• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಚಿಂತನ ರಶ್ಮಿ

  ಚಿಂತನ ರಶ್ಮಿ


  time September 15, 2008

  ಬೆಳ್ಳಂಬೆಳಿಗ್ಗೆ ವಧಾಸ್ಥಾನದಲ್ಲಿ ನಿಂತು….

  – ಸಂಜಯ್ ಭಟ್ ಬೆಣ್ಣೆ, ಶಿರಸಿ ಅಂದು ಬೆಳಿಗ್ಗೆ ಹಾಗಿತ್ತು. ರತ್ತ ತರ್ಪಣವನ್ನೇ ಬೆಳಗಿನ ಉಸಿರಾಗಿಸಿಕೊಂಡ ಕ್ಷೇತ್ರದಲ್ಲಿ ಕಾಲಿಡಬೇಕಾಗಿ ಬಂದಿದ್ದಕ್ಕೆ ಬಹುಶಃ ಜೀವನದ ಕೊನೆಯವರೆಗೂ ವಿಷಾದಿಸುತ್ತೇನೆ. ಕಣ್ಣಂಚಿನಲ್ಲಿ ಹನಿಕೂಡ ನೆನಪಾದಾಗಲೆಲ್ಲ ಸಾಂದ್ರಗಟ್ಟುತ್ತಲೇ ಇರುತ್ತದೆ. ಮಾನವನೆದೆಯಲಿ / ಆರದೆ ಉರಿಯಲಿ / ದೇವರು / ಹಚ್ಚಿದ ದೀಪ || ರೇಗುವ ದನಿಗೋ / ರಾಗವು ಒಲಿಯಲಿ / ಮೂಡಲಿ / ಮಧುರಾಲಾಪ ಎಂಬ ಸಾಲುಗಳಲ್ಲಿ ಪರಮ ನಂಬಿಕೆ ಇಟ್ಟ ನಾನು ಆ ಚಳಿಗಾಲದ ಬೆಳ್ಳಂಬೆಳಿಗ್ಗೆ ಸಾವೆಂಬ ಆಕ್ರಂದನದ ಪರಮ […]

  time September 15, 2008

  ಸಂಸ್ಕೃತಿಯ ಸಂರಕ್ಷಣೆಯ ಮೂಲಕ ರಾಷ್ಟ್ರೀಯ ಏಕತೆ

  -ಮಂಗಳಗೌರಿ.ಎಂ ಕಣಿಯೂರು, ದ.ಕ ನಮ್ಮ ಭಾರತೀಯ ಸಂಸ್ಕೃತಿ ಸನಾತನವಾದುದು, ಪ್ರಸಿದ್ಧವಾದುದು. ಪ್ರಸ್ತುತ ನಮ್ಮ ಮುಂದಿರುವ ಸಮಸ್ಯೆಗಳಿಗೂ, ಮುಖ್ಯವಾಗಿ ಏಕತೆಯ ಕೊರತೆಗೆ, ಪರಿಹಾರ ಸಂಸ್ಕೃತಿಯ ರಕ್ಷಣೆ. ರಾಷ್ಟ್ರೀಯತೆ, ವಿಶ್ವದೃಷ್ಟಿಗಳ ಸಮನ್ವಯವೂ ಸಂಸ್ಕೃತಿಯ ರಕ್ಷಣೆಯಿಂದ ಸಾಧ್ಯ ಎಂಬ ಚಿಂತನೆ ಮಂಡಿಸಿದ್ದಾರೆ ಮಂಗಳಗೌರಿ ಎಂ. ರಾಷ್ಟ್ರಕವಿ ಕುವೆಂಪು ಹೇಳಿದಂತೆ – ಅಸಂಖ್ಯ ಮನಸ್ಸುಗಳ ಸಮಷ್ಟಿಯಲ್ಲಿ ಸಂಭವಿಸಿ, ಪ್ರಕಟವಾಗಿ, ಸಿದ್ಧವಾಗುವ ಒಂದು ದೇಶದ ಸಮಷ್ಟಿ ಮನಸ್ಸಿನ ಚಿತ್‌ಶಕ್ತಿಯ ರಸಗಂಗೆಯೇ ಆ ದೇಶದ ಸಂಸ್ಕೃತಿ. ಸಂಸ್ಕೃತಿ ಎಂದರೆ ಇದೇ, ಹೀಗೆ, ಎಂದು ವರ್ಣಿಸುವುದಕ್ಕಾಗದು. ಅದು […]

