September 15, 2008ಮನಸು ಮನಸುಗಳ ಚುಕ್ಕಿಗಳ ಚಿತ್ತಾರ
- ಎನ್.ಆರ್. ರೂಪಶ್ರೀ, ಮೈಸೂರು
ಮನಸ್ಸೇಕೋ ಮೌನವಾಗಿದೆ. ಮನದಲ್ಲಿನ ಭಾವನೆಗಳನ್ನು ಹೇಳಲಾಗದೆ ಒದ್ದಾಡುತ್ತಿದ್ದೇನೆ. ಈಪರಿಯ ವೇದನೆ, ಸಂಕಟಗಳ ಜೊತೆ ಬದುಕುವದಾದರೂ ಹೇಗೆ? ಆಘಾತಗಳು ಒಂದರ ಮೇಲೊಂದರಂತೆಬರುತ್ತಿವೆ. ಯಾರ ಹತ್ತಿರವೂ ಮುಖಕೊಟ್ಟು ಮಾತನಾಡದ ಸ್ಥಿತಿ, ಏನಾಗಿದೆ ಈ ಹೃದಯಕ್ಕೆ? ಬಡಿತದಪ್ರತಿ ನಿಮಿಷವೂ ಕನ್ನಡಿಯ ಪ್ರತಿಬಿಂಬವೇ. ಆದರೂ ಅಗಣಿತ ತಾರೆಗಳ ನಡುವೆ ನಿಂತ ನಿರಾಳತೆಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಅಂತರ್ಮುಖಿಯಾಗುತ್ತಿರುವ ಬದುಕಿಗೆ ಆಸರೆಯಾದರೂ ಯಾವುದು?ಎಲ್ಲ ಬಿಟ್ಟು ಹೊರಡುವ ಹುನ್ನಾರದಲ್ಲಿದ್ದಾಗ ಕಟ್ಟಿಕೊಂಡ ಬಂಧನ. ಬಿಡುಗಡೆ ಹೇಗಾದೀತು? ನಿನ್ನಯಾವ ಪ್ರಶ್ನೆಗಳಿಗೂ ಉತ್ತರ ಕೊಡಲಾಗದೆ ಒಗಟಿನ ಸ್ಥಿತಿಯಲ್ಲಿದ್ದೇನೆ. [...]