• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • ಮುಖಪುಟ >> ಅಂತರಂಗದಿಂದ

    ಬರೆದಂತೆಯೇ ಬಾಳಿದ ಋಷಿಪ್ರಾಯರು

    September 15th, 2008.


    [ ಚೈತ್ರರಶ್ಮಿ ಮಾರ್ಚ್ ೨೦೦೮ ]

    ’ಸಾರ್ವಜನಿಕ ಜೀವನ ಆಧ್ಯಾತ್ಮಿಕವಾಗಿರಬೇಕು’ ಅದು ಡಿ.ವಿ.ಜಿ.ಯವರ ನಂಬಿಕೆ. ಸಾರ್ವಜನಿಕ ಕಾರ್ಯಕ್ಕೆ ಪ್ರತಿಫಲವನ್ನು ಪಡೆಯಬಾರದು ಎಂಬುದು ಡಿ.ವಿ.ಜಿ.ಯವರ ಸಿದ್ದಾಂತ. ಇನ್ನು ಸರ್ ಎಂ. ವಿಶ್ವೇಶ್ವರಯ್ಯನವರದು ಕೂಡ ಅಂತಹ ಸಾಮಾಜಿಕ ಕಾಳಜಿಯ ನಿಸ್ಪೃಹ ವ್ಯಕ್ತಿತ್ವ. ಅವರ ತಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟೋ ಜನ ಮೇಧಾವಿಗಳ ಸಹಾಯ ಪಡೆಯುತ್ತಿದ್ದರು. ಪ್ರತಿಯಾಗಿ ತಕ್ಕ ಸಂಭಾವನೆಯನ್ನು ನೀಡುತ್ತಿದ್ದರು. ಆದರೆ ಡಿ.ವಿ.ಜಿ.ಯವರು ಮಾತ್ರ ಅಂತಹ ಸಂಭಾವನೆ ಪಡೆಯಲು ಒಪ್ಪಲಿಲ್ಲ. ’ನೀವು ಹಣ ತೆಗೆದುಕೊಳ್ಳದಿದ್ದರೆ ನಿಮ್ಮ ಸಹಾಯ ಬೇಡ’ ಎಂದು ವಿಶ್ವೇಶ್ವರಯ್ಯನವರು ಕೋಪಿಸಿಕೊಂಡರು. ಕೊನೆಗೆ ಡಿ.ವಿ.ಜಿ.ಯವರು ಒಪ್ಪಿದರು. ಮುಂದೆ ವಿಶ್ವೇಶ್ವರಯ್ಯ ಅವರಿಗೆ ಪ್ರತಿಸಲವೂ ಚೆಕ್ಕು ಕೊಡುತ್ತಾ ಹೋದರು. ಆ ಚೆಕ್ಕುಗಳು ಬ್ಯಾಂಕಿನ ಮೆಟ್ಟಿಲು ಹತ್ತಿದ್ದರೆ ತಾನೆ?. ಡಿ.ವಿ.ಜಿ. ತಮ್ಮ ಬದುಕಿನ ಕೊನೆಯವರೆಗೂ ಆ ಚೆಕ್ಕುಗಳನ್ನು ನಗದೀಕರಿಸಲಿಲ್ಲ. ಮಿರ್ಜಾ ಇಸ್ಮಾಯಿಲ್ ಅವರ ಚೆಕ್ಕುಗಳಿಗೂ ಮತ್ತು ಅನೇಕರು ನೀಡಿದ್ದ ಚೆಕ್ಕುಗಳಿಗೂ ಅದೇ ಗತಿಯಾಯಿತು.

    ಕೊನೆಗೂ ಡಿ.ವಿ.ಜಿ. ತಾವು ಬರೆದಂತೆಯೆ ಬಾಳಿದರು. ಬಾಳಿದಂತೆಯೇ ಬರೆದರು. ವಿಶ್ವೇಶ್ವರಯ್ಯನವರು ನೀಡಿದ, ಡಿ.ವಿ.ಜಿ ಯವರು ನಗದೀಕರಿಸದ ಅಪರೂಪದ ಚೆಕ್ ಒಂದು ಇಲ್ಲಿದೆ.