  time September 15, 2008

  ಪ್ರೀತಿಯೆಂಬುದು ಪ್ರದರ್ಶನವಲ್ಲ:ಅದೊಂದು ಮಧುರ ಅನುಭೂತಿ

  – ಪ್ರಿಯಾ. ಎಂ. ಭಟ್ ಕಲ್ಲಬ್ಬೆ, ಕುಮಟಾ ಪ್ರೇಮವೊಂದು ಅದ್ಬುತ ’ಭಾವಯಾನ’. ಪ್ರೇಮವೆನ್ನುವುದು ಭಾವನೆಗಳಿಗೆ ಜೊತೆಗೂಡುವ ಒಂದು ಅನುಭೂತಿ. ವ್ಯಾಲೆಂಟೇನ್ಸ್ ಡೇ ಗೆ ಸೀಮಿತವಾಗುವ, ಊರು ಪಾರ್ಕು ಸುತ್ತುವ, ಸಿನಿಮಾ ಐಸ್‌ಕ್ರೀಮ್ ಗಳಲ್ಲಿ ಮುಗಿಯುವ ’ಐ‌ಔಗಿ‌ಇ’ ಗೂ ವಿಶ್ವಜನ್ಯವಾದ ಸೃಷ್ಟಿ ಸಂಕೇತವಾದ ಪ್ರೇಮಕ್ಕೂ ವ್ಯತ್ಯಾಸವಿದೆ. ’ಚೈತ್ರರಶ್ಮಿ’ ಯ ಭಾವಯಾನ ಹೀಗೊಂದು ಹೊಸ ಹೊಸ ದೃಷ್ಟಿಕೋನಗಳಿಗೆ ವಿಚಾರ ವಿನಿಮಯಗಳಿಗೆ ಅವಕಾಶವಾಗುವುದಾದಲ್ಲಿ ಮೊದಲು ಪತ್ರಿಕೆಯನ್ನು ಅಭಿನಂದಿಸಿ ಆರಂಭಿಸುತ್ತೇನೆ. ಸಾಹಿತ್ಯವೆನ್ನುವುದು ಅಭಿವ್ಯಕ್ತಿಯ ರೂಪವಾದರೆ ಒಂದು ವಿಧದಲ್ಲಿ ’ಆನಂದ’ ದ ರಸಾನುಭವಕ್ಕೆ ಸ್ಪೂರ್ತಿಯೂ […]

  time September 15, 2008

  ಮರುಳಮುನಿಯನು ನಾನು ಮಂಕುತಿಮ್ಮನ ತಮ್ಮ ……

  -ಮಹಾಬಲ ಭಟ್, ಗೋವಾ ಡಿ.ವಿ.ಜಿ.ಯವರ ಮರುಳಮುನಿಯನ ಕಗ್ಗದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಮಹಾಬಲ ಭಟ್. ಡಿ.ವಿ.ಜಿ. ಎಂದಾಕ್ಷಣ ನೆನಪಿಗೆ ಬರುವುದು ಅವರ ಮಂಕುತಿಮ್ಮನ ಕಗ್ಗ. ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಈ ಗ್ರಂಥ ಕನ್ನಡದಲ್ಲಿಯೇ ಅದ್ವಿತೀಯವಾದುದು. ಆದರೆ ಈ ಮಂಕುತಿಮ್ಮನಿಗೆ ಒಬ್ಬ ತಮ್ಮನಿದ್ದಾನೆ ಎನ್ನುವ ವಿಚಾರ ಪ್ರಾಯಃ ಅನೇಕರಿಗೆ ಗೊತ್ತಿಲ್ಲ. ’ಮರುಳಮುನಿಯನ ಕಗ್ಗ’ ಎಂದು ಕರೆಯಲ್ಪಡುವ ಈ ಪುಸ್ತಕ ಅಷ್ಟೊಂದು ಪ್ರಸಿದ್ಧಿಯನ್ನು ಪಡೆದಿಲ್ಲ. ಅದಕ್ಕೆ ಕಾರಣ ಮಂಕುತಿಮ್ಮನ ಕಗ್ಗಕ್ಕೆ ಹೋಲಿಸಿದರೆ ಸ್ವಲ್ಪ ಕಠಿಣವೆನ್ನಬಹುದಾದ ಭಾಷಾಶೈಲಿ […]

