• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಹನಿಕವನಗಳು

  ಹನಿಕವನಗಳು


  time September 15, 2008

  ಬದಲಾವಣೆ

  – ಡಾ| ಪ್ರಶಾಂತ್ ಬಿ., ಮೈಸೂರು ಅವಳ ದಿವ್ಯ ನಿರ್ಲಕ್ಷ್ಯದಿಂದ ನಿರ್ಬಂಧವಿರದೆ ಸಾಗಬೇಕಿದ್ದ ನನ್ನ ಅವಳ ಪ್ರೀತಿ ನಿರ್ಮಲವಾಗಿದ್ದ ಒಲವು ನೆರಳೇ ಸಿಗದ ಹಾಗೆ ನಿರಾಕಾರವಾಗಿ ಹೋದಾಗ ನಿಶ್ಯಬ್ದವಾಗಿ ಅತ್ತು ನಿರಾಳವಾದ ಮನಸ್ಸುs ನೆನಪುಗಳ ಅಲೆಯಲ್ಲಿ ನಿರ್ಧಾರಗಳ ಮರೆಯಲ್ಲಿ ನಗುನಗುತ ಸಾಗಿ ನಡೆದಿದೆ ಅನ್ವೇಷಣೆ ನಿಜದ ಮನದರಸಿಗಾಗಿ

  time September 15, 2008

  ನಿನ್ನ ನೆನಪು

  – ರಕ್ಷಾರಾವ್,ಮೈಸೂರು ಮೌನ ಕದನದಲೂ ಸೆಳೆವ ನಿನ್ನ ಕಂಗಳ ಮಿಂಚು ಬಚ್ಚಿಟ್ಟ ಭಾವಗಳ ಬಿಚ್ಚಿಡುವ ಕುಡಿನೋಟ ನಿದ್ದೆಗಳ ಕದ್ದಿರುವ ಕಿರುನಗೆಯ ಸಂದೇಶ ಕಣ್ಮುಚ್ಚಿದರೂ ಕಾಡೋ ನಿನ್ನ ಸ್ಪರ್ಶದ ಪುಳಕ……. ಬಂದುಬಿಡಲೇ ಗೆಳೆಯಾ ಎನ್ನೆಲ್ಲಾ ಎಲ್ಲೆಯನು ಮೀರಿ ಕಾಡುವ ನಿನ್ನ ಕಣ್ಮಿಂಚ ಹಾದಿಯಲಿ…. ಪುಸ್ತಕದ ಹಾಳೆಯಲೂ ಸೀರೆಯ ರಂಗಿನಲೂ…. ಬಣ್ಣ ಮಾಸಿದ ಗೋಡೆಯಲೂ ಬಿಡದೇ ಕಾಡೋ ನಿನ್ನ ಬಿಂಬವನರಸಿ…. ಬರಲೇನು ನಿನ್ನೆಡೆಗೆ ಪೌರ್ಣಮಿಯ ಚಂದ್ರನೆಡೆ ಕೈಚಾಚೋ ಹಸಿದಲೆಗಳಂತೆ ಮನದಾಳದಿ ಬೇರ್‍ಬಿಟ್ಟ ಸುಪ್ತ ಉನ್ಮತ್ತ ನೆನಪುಗಳ ಕಣ್ಣಾಮುಚ್ಚಾಲೆಯಲಿ ನೀನು ಕಳೆದು […]