    ಪ್ರಾಚೀನ ವೇದ ಪರಂಪರೆ ಹಾಗೂ ಆಧುನಿಕ ವಿಜ್ಞಾನ ಎರಡೂ ಪರಸ್ಪರ ವಿರುದ್ಧ ಎಂಬುದು ಬಹುತೇಕರ ನಂಬಿಕೆ.ಆದರೆ ಡಿವಿಜಿ ಅದಕ್ಕೆ ಅಪವಾದ. ಪ್ರಾಚೀನ ಪರಂಪರೆ ಹಾಗೂ ಆಧುನಿಕ ವಿಜ್ಞಾನ ಎರಡರಲ್ಲೂ ಅವರಿಗೆ ಸಮಾನಾಸಕ್ತಿಗಳಿದ್ದವು. ಪಾಂಡಿತ್ಯವೂ ಇತ್ತು. ನೀತಿ, ಸಂಸ್ಕೃತಿ, ಧರ್ಮ ಜಿಜ್ಞಾಸೆಗಳಿಗೆ ಸಂಬಂಧಿಸಿದಂತೆ ಅವರು ಬರೆದ ಅನೇಕ ಗ್ರಂಥಗಳಿವೆ. ಹಾಗೆಯೇ ವಿಜ್ಞಾನದ ಕುರಿತು ಅವರು ಬರೆದ ಹಲವಾರು ಲೇಖನಗಳಿವೆ. ೧೯೪೧ ನವೆಂಬರ್ ನಲ್ಲಿ ಡಿ.ವಿ.ಜಿ ಯವರು ’ಕರೆಂಟ್ ಸೈನ್ಸ್’ ಎಂಬ ಪತ್ರಿಕೆಯಲ್ಲಿ ಬರೆದಿದ್ದ ’ಸೈನ್ಸ್ ಟು ರೀಬಿಲ್ಡ್’ ಎಂಬ ಲೇಖನವನ್ನು, ಹಾಗೂ ೧೯೪೧ ಡಿಸೆಂಬರ್‌ನಲ್ಲಿ ಬರೆದಿದ್ದ ’ವಿಜ್ಞಾನ ಮತ್ತು ಧರ್ಮ’ ಎಂಬ ಲೇಖನವನ್ನು ಲಂಡನ್ನಿನ ಪ್ರಖ್ಯಾತ ವಿಜ್ಞಾನ ಪತ್ರಿಕೆ ’ನೇಚರ್’ ತನ್ನ ಸಂಪಾದಕೀಯದಲ್ಲಿ ವಿಮರ್ಶಿಸಿ ಮುಕ್ತವಾಗಿ ಶ್ಲಾಘಿಸಿತ್ತು. ಜನರಲ್ಲಿ ತಿಳುವಳಿಕೆ ಮೂಡಿಸಿ ಅವರನ್ನು

    ಒಂದುಗೂಡಿಸಬೇಕು. ಅದಕ್ಕಾಗಿ ಯಾವ ರಾಜಕೀಯ ಪಕ್ಷಕ್ಕೂ, ಯಾವ ಕೋಮಿಗೂ ಸೇರದ, ಯಾರ ಹಂಗಿಗೂ ಒಳಗಾಗದ ಸಂಸ್ಥೆಯೊಂದನ್ನು ಸ್ಥಾಪಿಸುವುದು ಡಿವಿಜಿಯವರ ಕನಸಾಗಿತ್ತು. ಡಿವಿಜಿಯವರ ಈ ಉದ್ದೇಶ ಸಾಧನೆಗಾಗಿ, ಅವರ ೩೦ ವರ್ಷಗಳ ತಪಸ್ಸಿನ ಫಲವಾಗಿ ೧೯೪೬ ರಲ್ಲಿ ’ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಸ್ಥಾಪಿತವಾಯಿತು. ಇಂದು ಈ ಸಂಸ್ಥೆಸಾರ್ವಜನಿಕ ಕ್ಷೇತ್ರದ ಅದ್ವಿತೀಯ ಸಂಸ್ಥೆಯಾಗಿ ಬೆಳೆದು ನಿಂತಿದೆ.

