• Login

  • Loading...


    Loading...

    Register





    A password will be mailed to you.
    Log in | Lost password?

    Retrieve password





    A confirmation mail will be sent to your e-mail address.
    Log in | Register

  • ಹುಡುಕು

  • September, 2008


    time September 17, 2008

    ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

    ಹಾಯ್, ಸ್ವೀಟ್ ಹಾರ್ಟ್

    ನಿನ್ನ ಸಿಹಿಸಿಹಿ ಹೃದಯದ ನೆನಪೇ ಎಷ್ಟು ಮಧುರ!. ನನ್ನ ಮುದ್ದು ಮಗಳೇ ನಿನ್ನ ಪತಿಯ ಮನೆಗೆ ಕಳಿಸಿಕೊಟ್ಟು ನಾ ಬರೆಯುತ್ತಿರುವ ಮೊದಲ ಪತ್ರವಿದು. ಕನಸುಗಳ ಮೂಟೆ ಹೊತ್ತು, ಭಾವಗಳ ಗುಂಗು ಹೊತ್ತು, ಮದರಂಗಿಯ ಬಿಡಿಸಿದ ಕೈಯಲ್ಲಿ ತುಸು ಬೆವರುತ್ತಾ, ಕೆನ್ನೆಗೆ ಹಚ್ಚಿದ ಅರಿಶಿನದಲ್ಲಿ ನಾಚಿಕೆ ಸುರಿಸುತ್ತಾ, ಕಣ್ಣಲ್ಲೇ ಕನಸ [...]

    time September 17, 2008

    ಪ್ರೇಮಕವಿಗೆ ಪ್ರೀತಿಯ ಭೋಪರಾಕ್

    ’ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ
    ಬೆಳಕಾಗಲಿ, ತಂಪಾಗಲಿ ನಿನ್ನೊಲವಿನ ಒಳಮನೆ’.

    ಇಂತಹ ಅಮೋಘ ಸಾಲುಗಳ ಆ ಸುಂದರ ಹಾಡನ್ನು ಕೇಳುವಾಗ ಇದು ನಮ್ಮೊಲವಿನ ಮಾತು, ನಮ್ಮೊಳಗಿನ ಹಾಡು, ನಮ್ಮೆದೆಯ ಪಿಸುಮಾತೇ ಇದು ಎನಿಸುವಷ್ಟು ಅದು ಕಾಡುತ್ತದೆ. ಪ್ರೀತಿಯ ಬಗ್ಗೆ, ಪ್ರೇಮದ ಬಗ್ಗೆ ಇದಕ್ಕಿಂತ ಸರಳವಾಗಿ, ಇದಕ್ಕಿಂತ ಹೃದಯಸ್ಪರ್ಶಿಯಾಗಿ ಬರೆಯಲು ಸಾಧ್ಯವೇ [...]

    time September 17, 2008

    ಹತಾಶೆಗೊಳದಿರು, ಓ ಧೀರಾತ್ಮನೆ

    ಸ್ವಾಮಿ ವಿವೇಕಾನಂದರ ಪ್ರತಿಭೆಯ ಮುಖಗಳು ಅನೇಕ. ಸಂತನಾಗಿ, ದಾರ್ಶನಿಕನಾಗಿ, ವೀರಸನ್ಯಾಸಿಯಾಗಿ ಅವರು ನಮಗೆ ಸುಪರಿಚಿತ. ಆದರೆ ಕವಿಯಾಗಿ, ಗದ್ಯಲೇಖಕರಾಗಿ, ಕಲಾವಿಮರ್ಶಕರಾಗಿ, ಸಂಗೀತಜ್ಞರಾಗಿ ಅವರ ಸ್ವೋಪಜ್ಞವಾದ ಕೊಡುಗೆ ಗಮನೀಯವಾಗಿದ್ದರೂ ಈ ನಿಟ್ಟಿನಲ್ಲಿ ನಡೆದ ಅಧ್ಯಯನಗಳು ವಿರಳ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರೇ ಬರೆದ ’ಇನ್ ಸರ್ಚ್ ಆಫ್ ಗಾಡ್ ಅಂಡ್ ಅದರ್ ಪೊಯಮ್ಸ್’ [...]

