• Login

 • Loading...


  Loading...

  Register

  A password will be mailed to you.
  Log in | Lost password?

  Retrieve password

  A confirmation mail will be sent to your e-mail address.
  Log in | Register

 • ಹುಡುಕು

 • ಮುಖಪುಟ >> ಭಾವ ರಶ್ಮಿ

  ಭಾವ ಬೆಸುಗೆಯ ನಂಟು ಜೀವ ಜಗದಲ್ಲಿ ಕ್ಷೀಣಿಸುತ್ತಿದೆಯೇಕೆ?

  September 15th, 2008.


  – ಸುಧಾ ಎಂ. ಹೆಗಡೆ. ಕರ್ಕಿಸವಲು

   

  ಮನುಷ್ಯಲೋಕಕ್ಕೆ ಸಂಬಂಧವೆಂಬುದೇ ಸಮಷ್ಠಿ ಹಿತದಲ್ಲಿ ನಲಿಯುವಂತೆ ಮಾಡುವ ಸಂಗತಿ. ಮನುಷ್ಯ ಮನುಷ್ಯರ ಸಂಬಂಧ, ಪ್ರಕೃತಿ-ಪ್ರಾಣಿಗಳ ನಂಟು, ಪ್ರಾಣಿ ಪಕ್ಷಿಗಳೊಡನೆ-ಮನುಷ್ಯರ ಒಡನಾಟ, ಪ್ರಕೃತಿಯ ಜೊತೆ ಮನುಷ್ಯರ ಸಂಬಂಧ. ಹೀಗೆ ಎಲ್ಲ ಸಂಕುಲಕ್ಕೂ ಒಂದರೊಡಗೂಡಿ‌ಇನ್ನೊಂದರ ಬೆಸುಗೆ ಇದ್ದೇ ಇದೆ. ನಾವು ಬೆಳೆದ ಮೂಲ ಬೆಳೆಯೇ ಇರಲಿ. ಆ ಬೆಳೆಯಲ್ಲಿ ನಮ್ಮ ಜೀವನವಿದೆ. ಬದುಕನ್ನ ಸಾಕಾರಗೊಳಿಸಿ ತೂಗಿಸಿಕೊಂಬ ಶಕ್ತಿ ಆ ಬೆಳೆಯಲ್ಲಿದೆ. ಹಾಗಾಗಿ ಬದುಕಿಗೂ ಬೆಳೆಗೂ ಅವಿನಾಭಾವ ಸಂಬಂಧ ಇರಲೇಬೇಕು. ತಲೆ ತಲಾಂತರಗಳಿಂದ ಬೆಳೆದು ಬಂದ ಬೆಳೆಗಳು ನಮ್ಮ ಉಸಿರಾಗಿ ಜೀವನದ ಪಥ ತೋರಿಸಿವೆ. ಆಧುನಿಕ ಕೃಷಿಪದ್ಧತಿಯಲ್ಲಿ ನೂರಾರು ಬೆಳೆಗಳು, ಸಸಿಗಳು ಬಂದರೂ ನಮ್ಮ ಮೂಲ ಮಾತ್ರ ಬಿಟ್ಟುಕೊಡಲಾರೆವು. ಅದರ ಹೊರತಾಗಿ ನಾವಿರಲಾರೆವು. ಅದು ನಮಗಂಟಿಕೊಂಡು, ಅಲ್ಲಲ್ಲಿ ನಾವೇ ಅದಕಂಟಿಕೊಂಡು ಐಕ್ಯವಾಗಿ ಬಿಟ್ಟಿದ್ದೇವೆ.ಪ್ರಾಣಿ ಪಕ್ಷಿಗಳ ಕುಲದೊಡನೆ ನಮ್ಮ ಸಂಬಂಧ ಪ್ರಾಚೀನ ಕಾಲದಿಂದಲೂ ಅಧಿಕವಾಗಿದ್ದದ್ದುತಿಳಿದು ಬರುತ್ತದೆ. ಜೀವನಾಮೃತ ಆರೋಗ್ಯದಯಪಾಲಿಸುವ ಆಕಳ ಹಾಲು, ಹಾಲಿನಿಂದಲೇ ತಯಾರಾಗುವತುಪ್ಪ, ಮೊಸರು, ಬೆಣ್ಣೆ ಇವೆಲ್ಲಾ ಆರೋಗ್ಯ ಸೂತ್ರಕ್ಕೆ ಒದಗಿಸುವ ದಿವ್ಯ ಔಷಧಿ ಮಾತ್ರವಲ್ಲದೆ ಆಹಾರಪದಾರ್ಥವೂ ಹೌದು. ಕೇವಲ ಆಕಳು ಮಾತ್ರವೇ ಅಲ್ಲ,