    ’ಅವರು ಮಾನವತೆಯ ಸುಂದರ ಮಹಾಕಾವ್ಯ’

    ಕನ್ನಡದ ಸಾಹಿತ್ಯ ದಿಗ್ಗಜ, ಕನ್ನಡದ ಭಗವದ್ಗೀತೆ ’ಮಂಕುತಿಮ್ಮನ ಕಗ್ಗ’ ದ ಕಾವ್ಯರ್ಷಿ ಶ್ರೀ ಡಿ. ವಿ.ಗುಂಡಪ್ಪನವರ ಕುರಿತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ’ಕನ್ನಡದ ಆಸ್ತಿ’ ಮಾಸ್ತಿಯವರು ಹೇಳಿದ ಮಾತಿದು.ವಿಶ್ವ ಶ್ರೇಷ್ಠ ಇಂಜಿನಿಯರ್ ಸರ್. ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಕಾಲ. ಡಿ.ವಿ.ಜಿ.ಯವರು ಆಗಿನ್ನೂ ಯುವ ಪತ್ರಕರ್ತ.ವಿಜೃಂಭಣೆಯ ದಸರಾ ಉತ್ಸವದ ಸಮಯ. ರಾಜ್ಯದ‌ಎಲ್ಲಾ ಪತ್ರಿಕೆಗಳೂ ಅದರ ವಿಶೇಷ ವರದಿ ನೀಡಿದವು.ಅದಾದ ನಾಲ್ಕು ದಿನಕ್ಕೆ ಪತ್ರಕರ್ತರಿಗೆ ಸರ್ಕಾರದಿಂದದೊಡ್ಡ ಮೊತ್ತ ಸಂಭಾವನೆ ರೂಪದಲ್ಲಿ ಹೋಯಿತು.ಡಿವಿಜಿ ತಮಗೆ ಬಂದಿದ್ದ ಹಣದ ಸಹಿತದಿವಾನರಲ್ಲಿಗೆ ಹೋದರು. ತಮಗೆ ನೀಡಿರುವ ಸಂಭಾವನೆಯನ್ನು ವಾಪಸ್ ಪಡೆಯುವಂತೆಕೇಳಿಕೊಂಡರು. ’ದಸರಾ ಉತ್ಸವದ ವರದಿಯನ್ನು ಚೆನ್ನಾಗಿ ಮಾಡಿದ್ದಕ್ಕೆ ಅದು ಹಿಂದಿನಿಂದ ನಡೆದುಬಂದಿರುವ ಪದ್ಧತಿ’ ಎಂದು ವಿಶ್ವೇಶ್ವರಯ್ಯನವರು ಹೇಳಿದರೂ ಡಿ.ವಿ.ಜಿ ಸ್ಪಷ್ಟವಾಗಿ ’ವರದಿಮಾಡುವುದು ಪತ್ರಕರ್ತರ ಕರ್ತವ್ಯ. ಅದಕ್ಕೆ ಖರ್ಚಾದರೆ ಪತ್ರಿಕೆ ಕೊಡಬೇಕು ಸರ್ಕಾರವಲ್ಲ. ನನಗೆ‌ಈ ಹಣ ಖಂಡಿತ ಬೇಡ. ಬೇಡವೇ ಬೇಡ’ ಎಂದು ನಿರಾಕರಿಸಿಬಿಟ್ಟರು.

    ಬದುಕಿನ ಯೌವನದ ದಿನಗಳಲ್ಲಿ ನಮ್ಮಲ್ಲಿನ ಉತ್ಸಾಹದ ಕಾರಣದಿಂದ ನಾವು ಒಂದಷ್ಟು ಆದರ್ಶಗಳನ್ನಿಟ್ಟುಕೊಂಡಿರಬಹುದು. ಆದರೆ ಜೀವನದ ದಾರಿಕ್ರಮಿಸುತ್ತಾ ಸಾಗಿದಂತೆ ಎದುರಾಗುವ ಹಲವುಸಮಸ್ಯೆ, ಸವಾಲುಗಳಿಂದಾಗಿ ಅಂತಹ ಆದರ್ಶ, ನಂಬಿಕೆಗಳೊಂದಿಗೆ ನಾವು ರಾಜಿಯಾಗುವುದುಸಾಮಾನ್ಯ. ಡಿ.ವಿ.