    time September 17, 2008

    ಮೌನ-ಮಳೆಯ ಸಾಂಗತ್ಯದಲಿ ಕಾಡುವುದು ನಿನ್ನ ನೆನಪು

    ಪ್ರೀತಿಯ ಸೋನು,

    ಇವತ್ತು ಬೆಳಗಿನಿಂದಲೂ ಯಾಕೋ ಮಳೆ ಬಿಟ್ಟು ಬಿಡದೆ ಸುರಿತಾ ಇದೆ. ಜೊತೆಗೆ ನಿನ್ನ ನೆನಪು ಕೂಡ. ನಿಜವಾಗಲೂ ಸೋನು ಬದುಕಿನಲ್ಲಿ ನಿನ್ನೊಂದಿಗೆ ಕಳೆದ ಕ್ಷಣಗಳಿವೆಯಲ್ಲ ಅವೆಲ್ಲ ಯಾವತ್ತಿಗೂ ಮರೆಯಲಾಗದ ಸವಿಸವಿ ನೆನಪು. ಬದುಕು ತನ್ನ ಬಯಲಿನಲ್ಲಿ ನನ್ನ ನೋವು ತುಂಬಿದ ಮನಸ್ಸಿನ ಜೊತೆ ಒಂಟಿಯಾಗಿಸಿದರೂ ಒಂದು ವಿಷಯದ ಮಟ್ಟಿಗೆ ಐಶ್ವರ್ಯವಂತಳನ್ನಾಗಿಸಿದೆ. [...]

    time September 17, 2008

    ಅಭಿವೃದ್ಧಿಯ ಬೆದರುಬೊಂಬೆಯ ಮೇಲೆ ಭಾರತ ಪ್ರಕಾಶಿಸುತ್ತಿದೆ !

    - ಉದಯ್ ಪಿ. ವಿಟ್ಲ

    In this might , while the whole world is sleeping, India is awake in the light of freedom ಇದು ಭಾರತದ ಪ್ರಥಮ ಪ್ರಧಾನಿ ನೆಹರೂ ಕೆಂಪು ಕೋಟೆಯಿಂದ ಆಗಸ್ಟ್ ೧೪ ರ ಮಧ್ಯ ರಾತ್ರಿ ದೇಶವಾಸಿಗಳಿಗೆ ಸ್ವತಂತ್ರ ಭಾರತದ ಉದಯದ ಘೋಷಣೆ ಮಾಡಿದ ಬಗೆ. [...]

    time September 17, 2008

    ಜಗದ ಅಂತರಿಕ್ಷಯಾನ ಮತ್ತು ಭಾರತ

    - ಉದಯ್ ಪಿ.ವಿಟ್ಲ

    ಮೊದಲ ಜಾಗತಿಕ ಮಹಾಯುದ್ಧಕ್ಕೆ ಮೊದಲು ಯುದ್ಧ ಅಲ್ಪಸ್ವಲ್ಪ ತಂತ್ರಜ್ಞಾನ, ಚದುರಂಗ ಬಲದ ಆಧಾರದಲ್ಲೇ ನಡೆಯುತ್ತಿತ್ತು. ಆನೆ, ಕುದುರೆ, ರಾಜ, ಕಾಲಾಳುಗಳ ದೈಹಿಕ, ಮಾನಸಿಕ ಸಾಮರ್ಥ್ಯದ ಮೇಲೆ ಜಯಾಪಜಯಗಳ ನಿರ್ಣಯವಾಗತ್ತಿತ್ತು. ಆದರೆ ಮಾನವನ ಸಹಜ ಕುತೂಹಲ ಮತ್ತು ಅನ್ವೇಷಣಾ ಬುದ್ಧಿ ವಿಜ್ಞಾನವನ್ನು ಹುಟ್ಟು ಹಾಕಿತು. ಆತ ಚಿಂತನಾ ಪರಿಧಿಯನ್ನು [...]

    time September 17, 2008

    ’ಆವರಣ’ ದ ಅನಾವರಣ : ಚಕ್ರವರ್ತಿ ಸೂಲಿಬೆಲೆ

    - ಚಕ್ರವರ್ತಿ ಸೂಲಿಬೆಲೆ, ಅಂಕಣಕಾರರು

    ‘ಭೈರಪ್ಪನವರು ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು. ’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’ ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ [...]

