ,ಶಿರಸಿ

    ಗುಂಡಿಗೆ ಚೆಲ್ಲುವ ಯೋಧ
    ಎದೆಸೀಳುವ ವ್ಯಾಧ
    ಇಬ್ಬರೂ ರಕ್ತ ಚೆಲ್ಲುತ್ತಾರೆ
    ವಿಚಿತ್ರವೆಂದರೆ……….
    ಹರಿವ ರಕ್ತ
    ದೇಶದ ಜೀವ ಉಳಿಸಬಲ್ಲುದು
    ರಾ?ಭಕ್ತನ ಪ್ರಾಣ
    ಅಳಿಸಬಲ್ಲುದು!

    time September 15, 2008

    ಏಕೈಕ

    ಎಲ್ಲರ ಬುರುಡೆಗೂ
    ದಿವಿನಾಗಿ
    ತಟ್ಟಬಲ್ಲ ಏಕೈಕ,
    ಕ್ಷೌರಿಕ!
    ಹೀಗೊಂದು ಹೆಮ್ಮೆಯಿದ್ದೂ
    ’ಹಜಾಮ’ ಎಂದು
    ಬೈಸಿಕೊಳ್ಳುವ ಲೋಕೈಕ!