ಜಿಯವರ ಬದುಕು ಅಂತಹಸವಾಲುಗಳಿಂದ ತುಂಬಿದ್ದೇ. ಆದರೆ ಯೌವನದಿಂದಬದುಕಿನ ಕೊನೆಯ ಕ್ಷಣದವರೆಗೂ ಅವರು ತಾವುನಂಬಿದ್ದ ಆದರ್ಶ, ನಂಬಿಕೆಗಳನ್ನು ಬಿಟ್ಟುಕೊಟ್ಟವರಲ್ಲ.ಆರ್ಥಿಕ ಸಮಸ್ಯೆಯಂತೂ ಅವರನ್ನು ಸದಾಕಾಲಕಾಡುತ್ತಿತ್ತು. ಅಂತಹ ಹಣದ ಮುಗ್ಗಟ್ಟು ಕಾಡುತ್ತಿದ್ದದಿನಗಳಲ್ಲೇ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕರ್ನಾಟಕ ಸರ್ಕಾರ ಡಿವಿಜಿಯವರಿಗೆಗೌರವ ಮಾಸಾಶನ ನೀಡುವ ನಿರ್ಧಾರಕೈಗೊಂಡದ್ದು. ಅವು ಡಿವಿಜಿಯವರ ವೃದ್ಧಾಪ್ಯದದಿನಗಳು. ಆದರೂ ಸರ್ಕಾರ ತಮಗೆ ಮಾಸಾಶನನೀಡುವ ಸುದ್ದಿ ಪತ್ರಿಕೆಗಳಲ್ಲಿ ನೋಡಿದ ಮರುಕ್ಷಣವೇಡಿವಿಜಿ ’ಆ ಮಾಸಾಶನ ತಮಗೆ ಬೇಕಾಗಿಲ್ಲವೆಂದೂ,ಸಾರ್ವಜನಿಕ ಸೇವೆಗೆ ಪ್ರತಿಫಲ ವನ್ನಪೇಕ್ಷಿಸಬಾರದೆಂದೂ, ಸರಕಾರ ಅಂಥ ವೆಚ್ಚಗಳಿಗೆ ಹಣವನ್ನು‌ಉಪಯೋಗಿಸ ತಕ್ಕುದಲ್ಲ ವೆಂದೂ’ ಪತ್ರಬರೆದುಬಿಟ್ಟರು. ಅವರಿಗೆ ಆಪ್ತರಾಗಿದ್ದ ಸರ್ಕಾರದಮುಖ್ಯ ಕಾರ್ಯದರ್ಶಿ ಮನೆಗೆ ಬಂದು ವಿನಂತಿಸಿಕೊಂಡಾಗಲೂ ಡಿವಿಜಿ ಅವರಿಗೆ ’ಏನಪ್ಪಾ, ಇದೇನುಮಾಡ್ತಿದೀಯೆ ನೀನು, ನೀನು ಅಲ್ಲಿರೋದುಸರ್ಕಾರದ ಹಣ ಹೀಗೆ ಪೋಲು ಮಾಡೋದಕ್ಕೋ?ಇದೆಲ್ಲ ಕೂಡಲೇ ಕೂಡದು’ ಎಂದು ಬಿಟ್ಟರು.ಯುವಕರಾಗಿದ್ದಾಗ ಸರ್ಕಾರ ನೀಡಿದ್ದ ದಸರಾಸಂಭಾವನೆಯನ್ನು ನಿರಾಕರಿಸಿದ್ದ ಡಿ.ವಿ.ಜಿ ಕೊನೆಗೆವೃದ್ಧಾಪ್ಯದಲ್ಲೂ ಸರ್ಕಾರದ ಗೌರವ ಸಂಭಾವನೆಯನ್ನು ಒಪ್ಪಿಕೊಳ್ಳಲೇ ಇಲ್ಲ.’ಸಾರ್ವಜನಿಕ ಸೇವೆಗೆ, ಸಮಾಜದ ಕೆಲಸಕ್ಕೆಯಾವುದೇ ಪ್ರತಿಫಲವನ್ನಪೇಕ್ಷಿಸಬಾರದು’ ಅದು ಡಿವಿಜಿಯವರ ನಂಬಿಕೆಯಾಗಿತ್ತು. ಬದುಕಿನ ಕೊನೆಯಘಳಿಗೆಯವರೆಗೂ ಅವರು ತಾವು ನಂಬಿದ್ದ ಧ್ಯೇಯ‌ಉದ್ದೇಶಗಳನ್ನು ಎಂತಹ ವಿಷಮ ಪರಿಸ್ಥಿತಿಯಲ್ಲಿಯೂ ಬಿಟ್ಟು ಕೊಡಲಿಲ್ಲ. ಹಾಗಾಗಿಯೇಮಾಸ್ತಿಯವರು ಹೇಳಿದ್ದಿರಬೇಕು ’ಅವರುಮಾನವತೆಯ ಮಹಾಕಾವ್ಯ’ವೆಂದು.