    time September 17, 2008

    ಯುಗಪುರುಷರು ತೋರಿದ ಮಾರ್ಗ: ನಡೆಯೋಣ ನಾವೀಗ

    - ಚಕ್ರವರ್ತಿ ಸೂಲಿಬೆಲೆ,

    ಅವತ್ತು ಅಮೇರಿಕನ್ನರ ಪಾಲಿಗೆ ಅಚ್ಚರಿಯ ದಿನ. ಅವರ ಬೀದಿಗಳಲ್ಲಿ ಕಾವಿಧಾರಿಯಾದ ’ಕಪ್ಪುವ್ಯಕ್ತಿ’ ಯನ್ನು ಕಂಡು ಹುಬ್ಬೇರಿಸಿದರು. ಆ ವ್ಯಕ್ತಿ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾನೆ. ಒಂದಷ್ಟು ಜನರಿಗೆ ಅಸಹ್ಯವೆನ್ನಿಸಿತು. ಮೈಕೈ ಗಟ್ಟಿಯಾಗಿರುವ ವ್ಯಕ್ತಿ ಭಿಕ್ಷೆ ಬೇಡುವುದೆಂದರೇನು? ಮನೆಯೆದುರಿಗೆ ಬಂದು ಅಡಿಯಿಂದ ಮುಡಿಯವರೆಗೂ ನೋಡಿ ಧಡಾರನೆ [...]

    time September 17, 2008

    ವಿಶ್ವಕ್ಕೇ ಬೆಳಕು ನೀಡಬಲ್ಲ ಭಾರತದ ಆಧ್ಯಾತ್ಮಿಕತೆ

    ಮೂಲ : ಫ್ರಾಂಕ್ವಾ ಗೋತಿಯೆ
    ಅನುವಾದ : ಮಹೇಶ ಹೆಗಡೆ ಬಾಳೇಸರ
    (ಜರ್ಮನಿಯಿಂದ)
    ಫ್ರಾಂಕ್ವಾ ಗೋತಿಯೇ - ಫ್ರಾನ್ಸ್ ದೇಶದ ಭಾರತ ಪ್ರೇಮಿ ಪತ್ರಕರ್ತ. ೩೩ ವರ್ಷಗಳ ಕಾಲ ಭಾರತದಲ್ಲಿ ನೆಲೆಸಿ ಇಲ್ಲಿನ ಧರ್ಮ, ಸಂಸ್ಕೃತಿ, ಚಿಂತನೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ ಫ್ರಾಂಕ್ವಾ ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ವಿಶೇಷ ಗೌರವ ಮೂಡಿಸುವಲ್ಲಿ [...]

    time September 17, 2008

    ಎದ್ದೇಳು ನಡೆ ಮುಂದೆ, ಮಾಡು ಇಲ್ಲವೆ ಮಡಿ ಯುವಶಕ್ತಿಯ ಸ್ಫೂರ್ತಿ ಭಗವದ್ಗೀತೆ

    -ಶ್ರೀ ಕೊಕ್ಕಡ ವೆಂಕಟರಮಣ ಭಟ್.
    ನೂರಾರು ವರ್ಷಗಳಿಂದ ಈ ದೇಶದಯುವಶಕ್ತಿಗೆ ಸ್ಫೂರ್ತಿಯೂ, ಪ್ರೇರಣಾಸ್ರೋತವೂ ಆಗಿರುವ ಭಗವದ್ಗೀತೆ ಕೇವಲ ಒಂದು ಧರ್ಮಗ್ರಂಥವಲ್ಲ, ಅದೊಂದು ಮನಶ್ಯಾಸ್ತ್ರ. ’ಜಗತ್ತಿನ ಒಳಿತಿಗಾಗಿ ಅರ್ಜುನನ್ನು ನೆಪವಾಗಿಟ್ಟು ಕೊಂಡು ಮಾನವ ಮಾತ್ರರಿಗಾಗಿ ಇದನ್ನು ಉಪದೇಶಿಸಿದ್ದೇನೆ’ ಎನ್ನುತ್ತಾನೆ ಗೀತಾ ಚಾರ್ಯ ಕೃಷ್ಣ. ಇದು ಎಲ್ಲಾ ದೇಶಕ್ಕೆ ಎಲ್ಲಾ ಕಾಲಕ್ಕೆ [...]