  time September 15, 2008

  ಯೋಧನ ಪತ್ನಿ

  – ಕಪಿಲಾ ಶ್ರೀಧರ್, ಬೆಂಗಳೂರು ಕಾದು ಕೂತಿಹಳವಳು ಒಡಲನ್ನು ಹಿಡಿಮಾಡಿ ಬಿಟ್ಟ ಬಿರುಗಣ್ಣಿನಲಿ ಹಣತೆಯೊಂದನು ಹಚ್ಚಿ ನಟ್ಟಿರುಳ ರಾತ್ರಿಗಳ ಸುಟ್ಟು ಹಾಕುವ ತವಕ ತಿದಿಯೊತ್ತಿ ಬಂದಂತೆ ಉಸಿರಾಟವು ……. ಚಂದದ ಸಜ್ಜಿಕೆಯ ಕೈಬೆರಳ ಮೇಲೊಂದು ಚೆನ್ನಿನ ಪ್ರೀತಿಯುಂಗುರವಿಟ್ಟ ಬಾಳಗೆಳೆಯ, ಯಾವ ದುಷ್ಯಂತನ ಶಾಪದ ಶಕುಂತಲೆಯೋ ಕಾಯುತಿಹಳಿಂದಿಲ್ಲಿ ವಿರಹವಾಗಿ….. ಒಲವ ಹೂಮಂಚದಲಿ ಭಾವನೆಯ ರಸತೇರು ಏರುತೇರುತ ಸವಿದ ರಮ್ಯತೆಯ ಸೊಬಗು…. ಘಮ್ಮನೆಯ ಮೊಲ್ಲೆ ಹೂ ನನ್ನಲ್ಲಿ ಅರಳಿಹುದು ಬರುವೆಯೆಂದಿಗೆ ನಲ್ಲ ಎಂದು ಕಾದಿಹುದು……… ಸ್ವಪ್ನ ಬೃಂದಾವನದಿದಿರು ವಾಸ್ತವದ ರಥವೇರಿ […]

  time September 15, 2008

  ಬರಹ

  – ಪೂರ್ಣಿಮಾ ಹೆಗಡೆ, ಶಿರಸಿ ಬರಹ ! ಎಷ್ಟು ಸುಂದರ ಎನ್ನುವ ಕೆಲವರಿಗೆ, ಒಮ್ಮೊಮ್ಮೆ ಲೇಖನಿ, ಬಯಕೆ – ಬಿಕ್ಕಳಿಕೆ, ನೋವು – ನಲಿವು, ಮೌನ – ಮಾತುಗಳ ಭಟ್ಟಿ ಇಳಿಸಲಾಗದೆ ಸೋತದ್ದು ಬರಲಾರದೇ ಅರಿವಿಗೆ

  time September 15, 2008

  ಸುಖಿ

  – ಕಮಲಾ ಜಿ ಹೆಗಡೆ, ಕೊಂಡದಕುಳಿ,ಕಲ್ಲಬ್ಬೆ ಕುಮಟಾ ಗೊರಕೆ, ಗೊರಕೆ, ಗೊರಕೆ ಹಾಡು ಹಗಲೇ ಗಡದ್ದೇ ಸೊಗಸಾದ ಸುಖ ನಿದ್ದೆ. ಜಗುಲಿಮೇಲೆ ಅಂಗಾತ ಮಲಗಿ ಅಪ್ಪನ ಗೊರಕೆ ಪುಂಖಾನುಪುಂಖವಾಗಿ. ಅಡಿಕೆ ಬೆಲೆ ಕುಸಿತ, ತೆಂಗಿನ ’ನುಸಿ’ರೋಗ ಮದುವೆ ಕಾಣದೆ ತಲೆನೆರೆತ ಮಗ ಚೊಚ್ಚಲ ಬಾಣಂತನಕೆ ತವರಿಗೆ ಬಂದ ಹೆಣ್ಮಗಳು ಇದಾವುದರ, ಹಂಗಿಲ್ಲದೇ ಹೊರಟಿಹ ನಿರಂತರ ಗೊರಕೆ. ಪಕ್ಕದಲ್ಲೇ ಅಮ್ಮನ, ಸಣ್ಣಗೆ ತೂಕಡಿಕೆ, ನರಳಿಕೆ ’ಮಕ್ಕಳೇ ಎಲ್ಲೋದಿರೋ’ ಅಲ್ಲಲ್ಲೆ ಕಾಳಜಿ ’ಸೊರಸೊರ’ ಮೂಗೆಳೆದು ಗೋಲಿ ಆಡುವ ಹುಡುಗರ ’ಕಚಪಿಚ’ […]

  time September 15, 2008

  ತರುಣರಿರಾ, ಎದ್ದೇಳಿ!