ಡಿ.ವಿ.ಜಿ.ಯವರದು ಸಾಹಿತ್ಯದಿಂದ ಸಮಾಜದವರೆಗೆ, ಪತ್ರಿಕೋದ್ಯಮದಿಂದ ಪಾರಮಾರ್ಥದವರೆಗೆಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಮೇರುಸದೃಶವಾದಸಿದ್ಧಿಯ ಚ್ಯೆತನ್ಯ . ಅವರು ಸಾಹಿತಿಯಾಗಿ ಮಾಡಿರುವಕೆಲಸಕ್ಕಿಂತ ಸಾರ್ವಜನಿಕ ಕಾರ್ಯಕರ್ತರಾಗಿ ಅವರುಮಾಡಿರುವ ಕೆಲಸವೇ ಹೆಚ್ಚು. ಸಾಹಿತಿಯಾಗಿ,ಕವಿಯಾಗಿ, ದಾರ್ಶನಿಕನಾಗಿ ಅವರು ಮಾಡಿದ ಕೆಲಸ‌ಅವರು ನೀಡಿದ ಅಪಾರವಾದ ಗ್ರಂಥಗಳಿಂದಸ್ಪಷ್ಟವಾಗಿ ಕಾಣಸಿಗುತ್ತದೆ. ಆದರೆ ಸಾರ್ವಜನಿಕಕಾರ್ಯಕರ್ತನಾಗಿ ಅವರು ಮಾಡಿದ ಕಾರ್ಯ‌ಅದಕ್ಕಿಂತಲೂ ದೊಡ್ಡದು. ಅವರೇ ಕಟ್ಟಿ ಬೆಳೆಸಿದ’ಗೋಖಲೆ ಸಾರ್ವಜನಿಕ ಸಂಸ್ಥೆ’, ’ಕಾರ್ಯನಿರತಪತ್ರಕರ್ತರ ಸಂಘ’, ಹಾಗೂ ಅವರು ಮಹತ್ವದ ಪಾತ್ರ ನಿರ್ವಹಿಸಿದ’ಕನ್ನಡ ಸಾಹಿತ್ಯ ಪರಿಷತ್’ ಸೇರಿದಂತೆ ಹಲವು ಸಂಸ್ಥೆಗಳುಡಿ.ವಿ.ಜಿ.ಯವರ ಸಾರ್ವಜನಿಕ ಕಾರ್ಯದ ಸಣ್ಣ ನಿದರ್ಶನಗಳಷ್ಟೆ. ಹಾಗೆಂದು ಅವರೇನು ದೊಡ್ಡ ಡಿಗ್ರಿ ಪಡೆದುಕೊಂಡವರಲ್ಲ. ಎಸ್.ಎಸ್.ಎಲ್.ಸಿ. ದಾಟದ ಓದು. ಭಾರೀ ಶ್ರೀಮಂತರಂತೂ‌ಅಲ್ಲ, ದಿನದ ಅಗತ್ಯ ಪೂರೈಸಿದ್ದೇ ಹೆಚ್ಚು ಎನ್ನುವಂತಹ ಕೆಲಸ.ದೊಡ್ಡ ಉದ್ಯೋಗವೂ ಇರಲಿಲ್ಲ. ಆದರೂ ಡಿ.ವಿ.ಜಿ.ಯವರಪಾಂಡಿತ್ಯ, ವಿವೇಕ, ಸಾರ್ವಜನಿಕ ಕಳಕಳಿ, ಸಾಮಾಜಿಕ ಹಿತಾಸಕ್ತಿ,ನಿಸ್ಪೃಹತೆಗಳ ಕಾರಣದಿಂದ ಮೈಸೂರು ರಾಜ್ಯದ ಪರಮೋಚ್ಛ‌ಅಧಿಕಾರ ಹಿಡಿದಿದ್ದ ದಿವಾನ್. ಸರ್. ಎಂ. ವಿಶ್ವೇಶ್ವರಯ್ಯ, ಮಿರ್ಜಾ‌ಇಸ್ಮಾಯಿಲ್‌ರಂತಹವರೂ ಡಿ.ವಿ.ಜಿ.