   

  ಆಯಾ ಪರಿಸರಕ್ಕೆ ಸಮಾಜಕ್ಕನುಗುಣವಾಗಿಕುರಿ, ಕೋಳಿ, ಎಮ್ಮೆ- ಕೋಣ, ನಾಯಿ, ಬೆಕ್ಕು ಹೀಗೆ ತಮ್ಮಿಚ್ಛೆಗೆ ಜೀವನದ ರಥ ಎಳೆಯಲಿಕ್ಕೆಪ್ರಾಣಿಗಳು ಸಹಕಾರಿಯಾದವು. ಪ್ರಾಣಿಗಳಲ್ಲೂ ನಮಗೆ ಬಿಟ್ಟಿರದ ಅನನ್ಯ ಸಂಬಂಧ ಜೊತೆಗೂಡಿತು.ಪಕ್ಷಿಗಳೂ ಅನೇಕ ರೀತಿಯಲ್ಲಿ ಸಹಕಾರಿಗಳಾಗಿದ್ದವು. ಮನುಷ್ಯನ ಮೊದಲ ಅಂಚೆಯ ಹರಿಕಾರಪಾರಿವಾಳ. ನವನಾಗರಿಕತೆ ಬೆಳೆದಂತೆಲ್ಲಾ ಅನೇಕ ಸುಧಾರಣೆಗಳಾದರೂ ನಾವು ಯಾವ ಜೀವ -ಜಗತ್ತಿನ ಜೊತೆಯೂ ಸಂಬಂಧ ಕಡಿದುಕೊಂಡಿರಲಿಲ್ಲ. ಗಿಳಿಯು ಶಾಸ್ತ್ರ ಹೇಳುವ ರೀತಿ ಬದುಕಿಗೊಂದು‌ಆಸರೆಯಾಯ್ತ ಮನುಷ್ಯನಿಗೆ. ನವಿಲಿನ ನರ್ತನ ಜೊತೆಗೆ ಅದರ ಗರಿಯಿಂದ ಸಿಗುವ ಔಷಧ, ಹೀಗೆ‌ಒಂದೊಂದು ರೀತಿಯಲ್ಲಿ ಉಪಕಾರಿಗಳಾದವು.ಪ್ರಾಣಿಗಳಲ್ಲೇ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮಾನವ ಮಾತ್ರ ಕುಬ್ಜನಾಗುತ್ತಿದ್ದಾನೆ.ಒಂದಕ್ಕೊಂದು ಕೊಂಡಿ ಬೆಸೆದುಕೊಂಡು ಬಂದ ಪ್ರಾಣಿಗಳ ಜೊತೆ ನಮ್ಮ ಒಡನಾಟ ಕಡಿಮೆಯಾಗುತ್ತಿದೆ.ನಮಗೆ ಕ್ಷೀರಧಾರೆಯಿತ್ತ ಹಸುವನ್ನು ಅನಾದಿಕಾಲದಿಂದ ಪೂಜಿಸುವ ಗೋವುಗಳನ್ನು ವಯಸ್ಸಾಯ್ತು‌ಅಂತಾದರೆ, ಗಂಡು ಕರು ಹಾಕಿತು ಅಂತಾದರೆ ಕಡಿಮೆ ಬೆಲೆಗಾದರೂ ಸರಿಯೇ, ಗೊತ್ತಿದ್ದೂ ಸ್ವಾರ್ಥಕ್ಕಾಗಿಮಾರುತ್ತಿದ್ದೇವೆ. ದೇವರೆಂದು ಪೂಜಿಸುವ ಗೋಸಂತತಿಗೆ ನಾವೇ ದೆವ್ವವಾಗಿ ರಕ್ತ ಹಿಂಡುತ್ತಿದ್ದೇವೆ.ಮೊದಲೆಲ್ಲ ನಮ್ಮಲ್ಲೇ ಹುಟ್ಟಿ ಬೆಳೆದ ಗೋಸಂತಾನ, ನಮ್ಮಲ್ಲೇ ಸಾಯುವ ತನಕ ಪೋಷಿಸಿಕೊಂಡುಬರಬೇಕೆಂಬ ಅದರ ಮೇಲಿನ ಮಮಕಾರ ಕಟ್ಟಿಹಾಕಿರುತ್ತಿತ್ತು. ಈಗ ಹಾಗಲ್ಲ. ಇದೊಂದು ತಂದು,ನಾಳೆ ಮತ್ತೊಬ್ಬನಿಗೆ ಮಾರಿ, ನಾಡಿದ್ದು .ಕಸಾಯಿ ಖಾನೆ. ಸೇರುವಲ್ಲಿಗೆ ನಮ್ಮ ಪಾತ್ರ ಹಿರಿದಾಗುತ್ತಿದೆ.ಮನುಷ್ಯನಿಗೆ ಪಾಪ ಪ್ರಜ್ಞೆ ಕಡಿಮೆಯಾಗಿ ಸ್ವಾರ್ಥ ಮಾತ್ರ ಹೆಡೆ ಬಿಚ್ಚಿದ ನಾಗರನಂತೆ ಬುಸ್ ಗುಡುವಾಗ ಎಲ್ಲ ಬಾಂಧವ್ಯಗಳಿಂದ ದೂರವಿರುವಂತೆ ಮಾಡುವಲ್ಲಿ ನಮ್ಮ ಕೊಳಕು ಬುದ್ಧಿ ಸಂಬಂಧಗಳಾಚೆ ಹೊರಬಂದಿದೆ. ಮನುಷ್ಯ – ಮನುಷ್ಯರ ನಡುವೆ ದ್ವೇಷ, ಹೊಟ್ಟೆಕಿಚ್ಚು ಹೆಚ್ಚಾಗುತ್ತ ಶಾಂತಿಯುತ, ಸಹನಶೀಲ ಬಾಳ್ವೆಗೆ ಅದಾಗಲೇ ನೀರು ಬಿಟ್ಟಾಗಿದೆ. ನೆರೆ-ಹೊರೆಯಲ್ಲಿ ಆತ್ಮೀಯ ಬೋದೆsಗಳಲ್ಲಾ ಮರೆಯಾಗಿ, ನೆರೆಯವರ ಪರಿಚಯವಾದರೆ ಹೊರೆಯಾಗಿ ಬಂದಾರೆಂಬ ಆತಂಕದಲ್ಲಿ ಅವರ ಒಡನಾಟ.