  – ಕುವೆಂಪು ’ರಾಷ್ಟ್ರೀಯ ಯುವದಿನ’ದ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪುರವರ ಸ್ಫೂರ್ತಿದಾಯಕ ಗೀತೆ ’ಕಾವ್ಯದೀವಿಗೆ’ಯಲ್ಲಿ ಹೋಗುತಿದೆ ಹಳೆಕಾಲ, ಹೊಸಕಾಲ ಬರುತಲಿದೆ ಬರುತಲಿದೆ ಹೊಸದೃಷ್ಟಿ ಹೊಸ ಬಯಕೆಗಳಲಿ ಹೋಗುತಿದೆ ಹಳೆಬಾಳು, ಹೊಸಬಾಳು ಬರುತಲಿz ಬರುತಲಿದೆ ಕುದಿಗೊಂಡು ತರುಣರೆದೆಗಳಲಿ ತರುಣರಿರಾ, ಎದ್ದೇಳಿ! ಎಚ್ಚರಗೊಳ್ಳಿ! ಕೇಳಿ! ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ ಭಾರತದ ಬಣಗು ಬಾಳ್ಮರವನಲುಗಾಡಿ ಉದುರುತಿದೆ ಮುದಿಕಡ್ಡಿ ತರಗು ಹಣ್ಣೆಲೆಗಳೆಲ್ಲ ನಲಿಯುತಿವೆ ನಳನಳಿಸಿ ಹೊಸ ಚಿಗುರು ಮೂಡಿ ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ನೋಡಿ! ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯ ಕೊಚ್ಚಿ ಹೋಗಲಿ […]

  time September 15, 2008

  ಹಾರೈಕೆ ಯುವ ಚೇತನಕೆ

  – ಕಮಲಾ ಜಿ.ಹೆಗಡೆ, ಕೊಂಡದ ಕುಳಿ. ಅದುಮಿಟ್ಟ ಭಾವಗಳ ಬಂಧಿಸದೆ ತೆರೆದುಬಿಡು ಹರಿದುಬರಲಿ, ಧುಮ್ಮಿಕ್ಕಿ ಪ್ರೀತಿ ಸುಧೆಯು. ಬಯಲ ಉಸಿರೊಡನೆ ಉಸಿರಾಗಿ ಬೆರೆತು ಬಿಡು ತೊಳೆದು ಹೋಗಲಿ ಜಗದ ಎಲ್ಲ ಕಶ್ಮಲವು ಮನೆಮನೆಯ ರಂಗೋಲಿ ಕೆಂಪು ಕೆಂಪಿನ ಬಣ್ಣ ಹಸಿದ ಹೊಟ್ಟೆಯ ನಡುವೆ ಚೀರಿ ಚಿಮ್ಮಿದ ಬಣ್ಣ ಪೊರೆವ ತಾಯಿಯ ಮರೆತು ಕೊರಳ ಸೀಳಿದ ಬಣ್ಣ ಗಡಿಕಾಯ್ವ ಯೋಧರಾ ಬಿಸಿನೆತ್ತರಾ ಬಣ್ಣ ಕೋಮುದಳ್ಳುರಿಯಲ್ಲಿ ಬೆಂದು ಕರಗಿದ ಬಣ್ಣ ವ್ಯೋಮಧೂಮದಿ ನೋಡು ಚಿಗುರು ಕಮರಿದ ಬಣ್ಣ ಬಣ್ಣದೋಕುಳಿಯಲ್ಲಿ ಮುಳುಗಿ […]