ಯವರ ಸ್ನೇಹ ವಿಶ್ವಾಸಗಳಿಗೆಕಾತರರಾಗಿದ್ದರು. ಇಂಗ್ಲೀಷ್, ಸಂಸ್ಕೃತದಲ್ಲೂ ಅವರಿಗಿದ್ದ ಪಾಂಡಿತ್ಯ‌ಅಪಾರವಾದ್ದು. ವೇದ ವಾಙ್ಮಯ, ಇಂಗ್ಲೀಷ್, ಕನ್ನಡ, ಸಂಸ್ಕೃತ,ತೆಲುಗು ಭಾಷೆಗಳ ಮಹಾಕಾವ್ಯಗಳು, ಗದ್ಯಪದ್ಯ ಗ್ರಂಥಗಳು,ಅಲಂಕಾರ, ವ್ಯಾಕರಣ, ಛಂದಸ್ಸು ಮುಂತಾದ ವಿಷಯಕ್ಕೆಸಂಬಂದಿಸಿದ ಗ್ರಂಥಗಳು, ರಾಜಕೀಯ,ಶಾಸನಶಾಸ್ತ್ರ, ಅರ್ಥಶಾಸ್ತ್ರ,ಚರಿತ್ರೆ, ತತ್ವ, ಪತ್ರಿಕೋದ್ಯಮ ಮುಂತಾದ ಗ್ರಂಥಗಳೂ ರ್‍ಯಾಷನಲಿಸ್ಟ್‌ಪ್ರೆಸ್ ಅಸೋಸಿಯೇಷನ್ ಪ್ರಕಟಿಸಿದ ಗ್ರಂಥಗಳು, ಬರ್‍ಟ್ರಂಡ್ ರಸೆಲ್,ಹಕ್ಸೆಲೆ ಇಂಗರ್ ಸಾಲ್, ವೆಲ್ಸ್ ಮುಂತಾದ ಇಂಗ್ಲೀಷ್‌ಪಂಡಿತೋತ್ತಮರ ಗ್ರಂಥಗಳು, ಜೊತೆಗೆ ಅನೇಕ ವಿಜ್ಞಾನ ಗ್ರಂಥಗಳುಡಿ.ವಿ.ಜಿ.ಯವರ ಅಧ್ಯಯನಕ್ಕೆ ಒಳಗಾಗಿದ್ದವು. ಪತ್ರಿಕೋದ್ಯಮ,ಕಾವ್ಯ, ಸಾಹಿತ್ಯ ಮೀಮಾಂಸೆ, ಜೀವನ ಚರಿತ್ರೆ, ಸ್ಮೃತಿ ಚಿತ್ರ, ಅನುವಾದ,ಧರ್ಮಜಿಜ್ಞಾಸೆ, ಮಕ್ಕಳ ಸಾಹಿತ್ಯ , ರಾಜ್ಯ ಶಾಸ್ತ್ರ ಹೀಗೆ ಹಲವಾರುದಿಕ್ಕುಗಳಲ್ಲಿ ಅವರು ಬರೆದ ಪುಸ್ತಕಗಳು ನೂರಾರು. ಇಂಗ್ಲೀಷಿನಲ್ಲೂ‌ಅವರು ಹೊರ ತಂದ ಕೃತಿಗಳು ಮೂವತ್ತಕ್ಕಿಂತಲೂ ಹೆಚ್ಚು.ಪ್ರಾಚೀನ ವೇದ ಪರಂಪರೆ ಹಾಗೂ ಆಧುನಿಕ ವಿಜ್ಞಾನ ಎರಡೂಪರಸ್ಪರ ವಿರುದ್ಧ ಎಂಬುದುಬಹುತೇಕರ ನಂಬಿಕೆ. ಹಾಗಾಗಿಯೇ ಪರಂಪರೆಯ ಆಳವಾದ‌ಅರಿವು ಇದ್ದವರು ವಿಜ್ಞಾನವನ್ನು ದೂರವಿಡುವುದನ್ನೂ, ಆಧುನಿಕವಿಜ್ಞಾನದ ಜ್ಞಾನ ಹೊಂದಿದವರು ಪರಂಪರೆಯನ್ನುಧಿಕ್ಕರಿಸುವುದನ್ನೂ ನಾವು ಕಾಣುತ್ತೇವೆ. ಆದರೆ ಡಿವಿಜಿ ಅದಕ್ಕೆ‌ಅಪವಾದ. ಪ್ರಾಚೀನ ಪರಂಪರೆ ಹಾಗೂ ಆಧುನಿಕ ವಿಜ್ಞಾನ‌ಎರಡರಲ್ಲೂ ಅವರಿಗೆ ಸಮಾನಾಸಕ್ತಿಗಳಿದ್ದವು. ಪಾಂಡಿತ್ಯವೂ ಇತ್ತು.ನೀತಿ, ಸಂಸ್ಕೃತಿ, ಧರ್ಮ ಜಿಜ್ಞಾಸೆಗಳಿಗೆ ಸಂಬಂಧಿಸಿದಂತೆ ಅವರುಬರೆದ ಶ್ರೀರಾಮ ಪರೀಕ್ಷಣ, ಶ್ರೀಕೃಷ್ಣ ಪರೀಕ್ಷಣ, ಶ್ರೀಮದ್ಧವದ್ಗೀತಾತಾತ್ಪರ್ಯ ಬಾಳಿಗೊಂದು ನಂಬಿಕೆ, ಸಂಸ್ಕೃತಿ, ’ಋತ-ಸತ್ಯ-ಧರ್ಮ’ ಮುಂತಾದ ಗ್ರಂಥಗಳಿವೆ.