  time September 15, 2008

  ಬಂಧನವದೇನಲ್ಲ ಜೀವ ಜೀವ ಪ್ರೇಮ

  -ಮಹಾಬಲ ಭಟ್ ವಿವಾಹವೆನ್ನುವುದು ಬಂಧನವೇನಲ್ಲ ಎರಡು ಹೃದಯಗಳನ್ನು ಕೂಡಿಸುವ ಪ್ರೇಮಬೆಸುಗೆ. ವ್ಯಕ್ತಿ ಒಬ್ಬಂಟಿಯಾಗಿದ್ದಾಗ ಪರಿಪೂರ್ಣನಲ್ಲ. ಬೆರೆತಾಗಲೇ ಪೂರ್ಣ. ಇದಕ್ಕೆ ಅರ್ಧನಾರೀಶ್ವರನೇ ಸಾಕ್ಷಿ. ಬಂಧನವದೇನಲ್ಲ ಜೀವ ಜೀವ ಪ್ರೇಮ ಒಂದೆ ನಿಲೆ ಜೀವವರೆ ಬೆರೆತರಲೆ ಪೂರ್ಣ| ದುಂದುಗವನ್ ಅರೆಗಯ್ದು ಸಂತಸವನಿಮ್ಮಡಿಪ ಬಾಂಧವ್ಯ ದೈವಕೃಪೆ – ಮಂಕುತಿಮ್ಮ|| ಮೊನ್ನೆ ನನ್ನ ಮದುವೆಯ ನಿಶ್ಚಿತಾರ್ಥದ ಮರುದಿನ ನನ್ನ ಸಹೋದ್ಯೋಗಿಯೊಬ್ಬರು ಮುಗುಳ್ನಗುತ್ತ ’ಅವರ್ ಡೀಪೆಸ್ಟ್ ಸಿಂಪಥಿಸ್ ಟು ಯು ಎಂದಾಗ ಒಂದರೆಕ್ಷಣ ತಬ್ಬಿಬ್ಬಾದರೂ ಸಾವರಿಸಿಕೊಂಡು ಅದರ ಹಿಂದಿರುವ ಧ್ವನಿಯನ್ನು ಅರ್ಥೈಸಿಕೊಂಡೆ. ಅವಿವಾಹಿತನಾದ ವ್ಯಕ್ತಿಯೊಬ್ಬನ […]

  time September 15, 2008

  ಅಪ್ರತಿಮ ದಾರ್ಶನಿಕ ಡಿ. ವಿ. ಜಿ.

  – ಮಹಾಬಲ ಭಟ್, ಗೋವಾ ಡಿ.ವಿ.ಜಿ. ಎಂಬ ಮೂರಕ್ಷರಗಳಿಂದಲೇ ಪ್ರಸಿದ್ಧರಾದ ಡಾ| ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕನ್ನಡ ಸಾಹಿತ್ಯಕ್ಷೇತ್ರದ ಧ್ರುವ ನಕ್ಷತ್ರ. ತಮ್ಮ ಸರಳ ಸಾರ್ಥಕ ಜೀವನದಿಂದಲೂ, ಜೀವಂತವಾದ ಬರವಣಿಗೆಯಿಂದಲೂ, ತಮ್ಮ ದಾರ್ಶನಿಕ ದೃಷ್ಟಿಯಿಂದಲೂ ಕರ್ನಾಟಕದ ಇತಿಹಾಸದಲ್ಲೊಂದು ಅಚ್ಚಳಿಯದ ಸ್ಥಾನ ಪಡೆದುಕೊಂಡ ಮೇರುವ್ಯಕ್ತಿ ಇವರು. ಜೀವನದ ಅಮೂಲ್ಯ ಮರ್ಮವನ್ನು ಹೊರಗೆಡಹುವ, ಸಾಮಾನ್ಯ ಮಾನವನನ್ನೂ ಚಿಂತನೆಯ ಹಾದಿಯಲ್ಲಿ ನಡೆಸುವ ಅನುಪಮ ಸಾಹಿತ್ಯದ ನಿರ್ಮಾತೃವಾದ ಡಿ.ವಿ.ಜಿ.ಗೆ ಅವರೇ ಸಾಟಿ. ಜೀವನವನ್ನೇ ವ್ರತವಾಗಿಟ್ಟುಕೊಂಡು, ಜೀವನಾನುಭವವನ್ನೆಲ್ಲ ಬರವಣಿಗೆಯ ರೂಪದಲ್ಲಿ ಸಂಗ್ರಹಿಸಿದ ಅವರ ತಪಸ್ಸು […]