  ಪ್ರೀತಿ, ಸಹಾಯ ಮಾಡುವ ಮನೋವೃತ್ತಿ ಯಾವ ಯಾವುದೋ ಕಾರಣಕ್ಕೆ ಮಾಯವಾಗಹತ್ತಿದೆ. ಒಂದು ಊರಿನಲ್ಲಿ ಪ್ರೀತಿ, ವಿಶ್ವಾಸಕ್ಕೆ, ಸಹಕಾರಕ್ಕೆ ಬರವಿದೆ ಅಂತಾದರೆ, ಆ ಊರು ನಿಜವಾಗಿ ಏನನ್ನೂಸಾಧಿಸಲಾರದು.ಅತೀ ವೇಗವಾಗಿ ಓಡುತ್ತಿರುವ ಆಧುನಿಕ ಜಗದಲ್ಲಿ ಪ್ರೀತಿ ವಿಶ್ವಾಸ, ಸ್ನೇಹ, ಸಹಕಾರ, ಈಗ‌ಅಪರೂಪದ ವಸ್ತುಗಳು, ಪ್ರೀತಿಯ ಹೆಸರಲ್ಲಿ ಸುಲಿಗೆ, ಪ್ರೇಮದ ಸಾಮ್ರಾಜ್ಯದಲ್ಲಿ ಕೊಲೆ, ವಿಶ್ವಾಸದಗಳಿಕೆಯಲ್ಲಿ ನಯವಂಚಕತನ, ಮಾತಿನಲ್ಲಿ ಡೋಂಗಿ, ಕೆಲಸದಲ್ಲಿ ಕೃತ್ರಿಮತೆ, ಶಿಷ್ಟತೆಯ ಕೆಲಸ ನಡೆಯುವಲ್ಲಿಭ್ರಷ್ಟತನ ಇವೆಲ್ಲದರ ಜೊತೆ ಸಂಬಂಧಗಳು ವ್ಯಾಪಾರೀಕರಣವಾಗುತ್ತ ಸಾಗಿರುವುದು ನಿಜಕ್ಕೂ ನೋವಿನಸಂಗತಿ ಅಲ್ಲವೇ? ಹೀಗೆ ಅನಿಸುವಾಗ ಸಂಬಂಧಗಳು ಕ್ಷೀಣವಾಗುತ್ತಿರುವುದು ಸತ್ಯಕ್ಕೆ ದೂರವಾದಮಾತಲ್ಲ.

   

  ಪ್ರತಿಕ್ರಿಯಿಸಿ :