    ಹಾಗೆಯೇವಿಜ್ಞಾನದ ಕುರಿತು ಅವರು ಬರೆದ ಹಲವಾರು ಲೇಖನಗಳಿವೆ. ೧೯೪೧ ನವೆಂಬರ್ ನಲ್ಲಿ ಡಿ.ವಿ.ಜಿ ಯವರು’ಕರೆಂಟ್ ಸೈನ್ಸ್’ ಎಂಬ ಪತ್ರಿಕೆಯಲ್ಲಿ ಬರೆದಿದ್ದ ’ಸೈನ್ಸ್ ಟು ರೀಬಿಲ್ಡ್’ ಎಂಬ ಲೇಖನವನ್ನು, ಹಾಗೂ ೧೯೪೧ಡಿಸೆಂಬರ್‌ನಲ್ಲಿ ಬರೆದಿದ್ದ ’ವಿಜ್ಞಾನ ಮತ್ತು ಧರ್ಮ’ ಎಂಬ ಲೇಖನವನ್ನು ಲಂಡನ್ನಿನ ಪ್ರಖ್ಯಾತ ವಿಜ್ಞಾನಪತ್ರಿಕೆ ’ನೇಚರ್’ ತನ್ನ ಸಂಪಾದಕೀಯದಲ್ಲಿ ವಿಮರ್ಶಿಸಿ ಮುಕ್ತವಾಗಿ ಶ್ಲಾಘಿಸಿತ್ತು. ’ವಿಜ್ಞಾನದ ಚಿಂತನೆಗಳುಹಾಗೂ ಮಾನವೀಯ ಮೌಲ್ಯಗಳಿಗೆ ಗುಂಡಪ್ಪನವರ ಲೇಖನ ಒಂದು ಅದ್ಭುತ ಕೊಡುಗೆ’ ಎಂದು ಆ ಪತ್ರಿಕೆಪ್ರಶಂಸಿಶಿತ್ತು !!.ಡಿವಿಜಿಯವರದು ಒಂದು ಶ್ರೇಷ್ಠ ತಪಸ್ಸಿನಂತಹ ಬದುಕು. ಕಷ್ಟಗಳೇ ಅಧಿಕವಾದರೂ ಎದೆಗುಂದಿದವರಲ್ಲ‌ಅವರು. ಮನೆಯ ಬಡತನದ ಕಾರಣದಿಂದ ಓದು ಮೆಟಿಕ್ಯುಲೇಶನ್ ದಾಟಲಿಲ್ಲ. ಮೊದಲು ಕೋಲಾರದ‌ಒಂದು ಸೋಡಾ ಫ್ಯಾಕ್ಟರಿಯಲ್ಲಿ ಗುಮಾಸ್ತೆಯಾಗಿ ದುಡಿದು ನಂತರ ಬೆಂಗಳೂರಿಗೆ ಬಂದು ಜಟಕಾಗಾಡಿಗೆಬಣ್ಣ ಬಳಿಯುವ ಒಂದು ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲದಿನದಲ್ಲಿ ಅದು ಮುಚ್ಚಿಹೋಯಿತು.ಹಾಗೆ ಅನಿವಾರ್ಯವಾಗಿ ಡಿವಿಜಿ ಪತ್ರಿಕೋದ್ಯಮಕ್ಕೆ ಬಂದರು. ತಮ್ಮ ಸ್ನೇಹಿತರ ಜತೆಯಲ್ಲಿ ಕನ್ನಡದಮೊದಲ ದಿನಪತ್ರಿಕೆ .ಭಾರತಿ. ಯನ್ನು ಆರಂಭಿಸಿದಾಗ ಡಿವಿಜಿಯವರ ವಯಸ್ಸು ಕೇವಲ ಹದಿನೆಂಟು.ನಂತರದಲ್ಲಿ ಡಿವಿಜಿ .ಕರ್ನಾಟಕ. ಎಂಬ ಇಂಗ್ಲೀಷ್ ಪತ್ರಿಕೆಯೊಂದನ್ನು ಆರಂಭಿಸಿದರು. ಪ್ರಾಮಾಣಿಕವರದಿಗೆ, ನಿಷ್ಟಕ್ಷಪಾತ, ನಿಷ್ಟಕ್ಷಪಾತ, ನಿರ್ಭೀತ ದೃಷ್ಟಿಗೆ ಪತ್ರಿಕೆ ಬಹುಬೇಗ ಪ್ರಸಿದ್ಧಿ ಪಡೆಯಿತು. ಆದರೆ‌ಅನ್ಯಾನ್ಯ ಕಾರಣದಿಂದ ಪತ್ರಿಕೆಗಳನ್ನು ನಿಲ್ಲಿಸಬೇಕಾಯಿತು. ೧೯೨೪ ರಲ್ಲಿ ಅವರ ಸಂಸಾರಕ್ಕೆ ದೊಡ್ಡ ಸಿಡಿಲೆರಗಿತು.