  time September 15, 2008

  ಆನಂದವಾತ್ಮಗುಣ ಮಂಕುತಿಮ್ಮ

  -ಮಹಾಬಲ ಭಟ್, ಗೋವಾ ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ | ಮಾನವಂ ಪ್ರಣಯದೊಳೊ ವೀರವಿಜಯದೊಳೋ | ಏನೋ ಎಂತೋ ಸಮಾಧಾನಗಳನರಸುತಿಹ | ನಾನಂದವಾತ್ಮ ಗುಣ – ಮಂಕುತಿಮ್ಮ| ಪ್ರತಿಯೊಬ್ಬ ಜೀವಿಯ ಪರಮೋದ್ದೇಶ ಆನಂದವೇ. ಜೀವನದಲ್ಲಿ ಆನಂದವನ್ನು ಅನುಭವಿಸಬೇಕು. ಕೊನೆಯಲ್ಲಿ ಆತ್ಯಂತಿಕವಾದ ಆನಂದವನ್ನು ಹೊಂದಬೇಕು ಎಂಬುದೇ ಜೀವನದ ಗುರಿ. ನಾವು ಮಾಡುತ್ತಿರುವ ದೊಂಬರಾಟಗಳೆಲ್ಲ ಈ ಆನಂದವನ್ನು ಪಡೆಯುವುದಕ್ಕೇ. ಹಾಗಾದರೆ ಈ ಆನಂದದ ಸ್ವರೂಪವೇನು? ಅದರ ರಹಸ್ಯವೇನು? ಅದನ್ನು ಪಡೆಯುವ ಬಗೆಯೆಂತು? ’ಆನಂದಂ ಬ್ರಹ್ಮೇತಿ ವ್ಯಜಾನಾತ್’ ಎನ್ನುತ್ತದೆ ತೈತ್ತರೀಯ ಸಂಹಿತೆ. […]

  time September 15, 2008

  ಅಂತರಂಗವ ತಿದ್ದು ಮಂಕುತಿಮ್ಮ

  – ಮಹಾಬಲ ಭಟ್, ಗೋವಾ ಅಂತಾನು ಮಿಂತಾನುಮೆಂತೊ ನಿನಗಾದಂತೆ ಶಾಂತಿಯನು ನೀನರಸು ಮನ ಕೆರಳಿದಂದು ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು ಸ್ವಾಂತಮಂ ತಿದ್ದುತಿರು – ಮಂಕುತಿಮ್ಮ || ಒಳ್ಳೆಯದಕ್ಕೆ ನಮ್ಮನ್ನೇ, ಕೆಟ್ಟದ್ದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವುದು ನಮ್ಮ ಅಭ್ಯಾಸ. ನಮ್ಮ ಜೀವನದಲ್ಲಿ ನಾವು ಎಡವಿದಾಗ ನಮಗೆ ವಿದ್ಯೆ ಕಲಿಸಿದ ಗುರುಗಳನ್ನೋ, ಬುದ್ಧಿ ಕಲಿಸಿದ ತಂದೆ ತಾಯಿಗಳನ್ನೋ ನಿಂದಿಸುತ್ತೇವೆ. ನಮ್ಮ ಎಡವಟ್ಟಿಗೆ ನಾವೇ ಕಾರಣ ಎಂಬುದನ್ನು ಮರೆಯುತ್ತೇವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ- ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ | ಆತ್ಮೆ ವ ಹ್ಯಾತ್ಮನೋ […]