  time September 15, 2008

  ವೈಪರೀತ್ಯ

  -ಮಹಾದೇವಪ್ಪ,ತಾಳಗುಂದ, ಸಾಗರ ಹೊಳೆವ ತಾರೆಗಳು ಮೊಳೆತ ಬೀಜಗಳು ಕಳಿತ ಫಲಗಳು ಕಲ್ಪಿತ ಭಾವಗಳು ಎಷ್ಟೊಂದು ತುಂಬಿವೆ ಆದರೆ ಎಲ್ಲಾ ಕಾಲಕ್ಕಲ್ಲ ಯಾವುದೋ ಘಟ್ಟದಲ್ಲಿ ಮಟ್ಟ ಹಾಕಿ ನಮ್ಮನ್ನು ಮರೆ ಮಾಚುತ್ತವೆ ಬರೆ ಎಳೆಯುತ್ತವೆ ಹೊರೆಯಾಗಿ ಕಾಡುತ್ತವೆ

  time September 15, 2008

  ನನ್ನ ಕವನ

  – ವಿನಯ ದಂಟಕಲ್ ನನ್ನ ಕವನ ತೊದಲು ನುಡಿ ಬಿರಿದು ಹೊರಗೆ ಬಂದಿದೆ | ನಲಿವ ಜಗದ ಚೆಲುವ ಕಂಡು ಒಲವ ತುಂಬಿ ಹರಿಸಿದೆ || ಕೌತುಕ, ಭಯ, ಭೀತಿಗಳೆಡೆ ನನ್ನ ಕವನ ಸಿಲುಕಿದೆ ಹಲವು ಕೆಲವು ಪ್ರೀತಿ ನುಡಿಯ ಕೇಳ ಬಯಸಿ ಕಾದಿದೆ || ಗಾನ, ನೃತ್ಯ ನಟನೆಗಳನು ನನ್ನ ಕವನ ಬಯಸಿದೆ ನೂರಾರು ಕನಸುಗಳ ಬಯಸಿ ಬೆನ್ನು ಹತ್ತಿದೆ || ನೂರಾರು ರಸ ನಿಮಿ?ದ ಕವನ ಬಳಸಿಕೊಂಡಿದೆ ನನ್ನ ಎದೆಯ ಆಳದಿಂದ ಕೊನರಿ ಹೊರಗೆ […]

  time September 15, 2008

  ಪ್ರತಿಬಿಂಬ

  – ಸುಲೋಚನಾ, ಶಿರಸಿ ಇತ್ತೀಚೆಗೆ ಕನ್ನಡಿ ನೋಡುವುದೆಂದರೆ ಭಯವಾಗುತ್ತಿದೆ, ಅಲ್ಲಿ ನನ್ನ ಬದಲು ಅಮ್ಮ ಕಾಣುತ್ತಾಳೆ ಆ ವೇದನೆ ತುಂಬಿದ ಮುಖ ಅಪ್ಪನ ಹಿಂಸೆಯನ್ನು ಗುಟ್ಟಾಗಿಟ್ಟು, ಏನೋ ಹೇಳಲು ಬಯಸುವ ಕಣ್ಣು, ಮತ್ತೆ ಮತ್ತೆ ನೋಡಿದರೂ ಅಮ್ಮನೇ ಕಾಣುತ್ತಾಳೆ ಅವಳ ಕಣ್ಣೀರಿನೊಂದಿಗೆ ನನ್ನ ಬದುಕು ಬೆಸೆದಿದ್ದಕ್ಕೊ ಅಥವಾ, ಆ ಮೂಕ ವೇದನೆ ಇನ್ನು ನನ್ನದಾಗಲಿವೆಯೆಂಬ ಸೂಚನೆಯೋ? ಭಯದಿಂದ ಕನ್ನಡಿ ನೋಡುವುದನ್ನೇ ಬಿಟ್ಟಿದ್ದೇನೆ.