ಡಿವಿಜಿಯವರ ಪತ್ನಿ ಭಾಗೀರಥಮ್ಮ ಬೆಂಕಿ ಆಕಸ್ಮಿಕಕ್ಕೆ ಒಳಗಾಗಿ ಮರಣ ಹೊಂದಿದರು. ಎರಡನೇ ಮದುವೆಪ್ರಸ್ತಾಪ ಬಂದರೂ ಗಂಡನನ್ನು ಕಳೆದುಕೊಂಡ ತಂಗಿಯೊಬ್ಬಳು ಮನೆಯಲ್ಲಿರುವಾಗ ತಾನು ಮದುವೆಯಾಗುವುದು‌ಉಚಿತವಲ್ಲವೆಂದು ನಿರಾಕರಿಸಿದ ಡಿವಿಜಿ ಮುಂದೆ ತಮ್ಮ ಇಡೀ ಬದುಕನ್ನು ಸಮಾಜಕ್ಕಾಗಿ ಸಮರ್ಪಿಸಿದರು.ಜನರಲ್ಲಿ ತಿಳುವಳಿಕೆ ಮೂಡಿಸಿ ಅವರನ್ನು ಒಂದುಗೂಡಿಸಬೇಕು. ಅದಕ್ಕಾಗಿ ಯಾವ ರಾಜಕೀಯಪಕ್ಷಕ್ಕೂ, ಯಾವ ಕೋಮಿಗೂ ಸೇರದ, ಯಾರ ಹಂಗಿಗೂ ಒಳಗಾಗದ ಸಂಸ್ಥೆಯೊಂದನ್ನು ಸ್ಥಾಪಿಸುವುದುಡಿವಿಜಿಯವರ ಕನಸಾಗಿತ್ತು. ಡಿವಿಜಿಯವರ ಈ ಉದ್ದೇಶ ಸಾಧನೆಗಾಗಿ, ಅವರ ೩೦ ವರ್ಷಗಳ ತಪಸ್ಸಿನಫಲವಾಗಿ ೧೯೪೬ ರಲ್ಲಿ ’ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಸ್ಥಾಪಿತವಾಯಿತು. ಇಂದು ಈ ಸಂಸ್ಥೆಸಾರ್ವಜನಿಕ ಕ್ಷೇತ್ರದ ಅದ್ವಿತೀಯ ಸಂಸ್ಥೆಯಾಗಿ ಬೆಳೆದು ನಿಂತಿದೆ.

    “Public life must be spiritualized” - ಇದು ಡಿವಿಜಿಯವರು ತಮ್ಮ ಗುರುವೆಂದೇ ಭಾವಿಸಿದಶ್ರೀಗೋಪಾಲಕೃಷ್ಣ ಗೋಖಲೆಯವರ ನಂಬಿಕೆ. ಈ ನಂಬಿಕೆಯನ್ನು ತಮ್ಮ ಬದುಕಿನುದ್ದಕ್ಕೂ ಒಂದುತಪಸ್ಸಿನಂತೆ ಆಚರಿಸಿದವರು ಡಿವಿಜಿ. ೧೯೭೦ ರಲ್ಲಿ ಕರ್ನಾಟಕದ ಜನತೆ ದೊಡ್ಡ ಸನ್ಮಾನ ಏರ್ಪಡಿಸಿ ಒಂದುಲಕ್ಷ ರೂಪಾಯಿ ಅರ್ಪಿಸಿದಾಗ ಅವರದನ್ನು ಕೈಯಲ್ಲೂ ಮುಟ್ಟದೆ ಅಲಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಗೆನೀಡಿಬಿಟ್ಟರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಹಣವೂ ಅದೇ ದಾರಿ ಹಿಡಿಯಿತು.ರಾಜಕೀಯ, ಸಾರ್ವಜನಿಕ ಜೀವನ, ವೈಯಕ್ತಿಕ ಜೀವನ, ಸಾಮಾಜಿಕ ನೀತಿ ನಿಷ್ಠೆಗಳೆಲ್ಲವೂ ಹಾದಿತಪ್ಪಿದ ಇಂದಿನ ದಿನಗಳಲ್ಲಿ ನಮ್ಮೆಲ್ಲರ ಪಾಲಿಗೆ ಬೆಳಕು ಇದ್ದರೆ ಅದು ಡಿವಿಜಿಯವರ ಜೀವನ. .ಅವರುಮಾನವತೆಯ ಸುಂದರ ಮಹಾಕಾವ್ಯ. ಎಂಬ ಮಾಸ್ತಿಯವರ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.

    - ನಿಮ್ಮವನು ರಾಚಂ

    ಪ್ರತಿಕ್ರಿಯಿಸಿ :